ಅಲಿಯಾನ್ಸ್ ವಿವಿಯ ಹಣಬಾಕತನಕ್ಕೆ ವಿದ್ಯಾರ್ಥಿಗಳು ಆತ್ಮಹತ್ಯೆ ಹಾದಿ ಹಿಡಿತಾರಾ ?!

0

ಬೆಂಗಳೂರು: ದುಡ್ಡಿದ್ದ ಮಾತ್ರಕ್ಕೆ ಏನ್ ಬೇಕಾದ್ರೂ ಮಾಡಿಬಿಡಬಹುದೆನ್ನುವ ಅಹಂಗೆ ಬೆಂಗಳೂರಿನ ಪ್ರತಿಷ್ಟಿತ ಅಲಾಯನ್ಸ್ ವಿವಿಯ ಧೋರಣೆಯೇ ಸಾಕ್ಷಿಯಾಗ್ತದೆ.ಇಡೀ ದೇಶ ಲಾಕ್ ಡೌನ್ ನಲ್ಲಿ ತತ್ತರಿಸುತ್ತಿದ್ದರೆ ಈ ವಿಶ್ವವಿದ್ಯಾಲಯದ ಬೃಹಸ್ಪತಿಗಳು ಮಾಡಲಿಕ್ಕೆ ಕೆಲಸ ಇಲ್ಲ ಎನ್ನುವಂತೆ ತಮ್ಮ ವಿದ್ಯಾರ್ಥಿಗಳು ಹಾಗೂ ಪೋಷಕರಿಗೆ ಶೈಕ್ಷಣಿಕ ದೌರ್ಜನ್ಯವನ್ನು ನಿರಂತರವಾಗಿ ನಡೆಸುತ್ತಿರುವ ಅಘಾತಕಾರಿ ಸತ್ಯ ಬಯಲಾಗಿದೆ.ಸಂಕಷ್ಟದ ದಿನಗಳಲ್ಲಿ ದಿನದೂಡಿದ್ರೆ ಸಾಕೆನ್ನುವ ಮನಸ್ತಿತಿಯಲ್ಲಿ ವಿದ್ಯಾರ್ಥಿಗಳಿದ್ದರೆ ಶುಲ್ಕ ಪಾವತಿಸುವಂತೆ ಸಿಕ್ಕಾಪಟ್ಟೆ ಟಾರ್ಚರ್ ಕೊಟ್ಟಿರುವ ದಾಖಲೆಗಳು ಕನ್ನಡ ಪ್ಲಾಶ್ ನ್ಯೂಸ್ ಗೆ ದೊರೆತಿದೆ.

ಅಲಾಯನ್ಸ್ ವಿವಿ ಕೇವಲ ಭಾರತದಲ್ಲಷ್ಟೇ ಅಲ್ಲ ಇಡೀ ವಿಶ್ವದಲ್ಲೇ ಅತ್ಯಂತ ಪ್ರತಿಷ್ಟಿತ ವಿವಿಗಳಲ್ಲಿ ಒಂದು.ಹಾಗೆಂದೇ ಒಪ್ಪಿಕೊಳ್ಳೋಣ.ಆದ್ರೆ ಕೆಲವು ಬೇಡದ ಕಾರಣಗಳಿಗೆ ಇದೇ ವಿಶ್ವವಿದ್ಯಾಲಯ ಸುದ್ದಿಯಾಗಿದ್ದು ವಿವಿ ಮೇಲಿನ ವಿಶ್ವಾಸ ಕಳೆದು ಹೋಗಲು ಕಾರಣವಾಗಿದ್ದು ಸುಳ್ಳಲ್ಲ.

ಅಷ್ಟಕ್ಕೆ ಎಚ್ಚೆತ್ತುಕೊಂಡು ಇರುವ ರೆಪ್ಯೂಟೇಷನನ್ನೇ ಉಳಿಸಿಕೊಂಡು ಹೋಗೋದನ್ನು ಬಿಟ್ಟು ನೆಲಕ್ಕೆ ಬಿದ್ದರೂ ಮೀಸೆ ಮಣ್ಣಾಗಲಿಲ್ಲ ಎನ್ನುವಂತೆ ವಿವಾದವನ್ನು ಮೈಮೇಲೆ ಎಳೆದುಕೊಳ್ಳುವಂಥ ಕೆಲಸಕ್ಕೆ ಕೈ ಹಾಕಿದೆ.

ಲಾಕ್ ಡೌನ್ ಆಗಿರುವ ಸನ್ನಿವೇಶದಲ್ಲಿ ಇಡೀ ವಿಶ್ವದ ಆರ್ಥಿಕತೆಯೇ ಬುಡಮೇಲಾಗಿದೆ.ಜನರು ಜೀವನ ನಡೆಸೋದೇ ಕಷ್ಟಕರವಾಗಿದೆ.ಈ ನಡುವೆಯೇ ಅನೇಕ ಶಿಕ್ಷಣ ಸಂಸ್ಥೆಗಳು ತಮ್ಮ ವಿದ್ಯಾರ್ಥಿಗಳಿಗೆ ಶುಲ್ಕ ಪಾವತಿಸುವಂತೆ ಬಲವಂತ ಮಾಡಿದ್ದವು.

ಈ ಬಗ್ಗೆ ಅನೇಕ ಪೋಷಕರು ಸರ್ಕಾರ ಹಾಗೂ ಶಿಕ್ಷಣ ಸಚಿವರಿಗೆ ಕಂಪ್ಲೆಂಟ್ ಮಾಡಿದ್ದರು.ಇದನ್ನು ಗಂಭೀರವಾಗಿ ಪರಿಗಣಿಸಿದ ಸರ್ಕಾರ ಯಾವುದೇ ಶಿಕ್ಷಣ ಸಂಸ್ಥೆಗಳು ಲಾಕ್ ಡೌನ್ ಪರಿಸ್ಥಿತಿ ತಿಳಿಯಾಗುವವರೆಗೂ ಶುಲ್ಕಕ್ಕಾಗ್ಲಿ,ಹಣಕ್ಕಾಗ್ಲಿ ಡಿಮ್ಯಾಂಡ್ ಮಾಡುವುದಾಗಲಿ,ಕಿರುಕುಳ ನೀಡುವುದಾಗಲಿ ಮಾಡಬಾರದೆಂದು ಸುತ್ತೊಲೆ ಹೊರಡಿಸಿದ್ದವು.ಅದೇ ಕೊನೆ ರಾಜ್ಯದ ಯಾವುದೇ ಶಿಕ್ಷಣ ಸಂಸ್ಥೆಯಿಂದಲೂ ಇದಕ್ಕೆ ಸಂಬಂಧಿಸಿದಂತೆ ದೂರುಗಳೇ ಬರಲಿಲ್ಲ.

ವಿವಿಯ ಆಡಳಿತಾಧಿಕಾರಿ ಶೈಲಾ ಛಬ್ಬಿ
ವಿವಿಯ ಆಡಳಿತಾಧಿಕಾರಿ  ಶ್ರೀಮತಿ ಶೈಲಾ ಛಬ್ಬಿ

ಏನ್ರಿ  ಶೈಲಾ ಛಬ್ಬಿ ಮೇಡಮ್ ಇದೆಲ್ಲಾ: ಅಂದ್ಹಾಗೆ ನಿಯಮಗಳು ಎಲ್ಲರಿಗೂ ಸಮನಾಗಿ ಅನ್ವಯವಾಗಬೇಕಲ್ವೇ.. ಇದಕ್ಕೆ ಅಲಿಯಾನ್ಸ್ ವಿವಿ ಕೂಡ ಹೊರತಲ್ಲ ಅಲ್ವೇ..ಆದ್ರೆ ಸರ್ಕಾರದ ಕಟ್ಟಪ್ಪಣೆ-ಸುತ್ತೋಲೆ ಹೊರತಾಗ್ಯೂ ವಿವಿ ಆಡಳಿತ ಮಂಡಳಿಯ ಬೃಹಸ್ಪತಿಗಳು ತಮ್ಮ ವಿದ್ಯಾರ್ಥಿಗಳಿಗೆ ಮೇಲ್ ಮೂಲಕ ಯಾವ್ ಪರಿ ತೊಂದ್ರೆ-ಕಿರುಕುಳ-ಮಾನಸಿಕ ದೌರ್ಜನ್ಯ ಎಸಗುತ್ತಿದ್ದಾರೆಂದ್ರೆ ನಿಮ್ಮ ಸೆಮಿಸ್ಟರ್ ಗಳ ಬಾಕಿ ಶುಲ್ಕ ನೀಡಬೇಕು.ಇಲ್ಲವಾದಲ್ಲಿ ಮುಂದಿನ ಸೆಮಿಸ್ಟರ್ ಗೆ ಅಡ್ಮಿಷನ್ ಕೊಡೊಲ್ಲ ಎಂದು ಅವಾಜ್ ಹಾಕ್ತಿದ್ದಾರೆ.

ನೀವು ಗಾಬರಿಯಾಗ್ತೀರಾ…ಶೈಲಾ ಛಬ್ಬಿ ನೇತೃತ್ವದ ಆಡಳಿತ ಮಂಡಳಿ ವಿದ್ಯಾರ್ಥಿಗಳಿಂದ ಕೇಳುತ್ತಿರುವ ಶುಲ್ಕದ ಪ್ರಮಾಣ ಸಾವಿರಗಳಲ್ಲಲ್ಲ. ಲಕ್ಷಗಳಲ್ಲಿ. 3 ವರೆಯಿಂದ 4 ವರೆ ಲಕ್ಷ ಶುಲ್ಕ ಪಾವತಿಸುವಂತೆ ಮೇಲ್ ಗಳ ಮೇಲೆ ಮೇಲ್ ಹಾಕುತ್ತಲೇ ಇದ್ದಾರೆ.ಇದನ್ನು ನೋಡಿ ವಿದ್ಯಾರ್ಥಿಗಳು ಹಾಗೂ ಪೋಷಕರು ಶಾಕ್ ಆಗಿದ್ದಾರೆ.

ದುಡಿಮೆಯೇ ಇಲ್ಲದೆ ಅದೆಷ್ಟೋ ಪೋಷಕರು ಮನೆಯಲ್ಲಿ ಕೂರಬೇಕಾದ ಸಂದರ್ಭದಲ್ಲಿ ವಿವಿಯವರು ಹಾಕುತ್ತಿರುವ ಬೆದರಿಕೆ ಮೇಲ್ ಗಳಿಂದ ಅಕ್ಷರಶಃ ಕನಲಿ ಹೋಗಿದ್ದಾರೆ. ಸರ್ಕಾರದ ಆದೇಶ ಇದ್ದ ಹೊರತಾಗ್ಯೂ  ಶುಲ್ಕಕ್ಕೆ ದುಂಬಾಲು ಬೀಳುತ್ತಿರುವ ಶೈಲಾ ಛಬ್ಬಿ ಅವರನ್ನೊಳಗೊಂಡ ಆಡಳಿತ ಮಂಡಳಿ ಧೋರಣೆಯನ್ನು  ವಿದ್ಯಾರ್ಥಿಗಳು ಹಾಗೂ ಪೋಷಕರು ಸರ್ಕಾರದ ಗಮನವನ್ನು ಸೆಳೆಯಲು ಮುಂದಾಗಿದ್ದಾರೆ.

ಬೆದರಿಕೆ ಮೇಲ್ ಗಳು ಹೇಗಿವೆ ಎಂದರೆ ನಿಮ್ಮ ಸೆಮಿಸ್ಟರ್ ನ ಬಾಕಿ ಶುಲ್ಕ ಇಷ್ಟಿದೆ.ಇದನ್ನು ಶೀಘ್ರವೇ ಪಾವತಿಸಿ ಇಲ್ಲವಾದಲ್ಲಿ ಮುಂದಿನ ಸೆಮಿಸ್ಟರ್ ಗೆ ಅವಕಾಶ ನೀಡೊಲ್ಲ.ನಿಗಧಿತ ಅವಧಿಯೊಳಗೆ ಶುಲ್ಕ ಪಾವತಿಸದಿದ್ದರೆ ಹಣವನ್ನು ಪಾವತಿಸದಿದ್ರೆ ಬೋಧನಾ ತರಗತಿಗಳಿಗೆ ಬಹಿಷ್ಕಾರದ ಶಿಕ್ಷೆ ವಿಧಿಸಬೇಕಾಗುತ್ತೆ.

 ಬಾಕಿ ಶುಲ್ಕ ಪಾವತಿಸುವಂತೆ ವಿದ್ಯಾರ್ಥಿಗಳಿಗೆ ಮೇಲ್ ಗಳ ಮೇಲೆ ಮೇಲ್ ಕಳುಹಿಸುತ್ತಿದ್ದಾರೆನ್ನುವ ದಾಖಲೆಗಳು
ಬಾಕಿ ಶುಲ್ಕ ಪಾವತಿಸುವಂತೆ ವಿದ್ಯಾರ್ಥಿಗಳಿಗೆ ಮೇಲ್ ಗಳ ಮೇಲೆ ಮೇಲ್ ಕಳುಹಿಸುತ್ತಿದ್ದಾರೆನ್ನುವ ದಾಖಲೆಗಳು
 4 ವರೆ ಲಕ್ಷ ಪಾವತಿಸದಿದ್ದರೆ ಮುಂದಿನ ತರಗತಿಗೆ ಕೂರುವಂಗಿಲ್ಲ ಎನ್ನುವ ಬೆದರಿಕೆ ಮೇಲ್
4 ವರೆ ಲಕ್ಷ ಪಾವತಿಸದಿದ್ದರೆ ಮುಂದಿನ ತರಗತಿಗೆ ಕೂರುವಂಗಿಲ್ಲ ಎನ್ನುವ ಬೆದರಿಕೆ ಮೇಲ್
ಆಡಳಿತ ಮಂಡಳಿ ಕಳುಹಿಸುತ್ತಿರುವ ಮೇಲ್ ಗಳಿಂದ ರೋಸತ್ತು ಹೋಗಿರುವ ವಿದ್ಯಾರ್ಥಿಗಳು
ಆಡಳಿತ ಮಂಡಳಿ ಕಳುಹಿಸುತ್ತಿರುವ ಮೇಲ್ ಗಳಿಂದ ರೋಸತ್ತು ಹೋಗಿರುವ ವಿದ್ಯಾರ್ಥಿಗಳು

ನಿಗಧಿತ ಅವಧಿಯೊಳಗೆ ಶುಲ್ಕ ಪಾವತಿಸದಿದ್ರೆ ಹೆಚ್ಚುವರಿ ದಂಡ ಕಟ್ಟಬೇಕಾಗುತ್ತೆ ಎಂದಿದ್ದಾರೆ.ಆ ದಂಡ ಕೇಳಿದ್ರೂ ಗಾಬರಿಯಾಗುತ್ತೆ. 15 ದಿನಗಳವರೆಗೆ ಪ್ರತಿನಿತ್ಯ 200 ರೂ ದಂಡ ಪಾವತಿಸಬೇಕು. 15 ದಿನಗಳ ನಂತ್ರ ದಂಡ ಶುಲ್ಕದಲ್ಲಿ 100 ಹೆಚ್ಚಳ ಮಾಡಿ 300 ರೂ ಪಾವತಿಸಬೇಕಾಗುತ್ತೆ ಎಂದು ಎಚ್ಚರಿಸುತ್ತಿವೆ.

ಮೇಲ್ ಗಳ ಮೇಲೆ ಮೇಲ್ ಹಾಕಿ ವಿದ್ಯಾರ್ಥಿ ಹಾಗೂ ಪೋಷಕರು ಆತ್ಮಹತ್ಯೆ ಮಾಡಿಕೊಳ್ಳುವಂಥ ಮಟ್ಟಕ್ಕೆ ಅವರನ್ನು ತಂದು ನಿಲ್ಲಿಸುತ್ತಿರುವ ವಿವಿಯ ವಿರುದ್ಧ ಕ್ರಮ ಜರುಗಿಸದೆ ಹೋದ್ರೆ ಯಡವಟ್ಟುಗಳಾಗೋದು ಗ್ಯಾರಂಟಿ.
ಮೇಲ್ ಗಳ ಮೇಲೆ ಮೇಲ್ ಹಾಕಿ ವಿದ್ಯಾರ್ಥಿ ಹಾಗೂ ಪೋಷಕರು ಆತ್ಮಹತ್ಯೆ ಮಾಡಿಕೊಳ್ಳುವಂಥ ಮಟ್ಟಕ್ಕೆ ಅವರನ್ನು ತಂದು ನಿಲ್ಲಿಸುತ್ತಿರುವ ವಿವಿಯ ವಿರುದ್ಧ ಕ್ರಮ ಜರುಗಿಸದೆ ಹೋದ್ರೆ ಯಡವಟ್ಟುಗಳಾಗೋದು ಗ್ಯಾರಂಟಿ..

ಆಡಳಿತ ಮಂಡಳಿ ಬೆದರಿಕೆ ಮೇಲ್ ಗಳಿಂದ  ವಿದ್ಯಾರ್ಥಿಗಳು ಕಂಗಾಲಾಗಿದ್ದಾರೆ.ಮೊದ್ಲೇ ಲಾಕ್ ಡೌನ್ ನಿಂದಾಗಿ ಶೈಕ್ಷಣಿಕ ಚಟುವಟಿಕೆಗಳೆಲ್ಲಾ ಬುಡಮೇಲಾಗಿರುವುದರ ಬಗ್ಗೆ ಆತಂಕಿತಗೊಂಡಿರುವ ವಿದ್ಯಾರ್ಥಿಗಳು ಈ ಬೆದರಿಕೆ ಮೇಲ್ ಗೆ ಹೆದರಿ ಏನಾದ್ರೂ ಜೀವಕ್ಕೆ ಅಪಾಯ ಮಾಡಿಕೊಂಡ್ರೆ ಯಾರ್ ಗತಿ..ಇದನ್ನು ಆಡಳಿತ ಮಂಡಳಿ ಆಲೋಚಿಸಿದೆಯೇ ಎಂದು ಪ್ರಶ್ನಿಸ್ತಾರೆ ಸಂಸ್ಥಾಪಕ ಕುಲಾಧಿಪತಿ ಮಧುಕರ್ ಅಂಗೂರ್.

ಕೊರೊನಾ ಲಾಕ್ ಡೌನ್ ವೇಳೆಯಲ್ಲಿ, ದಿನ ದೂಡಿದ್ರೆ ಸಾಕಪ್ಪ ಎನ್ತಿರೋ ವಿದ್ಯಾರ್ಥಿಗಳ ಮೇಲೆ  ಅಲಿಯಾನ್ಸ್ ವಿವಿ ಎಳೆಯುತ್ತಿರುವ ಬರೆ ಬಗ್ಗೆ ಶೈಕ್ಗಣಿಕ ಕ್ಷೇತ್ರದ ದಿಗ್ಗಜರಿಂದ್ಲೇ ವ್ಯಾಪಕ ಆಕ್ರೋಶ ವ್ಯಕ್ತವಾಗುತ್ತಿದೆ. ಲಾಕ್ ಡೌನ್ ವೇಳೆ ಶುಲ್ಕ ವಸೂಲಿ ಮಾಡುವಂತಿಲ್ಲ.

ಹಾಗೇನಾದ್ರೂ ಶುಲ್ಕ ಪಾವತಿಸುವಂತೆ ಒತ್ತಾಯಿಸಿದ್ರೆ ಅದು ಶಿಕ್ಷಾರ್ಹ ಅಪರಾಧವ ಎಂಬ ಎಚ್ಚರಿಕೆ ನೀಡಿದ್ರೂ ಅದಕ್ಕೆ ಕ್ಯಾರೆ ಎನ್ನುತ್ತಿಲ್ಲ ಎನ್ನುವುದಾದ್ರೆ ,ಸರ್ಕಾರದ   ಆದೇಶಕ್ಕೆ ಕಿಮ್ಮತ್ತಿನ ಬೆಲೆ ಇಲ್ವಾ.ಸರ್ಕಾರ ಈ ಸಂಸ್ಥೆ ವಿರುದ್ಧ ಕಠಿಣಾತೀಕಠಿಣ ಕ್ರಮ ಕೈಗೊಳ್ಳಬೇಕು.ಸರ್ಕಾರ ತೆಗೆದುಕೊಳ್ಳುವ ಕ್ರಮ ಇತರೆ ಶಿಕ್ಷಣ ಸಂಸ್ಥೆಗಳಿಗೂ ಎಚ್ಚರಿಕೆಯ ಕರೆಗಂಟೆಯಾಗಬೇಕೆಂದು ಸಲಹೆ ನೀಡಿವೆ.

ಅದೇನೇ ಆಗಲಿ ಜಗತ್ತಿಗೇ ಒಂದು ನ್ಯಾಯವಾದ್ರೆ,ಅಲಿಯಾನ್ಸ್ ವಿವಿಯ ಬೃಹಸ್ಪತಿಗಳಿಗೆ ಒಂದ್ ನ್ಯಾಯನಾ..ಮೇಲ್ ಗಳ ಮೇಲೆ ಮೇಲ್ ಹಾಕಿ ವಿದ್ಯಾರ್ಥಿ ಹಾಗೂ ಪೋಷಕರು ಆತ್ಮಹತ್ಯೆ ಮಾಡಿಕೊಳ್ಳುವಂಥ ಮಟ್ಟಕ್ಕೆ ಅವರನ್ನು ತಂದು ನಿಲ್ಲಿಸುತ್ತಿರುವ ವಿವಿಯ ವಿರುದ್ಧ ಕ್ರಮ ಜರುಗಿಸದೆ ಹೋದ್ರೆ ಯಡವಟ್ಟುಗಳಾಗೋದು ಗ್ಯಾರಂಟಿ.ದುರಂತ ಏನ್ ಗೊತ್ತಾ ಹಾಗೇನಾದ್ರೂ ಆದ್ರೆ ಅದಕ್ಕೆ ಸರ್ಕಾರ ಹೊಣೆಯಾಗಬೇಕಾಗ್ತದೆ.

 

Spread the love
Leave A Reply

Your email address will not be published.

Flash News