ಸರ್ಕಾರಿ ಆಸ್ಪತ್ರೆ ರೋಗಿಗಳಿಗೆ ಹೊರಗಿನ ಆಹಾರ ಬ್ಯಾನ್

0

ಬೆಂಗಳೂರು: ಕೊರೊನಾ ವ್ಯಾಪಕತೆಯ ಹಿನ್ನಲೆಯಲ್ಲಿ ಸುರಕ್ಷತೆ ಕಾಯ್ದುಕೊಳ್ಳಲು ಸರ್ಕಾರ ಮುಂದಾಗಿದೆ.ಈ ನಿಟ್ಟಿನಲ್ಲಿ ಮಹತ್ವದ ಆದೇಶ ಹೊರಡಿಸಿದ್ದು,ತತ್ ಕ್ಷಣದಿಂದ್ಲೇ  ಆಸ್ಪತ್ರೆಯೊಳಗೆ ಇರುವ ರೋಗಿಗಳಿಗೆ ಇನ್ಮುಂದೆ ಹೊರಗಿಂದ ತರುವ ಯಾವುದೇ ಆಹಾರ ನೀಡದಿರಲು ಕಟ್ಟಪ್ಪಣೆ ಮಾಡಲಾಗಿದೆ.ಸಾಂಕ್ರಾಮಿಕ ರೋಗಗಳ ಕಾಯ್ದೆ 1897 ರ ಕಾಯ್ದೆ ಅಡಿ ಆರೋಗ್ಯ ಇಲಾಖೆ ಆಯುಕ್ತರು ಈ ಆದೇಶ ಹೊರಡಿಸಿದ್ದು, ಆರೋಗ್ಯ ಇಲಾಖೆಯಆಸ್ಪತ್ರೆಗಳಲ್ಲಿ ಹೊರಗಡೆ ಆಹಾರಕ್ಕೆ ನಿಷೇಧ ಹೇರಲಾಗಿದೆ.

ಹೊರಗಡೆಯ  ತಿಂಡಿ‌-ಊಟವನ್ನು ಸಂಪೂರ್ಣ  ನಿಷೇಧಿಸಿ ಆದೇಶ ಹೊರಡಿಸಿರುವ ಆಯುಕ್ತರು, ಆಸ್ಪತ್ರೆಗೆ ದಾಖಲಾದ ರೋಗಿಗಳು ಆಸ್ಪತ್ರೆಯಲ್ಲಿ ನೀಡುವ ಆಹಾರವನ್ನ ಸೇವಿಸಬೇಕು.ಅಲ್ಲದೇ ವೈದ್ಯರು ರೋಗಿಗಳು ಗುಣಮುಖರಾಗಲೀ ಎಂಬ ದೃಷ್ಟಿ ಇಂದ ಆಸ್ಪತ್ರೆಯಲ್ಲಿ ನೀಡುವ ಆಹಾರ ಸೇವಿಸಲು ಸೂಚಿಸಿದ್ದಾರೆ.

ಗರ್ಭಿಣಿ ಮತ್ತು ಬಾಣಂತಿಯರಿಗಾಗಿ ಶಿಶು ಸುರಕ್ಷಾ ಯೋಜನೆ ಅಡಿ ಆಹಾರ ಒದಗಿಸಲಾಗ್ತಿದೆ.ಆದರೆ ಬೆಂಗಳೂರಿನ ಆಸ್ಪತ್ರೆಗಳು, ಜಿಲ್ಲಾ ಆಸ್ಪತ್ರೆಗಳು, ತಾಲೂಕು ಆಸ್ಪತ್ರೆಗಳಲ್ಲಿ ಒಳರೋಗಿಗಳು ಹೊರಗಡೆ ಆಹಾರವನ್ನ ಸೇವಿಸುತ್ತಿರುವುದು ಕಂಡುಬಂದಿದೆ. ಹೀಗಾಗಿ ಹೊರಗಡೆ ಆಹಾರಕ್ಕೆ ಬ್ರೇಕ್ ಹಾಕಲಾಗಿದೆ.ಅಲ್ಲದೆ ಆಹಾರ ಸುರಕ್ಷತಾ ಅಧಿಕಾರಿಗಳು ಈ ಬಗ್ಗೆ  ಎಚ್ಚರ ವಹಿಸುವಂತೆಯೂ ಸೂಚಿಸಲಾಗಿದೆ.ಇದೆಲ್ಲದರ ಉಸ್ತುವಾರಿಯನ್ನು ಆಹಾರ ತಜ್ಞರು ಮತ್ತು ಆಸ್ಕೃತ ವ್ಯಾಪ್ತಿಯ ಆಹಾರ ಸುರಕ್ಷತಾ ಅಧಿಕಾರಿ ಗಮನ ವಹಿಸಬೇಕು ಎಂದು ಸೂಚಿಸಲಾಗಿದೆ.

ಕೆಲಸಗಾರರು ಮತ್ತು ಅಡುಗೆಯವರ ವೈಯಕ್ತಿಕ ನೈರ್ಮಲ್ಯ ಹಾಗೂ ಆರೋಗ್ಯ, ಅಡುಗೆ ಮನ ಶುಚಿತ್ಯ, ದವಸ ಧಾನ್ಯ ಮತ್ತು ತರಕಾರಿ ದಸ್ತಾನು ಕೊಠಡಿಯ ನೈರ್ಮಲ್ಯದ ಬಗ್ಗೆ ಪರಿಶೀಲಿಸಬೇಕು.ಆಹಾರ ವಸ್ತುಗಳಲ್ಲಿ ಇಲಿ ಮತ್ತಿತರ ಕೀಟಗಳು, ಕೀಟಗಳ ತ್ಯಾಜ್ಯವಿರದಂತೆ ಎಚ್ಚರಿಕೆ ವಹಿಸಬೇಕು.ಸಗಟಾಗಿ ತರುವ ಆಹಾರಧಾನ್ಯ ತರಕಾರಿ, ಹಣ್ಣುಹಂಪಲುಗಳು, ಶುಚಿಯಾಗಿರಬೇಕು.ಉತ್ತಮ ಗುಣಮಟ್ಟದ್ಯಾಗಿರುವುದನ್ನು ಖಚಿತಪಡಿಸಿಕೊಂಡ ನಂತರವೇ ಆಸ್ಪತ್ರೆಗೆ ತರಬೇಕು ಎಂದು ನಿಯಮ ಹೇರಲಾಗಿದೆ.

ಹಾಗೆಯೇ ಸಿದ್ಧಪಡಿಸಿದ ಆಹಾರ ಬಿಸಿ ಇರುವಾಗಲೇ ರೋಗಿಗಳಿಗೆ ಬಡಿಸಬೇಕು.ಅವಶ್ಯಕ ಪ್ರಮಾಣಕ್ಕಿಂತ ಹೆಚ್ಚಿನ ಆಹಾರವನ್ನು ತಯಾರಿಸಿ ಹಾಳು ಮಾಡಬಾರದು..ಪ್ರತಿ ರೋಗಿಗೂ ಕೂಡ, ರೋಗಿಯ ನಿಗದಿತ ಪ್ರಮಾಣದ ಆಹಾರ ಧಾನ್ಯ ನಿರ್ಧಾರವನ್ನ ಆಹಾರ ತಜ್ಞರು ಕೈಗೊಳುವಂತೆ ಆಸ್ಪತ್ರೆಯ ಆಡಳಿತಾಧಿಕಾರಿಗಳು ಕ್ರಮ ವಹಿಸಬೇಕುವಿಶೇಷ ವಾರ್ಡ್‌ಗಳಲ್ಲಿರುವ ರೋಗಿಗಳು ಸಹ ಆಸ್ಪತ್ರೆಯಲ್ಲಿ ನೀಡಲಾಗುತ್ತಿರುವ ಶುಚಿ ಮತ್ತು ರುಚಿ ಆಹಾರವನ್ನು ಸೇವಿಸುವಂತೆ ಮನವೊಲಿಸಬೇಕು. ಹೊರಗಿನ ಅನಧಿಕೃತ ಆಹಾರ ಪದಾರ್ಥಗಳು ಮತ್ತು ತಿನಿಸುಗಳು ಆಸ್ಪತ್ರೆಯ ಒಳಗೆ ಬಾರದಂತೆ ಭದ್ರತಾ ಸಿಬ್ಬಂದಿಯವರು ಕಟ್ಟುನಿಟ್ಟಿನ ಕ್ರಮ ವಹಿಸಬೇಕು ಎಂದು ಆರೋಗ್ಯ ಇಲಾಖೆ ಆಯುಕ್ತರು ಸೂಚಿಸಿದ್ದಾರೆ.

Spread the love
Leave A Reply

Your email address will not be published.

Flash News