ಲಾಕ್ ಡೌನ್ ನಿಂದ ಬೆಂಗಳೂರಿನ “ಮಾಲಿನ್ಯ”ದಲ್ಲಿ ಐತಿಹಾಸಿಕ ಕುಸಿತ

0

ಬೆಂಗಳೂರು:ಕೊರೊನಾ ವೈರಸ್ ಭೀತಿಯಿಂದ ಲಾಕ್ ಡೌನ್ ಘೋಷಣೆಯಾದ ಬೆನ್ನಲ್ಲಿ ಇಡೀ ಜನಜೀವನ ಅಸ್ತವ್ಯಸ್ಥವಾಗಿರುವುದೆಷ್ಟು ಸತ್ಯವೋ ಮಾಲಿನ್ಯ ಗಣನೀಯ ಪ್ರಮಾಣದಲ್ಲಿ ಕಡ್ಮೆಯಾಗಿರುವುದು ಅಷ್ಟೇ ನಿಜ.ಲಾಕ್ ಡೌನ್ ಆದ್ಮೇಲಿಂದ ರಾಜಧಾನಿ ಬೆಂಗಳೂರಲ್ಲಿ ವಾಹನ ದಟ್ಟಣೆ-ಕೈಗಾರಿಕೆ ಹಾಗೂ ಕಟ್ಟಡ  ನಿರ್ಮಾಣ ಕಾಮಗಾರಿಗಳು ಸಂಪೂರ್ಣ ಸ್ಥಗಿತಗೊಂಡಿರುವುದರಿಂದಾಗಿ ಮಾಲಿನ್ಯ ಸಂಪೂರ್ಣ ಕುಸಿತ ಕಂಡಿದ್ದು ಆಮ್ಲಜನಕದ ಉತ್ಪಾದನೆ ಗಣನೀಯ ಪ್ರಮಾಣದಲ್ಲಿ ಹೆಚ್ಚಳವಾಗಿದೆ.

ಬೆಂಗಳೂರು ಅನೇಕ ವಿಷಯಗಳಲ್ಲಿ ಕುಖ್ಯಾತಿ ಪಡೆದಂತೆ ಮಾಲಿನ್ಯದಲ್ಲೂ ದೇಶದ ಟಾಪ್ 10 ನಗರಗಳ ಪಟ್ಟಿಯಲ್ಲಿ ಸ್ಥಾನ ಪಡೆದಿದೆ.ಆದ್ರೆ ಲಾಕ್ ಡೌನ್ ಆದ ದಿನದಿಂದ್ಲೂ ಬೆಂಗಳೂರಿನಲ್ಲಿ ಮಾಲಿನ್ಯದ ಪ್ರಮಾಣ ಸಂಪೂರ್ಣ ತಗ್ಗಿದೆ.ಎಷ್ಟರವರೆಗೆ ಎಂದ್ರೆ ಬೆಂಗಳೂರು ಇತಿಹಾಸದಲ್ಲಿಯೇ ಇಷ್ಟೊಂದು ಪ್ರಮಾಣದಲ್ಲಿ ವಾಯುಮಾಲಿನ್ಯ ಹಾಗೂ ಶಬ್ದ ಮಾಲಿನ್ಯ ತಗ್ಗಿದ್ದ ಉದಾಹರಣೆಗಳೇ ಇಲ್ಲ.ಅಷ್ಟೊಂದು ಪ್ರಮಾಣದ ಮಾಲಿನ್ಯ ತಗ್ಗಿದೆ ಎನ್ನುತ್ತಾರೆ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿಯ ಸದಸ್ಯ ಕಾರ್ಯದರ್ಶಿ ಬಸವರಾಜ ಪಾಟೀಲ.

ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ ಸದಸ್ಯ ಕಾರ್ಯದರ್ಶಿ ಬಸವರಾಜ ಪಾಟೀಲ
ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ ಸದಸ್ಯ ಕಾರ್ಯದರ್ಶಿ ಬಸವರಾಜ ಪಾಟೀಲ

ಮಾಲಿನ್ಯವನ್ನು ಪ್ರಮಾಣೀಕರಿಸುವ ಡಿಸ್ ಪ್ಲೇ ಬೋರ್ಡ್ ಗಳನ್ನು ಮಾಲಿನ್ಯ ನಿಯಂತ್ರಣ ಮಂಡಳಿ ಬೆಂಗಳೂರಿನ 7 ಕಡೆ ಅಳವಡಿಸಿದೆ.ಆಯಾ ಪ್ರದೇಶಗಳ ವ್ಯಾಪ್ತಿಯಲ್ಲಿ ನಿತ್ಯದ ಮಾಲಿನ್ಯದ ಪ್ರಮಾಣವನ್ನು ಅವು ಕ್ರೋಢೀಕರಿಸಿ  ಬೋರ್ಡ್ ಗಳ ಮೇಲೆ  ಡಿಸ್ ಪ್ಲೈ ಮಾಡುತ್ತವೆ.ವಾಯುಮಾಲಿನ್ಯವನ್ನು  ಅಳೆಯಲು ಮಂಡಳಿ ಏರ್ ಕ್ವಾಲಿಟಿ ಇಂಡೆಕ್ಸ್(AQI) ಎನ್ನುವಂಥ ಮಾಪನ ವ್ಯವಸ್ಥೆ ಹೊಂದಿದೆ.ಅದರ ಪ್ರಕಾರ  AQI  00-50 ರಷ್ಟಿದ್ದರೆ ಪರಿಸ್ಥಿತಿ  ಉತ್ತಮ,AQI  51-100 ಪರಿಸ್ಥಿತಿ  ಸುಧಾರಿತ(ಸ್ಯಾಟಿಸ್ ಫ್ಯಾಕ್ಟರಿ),AQI 101-150  ಪರಿಸ್ಥಿತಿ  ಮದ್ಯಮ(ಮಾಡರೇಟರ್) ಹಾಗೂ ,AQI  151-200 ಪರಿಸ್ಥಿತಿ ಕಳಪೆ(ಪೂರ್) ಎಂದು ದೃಢೀಕರಿಸಲಾಗುತ್ತೆ ಎನ್ನುತ್ತಾರೆ ಪಾಟೀಲ.

ಮಾಲಿನ್ಯ ಕಡಿಮೆಯಾಗಲು ಕಾರಣಗಳೇನು:ಮಾಲಿನ್ಯಕ್ಕೆ ಕೊಡುಗೆ ನೀಡುತ್ತಿರುವುದೇ ರಾಜಧಾನಿಯಲ್ಲಿರುವ ವಾಹನ,ಕೈಗಾರಿಕೆ ಹಾಗೂ ಕಟ್ಟಡ ನಿರ್ಮಾಣ ಪ್ರಕ್ರಿಯೆ.ಆದ್ರೆ ಲಾಕ್ ಡೌನ್ ಆದ ದಿನಗಳಿಂದ್ಲೂ ರಾಜಧಾನಿಯಲ್ಲಿ ಕಟ್ಟಡ ನಿರ್ಮಾಣ ಸ್ಥಗಿತದಿಂದ ಧೂಳಿನ ಸಮಸ್ಯೆ ಇಲ್ಲ.ವಾಹನಗಳ  ಸಂಚಾರ ಸ್ಟಗಿತದಿಂದ  ರಾಸಾಯನಿಕ ಉತ್ಪತ್ತಿಯಾಗ್ತಿಲ್ಲ ಹಾಗೆಯೇ ಕೈಗಾರಿಕೆ  ಸ್ಥಗಿತಗೊಂಡಿರುವುದರಿಂದ ವಿಷಕಾರಿ ಅನಿಲ ಉತ್ಪತ್ತಿಯಾಗ್ತಿಲ್ಲ ಎನ್ನುವುದು ಸಮಾಧಾನದ ಸಂಗತಿ.

ಮಂಡಳಿಯ ಸದಸ್ಯ ಕಾರ್ಯದರ್ಶಿ ಪಾಟೀಲ ಅವರೇ ಹೇಳುವಂತೆ,  ಕರೊನಾ ಮುಂಚೆ ವಾಯುಮಾಲಿನ್ಯದ ಪ್ರಮಾಣ  (AQI) ರಾಜಧಾನಿಯಲ್ಲಿ ಬಹುತೇಕ 51-100 ರಷ್ಟಿತ್ತು. ಕರೊನಾ ಭೀತಿ ಶುರುವಾದ್ಮೇಲೆ ಮಾಲಿನ್ಯ AQI   ಕಡಿಮೆಯಾಗಿದ್ದರಿಂದಾಗಿ ಮಾಲಿನ್ಯದ ಪ್ರಮಾಣದ ಶೇಕಡಾ 15 ರಷ್ಟು ಕುಗ್ಗಿತು.ಲಾಕ್ ಡೌನ್ ಆದ್ಮೇಲಂತೂ ಗಣನೀಯವಾಗಿ  AQI ಪ್ರಮಾಣ  50ಕ್ಕಿಂತ ಕಡ್ಮೆಯಾಗಿದೆ.ಇತ್ತೀಚಿನ ದಿನಗಳಲ್ಲಿ ನಗರದ 7  ಮಾಪನ ಕೇಂದ್ರಗಳಲ್ಲಿ  AQI ಪ್ರಮಾಣ 30-32 ರಷ್ಟಿದೆ.ಇದಕ್ಕಿಂತ ನೆಮ್ಮದಿಯ ಸಂಗತಿ ಮತ್ತೊಂದಿಯೇ ಎನ್ನುತ್ತಾರೆ ಪಾಟೀಲ.

ಅಂದ್ಹಾಗೆ ಮಾಲಿನ್ಯ ಮಾಪನ ಕೇಂದ್ರಗಳಲ್ಲಿ ಕೆಲ ದಿನಗಳಿಂದ ದಾಖಲಾಗುತ್ತಿರುವ ಮಾಲಿನ್ಯದ ಪ್ರಮಾಣದ ಝಲಕ್ ಇಂತಿದೆ.

ಮಾಲಿನ್ಯ ಮಾಪನ  ಕೇಂದ್ರ                         ದಿನಾಂಕ               ದಾಖಲಾಗಿದ್ದ AQI  ಪ್ರಮಾಣ 

                                                          25-03-2020        26-03-2020              28-03-2020              29-03-2020                         

ಸಾಣೆಗುರುವನಹಳ್ಳಿ                             59                      59                             54                          52                         

ಸಿಲ್ಕ್ ಬೋರ್ಡ್                                    44                       46                             42                          60 

ಹೆಬ್ಬಾಳ                                                48                       52                             46                            52 

ನಿಮ್ಹಾನ್ಸ್                                             65                       61                               65                           61 

ಜಯನಗರ                                            44                        47                              41                           41 

ಇದಿಷ್ಟೇ ಅಲ್ಲ,ವಾಹನಗಳ ದಟ್ಟಣೆ ಕಡ್ಮೆಯಾಗಿರುವುದರಿಂದ ಶಬ್ದ ಮಾಲಿನ್ಯವಂತೂ ಸಂಪೂರ್ಘ ತಗ್ಗಿ ಹೋಗಿದೆ.ಮಾಲಿನ್ಯ ಕಡಿಮೆಯಾಗಿರುವುದರಿಂದ ಪ್ರಾಣಿ ಪಕ್ಷಿಗಳು ರಾಜಧಾನಿಯಾದ್ಯಂತ ಸ್ವಚ್ಛಂದವಾಗಿ ಬದುಕುತ್ತಿವೆ. ಆಮ್ಲಜನಕದ ಉತ್ಪತ್ತಿ ಕೂಡ ನಗರದಲ್ಲಿ ಹೆಚ್ಚಾಗುತ್ತಿದೆ.ಆದ್ರೆ ಅದನ್ನು ಆಸ್ವಾದಿಸುವ ಮನಸುಗಳಿಗೆ ಲಾಕ್ ಡೌನ್ ಹಾಕಿರುವ ಗೃಹದಿಗ್ಭಂಧನ ಅವಕಾಶ ಕಲ್ಪಿಸುತ್ತಿಲ್ಲ ಎನ್ನುವುದೇ ವಿಪರ್ಯಾಸ.

Spread the love
Leave A Reply

Your email address will not be published.

Flash News