ಕೊರೋನಾ ಸಂಕಷ್ಟಕ್ಕೆ ಮಿಡಿಯಲು ಜಮೀನನ್ನೇ ಮಾರಿ ಮಾದರಿಯಾದ ಕೋಲಾರದ ಪಾಷಾ ಸಹೋದರರು..

0

ಕೋಲಾರ/ಬೆಂಗಳೂರು: ಪ್ರತಿಫಲಾಪೇಕ್ಷೆ ಇಲ್ಲದ ನಿಷ್ಕಲ್ಮಶ ಸೇವಾ ಮನೋಭಾವ ಎಂದ್ರೆ ಇದೇ ಅನ್ಸುತ್ತೆ.ಕೊರೋನಾ ಸಮಯದಲ್ಲೂ ಪ್ರಚಾರ ಎನ್ನೋದು ಪ್ರೆಚಾರದ ಸಾಮಾಗ್ರಿಯಾಗೋಗಿರುವ ಸಂದರ್ಭದಲ್ಲಿ ಇಲ್ಲಿಬ್ಬರು ಸಹೋದರರು ತಮ್ಮ ಜಮೀನನ್ನೇ ಮಾರಾಟಮಾಡಿ ಅದರಿಂದ ಬಂದ ದುಡ್ಡಿಂದ ನೊಂದವರ ಕಣ್ಣೀರು -ಹಸಿದವರ ಹೊಟ್ಟೆ ತುಂಬಿಸುವ ಕೆಲಸ ಮಾಡ್ತಿದ್ದಾರೆ,ಕೊರೋನಾ ವಾರಿಯರ್ಸ್-ಹೀರೋಸ್ ಗಿಂತ ಕಡ್ಮೆ ಇಲ್ಲದ ಸೇವೆ ಅವರದು.

ಜಮ್ಮಿಲ್ ಪಾಷಾ ಹಾಗೂ ಮುಜಮ್ಮಿಲ್ ಪಾಷಾ ಇಬ್ಬರು ಸಹೋದರರು, ಇವರದು ಮೂಲತಃ ಕೋಲಾರ ಜಿಲ್ಲೆ.ಕೊರೋನಾದಂಥ ಸಂಕೀರ್ಣ ಹಾಗೂ ಸಂಕಷ್ಟದ ಸಮಯದಲ್ಲಿ ಇವರ ಸೇವೆ ಮಾದರಿ ಹಾಗೂ ಅನುಕರಣೀಯ.ಸೇವೆ ಮಾಡಿ ಫೋಸ್ ಕೊಡೋವ್ರ ಮುಖದ ಮೇಲೆ ಒಡೆದಂತೆ ಕೆಲಸ ಮಾಡುತ್ತಿರುವ ಈ ಸಹೋದರರು ಆ ಅಲ್ಲಾಹು ಕೊಟ್ಟ ಸೌಲಭ್ಯಗಳಲ್ಲೇ ತಮ್ಮ ಕೈಲಾದ ಸಹಾಯವನ್ನು ಯಾವುದೇ ಪ್ರಚಾರದ ಗಿಮಿಕ್ ಇಲ್ಲದೆ ಮಾಡುತ್ತಿದ್ದಾರೆ.

ಪಾಷಾ ಸಹೋದರರಿಬ್ಬರು ರಿಯಲ್ ಎಸ್ಟೇಟ್ ವ್ಯವಹಾರ ನಡೆಸುತ್ತಿದ್ದಾರೆ.ಅನೇಕ ಸೇವಾಕಾರ್ಯಗಳನ್ನು ಮಾಡುತ್ತಲೇ ಎಲ್ಲರ ಪ್ರೀತಿಗೆ ಪಾತ್ರರಾಗಿದ್ದಾರೆ.ಕೊರೋನಾ ಬಂದ್ಮೇಲೆ ತಮ್ಮ ಸ್ವಂತ ಊರಾದ ಕೋಲಾರಕ್ಕೆ ಬಂದ ಇವರಿಬ್ಬರು ಮಾಡಿದ ಕೆಲಸವೇ ತಮಗಿದ್ದ ಭೂಮಿಯನ್ನು ಮಾರಿದ್ದು.ಹೆಚ್ಚಿಗೆ ಬೆಲೆಗೆ ಮಾರಾಟ ಮಾಡುವ ಅವಕಾಶವಿದ್ದರೂ ಟೈಮ್ ಇಲ್ಲ ಎನ್ನುವ ಕಾರಣಕ್ಕೆ 25 ಲಕ್ಷಕ್ಕೆ ಅದನ್ನು ಮಾರಿ ಅದರಿಂದ ಬಂದ ಹಣವನ್ನು ಸೇವಾಕಾರ್ಯಕ್ಕೆ ಬಳಸಿಕೊಳ್ತಿದ್ದಾರೆ.

ಕೆಲ ದಶಕಗಳ ಹಿಂದೆ ತಾವು ಕೋಲಾರಕ್ಕೆ ಬರಿಗೈಯಲ್ಲಿ ಬಂದಾಗ ಜನ ಅನ್ಯ ಧರ್ಮೀಯನೆಂದು ತಾತ್ಸಾರ ಮಾಡದೆ  ನಮ್ಮನ್ನು ಕೈ ಹಿಡಿದು ಈ ಮಟ್ಟಕ್ಕೆ ಬೆಳೆಸಿದ್ದಾರೆ.ಕೋಲಾರದ ಜನರಿಂದ ಸಾಕಷ್ಟನ್ನು ಪಡೆದುಕೊಂಡಿದ್ದೇವೆ,ಕೆರೆ ನೀರನ್ನು ಕೆರೆ ಚೆಲ್ಲಿ ಎನ್ನುವಂತೆ ನಾವು ಯಾರಿಂದ ಪಡೆದುಕೊಂಡೆವು,ಅದನ್ನು ಅಲ್ಲಿಯ ಕಲ್ಯಾಣಕ್ಕೆ ಬಳಸೋದು ಸೂಕ್ತ ಎಂದೆನಿಸಿ ಈ ಕಾರ್ಯ ಮಾಡುತ್ತಿದ್ದೇವೆ,ಇದರಿಂದ ನಮಗೆ ಆತ್ಮತೃಪ್ತಿ ಸಿಕ್ಕಿದೆ.ಕೊರೋನಾ ಸಂಕಷ್ಟದ ಸಮಯದಲ್ಲಿ ನಮ್ಮನ್ನು ಬೆಳೆಸಿದ ಜನರಿಗೆ ಇದು ನಮ್ಮ ಅಳಿಲು ಸೇವೆ ಎನ್ತಾರೆ ಪಾಷಾ ಸಹೋದರರು.

ಕೊರೋನಾ ಸಂಕಷ್ಟದ ಸಮಯದಲ್ಲಿ ಪಾಷಾ ಸಹೋದರರು ಮನೆ ಮನೆಗಳಿಗೆ ಆಹಾರದ ಪೊಟ್ಟಣ.ಪಡಿತರ ಹಾಗೂ ಹಸಿದವರಿಗೆ ಆಹಾರವನ್ನು ಉಣಬಡಿಸುತ್ತಿದ್ದಾರೆ.ತಮ್ಮ ಮನೆ ಬಾಗಿಲಿಗೆ ಬರುವವರನ್ನು ಬರಿಗೈಯಲ್ಲಿ ಕಳುಹಿಸಿ ಅಭ್ಯಾಸವೇ ಇಲ್ಲದ ಸಹೋದರರ ಮನೆ ಈಗ ಆಹಾರ ಸಾಮಾಗ್ರಿಗಳ ಗೋಡೌನ್ ಆಗಿದೆ.ಮುಸ್ಲಿಂ ಸಹೋರರ ಈ ಕಾರ್ಯಕ್ಕೆ ಕೋಲಾರಕ್ಕೆ ಕೋಲಾರವೇ ತಲೆಬಾಗಿದೆ.

Spread the love
Leave A Reply

Your email address will not be published.

Flash News