ಲಾಕ್ ಡೌನ್ ನಲ್ಲೂ ಡಯಾಲಿಸಿಸ್ ರೋಗಿಗಳಿಗೆ ಕಡಿಮೆ ದರದಲ್ಲಿ ಬೊಂಬಾಟ್ ಚಿಕಿತ್ಸೆ

0
ಡಯಾಲಿಸಿಸ್ ಚಿಕಿತ್ಸೆಯ ವೆಚ್ಚವನ್ನು ಭರಿಸುತ್ತಿರುವ ಕಾರ್ಪೊರೇಟರ್ ನಾಗರತ್ನ
ಡಯಾಲಿಸಿಸ್ ಚಿಕಿತ್ಸೆಯ ವೆಚ್ಚವನ್ನು ಭರಿಸುತ್ತಿರುವ ಕಾರ್ಪೊರೇಟರ್ ನಾಗರತ್ನ
ಕಾರ್ಪೊರೇಟರ್ ಕಾರ್ಯಕ್ಕೆ ಬೆನ್ನೆಲುಬಾಗಿ ನಿಂತಿರುವ ರಕ್ಷಾ ಫೌಂಡೇಷನ್ ಮಾಲೀಕ ಮಾಜಿ ಕಾರ್ಪೊರೇಟರ್ ಸಿ.ಕೆ.ರಾಮಮೂರ್ತಿ
ಕಾರ್ಪೊರೇಟರ್ ನಾಗರತ್ನಅವರ ಕಾರ್ಯಕ್ಕೆ ಬೆನ್ನೆಲುಬಾಗಿ ನಿಂತಿರುವ ರಕ್ಷಾ ಫೌಂಡೇಷನ್ ಮಾಲೀಕ ಮಾಜಿ ಕಾರ್ಪೊರೇಟರ್ ಸಿ.ಕೆ.ರಾಮಮೂರ್ತಿ

ಬೆಂಗಳೂರು: ಲಾಕ್ ಡೌನ್ ಸಮಯದಲ್ಲಿ ಗಂಭೀರ ಸಮಸ್ಯೆ ಎದುರಾಗಿರೋದು ಡಯಾಲಿಸಿಸ್ ರೋಗಿಗಳಿಗೆ.ನಿರ್ದಿಷ್ಟ ಅವಧಿಯಲ್ಲಿ ಡಯಾಲಿಸಿಸ್ ಮಾಡಿಕೊಳ್ಳದಿದ್ರೆ ರೋಗಿಯನ್ನು ಜೀವನ್ಮರಣಗಳ ನಡುವೆ ಹೋರಾಡುವಂತೆ ಮಾಡಿಬಿಡುತ್ತೆ ಈ ಸಮಸ್ಯೆ.ದುರಂತ ಏನ್ ಗೊತ್ತಾ,ಡಯಾಲಿಸಿಸ್ ಸಮಸ್ಯೆಯಿಂದ ಬಳಲುತ್ತಿರುವವರಿಗೆ ಸೂಕ್ತ ಚಿಕಿತ್ಸೆಯೇ ಸಿಗುತ್ತಿಲ್ಲ. ಡಯಾಲಿಸಿಸ್ ಮಾಡಿಸಿಕೊಳ್ಳೋರಿಗೆ ಹಣದ ಕೊರತೆ ಎದುರಾಗ್ತಿದೆ.ಏನೆಲ್ಲಾ ವ್ಯವಸ್ಥೆ ಮಾಡುತ್ತಿರುವ ಸರ್ಕಾರ ಹಾಗೂ ಬಿಬಿಎಂಪಿ ಡಯಾಲಿಸಿಸ್ ರೋಗಿಗಳಿಗೆ ಅಗತ್ಯವಿರುವ ವ್ಯವಸ್ಥೆ ಮಾಡದೇ ಹೋಗಿರುವುದು ದುರಾದೃಷ್ಟಕರ.

ನೀವು ನಂಬಲಿಕ್ಕಿಲ್ಲ.ಆದ್ರೂ ನಂಬಲೇಬೇಕು.ಬೆಂಗಳೂರಿನಲ್ಲಿ ಡಯಾಲಿಸಿಸ್ ಸಮಸ್ಯೆಗೆ ತುತ್ತಾಗಿರುವರ ಸಂಖ್ಯೆ ಹತ್ತಿರತ್ತಿರ ಲಕ್ಷ.ಅಷ್ಟೂ ಜನ ವಾರಕ್ಕೆ ಮೂರು ಬಾರಿ ಡಯಾಲಿಸಿಸ್ ಮಾಡಿಸಿ ಕೊಳ್ಳಲೇಬೇಕು.ಇಲ್ಲದಿದ್ದರೆ ಅವರ ಒದ್ದಾಟ-ಸಮಸ್ಯೆ ನೋಡೊಕ್ಕೆ ಆಗೊಲ್ಲ.ಅಕ್ಷರಶಃ ಜೀವಂಥ ಶವಗಳಾಗಿ ಹೋಗಿಬಿಡ್ತಾರೆ.ಇಂಥವರ ಕಾಳಜಿ ಮಾಡುವಂಥ ಕೆಲಸ ಸರ್ಕಾರ ಹಾಗೂ ಬಿಬಿಎಂಪಿಯಿಂದ ಆಗಬೇಕಿತ್ತು.ಅವುಗಳು ಮಾಡಬೇಕಿದ್ದ ಕೆಲಸವನ್ನು ಜಯನಗರ ವಿಧಾನಸಭಾ ಕ್ಷೇತ್ರದಲ್ಲಿ ಮಾಡುತ್ತಿದ್ದಾರೆ ಪಟ್ಟಾಭಿರಾಮನಗರ ವಾರ್ಡ್ ನ ಮಹಿಳಾ ಕಾರ್ಪೊರೇಟರ್ ನಾಗರತ್ನ ರಾಮಮೂರ್ತಿ.ಅವರ ಕಾರ್ಯಕ್ಕೆ ಕೈ ಜೋಡಿಸಿದೆ ರಕ್ಷಾ ಫೌಂಡೇಷನ್ ಹಾಗು ಕರ್ನಾಟಕ ಮಾರ್ವಾಡಿ ಯೂತ್ ಫೆಡರೇಷನ್.

ಅನ್ನ-ಆಹಾರದ  ಸಹಾಯ-ಸೇವೆಯನ್ನು ಮಾಡುತ್ತಿರುವವರ ಸಂಖ್ಯೆ ಹೆಚ್ಚಾಗಿರುವ ಸಂದರ್ಭದಲ್ಲಿ ಆರೋಗ್ಯ ಸೇವೆಯನ್ನೇ ಆಯ್ದುಕೊಂಡು ಅವರಿಗೆ ಮೆಡಿಸಿನ್ಸ್(ಎರಡು ಮೆಡಿಕಲ್ಸ್ ಶಾಪ್ ಗಳನ್ನು ಕೂಡ ಗುರುತಿಸಿದ್ದಾರೆ ರಕ್ಷಾ ಫೌಂಡೇಷನ್ ಸಂಸ್ಥಾಪಕ ಸಿ.ಕೆ ರಾಮಮೂರ್ತಿ.ಅವರೇ ಮಾಡಿರುವ ಆಪ್ ಮೂಲಕ ಬೇಕಾದ ಮೆಡಿಸಿನ್ಸ್ ಅಪ್ಲೈ ಮಾಡಿದ್ರೆ ಅದು ಲಭ್ಯವಾಗುವಂಥ ವ್ಯವಸ್ಥೆಯೂ ಇದರಲ್ಲಿದೆ) ವಿತರಿಸು ವ ವ್ಯವಸ್ಥೆಯನ್ನು ಈಗಾಗ್ಲೇ ಮಾಡಲಾಗಿದೆ.ಇದಕ್ಕೆ ಅಭೂತಪೂರ್ವ ರೆಸ್ಪಾನ್ಸ್ ಕೂಡ ಸಿಗ್ತಿದೆ.ಇದರ ಜೊತೆಗೇನೆ ಕಿಡ್ನಿ ಸಂಬಂಧಿ ಸಮಸ್ಯೆಯಿಂದ ನರಳುತ್ತಿರುವವರಿಗೆ ಅಗತ್ಯವಿರುವ ಡಯಾಲಿಸಿಸ್ ಚಿಕಿತ್ಸೆಯನ್ನು ಆಯ್ದುಕೊಂಡು ಆ ನಿಟ್ಟಿನಲ್ಲಿ ಆರೋಗ್ಯ ಸೇವೆ ನೀಡುತ್ತಿದ್ದಾರೆ.

ಕಾರ್ಪೊರೇಟರ್-ರಕ್ಷಾ ಫೌಂಡೇಷನ್ ಹಾಗೂ ಮಾರ್ವಾಡಿ ಫೌಂಡೇಷನ್ ನೆರವಿನಲ್ಲಿ ನಿತ್ಯ ನಡೆಯುತ್ತಿರುವ ಡಯಾಲಿಸಿಸ್
ಕಾರ್ಪೊರೇಟರ್-ರಕ್ಷಾ ಫೌಂಡೇಷನ್ ಹಾಗೂ ಮಾರ್ವಾಡಿ ಫೌಂಡೇಷನ್ ನೆರವಿನಲ್ಲಿ ನಿತ್ಯ ನಡೆಯುತ್ತಿರುವ ಡಯಾಲಿಸಿಸ್
ಡಯಾಲಿಸಿಸ್ ಪಡೆಯುತ್ತಿರುವವರ ಮಾಹಿತಿ ಪಡೆಯುತ್ತಿರುವ ರಕ್ಷಾ ಫೌಂಡೇಷನ್ ಸಂಸ್ಥಾಪಕ .ಕೆ ರಾಮಮೂರ್ತಿ
ಡಯಾಲಿಸಿಸ್ ಪಡೆಯುತ್ತಿರುವವರ ಮಾಹಿತಿ ಪಡೆಯುತ್ತಿರುವ ರಕ್ಷಾ ಫೌಂಡೇಷನ್ ಸಂಸ್ಥಾಪಕ .ಕೆ ರಾಮಮೂರ್ತಿ

ಮಹಿಳಾ ಕಾರ್ಪೊರೇಟರ್ ನಾಗರತ್ನ ತಮ್ಮ ವೈಯುಕ್ತಿಕ ನಿಧಿಯಿಂದ ಡಯಾಲಿಸಿಸ್ ಗೆಂದು ಬರುವ ಬಡವರಿಗೆ ಧನಸಹಾಯ ಮಾಡುತ್ತಿದ್ದಾರೆ.ದಿನಕ್ಕೆ ನೂರಾರು ಕರೆಗಳು ನಿರಂತರವಾಗಿ ಬರುತ್ತಲೇ ಇವೆ.ಅವುಗಳಲ್ಲಿ ಸಾಧ್ಯವಿರುವಷ್ಟಕ್ಕೆ ಹಣವನ್ನು ನೀಡಿ ತಾವೇ ಮುಂದೆ ನಿಂತು ಡಯಾಲಿಸಿಸ್ ಮಾಡಿಸುತ್ತಿದ್ದಾರೆ.ಲಾಕ್ ಡೌನ್ ಸಮಯದಲ್ಲಿಯೂ ಡಯಾಲಿಸಿಸ್ ಗೆ ಬರುವವರಿಗೆ ಇವರೇ ಉಚಿತವಾಗಿ ಚಿಕಿತ್ಸಾ ವೆಚ್ಚ ಭರಿಸುತ್ತಿದ್ದಾರೆ.ಡಯಾಲಿಸಿಸ್ ಸೆಂಟರ್ ಗೆ ಮುಂಗಡವಾಗಿ ಹಣವನ್ನು ಪಾವತಿಸಿ ಈ ಮಾನವೀಯ ಕಳಕಳಿಯ ಕೆಲಸವನ್ನು ಮಾಡುತ್ತಿದ್ದಾರೆ.ಲಾಕ್ ಡೌನ್ ಸಮಯದಲ್ಲಿ ಡಯಾಲಿಸಿಸ್ ಮಾಡಿಸಿಕೊಳ್ಳಲಿಕ್ಕಾಗದೆ ಪರದಾಡುತ್ತಿರುವ,ಅದಕ್ಕೆ ಹಣ ಹೊಂದಿಸಲು ಹೆಣಗಾಡುತ್ತಿರುವವರ ನೆರವಿಗೆ ಸರ್ಕಾರ ಹಾಗೂ ಬಿಬಿಎಂಪಿ ಸ್ಪಂದಿಸ್ಬೇಕೆನ್ನುತ್ತಾರೆ ಕಾರ್ಪೊರೇಟರ್ ನಾಗರತ್ನ ರಾಮಮೂರ್ತಿ.

ಇನ್ನು ಕಾರ್ಪೊರೇಟರ್ ಅವರ ಮಾನವಮುಖಿ ಕೆಲಸಕ್ಕೆ ಸಾಥ್ ಕೊಡುತ್ತಿದ್ದಾರೆ ರಕ್ಷಾ ಫೌಂಡೇಷನ್ ನ ಸಂಸ್ಥಾಪಕ ಸಿ.ಕೆ ರಾಮಮೂರ್ತಿ.ಮಾಜಿ ಕಾರ್ಪೊರೇಟರ್ರೂ ಆಗಿರುವ ರಾಮಮೂರ್ತಿ ರಕ್ಷಾ ಫೌಂಡೇಷನ್ ಮೂಲಕ ಡಯಾಲಿಸಿಸ್ ಚಿಕಿತ್ಸೆಗೊಳಪಡುವವರಿಗೆ ಆರ್ಥಿಕ ನೆರವನ್ನು ನೇರವಾಗಿ ಕೇಂದ್ರಕ್ಕೆ ನೀಡುತ್ತಿದ್ದಾರೆ.ಡಯಾಲಿಸಿಸ್ ಮಾಡಿಸಬೇಕು,ನೆರವು ನೀಡಿ ಎಂದು ಕೇಳಿದವರಿಗೆ ನಿರಾಶೆಗೊಳಿಸದೆ ಅವರು ಕಡಿಮೆ ದರದಲ್ಲಿ ಡಯಾಲಿಸಿಸ್ ಮಾಡಿಸಿಕೊಂಡು ಬರೊಕ್ಕೆ ಸಹಕಾರ ನೀಡುತ್ತಿದ್ದಾರೆ.

ರೋಗಿಗಳು ಆರ್ಥಿಕವಾಗಿ ತುಂಬಾ ದುರ್ಬಲವಾಗಿದ್ದರೆ ಅವರ ಸಂಪೂರ್ಣ ಚಿಕಿತ್ಸಾ ವೆಚ್ಚವನ್ನು ಫೌಂಡೇಷನ್ನೇ ಭರಿಸುವ ಕೆಲಸ ಮಾಡುತ್ತಿದೆ.ಇದರ ನಡುವೆ ಮಾಸ್ಕ್ ಗಳನ್ನು ಇವರೇ ಬಟ್ಟೆ ಕೊಟ್ಟು ತಯಾರಿಸಿ ವಿತರಿಸುತ್ತಿದ್ದಾರೆ.ಮಾಸ್ಕ್ ಮೂಲಕ ಟೈಲರ್ ಗಳಿಗೂ ಸಂಕಷ್ಟದ ಕಾಲದಲ್ಲಿ  ಒಂದಷ್ಟು  ಆರ್ಥಿಕ ಸದೃಢತೆ ಸಿಗುತ್ತಿದೆ.ಡಯಾಲಿಸಿಸ್ ಗೆ ಹೆಚ್ಚಿನ ಬೇಡಿಕೆ ಇದೆ.ಈ ನಿಟ್ಟಿನಲ್ಲಿ ಬಿಬಿಎಂಪಿ ಹೆಚ್ಚಿನ ಗಮನ ನೀಡಬೇಕೆನ್ನುತ್ತಾರೆ ರಾಮಮೂರ್ತಿ.

ಕಾರ್ಪೊರೇಟರ್ ಹಾಗೂ ರಕ್ಷಾ ಫೌಂಡೇಷನ್ ಗೆ ಸಹಕಾರ ನೀಡುತ್ತಿರುವ ಕರ್ನಾಟಕ ಮಾರ್ವಾಡಿ ಯೂತ್ ಫೆಡರೇಷನ್
ಕಾರ್ಪೊರೇಟರ್ ಹಾಗೂ ರಕ್ಷಾ ಫೌಂಡೇಷನ್ ಗೆ ಸಹಕಾರ ನೀಡುತ್ತಿರುವ ಕರ್ನಾಟಕ ಮಾರ್ವಾಡಿ ಯೂತ್ ಫೆಡರೇಷನ್

ಇವರಿಬ್ಬರ ಕೆಲಸಕ್ಕೆ ಕೈ ಜೋಡಿಸಿರುವುದು ಮಾರ್ವಾಡಿ ಯೂಥ್ ಫೌಂಡೇಷನ್.ದಿನಕ್ಕೆ 65ಕ್ಕಿಂತ ಹೆಚ್ಚು ಡಯಾಲಿಸಿಸ್ ಗಳು ಕಡಿಮೆ ದರದಲ್ಲಿ ನಡೆಯೊಕ್ಕೆ ಕಾರಣವಾಗಿರುವುದೇ ಈ ಫೆಡರೇಷನ್.ಅದರ ಅಡಿಯಲ್ಲಿ ನಡೆಯುತ್ತಿರುವ ಫೌಂಡೇಷನ್ ಕಳೆದ ಎರಡ್ಮೂರು ವರ್ಷಗಳಲ್ಲಿ 50 ಸಾವಿರಕ್ಕೂ ಹೆಚ್ಚಿನ ಡಯಾಲಿಸಿಸ್ ನ್ನು ಕಡಿಮೆ ದರದಲ್ಲೇ ಮಾಡಿದೆ.ಲಾಕ್ ಡೌನ್ ವೇಳೆ ದರವನ್ನು ಮತ್ತಷ್ಟು ಕಡಿಮೆ ಮಾಡಿ ಡಯಾಲಿಸಿಸ್ ರೋಗಿಗಳಿಗೆ ನೆರವಾಗುವ ಕೆಲಸ ಮಾಡುತ್ತಿದೆ ಎನ್ನುತ್ತಾರೆ ಸಂಸ್ಥೆಯ ನಿರ್ವಾಹಕ ಕೃಷ್ಣಕುಮಾರ್.

ಇದೆಲ್ಲದರ ನಡುವೆ ಡಯಾಲಿಸಿಸ್ ಕೇಂದ್ರದಲ್ಲಿರುವ ವೈದ್ಯರು ಡಯಾಲಿಸಿಸ್ ಮಾಡಿಸಲೇಬೇಕಾದ ಅನಿವಾರ್ಯ ಸ್ಥಿತಿಯಲ್ಲಿರೋರು ಅದೆಷ್ಟೋ ಸಾವಿರ..ಸಾವಿರ ಜನ ಇದ್ದಾರೆ.ಅವರಲ್ಲಿ ಬಹುತೇಕರಿಗೆ ಡಯಾಲಿಸಿಸ್ ಮಾಡಿಸಿಕೊಳ್ಳೊಕ್ಕೆ ನಾನಾ ಕಾರಣಗಳಿಂದ ಸಾಧ್ಯವಾಗ್ತಿಲ್ಲ.ಮೊಬೈಲ್ ನಲ್ಲಿ ತಮ್ಮ ಅಳಲನ್ನು ತೋಡಿಕೊಳ್ಳುತ್ತಿರುತ್ತಾರೆ.ಡಯಾಲಿಸಿಸ್ ನ್ನು ನಿರ್ದಿಷ್ಟ ಅವಧಿಯಲ್ಲಿ ಮಾಡಿಸದೆ ಹೋದರೆ ಅದು ಪ್ರಾಣಕ್ಕೇ ಸಂಚಕಾರ ತರುತ್ತೆ.ಹಾಗಾಗಿ ಸರ್ಕಾರ ಡಯಾಲಿಸಿಸ್ ಅಗತ್ಯವಿರುವವರ ವಿಷಯದಲ್ಲಿ ಹೆಚ್ಚಿನ ಕಾಳಜಿ ವಹಿಸ್ಬೇಕು ಎಂದು ಮನವಿ ಮಾಡಿಕೊಳ್ತಾರೆ.

ಒಟ್ಟಿನಲ್ಲಿ ಲಾಕ್ ಡೌನ್ ನಡುವೆಯೂ ಕಾರ್ಪೊರೇಟರ್ ನಾಗರತ್ನ,ರಕ್ಷಾ ಫೌಂಡೇಷನ್ ಹಾಗೂ ಕರ್ನಾಟಕ ಸ್ಟೇಟ್ ಯೂತ್ ಮಾರ್ವಾಡಿ ಫೌಂಡೇಷನ್ಸ್ ಗಳು ಡಯಾಲಿಸಿಸ್ ನ್ನು ಅತ್ಯಂತ ಕಡಿಮೆ ದರದಲ್ಲಿ ಮಾಡಿಸುವ ಪುಣ್ಯದ ಕೆಲಸ ಮಾಡುತ್ತಿದ್ದಾರೆ.ಇವರಿಗೆ ಹ್ಯಾಟ್ಸಾಫ್ ಹೇಳಲೇಬೇಕು.

Spread the love
Leave A Reply

Your email address will not be published.

Flash News