ಲಾಕ್ ಡೌನ್ ಬೋರ್ ನ್ನು ಖಂಡಿತಾ ತಣಿಸುತ್ತೆ ಈ ಮುಸ್ಕುರಾಯೇಗಾ ಹಾಡು

0

ಭಾರತವೂ ಸೇರಿದಂತೆ ವಿಶ್ವಾದ್ಯಂತ ತನ್ನ ವಿದ್ವಂಸಕತೆಯನ್ನು ಮೆರೆಯುತ್ತಿರುವ ಕೊರೋನಾ ವೈರಸ್ ನಿಂದಾಗಿ ಲಾಕ್ ಡೌನ್ ಆಗಿರುವ ನಾಗರಿಕರನ್ನು ಹುರಿದುಂಬಿಸಲು ಬಾಲಿವುಡ್ ಸ್ಟಾರ್ಸ್ ಮುಂದಾಗಿದ್ದಾರೆ.  ಮನೆಯಲ್ಲಿಯೇ ಕುಳಿತು  ಬೋರ್ ಆಗುತ್ತಿರುವ ಜನರನ್ನು ಚಿಯರ್ಸ್ ಮಾಡಲು ಹಾಡನ್ನು ರಚಿಸಿದ್ದಾರೆ.

ಮುಸ್ಕುರಾಯೇಗಾ ಎನ್ನುವ ಶೀರ್ಷಿಕೆಯಲ್ಲಿ ಸಿದ್ಧವಾಗಿರುವ ವಿಶಾಲ್ ಮಿಶ್ರಾ ಸಾಹಿತ್ಯ, ಸಂಗೀತ ನೀಡಿರುವ  ಇಂಡಿಯಾ ಸಾಂಗ್ ನಲ್ಲಿ ಚಿತ್ರರಂಗದ ದಂಡೇ ಪಾಲ್ಗೊಂಡಿದೆ. ಅಕ್ಷಯ್ ಕುಮಾರ್, ಆಯುಷ್ಮಾನ್ ಖುರಾನಾ, ಕಾರ್ತಿಕ್ ಆರ್ಯನ್, ಕೃತಿ ಸನೋನ್, ಟೈಗರ್ ಶ್ರಾಫ್, ವಿಕ್ಕಿ ಕೌಶಲ್, ರಾಜಕುಮಾರ್ ರಾವ್, ಸಿದ್ಧಾರ್ಥ್ ಮಲ್ಹೋತ್ರಾ, ಭೂಮಿ ಪೆಡ್ನೇಕರ್, ಜ್ಯಾಕಿ ಭಗ್ನಾನಿ, ಅನನ್ಯಾ ಪಾಂಡೆ, ಕಿಯಾರಾ ಅಡ್ವಾನಿ, ತಾಪ್ಸೀ ಪನ್ನೂ, ರಕುಲ್ ಪ್ರೀತ್ ಸಿಂಗ್, ಕ್ರಿಕೆಟಿಗ ಶಿಖರ ಧವನ್ ಕೂಡ ಭಾಗವಹಿಸಿದ್ದಾರೆ.ಯೂ ಟ್ಯೂಬ್ ನಲ್ಲಿ ರಿಲೀಸ್ ಆಗಿರುವ ಈ ಹಾಡು ಸಿಕ್ಕಾಪಟ್ಟೆ ವೈರಲ್ ಆಗಿದೆ.

 

 

ಮುಸ್ಕುರಾಯೇಗಾ ಹಾಡಿನ ಝಲಕ್ ಕನ್ನಡ ಫ್ಲಾಶ್ ನ್ಯೂಸ್ ನಲ್ಲಿ ಇಗೋ ಇಲ್ಲಿದೆ. 

Spread the love
Leave A Reply

Your email address will not be published.

Flash News