“ಮೇಡಮ್” ನಿಷ್ಕಾಳಜಿಯಿಂದ ತಬ್ಬಲಿಗಳಾದ್ರಾ ಸಿಬ್ಬಂದಿ ?-ಆತಂಕದಲ್ಲೇ ಕಾರ್ಯನಿರ್ವಹಿಸುತ್ತಿರುವ ಬಿಎಂಟಿಸಿ ಕೊರೊನಾ ವಾರಿಯರ್ಸ್ ! 

0

ಬೆಂಗಳೂರು:ಸೆರ್ಕಾರಕ್ಕೆ ನಿಜಕ್ಕೂ ತಲೆತಗ್ಗಿಸುವಂತ ವಿಚಾರ ಇದು.ಸಾರಿಗೆ ನಿಗಮಗಳ ಮುಖ್ಯಸ್ಥರು ಆತ್ಮಾವಲೋಕನ ಮಾಡಿಕೊಳ್ಳಬೇಕಾದ ಸಂಗತಿ.ನಿತ್ಯ ಪ್ರಯಾಣಿಕರನ್ನು ಹೊತ್ತು ಸಾಗಿಸುವ ಸಾರಿಗೆ ನಿಗಮಗಳ ಬಸ್ ಚಾಲಕರು ಹಾಗೂ ಕಂಡಕ್ಟರ್ಸ್ ಗಳನ್ನು ಬಹುಷಃ ಅಧಿಕಾರಿಗಳು ಮನುಷ್ಯರೆಂದೇ ಪರಿಗಣಿಸಿಲ್ಲ ಅನ್ಸುತ್ತೆ.ಏಕೆಂದ್ರೆ ಈ ಡ್ರೈವರ್ಸ್-ಕಂಡಕ್ಟರ್ಸ್ ಗಳಿಗೆ ಸೌಜನ್ಯಕ್ಕೆ ಎನ್ನೋದು ಒತ್ತಟ್ಟಿಗಿರಲಿ,ಆತಂಕಕ್ಕಾದ್ರೂ ಕೊರೋನಾ ಟೆಸ್ಟ್ ಮಾಡಿಸುವ ಗೋಜಿಗೇನೆ ಹೋಗಿಲ್ಲ.ಆಡಳಿತ ವರ್ಗದ ಧೋರಣೆ ಬಗ್ಗೆ ಕೆಂಡದಂಥ ಕೋಪವಿದ್ರೂ ಡ್ರೈವರ್ಸ್-ಕಂಡಕ್ಟರ್ಸ್ ಮಾತ್ರ ಹಲ್ಲುಕಚ್ಚಿಕೊಂಡೇ ಕೆಲಸ ಮಾಡ್ತಿದ್ದಾರೆ.

ನಿಮಗೆ ಕೇಳಿದ್ರೆ ಆಶ್ಚರ್ಯವಾಗಬಹುದು.ಕೊರೋನಾ ಲಾಕ್ ಡೌನ್ ನಡುವೆಯೂ ಎಂದಿನಂತೆ ಕೆಲಸ ಮಾಡುತ್ತಿರುವ ಬಿಎಂಟಿಸಿಯ ಡ್ರೈವರ್ಸ್-ಕಂಡಕ್ಟರ್ಸ್ ಗೆ ಈ ಕ್ಷಣದವರೆಗೂ ಹೆಲ್ತ್ ಚೆಕಪ್ ಮಾಡಿಸಿಯೇ ಇಲ್ಲ.ಅದರಲ್ಲಿ ತಮಗೆ ಎಷ್ಟ್ ಜನಕ್ಕೆ ಕೊರೋನಾ ಬಂದಿದೆಯೋ ಎನ್ನುವ ಆತಂಕಕ್ಕೆ ಅವರು ಸಿಲುಕಿದ್ದಾರೆ.ಇದೆಲ್ಲವನ್ನು ಸಂಸ್ಥೆಯ ಬಾಸ್ ಆಗಿ ಗಮನಿಸ್ಬೇಕಾದ ಶಿಖಾ ಮೇಡಮ್ ಕೊರೊನಾ ಲಾಕ್ ಡೌನ್ ಸಿಸ್ಟಂನ ಸೋಶಿಯಲ್ ಮೀಡಿಯಾ ಸೆಲ್ ನಲ್ಲೇ ಬ್ಯುಸಿಯಾಗಿದ್ದಾರೆ.ರೋಗ ಬಂದ್ರೆ ತಮ್ಮ ಸಿಬ್ಬಂದಿಗೆ ತಾನೇ ಬರೋದು ಎನ್ನುವ ಉಡಾಫೆ ಅವರದೆನಿಸುತ್ತೆ.

ಮೈಸೂರು ಜಿಲ್ಲಾಧಿಕಾರಿಯಾಗಿ,ಪಿಯು ಬೋರ್ಡ್,ಬೆಸ್ಕಾ ನಲ್ಲಿ ಕೆಲಸ ಮಾಡುತ್ತಿದ್ದಾಗ  ಮೇಡಮ್ ಶಿಖಾ ಅವರಲ್ಲಿದ್ದ ಕಮಿಟ್ಮೆಂಟ್-ಕನ್ಸರ್ನ್ ಬಿಎಂಟಿಸಿ ಎಂಡಿ ಆದ್ಮೇಲೆ ಇಲ್ಲವಾಗಿದೆ.ಬಿಎಂಟಿಸಿ ಸಿಬ್ಬಂದಿಯ ಸಮಸ್ಯೆ-ಕುಂದುಕೊರತೆ ವಿಚಾರಿಸುವ ಗೋಜಿಗೇನೆ ಅವರು ಹೋಗ್ತಿಲ್ಲ.ಈಗಲೂ ಅವರ ಮನಸಿನಲ್ಲಿ ಇರೋದು ಬಸ್ ಲೈನ್ ಅಷ್ಟೆ..ಅದನ್ನು ಬಿಟ್ಟರೆ ಬಿಎಂಟಿಸಿ ವ್ಯವಸ್ಥೆ ಸುಧಾರಿಸುವ ಮನಸ್ಥಿತಿಯಲ್ಲೇ ಅವರು ಇದ್ದಂತಿಲ್ಲ.ಕೊರೋನಾ ತನ್ನ ವಿದ್ವಂಸಕತೆ ಮೆರೆಯುತ್ತಿರುವ ಸಂದರ್ಭದಲ್ಲಿಯೂ ತಮ್ಮ ನೌಕರರ ಕೊರೊನಾ ಹೆಲ್ತ್ ಚೆಕಪ್ ಮಾಡಿಸುವ ತಂಟೆಗೆ ಅವರು ಹೋಗಿಲ್ಲ ಎನ್ನುವುದರಲ್ಲೇ ಸಂಸ್ಥೆ ಹಾಗೂ ಅದರ ನೌಕರರ ಬಗ್ಗೆ ಇರುವ ತಾತ್ಸಾರ ಎಂತದ್ದೆಂದು ಗೊತ್ತಾಗುತ್ತೆ.

ಬಿಎಂಟಿಸಿ ಡ್ರೈವರ್ಸ್-ಕಂಡಕ್ಟರ್ಸ್ ಗೆ ಕೊಟ್ಟಿರುವ ಗ್ಲೌಸ್ ಗಳಿವು,..ಇವನ್ನೇ ವಾರವದರೆಗೂ ಬಳಸಬೇಕಂತೆ..
ಬಿಎಂಟಿಸಿ ಡ್ರೈವರ್ಸ್-ಕಂಡಕ್ಟರ್ಸ್ ಗೆ ಕೊಟ್ಟಿರುವ ಗ್ಲೌಸ್ ಗಳಿವು,..ಇವನ್ನೇ ವಾರವದರೆಗೂ ಬಳಸಬೇಕಂತೆ..

ಸೋಶಿಯಲ್ ಮೀಡಿಯಾ ಇನ್ ಚಾರ್ಜ್ ಆದಾಗಿನಿಂದ್ಲೂ ಬಹುಷಃ ಶಿಖಾ ತಾನು ಬಿಎಂಟಿಸಿ ಎಂಡಿಯೂ ಹೌದು ಎನ್ನುವ ಸತ್ಯವನ್ನೇ ಮರೆತಂತಿದೆ.ಸೋಶಿಯಲ್ ಮೀಡಿಯಾವನ್ನು ಅವರು ತುಂಬಾ ಚೆನ್ನಾಗಿ ನಡೆಸಿ ನಿಭಾಯಿಸಿಕೊಂಡು ಹೋಗುತ್ತಿದ್ದಾರೆನ್ನುವುದರಲ್ಲಿ ಎರಡು ಮಾತಿಲ್ಲ.ಆದ್ರೆ ತನ್ನ ಮೂಲ ಹುದ್ದೆ ಹಾಗೂ ಅದರ ಜವಾಬ್ದಾರಿ ಬಗ್ಗೆಯೂ ಅವರು ಗಮನ ಹರಿಸುವುದು ಉತ್ತಮ.ಆದ್ರೆ ಶಿಖಾ ಅಲ್ಲಿ ಹೋಗಿ ಸೇರಿಕೊಂಡಾಗಿನಿಂದ್ಲೂ ಬಿಎಂಟಿಸಿ ವ್ಯವಸ್ಥೆಯಲ್ಲಾಗುತ್ತಿರುವ ಅಲ್ಲೋಲಕಲ್ಲೋಲಗಳ ಬಗ್ಗೆ ತಲೆಕೆಡಿಸಿಯೇಕೊಂಡಿಲ್ಲ ಎನ್ನುವ ಸಾಕಷ್ಟು ಆರೋಪ ಸಾರಿಗೆ ನೌಕರರಿಂದ್ಲೇ ಕೇಳಿಬಂದಿದೆ.

ಕೊರೊನಾ ಲಾಕ್ ಡೌನ್ ವೇಳೆ ಕೊರೊನಾ ವಾರಿಯರ್ಸ್ ಗಳಾಗಿ ಕೆಲಸ ಮಾಡುತ್ತಿರುವವರಲ್ಲಿ ಬಿಎಂಟಿಸಿ ಸಿಬ್ಬಂದಿ ಕೂಡ ಒಬ್ರು.ನಿತ್ಯ ನೂರಾರು ಪ್ರಯಾಣಿಕರನ್ನು ಕರೆದೊಯ್ಯುವ ಅವರ ಯೋಗಕ್ಷೇಮದ ಬಗ್ಗೆ ತಲೆಕೆಡಿಸಿಕೊಂಡು ಕ್ರಮ ಕೈಗೊಳ್ಳೋದು ಮುಖ್ಯಸ್ಥೆಯಾಗಿ ಶಿಖಾ ಅವರ ಜವಾಬ್ದಾರಿ.ಆದ್ರೆ ಕೊರೋನಾ ಹೆಲ್ತ್ ಚೆಕಪ್ ಮಾಡಿಸದೆ ಕೆಲಸದ ಮೇಲೆ ದುಡಿಯುವಂತೆ ಮಾಡುತ್ತಿರುವುದು ಎಷ್ಟು ಸರಿ.

ಪಾಪ..ಇಲ್ನೋಡಿ ಈ ಡ್ರೈವರ್ ಪರಿಸ್ಥಿತಿ ಇನ್ನೂ ಶೋಚನೀಯ..ಗ್ಲೌಸನ್ನೇ ಕೊಡದೆ ಬಸ್ ಚಾಲನೆ ಮಾಡಿ ಎಂದು ಹೇಳಿ ಕಳುಹಿಸ್ತಿದ್ದಾರಂತೆ ಡಿಪೋ ಮ್ಯಾನೇಜರ್ಸ್
ಪಾಪ..ಇಲ್ನೋಡಿ ಈ ಡ್ರೈವರ್ ಪರಿಸ್ಥಿತಿ ಇನ್ನೂ ಶೋಚನೀಯ..ಗ್ಲೌಸನ್ನೇ ಕೊಡದೆ ಬಸ್ ಚಾಲನೆ ಮಾಡಿ ಎಂದು ಹೇಳಿ ಕಳುಹಿಸ್ತಿದ್ದಾರಂತೆ ಡಿಪೋ ಮ್ಯಾನೇಜರ್ಸ್

ಕೊರೊನಾ ಪಾಸಿಟಿವ್ ಇರುವಂಥ ಅದೆಷ್ಟೋ ಜನರೊಂದಿಗೆ ಟಿಕೆಟ್ ನೀಡುವ ವೇಳೆ ಸಂಪರ್ಕಕ್ಕೆ ಬರುವ ಸಾಧ್ಯತೆಗಳಿವೆ.ಇದರಿಂದ ಸೋಂಕು ಇವರಿಗೂ ಹರಡಿರುವ ಸಾಧ್ಯತೆಗಳಿವೆ.ಇದನ್ನು ಹೇಳಿಸಿಕೊಳ್ಳುವ ಮಟ್ಟದಲ್ಲಿ ಶಿಖಾ ಮೇಡಮ್ ಇಲ್ಲ.ಆದ್ರೆ ಅದೇಕೋ ಪದೇ ಪದೇ ಅವರ ಜವಾಬ್ದಾರಿಯನ್ನು ನೆನಪಿಸಿಕೊಡುವಂಥ ನಿರ್ಲಕ್ಷ್ಯವನ್ನು ಅವರು ತೋರುತ್ತಲೇ ಬಂದಿರುವುದು ದುರಾದೃಷ್ಟಕರ ಎನ್ತಾರೆ ಕೆಎಸ್ ಆರ್ ಟಿಸಿ ಸ್ಟಾಫ್ ವರ್ಕರ್ಸ್ ಯೂನಿಯನ್ ಮುಖಂಡ ಅನಂತ ಸುಬ್ಬರಾವ್.

 

ಇದಿಷ್ಟೇ ಅಲ್ಲ,ಬಿಎಂಟಿಸಿ ನೌಕರರಿಗೆ ಗ್ಲೌಸ್,ಸ್ಯಾನಿಟೈಸರ್,ಮಾಸ್ಕ್ ವಿತರಣೆಯಂತೂ ಸಮರ್ಪಕವಾಗಿ ನಡೆದೇ ಇಲ್ಲ.ಕೊಟ್ಟಿದ್ದರೂ ಅದು ಸೀಮಿತ ಸಂಖ್ಯೆಯಲ್ಲಿ ನೀಡಿದ್ದಾರೆ.ಇಂಥಾ ಸ್ಥಿತಿಯಲ್ಲಿ ಚಾಲಕರು ಹಾಗೂ ನಿರ್ವಾಹಕರು ತುಂಬಾ ಆತಂಕದಲ್ಲಿ ಕೆಲಸ ಮಾಡುವ ಸ್ಥಿತಿಗೆ ಸಿಲುಕಿದ್ದಾರೆ.ಇದೆಲ್ಲದರ ಬಗ್ಗೆ ಕಾಳಜಿ ವಹಿಸ್ಬೇಕಾದ ಶಿಖಾ ಮೇಡಮ್ ಸರ್ಕಾರ ತನಗೆ ವಹಿಸಿರುವ ಸೋಶಿಯಲ್ ಮೀಡಿಯಾದ ಹೊಣೆಗಾರಿಕೆಯಲ್ಲೇ ಬ್ಯುಸಿಯಾಗಿದ್ದಾರೆ.ಮೇಡಮ್ ಅವರ ಈ ನಿಷ್ಕಾಳಜಿ ಹಾಗು ನಿರ್ಲಕ್ಷ್ಯದಿಂದ ಡ್ರೈವರ್ಸ್ ಹಾಗೂ ಕಂಡಕ್ಟರ್ಸ್ ಅಕ್ಷರಶಃ ತಬ್ಬಲಿಗಳಾಗಿ ಹೋಗಿದ್ದಾರೆ.

Spread the love
Leave A Reply

Your email address will not be published.

Flash News