ಗುಡ್ ನ್ಯೂಸ್.. ನಾಳೆಯಿಂದ ರಸ್ತೆಗಿಳಿಯಲಿವೆ ಓಲಾ- ಊಬರ್ ಕ್ಯಾಬ್ಸ್

0

ಬೆಂಗಳೂರು: ಲಾಕ್ ಡೌನ್ ಹೊರತಾಗ್ಯೂ ತುರ್ತು ವೈದ್ಯಕೀಯ ಸೇವೆಗಳಿಗಾಗಿ ಓಲಾ ಹಾಗೂ ಊಬರ್ ಕ್ಯಾಬ್ ಗಳನ್ನು ರಸ್ತೆಗಿಳಿಸೊಕ್ಕೆ ರಾಜ್ಯ ಸರ್ಕಾರ ತೀರ್ಮಾನಿಸಿದೆಯಲ್ಲದೇ ಸಾಂಕೇತಿಕವಾಗಿ ಅವುಗಳನ್ನು ರಸ್ತೆಗಿಳಿಸುವ ಕಾರ್ಯಕ್ರಮಕ್ಕೆ ಚಾಲನೆ ಕೊಡಲಾಗಿದೆ.ಹಾಗಾಗಿ ನಾಳೆಯಿಂದಾಗಿ ಬೆಂಗಳೂರಿನ ರಸ್ತೆಗಳಲ್ಲಿ  ಓಲಾ, ಉಬರ್ ಕ್ಯಾಬ್ ಗಳು ಕಾಣಿಸಿಕೊಳ್ಳಲಿವೆ.

ಆಂಬುಲೆನ್ಸ್ ರೂಪದಲ್ಲಿ ಓಲಾ ಹಾಗೂ ಊಬರ್ ಕ್ಯಾಬ್ ಗಳನ್ನು  ರಸ್ತೆಗೆ ಇಳಿಸಲು ಸರ್ಕಾರ ತೀರ್ಮಾನಿಸಿದೆ ಎಂದು ಆರೋಗ್ಯ ಸಚಿವ ಶ್ರಿರಾಮಲು ತಿಳಿಸಿದ್ದಾರೆ. ತುರ್ತು ಆರೋಗ್ಯ ಸೇವೆಗಾಗಿ ಓಲಾ ಮತ್ತು ಊಬರ್ ಕ್ಯಾಬ್ ಗಳ ಬಳಕೆ ಮಾಡಿಕೊಳ್ಳಲಾಗುತ್ತಿದೆ.ಇದಕ್ಕಾಗಿ 100 ಓಲಾ ಮತ್ತು 100 ಊಬರ್ ಕ್ಯಾಬ್ ಗಳು ರಸ್ತೆಗೆ ಇಳಿಸಲು ನಿರ್ಧರಿಸಲಾಗಿದೆ.ತುರ್ತು ಆರೋಗ್ಯ ಸೇವೆಗೆ ಮಾತ್ರ ಇವುಗಳನ್ನು ಬಳಸಿಕೊಳ್ಳಬಹುದಾಗಿದೆ.ಅನಗತ್ಯವಾಗಿ ಇದರ ಬಳಕೆಯಾದ್ರೆ ಅಂಥವ್ರ ವಿರುದ್ದ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಸಿದ್ದಾರೆ.

108 ಆಂಬುಲೆನ್ಸ್ ಗಳನ್ನು ಕೊರೋನಾ ತುರ್ತು ಸೇವೆಗೆ ಬಳಕೆ ಆಗುತ್ತಿರುವ ಹಿನ್ನೆಲೆಯಲ್ಲಿ ಈ ಪ್ಲಾನ್ ಮಾಡಿರುವ ಆರೋಗ್ಯ ಸಚಿವ ಶ್ರೀರಾಮುಲು   ಓಲಾ/ಊಬರ್ ತುರ್ತು ಆರೋಗ್ಯ ಸೇವೆಗೆ ಸಾಂಕೇತಿಕವಾಗಿ ಚಾಲನೆ ಕೂಡ ನೀಡಿದ್ರು.ಓಲಾ ಊಬರ್ ಗಳು ರಸ್ತೆಗಿಳಿಯುತ್ತಿರುವುದರಿಂದ ವೈದ್ಯಕೀಯ ತುರ್ತು ಸೇವೆಗಳು ಸಾರ್ವಜನಿಕರಿಗೆ ಅನಾಯಾಸವಾಗಿ ದೊರೆಯಲಿದೆ. 

Spread the love
Leave A Reply

Your email address will not be published.

Flash News