ಅಸಹಾಯಕ ರೋಗಿಗಳ ಮನೆಬಾಗಿಲಿಗೇ ಔಷಧಿ-ಮಾತ್ರೆ ಪೂರೈಸುವ “ಹೀರೋ”ಸ್

0
ಒಂದ್ ಕರೆ ಅಥವಾ ಎಸ್ ಎಮ್ಮೆಸ್ ಬಂದ್ರೂ ಹೀಗೆ ಸೇವೆಗೆ ಸಿದ್ಧವಾಗಿಬಿಡ್ತಾರೆ ಪುನೀತ್-ಸರವಣ
ಒಂದ್ ಕರೆ ಅಥವಾ SMS ಬಂದ್ರೂ ಹೀಗೆ ಸೇವೆಗೆ ಸಿದ್ಧವಾಗಿಬಿಡ್ತಾರೆ ಪುನೀತ್-ಸರವಣ

ಬೆಂಗಳೂರು:ಸೇವೆ ಎನ್ನೋದು ಕೋಟಿಗಳಲ್ಲಿ ದಾನ ಮಾಡಿದರಷ್ಟೇನಾ..ಅನ್ನದಾಸೋಹ ಮಾಡಿದರಷ್ಟೇನಾ..ಇವತ್ತು ಸೇವೆ ಎನ್ನೋ್ದು  ಪ್ರಚಾರೀಕರಣ- ವ್ಯಾಪಾರೀಕರಣವಾಗುತ್ತಿದೆ.ಅದು ಕೊರೊನಾ ತಂದಿಟ್ಟ ಲಾಕ್ ಡೌನ್  ಸಂದರ್ಭದಲ್ಲಿಯೂ ಸಾಬೀತಾಗುತ್ತಿದೆ.ಆದ್ರೆ ಇದ್ಯಾವುದರ ಪರಿವೆಯೇ ಇಲ್ಲದೆ ತಮ್ಮ ಮನಸು ಹಾಗೂ ಹೃದಯದ ಮಾತಿಗಷ್ಟೇ ಬೆಲೆ ಕೊಟ್ಟು ಸಮಾಜಮುಖಿ ಕೆಲಸಗಳಲ್ಲಿ ತೊಡಗಿಕೊಂಡಿರುವ ಒಂದಷ್ಟು ಮಾನವೀಯತೆಯ ಮುಖಗಳು ನಮ್ಮ ನಡುವೆ ಎದ್ದು ಕಾಣುತ್ವೆ.ಅಷ್ಟೇ ಅಲ್ಲ ಕಾರ್ಯವೈಖರಿ ಹಾಗೂ ಅದರ ಹಿಂದಿರುವ ಸದುದ್ದೇಶದ ಕಾರಣಕ್ಕೆ ತೀರಾ ಅತ್ಯಾಪ್ತವಾಗುತ್ವೆ.ಅಂಥಾ ಅಪರೂಪದ ಯುವಕರ ತಂಡವನ್ನು ಕನ್ನಡ ಫ್ಲಾಶ್ ನ್ಯೂಸ್ ತನ್ನ ಕರೋನಾ ಲಾಕ್ ಡೌನ್ ಹೀರೋಸ್ ಆವೃತ್ತಿಯಲ್ಲಿ ಪರಿಚಯಿಸಲು ಹೆಮ್ಮೆ ಪಡುತ್ತೆ.

ಆರ್ಥಿಕವಾಗಿ ದುರ್ಬಲರಾದವರಿಗೆ ಅತ್ಯಾವಶ್ಯಕ ಔಷಧಿ ಪೂರೈಸುತ್ತಿರುವ ಪುನೀತ್-ಸರವಣ ತಂಡ
ಆರ್ಥಿಕವಾಗಿ ದುರ್ಬಲರಾದವರಿಗೆ  ಔಷಧಿ ಪೂರೈಸುತ್ತಿರುವ ಪುನೀತ್-ಸರವಣ ತಂಡ

ಆ ಯುವಕರಿಬ್ಬರು ಕಟ್ಟಿಕೊಂಡ ಸ್ವಯಂ ಸೇವಾ ಸಂಸ್ಥೆ ಹೆಸರು ಸೂರ್ಯ ಫೌಂಡೇಷನ್.ಅದರ ಸ್ಥಾಪಕರೂ ಅವರಿಬ್ಬರೇ.ಓರ್ವ ಪುನೀತ್..ಮತ್ತೋರ್ವ ಸರವಣ.ಅಂದ್ಹಾಗೆ ಪುನೀತ್ ಹಾಗೂ ಸರವಣ ತಮ್ಮ ಈ ಸೂರ್ಯ ಫೌಂಡೇಷನ್ ಮೂಲಕ ಕೊರೊನಾ ಸೃಷ್ಟಿಸಿದ ಲಾಕ್ ಡೌನ್ ಸಂದರ್ಭದಲ್ಲಿ ಮಾಡುತ್ತಿರುವ ಕೆಲಸ ನಿಜಕ್ಕೂ ಇತರರಿಗೆ ಮಾದರಿಯಾಗುತ್ತೆ.ಊಟ ಪೂರೈಸುವ ಸಾವಿರಾರು ಜನರಂತಾಗದೆ(ಅದರಲ್ಲಿ ಬಹುತೇಕರ ಉದ್ದೇಶ ಕೇವಲ ಪ್ರಚಾರ) ಊಟದಷ್ಟೇ ಅತ್ಯಾವಶ್ಯಕವಾಗಿರುವ ಔಷಧಿ-ಮಾತ್ರೆಗಳನ್ನು ಆರ್ಥಿಕವಾಗಿ  ದುರ್ಬಲವಾದವರಿಗೆ ಅವರ ಮನೆ ಬಾಗಿಲಿಗೇ ಔಷಧಿಯನ್ನು ಉಚಿತವಾಗಿ ವಿತರಿಸುವ ಕಾರ್ಯವನ್ನು ಯಾವುದೇ ಪ್ರಚಾರವಿಲ್ಲದೆ ಮಾಡುತ್ತಿದ್ದಾರೆ.

ಓದಿದ್ದು ಎಂಜಿನಿಯರ್ ಆದ್ರೂ ಪುನೀತ್ ಆಯ್ಕೆ ಮಾಡಿಕೊಂಡಿದ್ದು ಸಮಾಜಸೇವಾ ಕ್ಷೇತ್ರವನ್ನು ಅತೀ ಸಣ್ಣ ವಯಸ್ಸಿನಲ್ಲೇ ರಾಯಭಾರ ಕಚೇರಿಯಲ್ಲಿ ಉತ್ತಮ ಹುದ್ದೆಯಲ್ಲಿದ್ದುಕೊಂಡು ಲಕ್ಷಾಂತರ ಸಂಬಳ ಪಡೆಯುತ್ತಿದ್ದ ಪುನೀತ್ ಅದಕ್ಕೆ ಶರಣು ಹೊಡೆದು ಬೆಂಗಳೂರಿಗೆ ಬಂದವರೇ ತನ್ನ ಸ್ನೇಹಿತ-ಸಮಾನಮನಸ್ಕ ಸರವಣ ಜೊತೆ ಸೇರಿಕೊಂಡು ಸ್ಥಾಪಿಸಿದ್ದೇ ಸೂರ್ಯ ಫೌಂಡೇಷನ್.ಸರವಣ ಜಿಮ್ ಟ್ರೈನರ್ ಆಗಿ ಕೆಲಸ ಮಾಡುತ್ತಿದ್ದರೂ ತನ್ನ ಸ್ನೇಹಿತ ಪುನೀತ್ ಕಾರ್ಯಕ್ಕೆ ಬೆನ್ನಾಗಿ ನಿಂತು ಕೆಲಸ ಮಾಡುತ್ತಿದ್ದಾರೆ.ಇವರ ಜೊತೆಗೆ ಸಮಾನಮನಸ್ಕ ಇನ್ನಿತರ ಗೆಳೆಯರೂ ಇದ್ದಾರೆ.

ಕೊರೊನಾ ಸೃಷ್ಟಿಸಿದ ಲಾಕ್ ಡೌನ್ ವೇಳೆ ಜನರಿಗೆ ಊಟ ಸಿಗ್ತಿರಬಹುದು,ಆದ್ರೆ ಅದೆಷ್ಟೋ ಜನರಿಗೆ ಆಹಾರದಷ್ಟೇ ಮುಖ್ಯವಾಗಿರುವ ಔಷಧಿ-ಮಾತ್ರ ಸಿಗ್ತಿಲ್ಲ.ಅದನ್ನು ಹೇಗೆ ಪಡೆಯಬೇಕೆನ್ನೋದು ಕೂಡ ಗೊತ್ತಾಗ್ತಿಲ್ಲ.ಹೊರಗೆ ಹೋಗ ಲು ಪೊಲೀಸರು ಅವಕಾಶ ಕೊಡುತ್ತಿಲ್ಲ.ಹಣ ಇದ್ದವರು ಹೇಗೋ ಔಷಧಿಯನ್ನು ಪಡೆಯುತ್ತಿದ್ದಾರೆ.ಆದ್ರೆ ಬಹಳಷ್ಟು ಜನಕ್ಕೆ ದುಡಿಮೆಯೇ ಇಲ್ಲದಿರುವುದರಿಂದ ಸಾಮಾನ್ಯವಾಗಿ ಕಾಡುವ ಬಿಪಿ,ಶುಗರ್,ಆರ್ಥರಿಟಿಸ್ ನಂಥ ಆರೋಗ್ಯ ಸಮಸ್ಯೆಗಳಿಗೆ ಬೇಕಿರುವ  ಔಷಧಿ ಪಡೆಯೊಕ್ಕೆ ಆಗ್ತಿಲ್ಲ.ಅಂಥವ್ರ ನೆರವಿಗೆ ಧಾವಿಸುವುದಷ್ಟೇ ಅಲ್ಲ,ತಮ್ಮ ಮೊಬೈಲ್ ಗೆ ಕಾಲ್ ಮಾಡಿದ್ರೆ ಸಾಕು,ಅವರ ಮನೆ ಬಾಗಿಲಿಗೇನೆ ಅದನ್ನು ತಲುಪಿಸುವ ಕೆಲಸ ಮಾಡುತ್ತಿದ್ದಾರೆ.ಆಪತ್ ಕಾಲದಲ್ಲಿ ಅವರಿಗೆ ನೆರವಾಗುತ್ತಿರುವ ಯುವಕರ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತವಾಗಿದೆ.

ಮನೆಬಾಗಿಲಿಗೆ ಔಷಧಿ ವಿತರಿಸುತ್ತಿರುವ ಪುನೀತ್-ಸರವಣ
ಮನೆಬಾಗಿಲಿಗೆ ಔಷಧಿ ವಿತರಿಸುತ್ತಿರುವ ಪುನೀತ್-ಸರವಣ
ಆಹಾರದಷ್ಟೇ ಅತ್ಯಾವಶ್ಯಕವಾಗಿರುವ ಔಷಧಿ ಪೂರೈಸಿ ಶಹಬ್ಬಾಸ್ ಗಿರಿ ಜೊತೆಗೆ ಆಶೀರ್ವಾದವನ್ನೂ ಪಡೆಯುತ್ತಿದ್ದಾರೆ ಪುನೀತ್-ಸರವಣ ತಂಡ
ಆಹಾರದಷ್ಟೇ ಅತ್ಯಾವಶ್ಯಕವಾಗಿರುವ ಔಷಧಿ ಪೂರೈಸಿ ಶಹಬ್ಬಾಸ್ ಗಿರಿ ಜೊತೆಗೆ ಆಶೀರ್ವಾದವನ್ನೂ ಪಡೆಯುತ್ತಿದ್ದಾರೆ ಪುನೀತ್-ಸರವಣ ತಂಡ

ಆಹಾರದ ಸಮಸ್ಯೆ ಇವತ್ತು ಬೆಂಗಳೂರಿನಲ್ಲಿ ಬಹುತೇಕ ಇಲ್ಲ.ಬೀದಿ-ಗಲ್ಲಿಗೆ ನೂರಾರು ಜನ ಆಹಾರ ಪೂರೈಸುವವರು ಹುಟ್ಟಿಕೊಂಡಿದ್ದಾರೆ.ಆದ್ರೆ ಆಹಾರದಷ್ಟೇ ಅತ್ಯಾವಶ್ಯಕವಾಗಿರುವ ಔಷಧಿ-ಮಾತ್ರೆಗಳನ್ನು ಪೂರೈಸುವವರೇ ಕಡ್ಮೆಯಾಗಿದ್ದಾರೆ.ಅಂಥಾ ಕೆಲಸವನ್ನು ಕೈಲಾದ ಮಟ್ಟಗೆ ಮಾಡುತ್ತಿದ್ದಾರೆ ಪುನೀತ್ ಸರವಣ.ತಮ್ಮ ಕೆಲಸದ ಬಗ್ಗೆ ಆತ್ಮತೃಪ್ತಿಯಿದೆ ಎನ್ನುವ ಈ ಯುವಕರು,ಆಹಾರ ಪೂರೈಕೆಗೆ ಕೊಡುತ್ತಿರುವ ಗಮನವನ್ನು ಸರ್ಕಾರ ಔಷದೋಪಚಾರ ಪೂರೈಸುವ ಕೆಲಸಕ್ಕೆ ನೀಡಿದ್ರೆ ಸಾಕಷ್ಟು ಜನರಿಗೆ ಸಹಕಾರಿಯಾಗುತ್ತೆ.ಈ ನಿಟ್ಟಿನಲ್ಲಿ ಸರ್ಕಾರ ಪ್ರಯತ್ನ ಮಾಡಲಿ ಎಂದು ಮನವಿ ಮಾಡಿಕೊಳ್ತಾರೆ.

ಯಾರಿಗಿಂತಲೂ ಕಡಿಮೆ ಇಲ್ಲದ ರೀತಿಯಲ್ಲಿ ತಮ್ಮ ಉಳಿತಾಯದ ಹಣದಲ್ಲೇ ಉಚಿತ ಆರೋಗ್ಯ ಸೇವೆ ನೀಡುತ್ತಿರುವ ಈ ಯುವಕರಿಬ್ಬರ ಕೆಲಸಕ್ಕೆ ಆರ್ಥಿಕ ತೊಂದರೆ ಉಂಟಾಗುತ್ತಿದೆ.ಲಾಕ್ ಡೌನನ್ನೇ ನೆವವಾಗಿಟ್ಟುಕೊಂಡು ಮೆಡಿಕಲ್ಸ್ ಗಳು ಔಷಧಿಗಳ ಬೆಲೆಯನ್ನೇ ಏರಿಕೆ ಮಾಡಿವೆ.ಇದರ ಬಗ್ಗೆ ಪ್ರಶ್ನಿಸಿದ್ರೆ ಕೊಂಡ್ರೆ ಕೊಡಿ ಬಿಟ್ರೆ ಬಿಡಿ ಎನ್ನುವ ಮಟ್ಟದ ಉತ್ತರ ಸಿಗ್ತಿವೆ.ವಾಗ್ಯುದ್ಧಕ್ಕೆ ಅವಕಾಶ ಕೊಡದೆ ದುಬಾರಿ ಬೆಲೆಯನ್ನೇ ಕೊಟ್ಟು ದಿನಕ್ಕೆ 25 ರಷ್ಟು ಮನೆಗಳ ಬಾಗಿಲಿಗೇನೆ ಔಷಧಿ ಪೂರೈಸುತ್ತಿರುವ ಯುವಕರಿಗೆ ಆರ್ಥಿಕ ಮುಗ್ಗಟ್ಟು ಎದುರಾಗಿದೆ.ಯಾವುದೇ ಪ್ರತಿಫಲಾಪೇಕ್ಷೆಯಿಲ್ಲದೆ ಉಚಿತ  ಔಷಧಿ ಸೇವೆ ನೀಡುತ್ತಿರುವ ಯುವಕರ ಕಾರ್ಯಕ್ಕೆ ಕೈ ಜೋಡಿಸಿದ್ರೆ..ಅಥವಾ ನೆರವು ಕೊಟ್ರೆ ಪುಣ್ಯ ಅವರಿಗೂ ಸಿಕ್ಕುತ್ತೆ.ಎನಿವೇ ಲಾಕ್ ಡೌನ್ ಸಮಯದಲ್ಲೂ ಸಮಾಜಮುಖಿ ಕಾರ್ಯವನ್ನು ಮಾನವೀಯ ನೆಲೆಗಟ್ಟಿನಲ್ಲಿ ಮಾಡುತ್ತಿರುವ ಈ ಕೊರೊನಾ ಲಾಕ್ ಡೌನ್ ಹೀರೋಸ್ ಗೆ ಕನ್ನಡ ಫ್ಲಾಶ್ ನ್ಯೂಸ್ ಅಭಿನಂದನೆ ಸಲ್ಲಿಸುತ್ತೆ.ಅವರ ಕಾರ್ಯ ಹೀಗೆ ನಿರಂತರವಾಗಿರಲಿ ಎಂದು ಆಶಿಸುತ್ತೆ.

ಮ್ಮ ಮೊಬೈಲ್ ಗೆ ಕಾಲ್ ಮಾಡಿದ್ರೆ ಸಾಕು,ಅವರ ಮನೆ ಬಾಗಿಲಿಗೆ ಔಷಧಿ ತಲುಪಿಸುವ ಕೆಲಸವನ್ನು ಹೀಗೆ ಮಾಡ್ತಾರೆ ಈ ಕೊರೊನಾ ಲಾಕ್ ಡೌನ್ ಹೀರೋಸ್..ನೀವೂ ನೋಡ್ಬಿಡಿ..

Spread the love
Leave A Reply

Your email address will not be published.

Flash News