ನಿಷ್ಕರುಣಿ ಮಾಲೀಕರಿಂದ ನಿಷ್ಪಾಪಿ ಪಕ್ಷಿಗಳ ಬಿಡುಗಡೆ-“ಪ್ರಾಣಿ”ಯಲ್ಲಿ ನೆಮ್ಮದಿಯ ನೆಲೆ

0

ಬೆಂಗಳೂರು: ಕೊರೊನಾ ಭೀತಿ ಹಿನ್ನಲೆಯಲ್ಲಿ ಲಾಕ್ ಡೌನ್ ಆಗಿರೋದು ಮೂಕಪ್ರಾಣಿಗಳ ಪಾಲಿಗೆ ನರಕಸದೃಶವಾಗಿಬಿಟ್ಟಿದೆ.ಆಹಾರವಿಲ್ಲದೆ ಪ್ರಾಣಿ ಪಕ್ಷಿಗಳು ಪರದಾಡುವಂತಾಗಿದೆ.ಅದರಲ್ಲೂ ಲಾಭಕೋರ ಪೆಟ್ ಶಾಪ್ ಮಾಲೀಕರಿಂದಾಗಿಯಂತೂ ವಾರಗಟ್ಟಲೇ ಬಂಧನಕ್ಕೊಳಪಟ್ಟಿವೆ.ಅನಧೀಕೃತವಾಗಿ ವ್ಯವಹಾರ ನಡೆಸುತ್ತಿರುವ ನೂರಾರು ಪೆಟ್ ಶಾಪ್ ಗಳು ಇವತ್ತು ಬೆಂಗಳೂರಿನಲ್ಲಿವೆ.ಯಾವುದೇ ಲೈಸೆನ್ಸ್ ಇಲ್ಲದೆ ದಂಧೆ ನಡೆಸುತ್ತಿರುವ ಅವುಗಳಲ್ಲಿ ಲಕ್ಷಾಂತರ ಪ್ರಾಣಿಪಕ್ಷಿಗಳು ಬಂಧಿಯಾಗಿವೆ.ಲಾಕ್ ಡೌನ್ ಆದ್ಮೇಲಂತೂ ಅದೆಷ್ಟೋ ಮಾಲೀಕರು ಪೆಟ್ ಶಾಪ್ ಗಳ ಬಾಗಿಲನ್ನೇ ಓಪನ್ ಮಾಡಿಲ್ಲ.ಅವುಗಳು ಬದುಕಿವೆಯೋ ಸತ್ತಿವೆಯೋ ಎನ್ನೋದನ್ನು ನೋಡುವ ಗೋಜಿಗೂ ಹೋಗಿಲ್ಲ.ಇದರಿಂದಾಗಿ ಅವುಗಳು ಆಹಾರ-ಗಾಳಿ ಇಲ್ಲದೆ ನರಳುವಂತಾಗಿವೆ.ಅದೆಷ್ಟೋ ಪ್ರಾಣಿ ಪಕ್ಷಿಗಳು ಸಾವನ್ನೂ ಅಪ್ಪಿವೆ.
ಪೆಟ್ ಶಾಪ್ ಗಳಿಗೆ ಯಾವುದೇ ನಿರ್ಬಂಧ ಇಲ್ಲದಿದ್ದರೂ ಬ್ಯುಸಿನೆಸ್ ಆಗ್ತಿಲ್ಲ ಎನ್ನುವ ಕಾರಣಕ್ಕೆ ಓನರ್ ಗಳು ಅಂಗಡಿಗಳತ್ತ ಸುಳಿಯುತ್ತಲೇ ಇಲ್ಲ.ಅವರ ನಿಷ್ಕಾಳಜಿಯಿಂದಾಗಿ ಪ್ರಾಣಿ ಪಕ್ಷಿಗಳು ನಿತ್ಯದ ಅವಶ್ಯಕತೆಗಳಿಂದ ಬಳಲಿ ಸಾವನ್ನಪ್ಪುತ್ತಿವೆ.ನಮಗೆ ಒಂದು ಹೊತ್ತಿನ ಆಹಾರವಿಲ್ಲದಿದ್ದದೆ ಏನಾಗುತ್ತೆ..ಹಾಗೆಯೇ ನಮ್ಮಂತೆಯೇ ಜೀವ ಇರುವ ಮೂಕ ಪ್ರಾಣಿ ಪಕ್ಷಿಗಳಿಗೂ ಏನಾಗಬಹುದೆನ್ನುವ ಅರಿವಿದ್ದರೂ ಅದರ ಬಗ್ಗೆ ಕೇರ್ ಮಾಡುತ್ತಿಲ್ಲ.ಇದರಿಂದಾಗಿ ಪ್ರಾಣಿ ಪಕ್ಷಿಗಳು ಸಾವನ್ನಪ್ಪಿವೆ.ಅಶಕ್ತಿಯಿಂದ ಬಳಲುತ್ತಿವೆ.
ಈ ಬಗ್ಗೆ ವನ್ಯಜೀವಿ ಸ್ವಯಂಸೇವಕರಾದ ಅರುಣ್ ಪ್ರಸಾದ್,ಕಿರಣ್ ಬಿಬಿಎಂಪಿ ಗಮನವನ್ನು ತಮ್ಮ ಪ್ರಾಣಿಪ್ರೇಮದ ಮೂಲಕ ಸೆಳೆಯುವ ಕೆಲಸ ಮಾಡಿದ್ರು.ಇದರ ಮೇಲೆ ಮಾದ್ಯಮಗಳು ಬೆಳಕು ಚೆಲ್ಲಿದ ಮೇಲೆ ಎಚ್ಚೆತ್ತುಕೊಂಡ ಬಿಬಿಎಂಪಿ ಪಶುಪಾಲನಾ ಇಲಾಖೆ ನಿರಂತರ ದಾಳಿ ನಡೆಸಿ ಪೆಟ್ ಶಾಪ್ ಮಾಲೀಕರಿಗೆ ಬಿಸಿಮುಟ್ಟಿಸೋದ್ರ ಜತೆಗೆ ಬಂಧನಕ್ಕೊಳಗಾದ ಪ್ರಾಣಿ ಪಕ್ಷಿಗಳಿಗೆ ಬಿಡುಗಡೆ ಒದಗಿಸಿದರು.ಅಂದ್ಹಾಗೆ ಅಮಾನುಷ ಮಾಲೀಕರಿಂದ ಮುಕ್ತಿ ಪಡೆದ ಅವುಗಳೆಲ್ಲಾ ಈಗ ಕನಕಪುರದ “ಪ್ರಾಣಿ” ಸಂಕುಲವನ್ನು ಸೇರಿ ಸ್ವರ್ಗದ ಅನುಭವ ಪಡೆದುಕೊಂಡಿವೆ. 

ಮೂಕಹಕ್ಕಿಗಳಿಗೆ ನಿಷ್ಕರುಣಿ ಮಾಲೀಕರಿಂದ ಬಿಡುಗಡೆ ನೀಡಿದ ವನ್ಯಜೀವಿ ಸ್ವಯಂಸೇವಕರ ಕಾರ್ಯಾಚರಣೆ ಹೇಗಿತ್ತು ಗೊತ್ತಾ..

Spread the love
Leave A Reply

Your email address will not be published.

Flash News