ಪಾದರಾಯನಪುರ (ಗೋರಿಪಾಳ್ಯ) ಪುಂಡಾಟ ಸಮರ್ಥಿಸಿಕೊಂಡ ಜಮೀರ್ “ಪ್ಲ್ಯಾನ್” ಹಿಂದೆ ವೋಟ್ ಬ್ಯಾಂಕ್ “ಸ್ಕೆಚ್” ?!

0
ಚಾಮರಾಜಪೇಟೆ ಕೈ ಶಾಸಕ ಬಿ.ಝೆಡ್ ಜಮೀರ್ ಅಹಮದ್ ಖಾನ್
ಚಾಮರಾಜಪೇಟೆ “ಕೈ” ಶಾಸಕ ಬಿ.ಝೆಡ್ ಜಮೀರ್ ಅಹಮದ್ ಖಾನ್

ಬೆಂಗಳೂರು: ಇಡೀ ರಾಜ್ಯದ ಜನರ ದೃಷ್ಟಿಯಲ್ಲಿ ವಿಲನ್ ಆದ ಶಾಸಕ ಜಮೀರ್ ಅಹಮದ್, ತನ್ನ ಕ್ಷೇತ್ರದ ಜನರ ದೃಷ್ಟಿಯಲ್ಲಿ ಹೀರೋ ಆಗೋದ ದುರಂತಾತೀದುರಂತ ಕಥೆ ಇದು.

ಬೆಂಗಳೂರಿನ ಚಾಮರಾಜಪೇಟೆ ವಿಧಾನಸಭಾ ಕ್ಷೇತ್ರದ ಪಾದರಾಯನಪುರದಲ್ಲಿ ಭಾನುವಾರ ರಾತ್ರಿ ನಡೆದ ಪುಂಡಾಟಕ್ಕೆ ರಾಜ್ಯವ್ಯಾಪಿ ಖಂಡನೆ  ವ್ಯಕ್ತವಾದಷ್ಟೇ ರೀತಿಯಲ್ಲಿ ಕ್ಷೇತ್ರ ಶಾಸಕ ಝಮೀರ್ ಅಹಮದ್ ಖಾನ್ ವರ್ತನೆಯೂ ಆಕ್ರೋಶಕ್ಕೆ ಕಾರಣವಾಗಿತ್ತು.ಪುಂಡಾಟಕ್ಕೆ ಶಾಸಕರೇ ಪ್ರಚೋದನೆ ನೀಡಿದ್ರೆನ್ನುವ ಮಟ್ಟಿಗೆ ಟೀಕೆ-ಖಂಡನೆ ಕೇಳಿಬರುತ್ತಿರುವಾಗ್ಲೇ  ಒಂದು ಸತ್ಯವಂತೂ ಪ್ರೂವ್ ಆಗೋಗಿತ್ತು.ರಾಜ್ಯದ ಜನತೆ ದೃಷ್ಟಿಯಲ್ಲಿ ವಿಲನ್ ಆದ್ರೂ ತನ್ನ ಕ್ಷೇತ್ರದ ಜನ್ರ ದೃಷ್ಟಿಯಲ್ಲಿ ಹೀರೋ ಆಗೋದ್ರ ಮೂಲಕ ವೋಟ್ ಬ್ಯಾಂಕ್ ಗಟ್ಟಿ ಮಾಡಿಕೊಂಡಿದ್ದು ಸುಳ್ಳಲ್ಲ.

ಪಾದರಾಯನಪುರ ಪ್ರಕ್ಷುಬ್ಧವಾಗಲು ಕಾರಣವಾದ ಕಿಡಿಗೇಡಿ-1
ಪಾದರಾಯನಪುರ ಪ್ರಕ್ಷುಬ್ಧವಾಗಲು ಕಾರಣವಾದ ಕಿಡಿಗೇಡಿ-2
ಪಾದರಾಯನಪುರ ಪ್ರಕ್ಷುಬ್ಧವಾಗಲು ಕಾರಣವಾದ ಕಿಡಿಗೇಡಿ-1
ಪಾದರಾಯನಪುರ ಪ್ರಕ್ಷುಬ್ಧವಾಗಲು ಕಾರಣವಾದ ಕಿಡಿಗೇಡಿ-1

ಹೌದು..ಇದು ದುರಾದೃಷ್ಟಕರ ಎನಿಸಿದ್ರೂ ಸತ್ಯ..ಪಾದರಾಯನಪುರ ವಾರ್ಡ್ ಹೇಳಿ ಕೇಳಿ  ಝಮೀರ್ ಅಹಮದ್ ಖಾನ್ ಅವರ ವೋಟ್ ಬ್ಯಾಂಕ್.ಅವರದೇ ಸಮುದಾಯದವ್ರು ಹೆಚ್ಚಾಗಿರುವ ವಾರ್ಡ್ ಕೂಡ ಹೌದು.ಕ್ಷೇತ್ರವನ್ನು ಅಭಿವೃದ್ದಿಪಡಿಸದಿದ್ರೂ ಸಮುದಾಯದವ್ರ ಕಷ್ಟಸುಖಕ್ಕೆ ಆರ್ಥಿಕ ಸಹಾಯ ಮಾಡುವ ಮೂಲಕ ಜನರ ಪಾಲಿಗೆ ದೇವ್ರು ಎಂದು ಕರೆಯಿಸಿಕೊಂಡಿದ್ದಾರೆ.ಆ ಕಾರಣಕ್ಕೆ ಆ ವಾರ್ಡ್ ನಲ್ಲಿ ಒಂದು ಹುಲ್ಲುಕಡ್ಡಿ ಅಲುಗ್ಬೇಕು ಎಂದ್ರೆ ಅದಕ್ಕೆ  ಝಮೀರ್ ಅಣತಿ ಬೇಕು ಎನ್ನುವ ಮಾತಿದೆ.ನೀವೇ ಯೋಚಿಸಿ,ಕೊರೊನಾ ಮಹಾಮಾರಿ ಮನುಕುಲವನ್ನೇ ತಲ್ಲಣಿಸುತ್ತಿರುವಾಗ ಕ್ವಾರಂಟೈನ್ ಗೆ ಹೋಗ್ಬೇಕಾದವ್ರು ಶಾಸಕರು ಹೇಳೋವರೆಗೂ ಸತ್ರೂ ಪರ್ವಾಗಿಲ್ಲ ಚಿಕಿತ್ಸೆ ಪಡೆಯೊಲ್ಲ ಎಂದು ಸಣ್ಣ ಮಕ್ಕಳಂತೆ ರಚ್ಚೆ ಹಿಡಿಯುತ್ತಾರೆಂದ್ರೆ ಝಮೀರ್ ಯಾವ್ ರೀತಿ ವಾರ್ಡ್ ಜನರ ಅಮಾಯಕತೆಯನ್ನು ಮಿಸ್ಯೂಸ್ ಮಾಡ್ಕೊಂಡು ತನ್ನ ಸಾಮ್ರಾಜ್ಯ ಸ್ಥಾಪಿಸಿಕೊಂಡು ಮೆರೆಯುತ್ತಿದ್ದಾರೆನ್ನೋದನ್ನು ಅರ್ಥ ಮಾಡಿಕೊಳ್ಳಬೋದು.

ಚಾಮರಾಜಪೇಟೆ ವಿಧಾನಸಭಾ ಕ್ಷೇತ್ರದಲ್ಲಿ ಮುಸ್ಲಿಂ ಸಮುದಾಯವೇ ನಿರ್ಣಾಯಕ.ಬೇರೆ ಸಮುದಾಯದ ಮಂದಿ ಇದ್ದರೂ ಮುಸ್ಲಿಂ ಸಮುದಾಯದವ್ರು ತೆಗೆದುಕೊಳ್ಳುವ ನಿರ್ದಾರವೇ ಅಂತಿಮ.ಹಾಗಾಗಿನೇ ಎಂಥಾ ಘಟಾನುಘಟಿಗಳು ಝಮೀರ್ ವಿರುದ್ಧ ತೊಡೆ ತಟ್ಟಿದ್ರೂ ಪ್ರಯೋಜನವಾಗ್ತಿಲ್ಲ.ಝಮೀರ್ ಅವರ ರಾಜಕೀಯ ಗುರು ಎಚ್.ಡಿ ದೇವೇಗೌಡ ಅವ್ರಂಥವ್ರೇ ಕ್ಷೇತ್ರದಲ್ಲಿ ಹಗಲಿರುಳು ಕ್ಯಾಂಪೇನ್ ಮಾಡಿದ್ರೂ ನಯಾಪೈಸೆ ಪ್ರಯೋಜನವಾಗಲಿಲ್ಲ.ಝಮೀರ್ ಗೆ ಆ ಮಟ್ಟದ ಜನ ಬೆಂಬಲ ತನ್ನ ಸಮುದಾಯದಿಂದಿದೆ.ಝಮೀರ್ ಮಾತನ್ನು ಜನ ಕೂಡ ಮೀರೊಲ್ಲ.ಹಾಗಾಗಿ ಅಲ್ಲಿ ಒಳ್ಳೇದಾಗ್ಲಿ,ಕೆಟ್ಟದ್ದಾಗ್ಲಿ ಅದರ ನ್ಯಾಯಪಂಚಾಯ್ತಿ ಮಾಡೋದೇ ಈ ಮಹಾನುಭಾವ ಶಾಸಕ.

ಪಾದರಾಯನಪುರ(ಗೋರಿಪಾಳ್ಯ),ಪಕ್ಕದ ಜಗಜೀವನ್ ರಾಮ್ ನಗರ,ರಾಯಪುರಂ ವಾರ್ಡ್ ಗಳೆಲ್ಲಾ ಮುಸ್ಲಿಂ ಡಾಮಿನೇಟೆಡ್ ವಾರ್ಡ್ ಗಳು.ಅಲ್ತಾಫ್ ಖಾನ್  ಅವರಂಥ ಮಾಜಿ ಪಾತಕಿಗಳು ತಮ್ಮ ಸಮುದಾಯದ ಬಲವಿದ್ದ ಹೊರತಾಗ್ಯೂ ಝಮೀರ್ ಮುಂದೆ ಏನೂ ಕಿಸಿಯೊಕ್ಕಾಗದೆ ಮತ್ತೆ ಝಮೀರ್ ಪಾದಬುಡಕ್ಕೆ ಬಂದವ್ರು.ಝಮೀರ್ ವಿರುದ್ದ ಏನೇ ಅಸಹನೆ-ಅಸಮಾಧಾನ-ಆಕ್ರೋಶ ಇದ್ದರೂ ಅದನ್ನು ನುಂಗಿಕೊಂಡು ಇರಬೇಕೇ ವಿನಃ ಅದನ್ನು ಬಹಿರಂಗಗೊಳಿಸುವಂತಿಲ್ಲ.ಬಹಿರಂಗಗೊಳಿಸಿದ್ರೂ ಅದನ್ನು ಯಾವ್ ರೀತಿ ಠುಸ್ ಪಟಾಕಿ ಮಾಡ್ಬೇಕೆನ್ನೋದು ವಾಮನ ಝಮೀರ್ ಗೆ ಗೊತ್ತು.ಹಾಗೆ ಮಾಡಿದ ಅಲ್ತಾಫ್ ಖಾನ್  ಗೆ ಕಳೆದ ಬಾರಿಯ ಚುನಾವಣೆಯಲ್ಲಿ ಎಂಥಾ ಪಾಠ ಕಲಿಸಿದ್ರು  ಝಮೀರ್ ಎನ್ನೋದು ಗೊತ್ತಿದೆ.ಹಾಗಾಗಿ ಅಲ್ತಾಫ್ ಇರಬೋದು ಅಥವಾ ಆರೀಫ್ ,ಇರ್ಮಾನ್  ಅವರ   ಕೆಪಾಸಿಟಿಯನ್ನು ಕೇವಲ ಅವರ  ವಾರ್ಡ್ ಗಳ ಮಟ್ಟಿಗೆ ಸೀಮಿತಗೊಳಿಸಿ,ಇಡೀ  ಚಾಮರಾಜಪೇಟೆ ಕ್ಷೇತ್ರವನ್ನು ತನ್ನ ಕಪಿಮುಷ್ಠಿಯಲ್ಲಿಟ್ಟುಕೊಂಡು ಮುಸ್ಲಿಂ ಸಮುದಾಯದ ಡಾನ್ ಆಗಿ ಮೆರೆಯುತ್ತಿದ್ದಾರೆ.

ಗಲಭೆಪೀಡಿತ ಸ್ಥಳಕ್ಕೆ ಭೇಟಿಕೊಟ್ಟ ಗೃಹಸಚಿವ ಬಸವರಾಜಬೊಮ್ಮಾಯಿ
ಗಲಭೆಪೀಡಿತ ಸ್ಥಳಕ್ಕೆ ಭೇಟಿಕೊಟ್ಟ ಗೃಹಸಚಿವ ಬಸವರಾಜ ಬೊಮ್ಮಾಯಿ,ಕಮಿಷನ್ ಭಾಸ್ಕರ ರಾವ್ ಜತೆಯಲ್ಲಿದ್ದರು.
ಗಲಭೆಪೀಡಿತ ಸ್ಥಳಕ್ಕೆ ಭೇಟಿಕೊಟ್ಟ ಗೃಹಸಚಿವ ಬಸವರಾಜಬೊಮ್ಮಾಯಿ ಪೊಲೀಸ್ ಅಧಿಕಾರಿಗಳ ಜೊತೆ ಸಮಾಲೋಚನೆ ನಡೆಸಿದರು.
ಗಲಭೆಪೀಡಿತ ಸ್ಥಳಕ್ಕೆ ಭೇಟಿಕೊಟ್ಟ ಗೃಹಸಚಿವ ಬಸವರಾಜಬೊಮ್ಮಾಯಿ ಪೊಲೀಸ್ ಅಧಿಕಾರಿಗಳ ಜೊತೆ ಸಮಾಲೋಚನೆ ನಡೆಸಿದರು.

ಪಾದರಾಯನಪುರದ ಪುಂಡಾಟವನ್ನೇ ತೆಗೆದುಕೊಳ್ಳಿ.ಸೋಂಕಿತರು ಚಿಕಿತ್ಸೆಗೆ ನಿರಾಕರಿಸುವಂತದ್ದೇ ಎಂಥಾ ಅಕ್ಷಮ್ಯ.ಅಂಥದ್ದರಲ್ಲಿ ಚಿಕಿತ್ಸೆಗೆ ಕರೆದೊಯ್ಯಲು ಬಂದವ್ರ ಮೇಲೆ ಅಟ್ಯಾಕ್ ಮಾಡಿ ಕಿಡಿಗೇಡಿಗಳು ವಾಪಸ್ ಕಳುಹಿಸ್ತಾರೆಂದ್ರೆ ಅದು ಎಂಥಾ ಅಪರಾಧ ಅಲ್ವಾ.ಆದ್ರೆ ಇಂಥಾ ಸಂದರ್ಭದಲ್ಲಿ ಝಮೀರ್ ನಡೆದುಕೊಂಡ ರೀತಿ..ರಿಯಾಕ್ಟ್ ಮಾಡಿದ ರೀತಿ ಜನಸಾಮಾನ್ಯರಲ್ಲಿ ಇವನೆಂಥಾ ಶಾಸಕನೋ.. ಥೂ.. ನಾಚಿಕೆಯಾಗ್ಬೇಕು ಎಂದೆಲ್ಲಾ ಆಕ್ರೋಶ ಮೂಡಿಸಿತ್ತು.ಅದು ರಕ್ತಕುದಿಸಿದ್ದೂ ಸತ್ಯ ಬಿಡಿ.ಆದ್ರೆ ಝಮೀರ್ ಆ ಕ್ಷಣಕ್ಕೆ ಘಟನಾ ಸ್ಥಳಕ್ಕೆ ಬಾರದೆ ದೂರದಲ್ಲೇ ಕುಳಿತು  ಮಾಡಿಸಿದ ಟ್ವೀಟ್ ನಿಂದ್ಲೇ ಝಮೀರ್ ಕಿಡಿಗೇಡಿಗಳ ಬೆನ್ನಿಗಿದ್ದಾರೆನ್ನೋ ಸೂಕ್ಷ್ಮ ಅರ್ಥವಾಗಿ ಹೋಗಿತ್ತು.ಇದರ ಹಿಂದೆ ಇದ್ದಿದ್ದು ಪಕ್ಕಾ ವೋಟ್ ಬ್ಯಾಂಕ್ ನ ಪಕ್ಕಾ ರಾಜಕೀಯ ಲೆಕ್ಕಾಚಾರ ಎನ್ನೋದನ್ನು ಬಿಡಿಸೇಳಬೇಕಿಲ್ಲ.

ಆನಂತರದ ಬೆಳವಣಿಗೆಯಲ್ಲೂ ಝಮೀರ್ ನಡೆದುಕೊಂಡಿದ್ದಕ್ಕೆ ವ್ಯಾಪಕ ಟೀಕೆ ವ್ಯಕ್ತವಾಯ್ತು.ಆದ್ರೆ ಝಮೀರ್ ಘಟನೆಗೆ ಕಾರಣವಾದವ್ರು ಅನಕ್ಷರಸ್ಥರು..ಅವರಿಗೆ ಮನವೊಲಿಸಿ ಕರೆದುಕೊಂಡು ಹೋಗ್ಬೇಕಿತ್ತೇ ವಿನಃ ಬಲವಂತವಾಗಿಯಲ್ಲ.ರಾತ್ರಿ ಹೊತ್ತು ಹೋಗೋ ಅವಶ್ಯಕತೆ ಏನಿತ್ತು ಎಂದೆಲ್ಲಾ ಹೇಳುವ ಮೂಲಕ ಕಿಡಿಗೇಡಿ ಕೃತ್ಯ ಎಸಗಿದವ್ರ ಪರ ಬ್ಯಾಟ್ ಮಾಡಿದ್ರು.ಇದು ರಾಜ್ಯಕ್ಕೆ ಒಂದ್ ರೀತಿಯ ಮಸೇಜ್ ರವಾನಿಸಿದ್ದರ ಜೊತೆಗೆ ಕ್ಷೇತ್ರದ ಮುಸ್ಲಿಂ ಮತದಾರರಲ್ಲಿನ ಒಗ್ಗಟ್ಟು ಮತ್ತಷ್ಟು ಬಲಗೊಳ್ಳುವಂತೆ ಮಾಡ್ಬಿಡ್ತು.

ಸಮುದಾಯದೊಳಗೆ ಝಮೀರ್ ಇಮೇಜ್ ಮತ್ತಷ್ಟು ಪಾಸಿಟಿವ್ ಆಗೋಯ್ತು. ಇಡೀ ರಾಜ್ಯ ನಮ್ಮವ್ರನ್ನು ಕ್ಯಾಕರಿಸಿ ಬೈಯ್ಯುತ್ತಿದ್ದರೆ ನಮ್ಮವ ಝಮೀರ್,ನಮ್ಮ ಬೆನ್ನಿಗೆ ನಿಂತಿದ್ದಾರೆ.ಇದಕ್ಕಿಂತ ದೊಡ್ಡ ಉಪಕಾರ ಮತ್ತೊಂದಿದೆಯೇ ಎನ್ನುವ ಭಾವನೆ ಮೂಡಿಸಿಬಿಡ್ತು.ತಮ್ಮೊಳಗೆ ಅಲ್ಲಿವರೆಗೂ ಕಾಡ್ತಿದ್ದ ಅಭದ್ರತೆ ಹಾಗೂ ಆತಂಕ ಎರಡೂ ದೂರವಾಯ್ತು.ಝಮೀರ್ ಬಗ್ಗೆ ಇನ್ನಷ್ಟು ನಂಬಿಕೆ-ವಿಶ್ವಾಸ ದೃಡವಾಯ್ತು.ಝಮೀರ್ ಇಡೀ ರಾಜ್ಯವನ್ನು ಎದುರಾಕಿಕೊಂಡು ತನ್ನ ಸಮುದಾಯವನ್ನು ಬಚಾವು ಮಾಡುವ ಮೂಲಕ ವೋಟ್ ಬ್ಯಾಂಕ್ ನ ಗಿಮಿಕನ್ನು ವರ್ಕೌಟ್ ಮಾಡಿಕೊಳ್ಳುವಲ್ಲಿ ಯಶಸ್ವಿಯಾಗೋ ದ್ರು.ಪಾದರಾಯನಪುರ,ರಾಯಪುರಂ,ಜೆಜೆಆರ್ ನಗರ ಅಷ್ಟೇ ಅಲ್ಲಬೇರೆ ವಾರ್ಡ್ ಗಳಲ್ಲಿಯೂ ಖಾಯಂ ಮುಸ್ಲಿಂ ವೋಟ್ ಬ್ಯಾಂಕ್ ಗಿಟ್ಟಿಸಿಕೊಂಡ್ರು.

ಚಾಮರಾಜಪೇಟೆಯಲ್ಲಿ ಪಕ್ಷ ಅಥವಾ ಬೇರೆ ಕಾರಣಗಳಿಗೆ ತಮ್ಮನ್ನು ವಿರೋಧಿಸುತ್ತಿದ್ದ ಮುಸ್ಲಿಂ ಸಮುದಾಯದವ್ರ ಮನ ಗೆದ್ದು ಫಿಕ್ಸ್ಡ್ ವೋಟ್ ಬ್ಯಾಂಕ್ ಭದ್ರ ಮಾಡಿಕೊಳ್ಳುವುದಕ್ಕೆ ಪಾದರಾಯನಪುರ ದುರಂತ ಝಮೀರ್ ಗೆ ಸಹಕಾರಿಯಾಯ್ತು.ಆದ್ರೆ ಇದು ಒಂದು ಸಮುದಾಯಕ್ಕೆ ವರವಾಗಬಲ್ಲದು.ಆದ್ರೆ ಬೇರೆ ಜಾತಿಗಳವ್ರೂ ಇರುವ ಕ್ಷೇತ್ರದಲ್ಲಿ ದ್ವೇಷ-ಅಸೂಯೆ ಹಾಗೂ ಸಾಮಾಜಿಕ ಅಸಮಾನತೆಗೂ ಕಾರಣವಾಗ್ಬೋದು ಎನ್ನೋದು ಆತಂಕದ ಸಂಗತಿ.  

ಪಾದರಾಯನಪುರ ಗಲಭೆ ಹೇಗೆ ನಡೆಯಿತು…ಗಲಭೆಗೆ ಕಾರಣವಾದ ಕಿಡಿಗೇಡಿಗಳಿಗೆ ಆದ ಗತಿ ಏನ್ ಗೊತ್ತಾ..ಕೆಳಕಂಡ ವೀಡಿಯೋ ಕ್ಲಿಕ್ಕಿಸಿ..

Spread the love
Leave A Reply

Your email address will not be published.

Flash News