ಬಾಲಿವುಡ್ ನ “ಎವರ್ ಗ್ರೀನ್ ” ರೋಮ್ಯಾಂಟಿಕ್ ಹೀರೋ ರಿಶಿ ಕಪೂರ್ ನಿಧನ

0
ಬಾಬ್ಬಿ ಚಿತ್ರದಲ್ಲಿ ನಟಿಸುವಾಗ
“”ಬಾಬ್ಬಿ”” ಚಿತ್ರದಲ್ಲಿ ನಟಿಸುವಾಗ
ರೊಮ್ಯಾಂಟಿಕ್ ಹೀರೋ ಆಗಿ ವಿಜೃಂಭಿಸುತ್ತಿದ್ದ ದಿನಗಳಲ್ಲಿ...
ರೊಮ್ಯಾಂಟಿಕ್ ಹೀರೋ ಆಗಿ ವಿಜೃಂಭಿಸುತ್ತಿದ್ದ ದಿನಗಳಲ್ಲಿ…

ಮುಂಬೈ: ಬಾಲನಟನಾಗಿ ನಟಿಸಿದ ತನ್ನ ತಂದೆಯ ಮೊದಲ ಚಿತ್ರ(ಮೇರಾ ನಾಮ್ ಜೋಕರ್) ದಲ್ಲೇ ರಾಷ್ಟ್ರೀಯ ಪ್ರಶಸ್ತಿ ಪಡೆದ ಹೆಗ್ಗಳಿಕೆಯ ನಟ ರಿಶಿ ಕಪೂರ್ ಕಾಲನ ಕರೆಗೆ ಓಗೊಟ್ಟು ನಡೆದಿದ್ದಾರೆ.68 ವರ್ಷ ವಯಸ್ಸಿನಲ್ಲೇ ಬೋನ್ ಮ್ಯಾರೋ ಕ್ಯಾನ್ಸರ್(ಅಸ್ತಿಮಜ್ಜೆ ಕ್ಯಾನ್ಯರ್)ಗೆ ಬಲಿಯಾಗುವ ಮೂಲಕ ಬಾಲಿವುಡ್ ಅಂಗಳದಲ್ಲಿ ದೊಡ್ಡ ಶೂನ್ಯವನ್ನೇ ನಿರ್ಮಿಸಿದ್ದಾರೆ.ನಿನ್ನೆಯಷ್ಟೇ ಕ್ಯಾನ್ಸರ್ ನಿಂದ ಇರ್ಫಾನ್ ಖಾನ್ ಎನ್ನುವ ಅಭಿಜಾತ ಕಲಾವಿದನನ್ನು ಕಳೆದುಕೊಂಡು ಬಡವಾಗಿದ್ದ ಹಿಂದಿ ಚಿತ್ರರಂಗಕ್ಕೆ ರಿಶಿ ಕಪೂರ್ ಸಾವು ನಿಜಕ್ಕೂ ದೊಡ್ಡ ಶಾಕ್..

1973 ರಿಂದ 2000ರ ರ ಅವಧಿಯಲ್ಲಿ ಹಿಂದಿ ಚಿತ್ರರಂಗವನ್ನು ತನ್ನ ರೋಮ್ಯಾಂಟಿಕ್ ಮ್ಯಾನರಿಸಂನಿಂದ ಆಳಿದ ಹೆಗ್ಗಳಿಕೆ ರಾಜ್ ಕಪೂರ್ ಕುಟುಂಬದ ಕುಡಿ ರಿಷಿ ಅವ್ರದು.ಈ ಅವಧಿಯಲ್ಲಿ 90ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿದ್ದ ರಿಶಿ ಕಪೂರ್,ಹೀರೋ ಆಗಿ ನಟಿಸಿದ ಬಾಬ್ಬಿ ಚಿತ್ರಕ್ಕೂ 1977 ರಲ್ಲಿ ಫಿಲ್ಮ್ ಫೇರ್ ಉತ್ತಮ ನಟ ಪ್ರಶಸ್ತಿ ಪಡೆದಿದ್ದರು.1973 ರಿಂದ 1981 ರ ಅವಧಿಯಲ್ಲಿ ಸತತ 12 ಚಿತ್ರಗಳಲ್ಲಿ ತನ್ನೆದುರು ಹೀರೋಯಿನ್ ಆಗಿ ನಟಿಸಿದ್ದ ನೀತೂ ಕಪೂರ್ ಅವ್ರನ್ನೇ ಮದ್ವೆಯಾಗಿ ಸುಖ ಸಂಸಾರ ನಡೆಸಿದ್ದ ರಿಶಿ ಕಪೂರ್ 68ರ ವಯಸ್ಸಿನಲ್ಲಿ ಕಪೂರ್ ಕುಟುಂಬ,ಅತ್ಯಾಪ್ತ ಬಳಗ ಹಾಗೂ ಕೋಟ್ಯಾಂತರ ಅಭಿಮಾನಿಗಳನ್ನು ಅಗಲಿದ್ದಾರೆ.

ಸಹನಟಿ ನೀತೂ ಸಿಂಗ್ ಅವರನ್ನೇ ಪ್ರೀತಿಸಿ ಮದುವೆಯಾದ ರಿಶಿ ಕಪೂರ್
ಸಹನಟಿ ನೀತೂ ಸಿಂಗ್ ಅವರನ್ನೇ ಪ್ರೀತಿಸಿ ಮದುವೆಯಾದ ರಿಶಿ ಕಪೂರ್
ರಿಶಿ ಕಪೂರ್ ಅವರ ಸುಖೀ ಸಂಸಾರ
ರಿಶಿ ಕಪೂರ್ ಅವರ ಸುಖೀ ಸಂಸಾರ

ಹಾಗೆ ನೋಡಿದ್ರೆ ರಿಶಿ ಕಪೂರ್ ಮೊದಲು ಬಣ್ಣ ಹಚ್ಚಿದ್ದು ರಾಜ್ ಕಪೂರ್ ಅವರ “”ಶ್ರೀ420″”ಯಲ್ಲಿ.ಆದ್ರೆ ಮಳೆಯಲ್ಲಿ ನಡೆದು ಬರುವ ಇಬ್ಬರು ಬಾಲಕರಲ್ಲಿ ಒಬ್ಬರಾಗಿ ನಟಿಸಿದ್ದರಿಂದ ಬಹುತೇಕರಿಗೆ ಆ  ಮುಖ ಪರಿಚತವಾಗಲಿಲ್ಲ.ಆದ್ರೆ ಮೇರಾ ನಾಮ್ ಜೋಕರ್,ಬಾಬ್ಬಿ ಚಿತ್ರಗಳಿಂದ ದಿಢೀರ್ ಪ್ರವರ್ಧಮಾನಕ್ಕೆ ಬಂದ ನಟ ರಿಶಿ ಕಪೂರ್. ಎಲ್ಲವೂ ಅಂದುಕೊಂಡಂತೆ ಆಗಿದಿದ್ದರೆ ಬಾಬ್ಬಿ ರಾಜೇಶ್ ಖನ್ನಾ ಪಾಲಾಗ್ಬೇಕಿತ್ತು.ಆದ್ರೆ ರಾಜ್ ಕಪೂರ್ ಒಪ್ಪಲಿಲ್ಲ.ಅಂದು ರಾಜ್ ಕಪೂರ್ ಅಂತದ್ದೊಂದು ನಿರ್ದಾರ ತೆಗೆದುಕೊಳ್ಳದೇ ಹೋಗಿದಿದ್ದರೆ ಬಾಬ್ಬಿ ಶತಮಾನದ ಸೂಪರ್ ಹಿಟ್ ಚಿತ್ರಗಳಲ್ಲಿ ಒಂದಾಗುತ್ತಿರಲಿಲ್ಲ.ರಿಶಿ ಕಪೂರ್ ನಂಥ ನಟ ಚಿತ್ರರಂಗಕ್ಕೆ ಆ ರೇಂಜ್ನಲ್ಲಿ ಪರಿಚಿತವಾಗುತ್ತಿರಲಿಲ್ಲವೇನೋ ಎಂದು ಬಾಲಿವುಡ್ ಮಾತನಾಡಿಕೊಳ್ಳುತ್ತಿದೆ.

ರಿಶಿ ಕಪೂರ್ ವೃತ್ತಿ ಜೀವನದ ಬಗ್ಗೆ ನೋಡೋದಾದ್ರೆ ಅವರು ಸೋಲೋ ಹೀರೋ ಆಗಿ ನಟಿಸಿದ 51 ಚಿತ್ರಗಳ ಪೈಕಿ 11 ಚಿತ್ರಗಳು ಸಾರ್ವಕಾಲಿಕ್ ಹಿಟ್ ಎನಿಸಿವೆ.41ರ ಪೈಕಿ 25 ಚಿತ್ರಗಳು ನಿರ್ಮಾಪಕರ ಜೇಬು ತುಂಬಿಸಿವೆ.ಬಾಬ್ಬಿ,ಲೈಲಾ ಮಜನೂ, ರಫೂ ಚಕ್ಕರ್, ಸರ್ಗಮ್,ಕರ್ಜ್,ಪ್ರೇಮ್ ರೋಗ್, ನಗೀನಾ,ಹನಿಮೂನ್, ಚಾಂದನಿ, ಹೀನಾ,ಬೋಲ್ ರಾಧಾ ಬೋಲ್, ಯೇ ವಾದಾ ರಹಾ,ಖೇಲ್ ಖೇಲ್ ಮೆ,ಕಬೀ ಕಭೀ,ಹಮ್ ಕಿಸೀ ಸೇ ಕಮ್ ನಹೀ,ಬದಲ್ತೇ ರಿಶ್ತೆ, ಆಪ್ ಕೆ ದಿವಾನೇ, ಸಾಗರ್,ಅಜೂಬಾ, ದೀವಾನಾ, ದಾಮಿನಿ,ಗುರುದೇವ್,ದರಾರ್,ಕಾರೂಬಾರ್ ಇವುಗಳಲ್ಲಿ ಹೆಸರಿಸಬಹುದಾದ ಕೆಲವು ಚಿತ್ರಗಳು.ಇನ್ನು ನಿರ್ದೇಶಕ ಹಾಗೂ ನಿರ್ಮಾಪಕರಾಗಿಯೂ ಕೆಲಸ ಮಾಡಿರುವ ರಿಶಿ ಕಪೂರ್ ಆ ಅಬ್ ಲೌಟ್ ಚಲೇ, ರಾಜೀವ್ ಕಪೂರ್,ಹೆನ್ನಾ,ಪ್ರೇಮ್ ಗ್ರಂಥ್ ನಂಥ ಚಿತ್ರಗಳನ್ನು ಬಾಲಿವುಡ್ ಗೆ ನೀಡಿದ್ದಾರೆ.

1980 ರಲ್ಲಿ ಸಹನಟಿ ನೀತೂ ಸಿಂಗ್ ಅವರನ್ನು ಪ್ರೀತಿಸಿ ಮದುವೆಯಾದ ರಿಶಿ ಕಪೂರ್ ಗೆ ಇಬ್ಬರು ಮಕ್ಕಳು.ಬಾಲಿವುಡ್ ಖ್ಯಾತ ರೊಮ್ಯಾಂಟಿಕ್ ಹೀರೋಗಳಲ್ಲಿ ಒಬ್ಬನಾದ ರಣ್ಬೀರ್ ಕಪೂರ್ ಹಾಗೂ ರಿದ್ದಿಯಾನ ಕಪೂರ್.ಬಾಲಿವುಡ್ ನಲ್ಲಿ ಒಂದಷ್ಟು ದಶಕಗಳ ಕಾಲ ತನ್ನ ಅತ್ಯದ್ಭುತ ನಟನೆ ಹಾಗೂ ಮ್ಯಾನರಿಸಂನಿಂದ ಸಿನಿಪ್ರೇಕ್ಷಕರನ್ನು ರಂಜಿಸಿದ ರಿಶಿ ಕಪೂರ್ ಇನ್ನೂ ಸಾಕಷ್ಟು ಚಿತ್ರಗಳಲ್ಲಿ ನಟಿಸಬೇಕೆನ್ನುವ ಇರಾದೆ ಹೊಂದಿದ್ದರು.ಒಂದಷ್ಟು ಪುಸ್ತಕ ಬರೆಯೊಕ್ಕೆ ಸಿದ್ಧತೆ ಮಾಡಿಕೊಂಡಿದ್ರು.ಚಿತ್ರ ನಿರ್ದೇಶನದ ಕನಸಿಟ್ಟುಕೊಂಡಿದ್ರು.ಅದೆಲ್ಲವೂ ಕಾರ್ಯಗತಗೊಳ್ಳುವ ಮೊದಲೇ ಎಲ್ಲರನ್ನು ಬಿಟ್ಟು ಅಗಲಿದ್ದಾರೆ.

ಅಸ್ತಿ ಮಜ್ಜೆ ಕ್ಯಾನ್ಸರ್ ನಿಂದ ಬಳಲುತ್ತಿದ್ದ ರಿಷಿ ಕಪೂರ್ ನ್ಯೂಯಾರ್ಕ್ ನಲ್ಲಿ ಚಿಕಿತ್ಸೆ ಪಡೆದು ಮರಳಿದ್ದರು.ಆರೋಗ್ಯದಲ್ಲಿ ಚೇತರಿಕೆ ಕೂಡ ಕಾಣಿಸಿಕೊಂಡಿತ್ತು.ಆದ್ರೆ ದಿಢೀರ್ ಹದಗೆಟ್ಟ ಆರೋಗ್ಯದಿಂದಾಗಿ ಮುಂಬೈನ ಎಚ್.ಎನ್ ರಿಲಯನ್ಸ್ ಆಸ್ಪತ್ರೆಗೆ ದಾಖಲಿಸಲಾಗಿತ್ತು.ಆದ್ರೆ ಚಿಕಿತ್ಸೆ ಫಲಕಾರಿಯಾಗದೆ ಕೊನೆಯುಸಿರೆಳೆದಿದ್ದಾರೆ.ಹಿತೇಶ್ ಭಾಟಿಯಾ ನಿರ್ದೇಶನದ “” ಶರ್ಮಾಜಿ ನಮ್ಕೀನ್ “”ಚಿತ್ರದಲ್ಲಿ ಅವರು ನಟಿಸುತ್ತಿದ್ದರು.ಅದೇ ಅವರ ಕೊನೆಯ ಚಿತ್ರವಾದದ್ದು ದುರಂತ.ಅಂದ್ಹಾಗೆ  ಕನ್ನಡದ ಡ್ರೀಮ್ ಮ್ಯಾನ್ ಪುಟ್ಟಣ್ಣ ಕಣಗಾಲ್ ನಿರ್ದೇಶನದ ನಾಗರಹಾವು ಚಿತ್ರದ ಹಿಂದಿ ಅವತರಣಿಕೆ “”ಜಹರೀಲಾ ಇನ್ಸಾನ್”” ಚಿತ್ರದಲ್ಲೂ ರಿಶಿ ಕಪೂರ್ ನಾಯಕ ನಟನಾಗಿ ನಟಿಸಿದ್ದರು. ರಿಶಿ ಕಪೂರ್ ನಿಧನದಿಂದ ಇಡೀ ಬಾಲಿವುಡ್ ಶೋಕಸಾಗರದಲ್ಲಿ ಮುಳುಗಿದೆ.ಅಪ್ರತಿಮ ನಟ ರಿಶಿ ಕಪೂರ್ ನಿಧನಕ್ಕೆ ಕನ್ನಡ ಫ್ಲಾಶ್ ನ್ಯೂಸ್ ಶೃದ್ಧಾಂಜಲಿ ಸಲ್ಲಿಸುತ್ತದೆ.

Spread the love
Leave A Reply

Your email address will not be published.

Flash News