ಡ್ರೈವರ್ಸ್-ಕಂಡಕ್ಟರ್ಸ್ ಜೀವ ತೆಗೆಯುತ್ತಾ ಟಿಕೆಟ್ “”ಚೀಟಿ””-“”ಇಟಿಎಂ”” ಕಸಿದುಕೊಂಡು ಚೀಟಿ ಕೊಡ್ತಿರುವ ಡಿಪೋ ಮ್ಯಾನೇಜರ್ಸ್ 

0

ಬೆಂಗಳೂರು:ಕೊರೋನಾ ಮಹಾಮಾರಿಯ ಮರಣಮೃದಂಗ ಹೆಚ್ಚಾಗಿರುವ ಸಂದರ್ಭದಲ್ಲೇ ಅದರ ತಡೆಗೆ ಎಲ್ಲಾ ರೀತಿಯ ಕ್ರಮ ಕೈಗೊಳ್ಳುತ್ತಿರಬೇಕಾದ್ರೆ ಬಿಎಂಟಿಸಿ ಆಡಳಿತ ವ್ಯವಸ್ಥೆ ಮಾತ್ರ ಅದ್ಹೇಕೋ ಕಂಡಕ್ಟರ್ಸ್ ಹಾಗೂ ಡ್ರೈವರ್ಸ್ ಗಳ ಬದುಕಿನೊಂದಿಗೆ ಚೆಲ್ಲಾಟ ಆಡುತ್ತಿದೆ ಎನಿಸ್ತಿದೆ.ಇದಕ್ಕೆ ಕಾರಣ ದಿಢೀರ್ ಬದ್ಲಾದ ಟಿಕೆಟ್ ವಿತರಣಾ ವ್ಯವಸ್ಥೆ.ಇಷ್ಟು ದಿನ ಇಟಿಎಂ(ಎಲೆಕ್ಟ್ರಾನಿಕ್ ಟಿಕೆಟ್ ಮಿಷೆನ್) ಮೂಲಕ ವಿತರಿಸಲಾಗುತ್ತಿದ್ದ ಟಿಕೆಟ್ ಗಳನ್ನು ಬದಲಿಸಿ ಹಳೇ ಕಾಲದ  ಚೀಟಿ ಸ್ವರೂಪದಲ್ಲಿ ಇಶ್ಯೂ ಮಾಡಲು ಮುಂದಾಗಿದೆ.ಈಗಾಗ್ಲೇ ಬಲವಂತವಾಗಿ ಕಂಡಕ್ಟರ್ಸ್ ಗೆ ಟಿಕೆಟ್ ಚೀಟಿಗಳ ಬಂಡಲ್ ಗಳನ್ನು ನೀಡಿ ಅದನ್ನೇ ಇಶ್ಯೂ ಮಾಡುವಂತೆಯೂ ಸೂಚಿಸಲಾಗಿದೆ. 

ಬಿಎಂಟಿಸಿ ಎಂಡಿ ಶಿಖಾ ಮೇಡಮ್. ಕೊರೋನಾ ಅಭಿಯಾನದಲ್ಲಿ ಸೋಶಿಯಲ್ ಮೀಡಿಯಾದ ಇನ್ ಚಾರ್ಜ್ ಕೂಡ.ಕೊರೋನಾ ಸೃಷ್ಟಿಸಿರುವ ಆತಂಕ-ತಲ್ಲಣ-ಅಪಾಯಗಳು ಎಲ್ಲರಿಗಿಂತ ಚೆನ್ನಾಗಿ ಅವರಿಗೆ ಗೊತ್ತು,ಅಷ್ಟಿದ್ರೂ ಯಾಕೆ ಇಂತದ್ದೊಂದು ಆತಂಕಕಾರಿ ಪ್ರಯತ್ನಕ್ಕೆ ಗ್ರೀನ್ ಸಿಗ್ನಲ್ ಕೊಟ್ರೋ ಗೊತ್ತಾಗ್ತಿಲ್ಲ.ಅವರ ಗಮನಕ್ಕೆ ತಂದೇ ಇಂತದ್ದೊಂದು ನಿರ್ದಾರವನ್ನು ಕೈಗೊಳ್ಳಲಾಯ್ತೋ ಗೊತ್ತಾಗ್ತಿಲ್ಲ.ಆದ್ರೆ ಟಿಕೆಟ್ ಚೀಟಿಗಳನ್ನು ಆತಂಕದಲ್ಲೇ ತೆಗೆದುಕೊಂಡಿರುವ ಕಂಡಕ್ಟರ್ಸ್ ಹಾಗೂ ಡ್ರೈವರ್ಸ್ ತಮ್ಮ ಜೀವಕ್ಕೆ ಏನಾಗ್ತದೋ ಎನ್ನುವ ಆತಂಕದಲ್ಲೇ ಕೆಲಸಕ್ಕೆ ತೆರಳಿದ್ದಾರೆ.

ಆತಂಕ ಏತಕ್ಕೆ ಗೊತ್ತಾ?ಎಂಜಿಲ ಮೂಲಕ ಕೊರೋನಾ ಹರಡುತ್ತೆ ಎನ್ನುವುದು ಈಗಾಗ್ಲೇ ದೃಢಪಟ್ಟಿದೆ.ಇಟಲಿಯಂಥ ದೇಶದಲ್ಲಿ ಕೊರೋನಾ ವ್ಯಾಪಕವಾಗಲು ಕಾರಣವಾಗಿದ್ದೇ ಪತ್ರಿಕೆಗಳನ್ನು ಹಂಚುವ ಹುಡುಗರ ಎಂಜಿಲ ಮೂಲಕ.ಆ ಕಾರಣಕ್ಕೆ ಅಲ್ಲಿ ಎಲ್ಲಾ ಪತ್ರಿಕೆಗಳನ್ನು ಒಂದ್ ಕಾಲದವರೆಗೆ ಬಂದ್ ಮಾಡಿದ್ದು ಎಲ್ಲರಿಗೂ ಗೊತ್ತೇ ಇದೆ.ಅದರ ಇಂಪ್ಯಾಕ್ಟ್ ಕರ್ನಾಟಕದ ಪತ್ರಿಕೆಗಳ ಮೇಲೂ ಆಗಿದೆ.ಪರಿಸ್ಥಿತಿ ಹೀಗಿರುವಾಗ ಬಿಎಂಟಿಸಿ ಡ್ರೈವರ್ಸ್ ಹಾಗೂ ಕಂಡಕ್ಟರ್ಸ್ ಗಳು ಟಿಕೆಟ್  ಚೀಟಿ ಹರಿದುಕೊಡುವಾಗ ಅನಿವಾರ್ಯವಾಗಿ ನಾಲಿಗೆ ಎಂಜಿಲನ್ನು ಬಳಸ್ಬೇಕಾಗಿದೆ.ದಿನಕ್ಕೆ ನೂರಾರು ಟಿಕೆಟ್ ಚೀಟಿಗಳನ್ನು ಹರಿದುಕೊಡುವ ವೇಳೆ ಎಂಜಿಲ ಮೂಲಕ ಕೊರೋನಾ ಹರಡಿದ್ರೆ ಹೇಗೆ ಎನ್ನುವ ಪ್ರಶ್ನೆಯನ್ನು ಕಂಡಕ್ಟರ್ಸ್ ಮಾಡ್ತಿದ್ದಾರೆ.

ಎಂಜಿಲ ಮೂಲಕ ಕೊರೋನಾ ಹರಡಿದ್ರೆ ಹೇಗಪ್ಪ ಎಂಬ ಆತಂಕದಲ್ಲಿ ಸಿಬ್ಬಂದಿ ಇರುವಾಗ ಅದನ್ನು ಅರ್ಥೈಸಿಕೊಳ್ಳದೆ ಇಟಿಎಂಗಳನ್ನು ಕಿತ್ ಕೊಂಡು ಅವರ ಕೈಗೆ ಚೀಟಿಗಳ ಬಂಡಲ್ ಗಳನ್ನು ಇಟ್ಟು ಕೆಲಸ ಮಾಡ್ಕಂಡು ಬನ್ನಿ ಎಂದು ಡಿಪೋ ಮ್ಯಾನೇಜರ್ಸ್ ಆದೇಶಿಸ್ತಿರುವುದು ಯಾವ ನ್ಯಾಯ.ಈಗಾಗ್ಲೇ ಜೀವಭಯದಲ್ಲಿ ನರಳುತ್ತಿರುವ ಸಿಬ್ಬಂದಿಯನ್ನು ಮತ್ತಷ್ಟು ಅಪಾಯಕ್ಕೆ ದೂಡುವ ತಪ್ಪನ್ನೇಕೆ ಆಡಳಿತ ಮಂಡಳಿ ಮಾಡುತ್ತಿದೆಯೋ ಗೊತ್ತಾಗ್ತಿಲ್ಲ.ಟಿಕೆಟ್ ಬಂಡಲ್ ಗಳನ್ನು ತೆಗೆದುಕೊಳ್ಳದ ಸಿಬ್ಬಂದಿ ವಿರುದ್ಧ ಇಲಾಖಾವರು ಕ್ರಮ ಕೈಗೊಳ್ಳಬೇಕಾಗುತ್ತದೆ ಎಂದು ಆಡಳಿತ ಮಂಡಳಿ ಬೆದರಿಸುತ್ತಿರುವುದು ಎಷ್ಟು ಸರಿ.

ಕೊರೋನಾ ವಾರಿಯರ್ಸ್ ಆಗಿ ಕೆಲಸ ಮಾಡುತ್ತಿರುವ ಬಿಎಂಟಿಸಿ ಸಿಬ್ಬಂದಿಗೆ ಯಾವ ರೀತಿಯ ಸುರಕ್ಷತೆಯನ್ನೂ ನೀಡಿಲ್ಲ.ಆಡಳಿತ ಮಂಡಳಿ ಯೋಗ್ಯತೆಗೆ ಸಿಬ್ಬಂದಿಯ ಆರೋಗ್ಯ ತಪಾಸಣೆಯನ್ನೂ ಮಾಡಿಸಿಲ್ಲ.ಬಸ್ ಗಳಿಗೆ ಸ್ಯಾನಿಟೈಸೇಷನ್ ಮಾಡಿಸಿಲ್ಲ.ಡ್ರೈವರ್ಸ್ ಗಳೇ ಮಾಸ್ಕ್..ಗ್ಲೌಸ್..ಸ್ಯಾನಿಟೈಸರ್ಸ್ ಗಳನ್ನು ತಮ್ಮ ದುಡಿಮೆ ಹಣದಲ್ಲೇ ಖರೀದಿಸಿ ಬಳಸುತ್ತಿದ್ದಾರೆ.ದಿನನಿತ್ಯ ನೂರಾರು ಪ್ರಯಾಣಿಕರ ನಡುವೆ ಕೆಲಸ ಮಾಡುವ ಅವರಿಗೆ ವೈದ್ಯಕೀಯ ತಪಾಣೆಯಾದ್ರೆ ಅದೆಷ್ಟು ಜನ ಕೊರೋನಾ ಸೋಂಕಿತರ ಹಾಗೂ ಸಂಪರ್ಕಿತರ ಕಾಂಟ್ಯಾಕ್ಟ್ ಗೆ ಬಂದಿದ್ದಾರೆನ್ನೋದು ಗೊತ್ತಾಗ್ತದೆ,

ಇಷ್ಟೆಲ್ಲಾ ಆದ್ರೂ ಮಿನಿಸ್ಟರ್ ಸವದಿ ಪತ್ತೆಯಿಲ್ಲ:ಬಿಎಂಟಿಸಿ ನೌಕರರಿಗೆ ಇಷ್ಟೆಲ್ಲಾ ಅನ್ಯಾಯವಾಗುತ್ತಿದ್ದರೂ ಅವರ ಯೋಗಕ್ಷೇಮ ವಿಚಾರಿಸುವ ಹೊಣೆಗಾರಿಕೆಯುಳ್ಳ ಸಾರಿಗೆ ಸಚಿವ ಲಕ್ಷ್ಮಣ್ ಸವದಿ ಮಾತ್ರ ತುಟಿಕ್ ಪಿಟಿಕ್ ಎಂದಿಲ್ಲ.ನೌಕರರನ್ನು ಆಡಳಿತ ಮಂಡಳಿ ನಡೆಸಿಕೊಳ್ಳುತ್ತಿರುವ ರೀತಿ,ಅವರಿಗೆ ಕೊರೋನಾ ಸಂದರ್ಭದಲ್ಲಿ ಸವಲತ್ತು ನೀಡದೆ ವಂಚಿಸುತ್ತಿರುವ ಅನ್ಯಾಯದ ಬಗ್ಗೆ ಪ್ರಶ್ನೆಯನ್ನೇ ಮಾಡಿಲ್ಲ,ತಮ್ಮ ಲೈಫನ್ನು  ರಿಸ್ಕ್ ಗೆ ಹಾಕ್ಕೊಂಡು ಸಾರ್ವಜನಿಕರ ಸೇವೆ ಮಾಡುತ್ತಿರುವ ಬಿಎಂಟಿಸಿ ಕಂಡಕ್ಟರ್ಸ್-ಡ್ರೈವರ್ಸ್ ಹಾಗೂ ಇತರೆ ಸಿಬ್ಬಂದಿಯ ವಿಚಾರದಲ್ಲಿ ಮನೆಯ ಯಜಮಾನನಾಗಿತೋರಬೇಕಿದ್ದ ಹೊಣೆಗಾರಿಕೆ ಹಾಗೂ ಕಾಳಜಿಯನ್ನೇ ಸವದಿ ತೋರಿಲ್ಲ.ಬಹುಷಃ ಯಾವ್ ಸಿಬ್ಬಂದಿಗಾದ್ರೂ ಕೊರೋನಾ ಬಂದ್ರೆ ಅವರು ಮಾತ್ನಾಡ್ತಾರೆ ಅನ್ಸುತ್ತೆ.ಬಿಎಂಟಿಸಿ ಆಗ ಎಚ್ಚೆತ್ತುಕೊಳ್ಳುತ್ತೆ ಎನ್ನಿಸುತ್ತದೆ.

Spread the love
Leave A Reply

Your email address will not be published.

Flash News