144 ಸೆಕ್ಷನ್ ಉಲ್ಲಂಘಿಸಿದ್ರೆ 2 ವರ್ಷ ಜೈಲ್ ಫಿಕ್ಸ್

0

ನವದೆಹಲಿ/ಬೆಂಗೂರು: ಲಾಕ್ ಡೌನ್ ನಿಯಮವನ್ನು ಉಲ್ಲಂಘಿಸಿದ್ರೆ ಎರಡು ವರ್ಷಗಳ ಕಾರಾಗೃಹ ಶಿಕ್ಷೆ ವಿಧಿಸುವ ಅವಕಾಶವನ್ನು ಕೇಂದ್ರ ಸರ್ಕಾರ  ಎಲ್ಲಾ ಸರ್ಕಾರಗಳಿಗೂ ನೀಡಿ ಆದೇಶ ಹೊರಡಿಸಿದೆ.

ಕೇಂದ್ರದ ಕಾರ್ಯದರ್ಶಿ ಅಜಯ್ ಬಲ್ಲಾ ಈ ಬಗ್ಗೆ ಎಲ್ಲಾ ರಾಜ್ಯ ಹಾಗೂ ಕೇಂದ್ರಾಡಳಿತ ಪ್ರದೇಶಗಳಿಗೆ ಮೇಲ್ಕಂಡ ಅಧಿಕಾರ ನೀಡಿದ್ದು,ಲಾಕ್ ಡೌನ್ ನಿಯಮದ ಅನ್ವಯ ಜಾರಿಗೊಳಿಸಿರುವ 144 ಸೆಕ್ಷನ್ ನ್ನು ಕಡ್ಡಾಯವಾಗಿ ಪಾಲಿಸುವಂತೆ ನೋಡಬೇಕು.144 ಸೆಕ್ಷನ್ ಉಲ್ಲಂಘಿಸಿದ ವ್ರನ್ನು ನಿರ್ದಾಕ್ಷಿಣ್ಯವಾಗಿ 2 ವರ್ಷಗಳವರೆಗೆ ಜೈಲಿನಲ್ಲಿರಿಸೊಕ್ಕೆ ಅಧಿಕಾರ ನೀಡಿದ್ದಾರೆ.

ಲಾಕ್ ಡೌನ್ ಉಲ್ಲಂಘನೆಯನ್ನು ಲಘುವಾಗಿ ಪರಿಗಣಿಸುವವರಿಗೆ ಕೇಂದ್ರ ಸರ್ಕಾರ ಬಿಗ್ ಶಾಕನ್ನೇ ನೀಡಿದೆ.144 ಸೆಕ್ಷನ್ ಉಲ್ಲಂಘಿಸುವ ಬಗ್ಗೆ ಉಡಾಫೆಯಿಂದ ಮಾತನಾಡುತ್ತಿದ್ದವರು ಇನ್ಮುಂದೆ ಬಾಯಿಮುಚ್ಚಿಕೊಂಡು ಅದನ್ನು ಪಾಲಿಸಲೇಬೇಕು.ಇಲ್ಲವಾದಲ್ಲಿ 2 ವರ್ಷ ಜೈಲಿನಲ್ಲಿ ಕಳೆಯಬೇಕಾಗುತ್ತೆ.ಇದನ್ನು ಕೇಂದ್ರ ಸರ್ಕಾರವೇ ಅಧೀಕೃತಗೊಳಿಸಿದೆ.ಈ ಕುರಿತಾದ ಸುತ್ತೋಲೆಯಲ್ಲಿ ರಾಜ್ಯ ಹಾಗೂ ಕೇಂದ್ರಾಡಳಿತ ಪ್ರದೇಶಗಳ ಮುಖ್ಯ ಕಾರ್ಯದರ್ಶಿಗಳಿಗೆ ರವಾನೆ ಮಾಡಲಾಗಿದೆ.

Spread the love
Leave A Reply

Your email address will not be published.

Flash News