ಕನ್ನಡದ ಖ್ಯಾತ ಹಾಸ್ಯಕಲಾವಿದ ಬುಲೆಟ್ ಪ್ರಕಾಶ್ ಇನ್ನಿಲ್ಲ

0
ಬರಲಾ..ಮತ್ತೆಂದೂ ಬಾರದ ಲೋಕಕ್ಕೆ ಹೋಗುತ್ತಿದ್ದೇನೆ..
ಬರಲಾ..ಮತ್ತೆಂದೂ ಬಾರದ ಲೋಕಕ್ಕೆ ಹೋಗುತ್ತಿದ್ದೇನೆ..
ಎಲ್ಲಾ ನಿರೀಕ್ಷೆಯಂತಾಗಿದ್ದರೆ ಕಷ್ಟದ ದಿನಗಳಿಂದಲೂ ಜತೆಗಿದ್ದ ನಟ ದರ್ಶನ್ ಅವರ ಚಿತ್ರವನ್ನು ಬುಲೆಟ್ ನಿರ್ದೇಶಿಸಬೇಕಿತ್ತು.
ಎಲ್ಲಾ ನಿರೀಕ್ಷೆಯಂತಾಗಿದ್ದರೆ ಕಷ್ಟದ ದಿನಗಳಿಂದಲೂ ಜತೆಗಿದ್ದ ನಟ ದರ್ಶನ್ ಅವರ ಚಿತ್ರವನ್ನು ಬುಲೆಟ್ ನಿರ್ದೇಶಿಸಬೇಕಿತ್ತು.

ಬೆಂಗಳೂರು:ಕನ್ನಡದ ಖ್ಯಾತ ಹಾಸ್ಯ ಕಲಾವಿದ ಬುಲೆಟ್ ಪ್ರಕಾಶ್ ಇನ್ನು ಕೇವಲ ನೆನಪು.ಬಹು ಅಂಗಾಂಗಳ ವೈಫಲ್ಯದಿಂದ ಬಳಲುತ್ತಿದ್ದ ಪ್ರಕಾಶ್ ಅವರು ಫೋರ್ಟಿಸ್ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ.44 ವರ್ಷ ವಯಸ್ಸಾಗಿದ್ದ ಪ್ರಕಾಶ್ ಅವರು 325ಕ್ಕೂ ಹೆಚ್ಚು ಚಿತ್ರಗಳಲ್ಲಿ ಹಾಸ್ಯ ಕಲಾವಿದರಾಗಿ ಕೆಲಸ ಮಾಡಿ ಕರ್ನಾಟಕದ ಚಿತ್ರ ರಸಿಕರ ಮನೆಮನಗಳಲ್ಲೂ ಹಸಿರಾಗುಳಿದಿದ್ದರು.

ಕೆಲ ದಿನಗಳಿಂದಲೂ ಅನಾರೋಗ್ಯಕ್ಕೆ ಒಳಗಾಗಿದ್ದ ಬುಲೆಟ್ ಪ್ರಕಾಶ್ ಅವರನ್ನು ಇತ್ತೀಚೆಗೆ ಫೋರ್ಟಿಸ್ ಆಸ್ಪತ್ರೆಗೆ ದಾಖಲಿಸಲಾಗಿತ್ತು.ವೈದ್ಯರು ನೀಡುತ್ತಿದ್ದ ಚಿಕಿತ್ಸೆಗೆ ಅವರ ದೇಹಸ್ಥಿತಿ ಸ್ಪಂದಿಸದ ಹಿನ್ನಲೆಯಲ್ಲಿ ವೆಂಟಿಲೆಟರ್ ನಲ್ಲಿ ಇಡಲಾಗಿತ್ತು.ಆದ್ರೆ ಕೆಲ ಕ್ಷಣಗಳ ಮುನ್ನೆ ಅವರು ವಿಧಿವಶರಾಗಿದ್ದಾರೆ ಎಂದು ಆಸ್ಪತ್ರೆ ಮೂಲಗಳು ತಿಳಿಸಿವೆ.

ಏಪ್ರಿಲ್ 2 ರಂದು(ಮೊನ್ನೆ ತಾನೇ ಅವರ ಹುಟ್ಟುಹಬ್ಬವಾಗಿತ್ತು.ಆದರೆ ಆಸ್ಪತ್ರೆಯಲ್ಲಿದ್ದುದ್ದರಿಂದ ಆಚರಣೆ ಮಾಡಿರಲಿಲ್ಲ).ಜನಿಸಿದ ಪ್ರಕಾಶ್ ಬುಲೆಟ್ ಸವಾರಿಯನ್ನು ಇಚ್ಛಿಸುತ್ತಿದ್ದುದ್ದರಿಂದ ಪ್ರಕಾಶ್ ಹೆಸರಿನ ಮುಂದೆ ಬುಲೆಟ್ ಎನ್ನುವಹೆಸರು ಸೇರ್ಪಡೆಯಾಯ್ತು.ರಾಜಕಾರಣದಲ್ಲೂ ಪ್ರಯತ್ನ ಮಾಡಿ ವಿಫಲವಾಗಿದ್ದರು.ಕಳೆದ ಕೆಲ ದಿನಗಳಿಂದ ಚಿತ್ರರಂಗದಿಂದ ದೂರವಾಗಿದ್ದ ಬುಲೆಟ್ ಪ್ರಕಾಶ್ ತುಂಬಾ ದಪ್ಪಗಿದ್ದುದ್ದರಿಂದ ತೆಳ್ಳಗಾಗಲು ಸರ್ಜರಿ ಮಾಡಿಸಿಕೊಂಡಿದ್ದರು.ಅದರಿಂದಾಗಿ ಅವರ ಆರೋಗ್ಯ ಹದಗೆಟ್ಟಿತ್ತಲ್ಲದೇ ಸಿನೆಮಾದಲ್ಲೂ ಅವಕಾಶಗಳು ಕಡ್ಮೆಯಾಗಿದ್ದವು.ಸಂಕಷ್ಟದಲ್ಲಿದ್ದಾಗ ತಮ್ಮನ್ನು ಹಲವಾರು ಜನ ಕೈ ಹಿಡಿಯಲೇ ಇಲ್ಲ ಎಂದು ಟಿವಿ ಚಾನೆಲ್ ವೊಂದಕ್ಕೆ ನೀಡಿದ್ದ ಸಂದರ್ಶನದಲ್ಲಿ ಬುಲೆಟ್ ಕಣ್ಣೀರು ಹಾಕಿದ್ದರು.ಎಲ್ಲಾ ನಿರೀಕ್ಷೆಯಂತಾಗಿದ್ದರೆ ಬುಲೆಟ್ ಪ್ರಕಾಶ್ ಚಾಲೆಂಜಿಂಗ್ ಸ್ಟಾರ್ ದರ್ಶನ್ ಗೂ ಚಿತ್ರ ನಿರ್ದೆಶಿಸಬೇಕಿತ್ತು.ಆ ರೀತಿಯ ಸಿದ್ಧತೆಗಳನ್ನೂ ಕೂಡ ಮಾಡಿಕೊಂಡು ಕೊನೇ ಕ್ಷಣಕ್ಕೆ ಕೈ ಬಿಡಲಾಯ್ತು.

ಧ್ರುವ,ಪಾರ್ಥ,ಓಂಕಾರ,ಅಂಬಿ,ಮಸ್ತ್ ಮಜಾ ಮಾಡಿ,ವೆಂಕಿ,ಐತಲಕ್ಕಡಿ,ಜಾಕಿ,ಮಲ್ಲಿಕಾರ್ಜುನ,ದೇವ್ರಾಣೆ,ರಜನಿಕಾಂತ್,ಪರಾರಿ,ಜಟಾಯು,ಶತೃ,ಜಂಗಲ್ ಜಾಕಿ,ಧನು,ಸವಾಲ್,ಮನಸ ಮರೆಯಲಿ,ಲವ್ ಶೋ,ನಿಂಬೆಹುಳಿ, ಪುಂಗಿದಾಸ,ಆರ್ಯನ್, ರೋಸ್,ಆರ್ಯನ್,ಕಲಾಸಿಪಾಳ್ಯ ಸೇರಿ 325 ಕ್ಕೂ ಹೆಚ್ಚು ಚಿತ್ರಗಳಲ್ಲಿ ಅಭಿನಯಿಸಿದ್ದರು.ಸಾಧುಕೋಕಿ,ರಂಗಾಯಣರಘು ಅವರ ಜತೆಗಿನ ಬುಲೆಟ್ ಅವರ ಜೋಡಿ ಚಿತ್ರರಸಿಕರನ್ನು ಮೋಡಿ ಮಾಡಿತ್ತು.ಎಲ್ಲಾ ಪ್ರಮುಖ ಹೀರೋಗಳ ಜತೆ ಅಭಿನಯಸಿದ್ದ ಬುಲೆಟ್ ಅವರಿಲ್ಲದಿದ್ದರೆ ಚಿತ್ರಗಳೇ ಯಶಸ್ವಿಯಾಗೊಲ್ಲ ಎನ್ನುವಂಥ ದಿನಗಳಿದ್ದವು ಎನ್ನುವುದರಲ್ಲೇ ಬುಲೆಟ್ ಅವರ ಬೇಡಿಕೆ ಎಷ್ಟಿತ್ತೆನ್ನುವುದು ಗೊತ್ತಾಗುತ್ತೆ.   

Spread the love
Leave A Reply

Your email address will not be published.

Flash News