ನಾಳೆಯಿಂದ ಬಡವರಿಗೆ ಉಚಿತ ಹಾಲು ಇಲ್ಲ! ಶಾಕ್ ನೀಡಿದ ಕೆಎಂಎಫ್ ?

0

ಬೆಂಗಳೂರು:ಲಾಕ್ ಡೌನ್ ಸಂದರ್ಭದಲ್ಲಿ ಸಂತ್ರಸ್ಥರು ಹಾಗೂ ಬಡವರಿಗೆ ಪೂರೈಕೆ ಮಾಡಲಾಗುತ್ತಿದ್ದ ಹಾಲು ನಾಳೆಯಿಂದ ಸಿಗುವ ಸಾಧ್ಯತೆಗಳು ಕಡಿಮೆನಾ..ಸರ್ಕಾರದಿಂದ ಕೆಎಂಎಫ್ ಗೆ ಈವರೆಗೂ ಈ ಬಗ್ಗೆ ನಿರ್ದೇಶನ ಬಾರದ ಹಿನ್ನಲೆಯಲ್ಲಿ ಕೆಎಂಎಫ್ ಹಾಲು ಪೂರೈಕೆ ಬಗ್ಗೆ ಈ ಕ್ಷಣದವರೆಗೂ ಗೊಂದಲದಲ್ಲಿದೆ.

ಅಂದ್ಹಾಗೆ ಪ್ರತಿನಿತ್ಯ ಕೆಎಂಎಫ್ ನಿಂದ ಸರ್ಕಾರ 7 ವರೆ ಲಕ್ಷ  ಲೀಟರ್ ಹಾಲನ್ನು ಖರೀದಿಸಿ ವಿತರಿಸುತ್ತಿದೆ.ಏಪ್ರಿಲ್ 3 ರಿಂದ ಆರಂಭವಾಗಿ ಇಂದಿಗೆ ಸರ್ಕಾರದೊಂದಿಗೆ ಕೆಎಂಎಫ್ ಮಾಡಿಕೊಂಡಿದ್ದ ಒಪ್ಪಂದದ ಅವಧಿ ಮುಗಿಯುತ್ತಿದೆ.ನಾಳೆಯಿಂದ ಹಾಲು ಪೂರೈಸಬೇಕೋ ಬೇಡವೋ ಎನ್ನುವುದರ ಬಗ್ಗೆ ಯಾವುದೇ ನಿಖರವಾದ ಮಾಹಿತಿ ಬಂದಿಲ್ಲದಿರುವುದರಿಂದ ನಾವ್ ಏನ್ ಮಾಡ್ಬೇಕೆಂದು ಗೊತ್ತಾಗದೆ ಗೊಂದಲಕ್ಕೆ ಸಿಲುಕಿದ್ದೇವೆ.ಇಂದು ರಾತ್ರಿಯೊಳಗೆ ಸರ್ಕಾರದಿಂದ ನಿರ್ದೇಶನ ಬರುವ ಸಾಧ್ಯತೆಗಳಿವೆ ಎನ್ನುತ್ತಾರೆ ಕೆಎಂಎಫ್ ಎಂಡಿ ಸತೀಶ್.

ಅಂದ್ಹಾಗೆ ದಿನನಿತ್ಯ 7 ವರೆ ಲಕ್ಷ ಲೀಟರ್ ನಂತೆ ಇಷ್ಟು ದಿನಗಳವರೆಗೆ ಕೆಎಂಎಫ್ ಪೂರೈಕೆ ಮಾಡಿರುವ ಹಾಲಿನ ಪ್ರಮಾಣ 2 ಕೋಟಿ 12 ಸಾವಿರ ಲೀಟರ್.ಇದಕ್ಕೆ ಸರ್ಕಾರ ನೀಡಬೇಕಿರುವ ಮೊತ್ತ ಸುಮಾರು 80 ಕೋಟಿ.ಈಗಾಗ್ಲೇ 25 ಕೋಟಿ ಹಣ ಸಂದಾಯವಾಗಿದ್ದು ಇನ್ನುಳಿದ 65 ಕೋಟಿ ಬಾಕಿ ಬರಬೇಕಿದೆ ಎನ್ನುವ ಎಂಡಿ ಸತೀಶ್ ನಮ್ಮ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಸರ್ಕಾರದೊಂದಿಗೆ ಈ  ಬಗ್ಗೆ ಸಂಪರ್ಕದಲ್ಲಿದ್ದಾರೆ .ಸರ್ಕಾರದಿಂದ ಸೂಚನೆ ಬಂದ್ರೆ ಹಾಲು ಪೂರೈಕೆ ಮಾಡುತ್ತೇವೆ.ಒಂದ್ವೇಳೆ ಬೇಡ ಎಂದ್ರೂ ನಿತ್ಯ ಸಾಮಾನ್ಯರಿಗೆ ಪೂರೈಸುತ್ತಿರುವಂತೆ 70 ಲಕ್ಷ ಲೀಟರ್ ಹಾಲು ಪೂರೈಸುವ ಕೆಲಸ ಮಾಡುತ್ತೇವೆ ಎನ್ನುತ್ತಾರೆ.

ಇನ್ನೊಂದೆಡೆ ಬಡವರಿಗೆ ಪೂರೈಕೆ ಮಾಡಲಾಗುತ್ತಿರುವ ಹಾಲು ವಿತರಣಾ ವ್ಯವಸ್ಥೆ ಬಗ್ಗೆಯೂ ಸಾಕಷ್ಟು ವಿರೋಧ-ಆಕ್ಷೇಪದ ಮಾತುಗಳು ಕೇಳಿಬರುತ್ತಿದೆ.ಈ ಹಿನ್ನಲೆಯಲ್ಲಿ ಹಾಲು ಪೂರೈಕೆಯನ್ನು ಸ್ಥಗಿತಗೊಳಿಸು ವುದು ಸೂಕ್ತ ಎನ್ನುವ ಅಭಿಪ್ರಾಯಗಳನ್ನು ಬಿಬಿಎಂಪಿ ಆಯುಕ್ತ ಅನಿಲ್ ಕುಮಾರ್ ಸೇರಿದಂತೆ ಸರ್ಕಾರದ ಮಟ್ಟದ ಅನೇಕರು ತಿಳಿಸಿರುವುದರಿಂದ ಇದನ್ನು ಸರ್ಕಾರ ಗಂಭೀರವಾಗಿ ತೆಗೆದುಕೊಂಡಿದೆ.ಹಾಗಾಗಿ ಹಾಲು ಪೂರೈಕೆ ಸ್ಥಗಿತಗೊಳಿಸುವ ಅಂತಿಮ ತೀರ್ಮಾನಕ್ಕೆ ಬಂದ್ರೂ ಆಶ್ಚರ್ಯವಿಲ್ಲ.

Spread the love
Leave A Reply

Your email address will not be published.

Flash News