ಈ ಟೈಮ್ನಲ್ಲಿ ಮಾಜಿ ಎಮ್ಮೆಲ್ಲೆಗೆ ಕೊರೊನಾ ಸೋಂಕಿತರನ್ನು ಸಂಪರ್ಕಿಸುವ ರಾಜ”ಕಾರಣ”ವಾದ್ರೂ ಏನಿತ್ತೋ?

0
ಕೊರೊನಾ ಸೋಂಕಿತರಿರುವ ಸಮುದಾಯ ಭವನದ ಚಿಕಿತ್ಸಾ ಕೇಂದ್ರಕ್ಕೆ ಭೇಟಿ ಕೊಟ್ಟು ವಿಚಾರಣೆ ನಡೆಸುತ್ತಿರುವ ಮಾಜಿ ಕೈ ಶಾಸಕ ಷಡಕ್ಷರಿ.
ಕೊರೊನಾ ಸೋಂಕಿತರಿರುವ ಸಮುದಾಯ ಭವನದ ಚಿಕಿತ್ಸಾ ಕೇಂದ್ರಕ್ಕೆ ಭೇಟಿ ಕೊಟ್ಟು ವಿಚಾರಣೆ ನಡೆಸುತ್ತಿರುವ ಮಾಜಿ ಕೈ ಶಾಸಕ ಷಡಕ್ಷರಿ.
ತಿಪಟೂರು ಮಾಜಿ ಶಾಸಕ ಷಡಕ್ಷರಿ
ತಿಪಟೂರು ಮಾಜಿ ಶಾಸಕ ಷಡಕ್ಷರಿ

ಬೆಂಗಳೂರು/ತುಮಕೂರು/ತಿಪಟೂರು:ಕಾಂಗ್ರೆಸ್ ನ ಮಾಜಿ ಶಾಸಕ ಷಡಕ್ಷರಿ ಮಹಾನ್ ಯಡವಟ್ಟ ಎನ್ನೋದು ಮತ್ತೊಮ್ಮೆ ಪ್ರೂವ್ ಆಗಿದೆ.ಕೊರೊನಾ ಬಂದು ಎಂತೆಂಥವ್ರೋ ಮನೆಯಲ್ಲೇ ಕೂತು ಕಾಲ ಕಳೆಯುತ್ತಿರುವಾಗ ಈ ಮಹಾನುಭಾವ ಮಾಜಿ “ಕೈ” ಶಾಸಕ ಸುಮ್ಮನಿರ್ಲಿಕ್ಕಾಗದೆ ಅದೇನೋ ಹುಳ ಬಿಟ್ಕೊಂಡ್ರು ಎನ್ನುವಂತೆ ಕೊರೊನಾ ಕ್ವಾರಂಟೈನ್ ನಲ್ಲಿರುವವರ ಬಳಿ ಹೋಗಿ ಕಷ್ಟ ಸುಖ ಕೇಳೋ ನೆವದಲ್ಲಿ ಭಾರೀ ವಿವಾದ ಸೃಷ್ಟಿಸಿ ವಿರೋಧಕ್ಕೆ ಕಾರಣವಾಗಿದ್ದಾರೆ.

ತಿಪಟೂರಿನ ಸಮುದಾಯ ಭವನವೊಂದ್ತಲ್ಲಿ ಕೊರೋನಾಶಂಕಿತರನ್ನು ಸೂಕ್ಷ್ಮ ನಿಗಾ ಘಕಟದಲ್ಲಿಟ್ಟು ಚಿಕಿತ್ಸೆ ನೀಡುತ್ತಿದ್ದರೆ ಈ ಮಹಾನುಭಾವ ಯಡವಟ್ ಎಕ್ಸ್ ಎಮ್ಮೆಲ್ಲೆ ಷಡಕ್ಷರಿ ಅದೇನೋ ಕಿತ್ ದಬಾಕೋ ರೇಂಜ್ನಲ್ಲಿ ಕೊರೋನಾ ಶಂಕಿತರಿರುವ ಕೇಂದ್ರಕ್ಕೆ ಭೇಟಿ ಕೊಟ್ಟು ಅವರೊಂದಿಗೆ ಮಾತುಕತೆ ನಡೆಸಿ ಅವರ ಕಷ್ಟಸುಖ ವಿಚಾರಿಸಿದ್ದಾರೆ.ಆತಂಕ ಹಾಗೂ ಗಾಬರಿಯ ಸಂಗತಿ ಏನ್ ಗೊತ್ತಾ ಸ್ಥಳೀಯ ಸಮುದಾಯ ಭವನದಲ್ಲಿ ಚಿಕಿತ್ಸೆ ಪಡೆಯುತ್ತಿರುವ ಸೋಂಕಿತರ ಹೋಂ ಕ್ವಾರಂಟೈನ್ ಅವಧಿಯೇ ಇನ್ನೂ ಮುಗಿದಿಲ್ಲ.

ಷಡಕ್ಷರಿ ಅವರಿಗೆ ನಿಜಕ್ಕೂ ಜವಾಬ್ದಾರಿ ಎನ್ನೋದು ಇದ್ದಿದ್ದರೆ ಸುಖಾ ಸುಮ್ಮನೆ ಈ ರೀತಿಯ ಹೊಣೆಗೇಡಿತನಪ್ರದರ್ಶಿಸುತ್ತಿರಲಿಲ್ಲ.ಸೋಂಕಿತರೊಂದಿಗೆ ಮಾತ್ನಾಡಿ ಅವರ ಸಂಪರ್ಕಕ್ಕೆ ಬಂದಿರುವ ಹಿನ್ನಲೆಯಲ್ಲಿ ಸೋಂಕು ಮಾನ್ಯ ಶಾಸಕರಿಗೆ ತಗುಲಿಬಿಟ್ಟರೆ ಹೇಗೆ ಎನ್ನುವ ಆತಂಕ ಇದೀಗ ತಿಪಟೂರು ಮಂದಿಯನ್ನು ಕಾಡುತ್ತಿದೆ.ಷಡಕ್ಷರಿ ಅವರನ್ನು ಮೊದ್ಲು ಪರೀಕ್ಷೆಗೆ ಒಳಪಡಿಸಬೇಕು..ಸೋಂಕು ಇದೆಯಾ..ಇಲ್ಲವಾ ಎನ್ನೋದನ್ನು ಪತ್ತೆ ಮಾಡಬೇಕು.ಇಲ್ಲದಿದ್ದರೆ ಅವರ ಪಕ್ಕಪಕ್ಕದಲ್ಲಿ ಇರೋರಿಗೂ ಅದು ಅಪಾಯಕಾರಿ ಎನ್ತಾರೆ ತಿಪಟೂರಿನ ಪ್ರಜ್ಞಾವಂತ ಮಂದಿ.  

ಕೊರೊನಾ ಜಗತ್ತನ್ನೇ ಬೆಂಬಿಡದೆ ಬಾಧಿಸುತ್ತಿರುವಾಗ ಮಾಜಿ ಶಾಸಕ ಷಡಕ್ಷರಿ ಅದ್ಯಾವ ಭಯವೂ ಇಲ್ಲದೆ ಈ ರೀತಿ ಹೊಣೆಗೇಡಿ ಪ್ರದರ್ಶಿಸಿರೋದು ಎಷ್ಟು ಸರಿ?
ಕೊರೊನಾ  ಬೆಂಬಿಡದೆ ಬಾಧಿಸುತ್ತಿರುವಾಗ ಮಾಜಿ ಶಾಸಕ ಷಡಕ್ಷರಿ ಅದ್ಯಾವ ಭಯವಿಲ್ಲದೆ  ಹೊಣೆಗೇಡಿತನ ಪ್ರದರ್ಶಿಸಿರೋದು ಎಷ್ಟು ಸರಿ?
ಚಿಕಿತ್ಸಾ ಕೇಂದ್ರಕ್ಕೆ ಕೊರೊನಾ ಲಾಕ್ ಡೌನ್ ವೇಳೆಯೂ ಅಧಿಕಾರಿಗಳನ್ನು ಕರೆಯಿಸಿಕೊಂಡಿದ್ದು ಸರಿನಾ?
ಚಿಕಿತ್ಸಾ ಕೇಂದ್ರಕ್ಕೆ ಕೊರೊನಾ ಲಾಕ್ ಡೌನ್ ವೇಳೆಯೂ ಅಧಿಕಾರಿಗಳನ್ನು ಕರೆಯಿಸಿಕೊಂಡಿದ್ದು ಸರಿನಾ?

ಶಾಸಕರು ಹೀಗೆ ಮಾಡ್ಲಿಕ್ಕೆ ಕಾರಣ ಸೋಂಕಿತರಿರುವ ಸೂಕ್ಷ್ಮ ಪ್ರದೇಶಕ್ಕೆ ತೆರಳೊಕ್ಕೆ ಅವಕಾಶ ಮಾಡಿಕೊಟ್ಟ ಸ್ಥಳೀಯ ತಹಸೀಲ್ದಾರ್ ಆರತಿ.ಬಿ ಅವರಂತೆ.ಆ ಮಹಾತಾಯಿಗಾದ್ರೂ ಕಾಮನ್ ಸೆನ್ಸ್ ಬೇಡ್ವಾ..ಕೊರೊನಾ ಎಡೆಬಿಡದೆ ಬಾಧಿಸುತ್ತಿರುವ ಸಂದರ್ಭದಲ್ಲಿ ಯಾರನ್ನು ಸೋಂಕಿತರ ಬಳಿ ಬಿಡ್ಬೇಕು..ಯಾರನ್ನು ಬಿಡಬಾರದು ಎನ್ನುವ ಸಾಮಾನ್ಯಜ್ಞಾನವೂ ತಹಸೀಲ್ದಾರ್ ಗೆ ಇಲ್ಲವಾಗದೆ ಹೋಯಿತಾ..

ಷಡಕ್ಷರಿ ಅವರಿಂದ ಅದ್ಯಾವ್ದೋ ಸಮಯದಲ್ಲಿ ಉಪಕಾರ ಪಡೆದೆ ಎನ್ನುವ ಮಾತ್ರಕ್ಕೆ ನಿಯಮಗಳನ್ನೆಲ್ಲಾ ಮೀರಿ ಸ್ವಾಮಿನಿಷ್ಠೆಯನ್ನು ಈ ರೀತಿನಾ ತೋರಿಸುವುದು..ಷಡಕ್ಷರಿ ಹೀಗೆ ಮಾಡ್ಲಿಕ್ಕೆ ಕಾರಣವಾದ ಈ ಮಹಾತಾಯಿ ವಿರುದ್ಧ ಮೊದ್ಲು ಕ್ರಮ ಕೈಗೊಳ್ಳಬೇಕಿದೆ.ತಹಸೀಲ್ದಾರ್ ಅವರ ಬೇಜವಾಬ್ದಾರಿತನ ಹಾಗು ಕರ್ತವ್ಯಲೋಪವನ್ನು ಜಿಲ್ಲಾ ಉಸ್ತುವಾರಿ ಸಚಿವ ಮಾಧುಸ್ವಾಮಿ ಅವರ ಗಮನಕ್ಕೆ ತರುವ ಪ್ರಯತ್ನವನ್ನೂ ಕನ್ನಡ ಫ್ಲಾಶ್ ನ್ಯೂಸ್ ಮಾಡಲಿದೆ.

ಸೋತ ಮೇಲೆ ಏನೂ ಮಾಡ್ಬೇಕೆಂದು ತೋಚದೆ ಒದ್ದಾಡುತ್ತಿರುವ ಮಾಜಿ ಶಾಸಕ ಷಡಕ್ಷರಿ ಕೊರೊನಾ ಟೈಮಲ್ಲಿ ಏನಾದ್ರೊಂದು ಮಾಡಿ ಸುದ್ದಿ ಮಾಡ್ಬೇಕು..ಪ್ರಚಾರ ತೆಗೆದುಕೊಳ್ಳಬೇಕೆನ್ನೂ ಉಮೇದಿನಲ್ಲಿ ಕ್ಷೇತ್ರದ ಜನ ಮಾತ್ರವಲ್ಲ, ರಾಜ್ಯದ ಜನರೆಲ್ಲಾ ಹಿಗ್ಗಾಮುಗ್ಗಾ ಬೈಯ್ಯುವಂಥ ಘನಂದಾರಿ ಕೆಲಸ ಮಾಡಿದ್ದಾರೆ.ಇಂಥಾ ಬೇಜವಾಬ್ದಾರಿಯುತ ಮಂದಿಯೆಲ್ಲಾ ಅದ್ಹೇಗೆ ಪದೇ ಪದೇ ಶಾಸಕರಾಗುತ್ತಿದ್ದರೋ ಆ ದೇವ್ರೇ ಬಲ್ಲ..ಕೊರೊನಾ ಸೋಂಕಿತರನ್ನು ಸಂಪರ್ಕಿಸಿದ್ದಾರೆನ್ನುವ ವಿಷಯದಲ್ಲಿ ಅವರ ವಿರುದ್ಧ ಕ್ರಮ ಜಾರಿಯಾಗಲೇಬೇಕು..ಇದಕ್ಕೆ ಅವಕಾಶ ಮಾಡಿಕೊಟ್ಟ ತಹಸೀಲ್ದಾರ್ ಅವರನ್ನು ದಂಡಿಸುವ ಅಗತ್ಯ ಹೆಚ್ಚಾಗಿದೆ. 

Spread the love
Leave A Reply

Your email address will not be published.

Flash News