ಗುಣಮುಖರಾದವರೇ ಇನ್ಮುಂದೆ ಕೊರೊನಾ “ಜಾಗೃತಿ”ಯ ರಾಯಭಾರಿಗಳು

0

ಬೆಂಗಳೂರು: ಕೊರೊನಾ ಮೂಲೋತ್ಪಾಟನೆಗೆ ಸರ್ಕಾರ ಹೊಸ ಐಡ್ಯಾ ಮಾಡಿದೆ. ಕೊರೋನಾದಿಂದ ಗುಣಮುಖರಾಗಿರುವರನ್ನೇ ಕೊರೊನಾ ವಿರುದ್ಧದ ಜಾಗೃತಿಗೆ ಬಳಕೆ ಮಾಡಿಕೊಳ್ಳಲು ಚಿಂತನೆ ನಡೆಸಿದೆ.ಇದನ್ನು ಹೇಳಿದವರು ಸರ್ಕಾರದ ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ ಸುಧಾಕರ್.
ಕೊರೊನಾದಿಂದ ಬಳಲಿದವರಿಗೆ ಮಾತ್ರ ಆ ರೋಗದ ತೀವ್ರತೆ-ನೋವು-ಸಂಕಟ ಗೊತ್ತಿರುತ್ತೆ .ಹಾಗಾಗಿ ಅವರ ಮೂಲಕ ಜನರಿಗೆ ಹೇಳಿಸಿದ್ರೆ ಆ ಅನುಭವದ ಮಾತುಗಳನ್ನ ಕೇಳಿಯಾದ್ರೂ ಜನ ಎಚ್ಚೆತ್ತುಕೊಳ್ತಾರೆನ್ನುವ ನಂಬಿಕೆ ಸರ್ಕಾರದ್ದು ಆ ಕಾರಣಕ್ಕಾಗಿ ಸಂತ್ರಸ್ಥರಾಗಿ ಗುಣಮುಖರಾದ ವರನ್ನೇ ಕೊರೋನಾ ವಾರಿಯರ್ಸ್ ಆಗಿ ಬಳಿಸಿಕೊಳ್ಳಲು ಸರ್ಕಾರ ಚಿಂತನೆ ನಡೆಸಲಾಗಿದೆ.

ಸರ್ಕಾರದ ಚಿಂತನೆಯನ್ನು ಸ್ವಾಗತಿಸಿರುವ ಸಾಕಷ್ಟು ಮಂದಿ ಈಗಾಗಲೇ ಸ್ವಯಂಸೇವಕರಾಗಿ ಕೆಲಸ ಮಾಡಲು ಮುಂದೆ ಬಂದಿದ್ದಾರೆ.ಈ ವಿಷಯದಲ್ಲಿ ಯಾವುದೇ ಬಲವಂತಿಕೆ ಇಲ್ಲ ಎಂದು ಸುಧಾಕರ್ ಸ್ಪಷ್ಟಪಡಿಸಿದ್ದಾರೆ. ಇನ್ನು ಕೊರೊನಾದಿಂದ ಗುಣಮುಖರಾದವರಿಗೆ ಶೀಘ್ರವೇ ಮುಕ್ತಿ ಸಿಗೊಲ್ಲ. ಅವರನ್ನೆಲ್ಲ ಇನ್ನಷ್ಟು ನಿಗಾ ಇಟ್ಟು ಹೋಂ ಕ್ವಾರಂಟೈನ್ ನಲ್ಲಿ‌ ಮುಂದುವರೆಸಿದ್ದೇವೆ ಎಂದು ಸುಧಾಕರ್ ತಿಳಿಸಿದ್ದಾರೆ.

Spread the love
Leave A Reply

Your email address will not be published.

Flash News