ನಾಳೆ ಬಿಬಿಎಂಪಿ ಬಜೆಟ್ ಮಂಡನೆ: “ಬಿ” ಖಾತೆದಾರರಿಗೆ “ಎ” ಖಾತೆ ಭಾಗ್ಯ-ಪೌರ ಕಾರ್ಮಿಕರಿಗೆ “ಸೂರು”-ವಿದ್ಯಾರ್ಥಿಗಳಿಗೆ “ಲ್ಯಾಪ್ ಟ್ಯಾಪ್”-ಹೃದ್ರೋಗಿಗಳಿಗೆ “ಫ್ರೀ” ಸ್ಟಂಟ್ ಭಾಗ್ಯ

0
ಬಜೆಟ್ ಮಂಡಿಸಲಿರುವ ಬಿಬಿಎಂಪಿ ತೆರಿಗೆ-ಆರ್ಥಿಕ ಸ್ಥಾಯಿ ಸಮಿತಿ ಅಧ್ಯಕ್ಷ ಎಲ್.ಶ್ರೀನಿವಾಸ್
ಬಜೆಟ್ ಮಂಡಿಸಲಿರುವ ಬಿಬಿಎಂಪಿ ತೆರಿಗೆ-ಆರ್ಥಿಕ ಸ್ಥಾಯಿ ಸಮಿತಿ ಅಧ್ಯಕ್ಷ ಎಲ್.ಶ್ರೀನಿವಾಸ್

ಬೆಂಗಳೂರು: ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ 2020-21 ನೇ ಸಾಲಿನ ಬಜೆಟ್ ನ್ನು ನಾಳೆ ಬೆಳಗ್ಗೆ 11 ಗಂಟೆಗೆ ಕೆಂಪೇಗೌಡ ಪೌರಸಭಾಂಗಣದಲ್ಲಿ ತೆರಿಗೆ ಮತ್ತು ಆರ್ಥಿಕ ಸ್ಥಾಯಿ ಸಮಿತಿ ಅಧ್ಯಕ್ಷ ಎಲ್.ಶ್ರೀನಿವಾಸ್ ಬಜೆಟ್ ಮಂಡಿಸಲಿದ್ದಾರೆ. ಕೊರೊನಾ ಲಾಕ್ ಡೌನ್ ಹಿನ್ನಲೆಯಲ್ಲಿ ಸಾಮಾಜಿಕ ಅಂತರ ಕಾಯ್ದುಕೊಂಡೇ ಬಜೆಟ್ ಮಂಡಿಸಲು ನಿರ್ಧರಿಸಲಾಗಿದೆ.ಕೇವಲ 50 ಜನರನ್ನೊಳಗೊಂಡ ಸಭೆಯಲ್ಲಿ ಬಜೆಟ್ ಮಂಡನೆಯಾಗಲಿದೆ.

ಬಿಬಿಎಂಪಿ ಕೌನ್ಸಿಲ್ ಬಿಲ್ಡಿಂಗ್ ನಲ್ಲಿ ಬೆಳಗ್ಗೆ 11 ಗಂಟೆಗೆ ಬಜೆಟ್ ಮಂಡನೆ ಆರಂಭವಾಗಲಿದೆ.ಒಂದೂವರೆ ಗಂಟೆಯೊಳಗೆ ಬಜೆಟ್ ಮಂಡನೆ ಪೂರ್ಣಗೊಳ್ಳಲಿದೆ.ಬಜೆಟ್ ಗಾತ್ರ 11 ಸಾವಿರ ಕೋಟಿ ಗಡಿ ಮೀರೊಲ್ಲ ಎಂದು ಸ್ಥಾಯಿ ಸಮಿತಿ ಅಧ್ಯಕ್ಷ ಎಲ್.ಶ್ರೀನಿವಾಸ್ ಕನ್ನಡ ಫ್ಲಾಶ್ ನ್ಯೂಸ್ ಗೆ ತಿಳಿಸಿದ್ದಾರೆ.

ಕೊರೊನಾ ಲಾಕ್ ಡೌನ್ ನಿಂದ ಬಹುತೇಕ ಬೆಂಗಳೂರಿನ ಶ್ರಮಿಕ ಹಾಗೂ ಅಸಂಘಟಿತ ಕಾರ್ಮಿಕ ವಲಯ ಜೀವನೋಪಾಯಕ್ಕೆ ಪರದಾಡುತ್ತಿರುವುದನ್ನು ಗಂಭೀರವಾಗಿ ಪರಿಗಣಿಸಿ ಪ್ರತಿ ವಾರ್ಡ್ ಗೆ 25 ಲಕ್ಷದಂತೆ 198 ವಾರ್ಡ್ ಗಳಿಗೆ ಒಟ್ಟು 49 ವರೆ ಕೋಟಿ ಮೀಸಲಿಟ್ಟಿರುವುದು ಗಮನಾರ್ಹ.ಬಜೆಟ್ ನ ಪ್ರಮುಖ ಹೈಲೆಟ್ಸ್ ಅದೇ.ಆ ಹಣದಲ್ಲಿ ಆಟೋ ಡ್ರೈವರ್ಸ್..ಕ್ಯಾಬ್ ಡ್ರೈವರ್ಸ್-ಇಸ್ತ್ರಿ ಅಂಗಡಿ..ಹೀಗೆ ಕಷ್ಟದಲ್ಲಿರುವ ಅಸಂಘಟಿತ ಕಾರ್ಮಿಕರಿಗೆ ಧನಸಹಾಯ ಹಾಗೂ ಪಡಿತರ ವ್ಯವಸ್ಥೆಗೆ ಆಧ್ಯತೆ ನೀಡಲಾಗ್ತಿದೆ.ಈ ಹಣ ತುರ್ತಾಗಿ ಖರ್ಚಾಗಬೇಕು..ಕೊರೊನಾ ಅವಧಿಯಲ್ಲೇ ಸದ್ಭಳಕೆಯಾಗಬೇಕೆನ್ನುವುದು ನಮ್ಮ ಆಶಯ ಎನ್ನುತ್ತಾರೆ  ಅಧ್ಯಕ್ಷ ಎಲ್. ಶ್ರೀನಿವಾಸ್.

ಮೇಯರ್-ಕಮಿ ಷನರ್-ಸ್ಥಾಯಿ ಸಮಿತಿ ಅಧ್ಯಕ್ಷರು,ಉಪಮೇಯರ್-ಆಡಳಿತ ಪಕ್ಷದ ನಾಯಕರು- ಇಲಾಖೆ ಅಧಿಕಾರಿಗಳು ಹೀಗೆ 50 ಜನರನ್ನೊಳಗೊಂಡ ಸಭೆಯಲ್ಲಿ ಬಜೆಟ್ ಮಂಡನೆಯಾಗಲಿದೆ.ಸಾಮಾಜಿಕ ಅಂತರ ಕಾಯ್ದುಕೊಂಡೇ ಬಜೆಟ್ ಮಂಡನೆ ಮಾಡಲಾಗುತ್ತಿದೆ. ಎಂಟೂ ವಲಯಗಳಲ್ಲಿ ಕಾರ್ಪೊರೇಟರ್ಸ್ ಗೆ  ವೀಡಿಯೋ ಕಾನ್ಫರೆನ್ಸ್ ಮೂಲಕ ಬಜೆಟ್ ವೀಕ್ಷಣೆಗೆ ಅವಕಾಶ ಕಲ್ಪಿಸಲಾಗಿದೆ.ಬಜೆಟ್ ಮೇಲಿನ ಚರ್ಚೆಗೆ ಬುಧವಾರ ಚರ್ಚೆ ಕಲ್ಪಿಸಲಾಗಿದೆ ಎಂದು ಬಿಬಿಎಂಪಿ ಮೇಯರ್ ಗೌತಮ್ ಕುಮಾರ್ ತಿಳಿಸಿದ್ದಾರೆ. 

ನಾಳೆ ನಡೆಯಲಿರುವ ಬಜೆಟ್ ಮಂಡನೆ ಸಿದ್ದತೆಗಳನ್ನು ಖುದ್ದು ಪರಿಶೀಲಿಸುತ್ತಿರುವ ಮೇಯರ್ ಗೌತಮ್ ಕುಮಾರ್
ನಾಳೆ ನಡೆಯಲಿರುವ ಬಜೆಟ್ ಮಂಡನೆ ಸಿದ್ದತೆಗಳನ್ನು ಖುದ್ದು ಪರಿಶೀಲಿಸುತ್ತಿರುವ ಮೇಯರ್ ಗೌತಮ್ ಕುಮಾರ್

ರಾಜ್ಯದ ಪರಿಸ್ಥಿತಿ ತೀವ್ರ ಹದಗೆಟ್ಟಿರುವ ಹಾಗೂ ಬಿಬಿಎಂಪಿ ಬೊಕ್ಕಸ ಬರಿದಾಗಿರುವ ಹಿನ್ನಲೆಯಲ್ಲಿ ಎ ಖಾತಾ ಪರಿವರ್ತನೆ ವ್ಯವಸ್ಥೆ ನಾಳೆ ಪ್ರಸ್ತಾಪಿಸಲ್ಪಡುವ ಸಾಧ್ಯತೆಗಳಿವೆ. ಬಿ ಖಾತ ದಾರರಿಗೆ ಎ ಖಾತ ಭಾಗ್ಯ ನೀಡುವ ಮೂಲಕ ಖಾತೆದಾರರ ಸಮಸ್ಯೆ ನಿವಾರಿಸುವ ಜೊತೆಗೆ  600 ಕೋಟಿ ಅದಾಯವನ್ನು ಪಡೆಯಬಹುದೆನ್ನುವ  ನಿರೀಕ್ಷೆಯಿದೆ.ಇದು ನಾಳೆ ಬಜೆಟ್ ನ ಪ್ರಮುಖ ಹೈಲೆಟ್ಸ್ ಗಳಲ್ಲಿ ಒಂದು

ಇನ್ನು ಬಜೆಟ್ ನಲ್ಲಿರುವ ಪ್ರಮುಖ ಸಂಭಾವ್ಯ ಯೋಜನೆಗಳ ಪಟ್ಟಿ ಮೇಲೆ ಕಣ್ಣಾಡಿಸುವುದಾದ್ರೆ.

*ಕೊರೊನಾ ಮೂಲೋತ್ಪಾಟನೆ-ಜಾಗೃತಿಗೆ ಬಜೆಟ್ ನಲ್ಲಿ ಒತ್ತು

*ಪ್ರತಿ ವಾರ್ಡ್ ಗೆ 25 ಲಕ್ಷದಂತೆ 198 ವಾರ್ಡ್ ಗಳಿಗೆ 49 ವರೆ ಕೋಟಿ

*ಪಾಲಿಕೆ ವ್ಯಾಪ್ತಿಯಲ್ಲಿ ಕಾರ್ಯನಿರ್ವಹಿಸುವ ಪತ್ರಕರ್ತರಿಗೆ 5 ಲಕ್ಷ ಅಪಘಾತ ವಿಮೆ..

*ಪೇಪರ್ ಬಾಯ್ಸ್- ಹಾಲು ಮಾರುವ  ಯುವಕರಿಗೆ ೨ ಲಕ್ಷ ಅಪಘಾತ ವಿಮೆ..

ಬಜೆಟ್ ಮಂಡನೆ ಸಿದ್ಧತೆಗಳ ಬಗ್ಗೆ ವಿಶೇಷ ಆಯುಕ್ತ ಅನ್ಬುಕುಮಾರ್ ಜತೆ ಮೇಯರ್ ಗೌತಮ್ ಕುಮಾರ್ ಸಮಾಲೋಚನೆ
ಬಜೆಟ್ ಮಂಡನೆ ಸಿದ್ಧತೆಗಳ ಬಗ್ಗೆ ವಿಶೇಷ ಆಯುಕ್ತ ಅನ್ಬುಕುಮಾರ್ ಜತೆ ಮೇಯರ್ ಗೌತಮ್ ಕುಮಾರ್ ಸಮಾಲೋಚನೆ

*ಮಾಜಿ ಸಂಸದ ದಿ. ಅನಂತಕುಮಾರ್ ಸ್ಮರಣಾರ್ಥ  ಡಿಗ್ರಿ ವಿದ್ಯಾರ್ಥಿಗಳಿಗೆ ಲ್ಯಾಪ್‌ಟಾಪ್

*ಬಿಬಿಎಂಪಿಯ ವ್ಯಾಪ್ತಿಯಲ್ಲಿ ಹೆಚ್ಚಾಗಿರುವ ಬೀದಿ ನಾಯಿಗಳ  ಸಂತಾನನಿಯಂತ್ರಣ ಹಾಗೂ ಆರೈಕೆಗೆ ಕೆನಲ್ ಗಳ ನಿರ್ಮಾಣ..

*ಮಾಜಿ ಕೇಂದ್ರ ಸಚಿವೆ ದಿ. ಸುಷ್ಮಸ್ವರಾಜ್ ಹೆಸರಲ್ಲಿ ಹೈಟೆಕ್ ಅಂಬ್ಯುಲೆನ್ಸ್ ಸೇವೆ ಆರಂಭ.

*ಬಿಬಿಎಂಪಿಯ ಸ್ಮಶಾಣಗಳಲ್ಲಿ  ಕೆಲಸ ಮಾಡೋರಿಗೆ ಸೂರು.

*ಸ್ಮಶಾನಗಳಲ್ಲಿ ಕರೆಂಟ್ ಬದಲು ಗ್ಯಾಸ್ ಅಳವಡಿಕೆ.

*ತುಮಕೂರಿನ ಸಿದ್ದಗಂಗಾ ಶ್ರೀ ಗಳ ಹೆಸರಿನ ಪ್ರಶಸ್ತಿ

ನಾಳೆಯ ಬಿಬಿಎಂಪಿ ಬಜೆಟ್ ನ ವೀಡಿಯೋ ಕಾನ್ಫರೆನ್ಸ್ ಹೀಗಿರುತ್ತೆ....
ನಾಳೆಯ ಬಿಬಿಎಂಪಿ ಬಜೆಟ್ ನ ವೀಡಿಯೋ ಕಾನ್ಫರೆನ್ಸ್ ಹೀಗಿರುತ್ತೆ…

 *25 ಲಕ್ಷದಲ್ಲಿ ಶ್ರಮಿಕರಿಗೆ ಸಹಾಯಧನ-ದಿನಸಿ ವಿತರಣೆಗೆ ಒತ್ತು

*ಕೊರೊನಾ ತುರ್ತು ಕೆಲಸಗಳಿಗಷ್ಟೇ ಬಳಕೆ ಮಾಡುವಂತೆ ಸೂಚನೆ

*ಬಜೆಟ್ ನಲ್ಲಿ ಸಾಮಾಜಿಕ ನ್ಯಾಯ ಕಲ್ಪಿಸಲು ವಿವಿಧ ಯೋಜನೆ

*ಪೌರ ಕಾರ್ಮಿಕರಿಗೆ ಸೂರುಭಾಗ್ಯ-ಪ್ರಾರಂಭಿಕ ಹಂತದಲ್ಲಿ 10 ಕೋಟಿ

*ಬೆಂಗಳೂರಿನ 8 ಕಡೆ ಸ್ವಾಗತ ಕಮಾನ್

*ಬಿಬಿಎಂಪಿ ಆಸ್ಪತ್ರೆಗಳು ಮೇಲ್ದರ್ಜೆಗೆ

*ಕೊರೊನಾ ಚಿಕಿತ್ಸೆಗೂ ಪೂರಕವಾಗುವಂತೆ ವ್ಯವಸ್ಥೆ

ಬಜೆಟ್ ವೀಕ್ಷಣೆಯ ಬೆಳವಣಿಗೆಗಳ ಬಗ್ಗೆ ಜಂಟಿ ಆಯುಕ್ತೆ ಪಲ್ಲವಿ ಜತೆ ಸಮಾಲೋಚನೆ ನಡೆಸುತ್ತಿರುವ ಮೇಯರ್.
ಬಜೆಟ್ ವೀಕ್ಷಣೆಯ ಬೆಳವಣಿಗೆಗಳ ಬಗ್ಗೆ ಜಂಟಿ ಆಯುಕ್ತೆ ಪಲ್ಲವಿ ಜತೆ ಸಮಾಲೋಚನೆ ನಡೆಸುತ್ತಿರುವ ಮೇಯರ್ ಗೌತಮ್ ಕುಮಾರ್.

*ಬೊಮ್ಮನಹಳ್ಳಿಯಲ್ಲಿ ದೀನದಾಯಳು ಹೆಸರಿನಲ್ಲಿ ಮಕ್ಕಳ ಅಸ್ವತ್ರೆ ನಿರ್ಮಾಣ..

*ಬೃಹತ್ ಹಾಗೂ ಬಹುಸುಸಜ್ಜಿತ ಮಕ್ಕಳ ಆಸ್ಪತ್ರೆ ನಿರ್ಮಾಣ

*ಬಿಬಿಎಂಪಿ ಶಾಲೆಗಳ ಅಭಿವೃದ್ಧಿಗೆ ಕ್ರಮ

*ಶಾಲಾ ಮಕ್ಕಳಿಗೆ ಉಚಿತ ಲ್ಯಾಪ್ ಟಾಪ್ ವಿತರಣೆ

*ಶಾಲಾ ಮಕ್ಕಳಿಗೆ ಆರೋಗ್ಯ ವಿಮೆ ಸೌಲಭ್ಯ

*ಹೃದಯಸಂಬಂಧಿ ಸಮಸ್ಯೆಯ ರೋಗಿಗಳಿಗೆ ಉಚಿತ ಸ್ಟಂಟ್ ವಿತರಣೆ.

*ಬಿಬಿಎಂಪಿ ಶಾಲೆಗಳ  ಶಿಕ್ಷಣವಿನ್ನೂ “ಸ್ಮಾರ್ಟ್”

*ಬಿಬಿಎಂಪಿಯು ಎಸ್ಎಸ್ ಎಲ್ ಸಿ ಮಕ್ಕಳಿಗೆ 25 ಸಾವಿರ ಪ್ರೋತ್ಸಾಹ ಧನ

*ಪಿಯುಸಿ ಮಕ್ಕಳಿಗೆ  30 ಸಾವಿರ ಪ್ರೋತ್ಸಾಹ ಧನ ವಿತರಣೆ 

Spread the love
Leave A Reply

Your email address will not be published.

Flash News