ಕಲಾವಿದರೇನು “ಭಿಕ್ಷುಕ”ರೇ ಸಿ.ಟಿ ರವಿ ಅವ್ರೇ? ನಿಮ್ಮಿಂದ ಪಡಿತರ ಪಡೆಯೊಕ್ಕೆ “ಡ್ರೆಸ್ ಕೋಡ್” ಅನಿವಾರ್ಯನಾ!

0
ವೇಷಭೂಷಣ ಹಾಕಿಸಿ ಪಡಿತರ ವಿತರಿಸಿದ ಸಚಿವ ಸಿ,ಟಿ ರ.ವಿ
ವೇಷಭೂಷಣ ಹಾಕಿಸಿ ಕಲಾವಿದರಿಗೆ  ಪಡಿತರ ವಿತರಿಸಿದ ಸಚಿವ ಸಿ,ಟಿ ರ.ವಿ

ಬೆಂಗಳೂರು:ಅಹಂಕಾರ ಇರಬೇಕು..ಆದ್ರೆ ಇಷ್ಟೊಂದಾ..ಇನ್ನೊಬ್ಬರ ಹಸಿವನ್ನು ಬಂಡವಾಳ ಮಾಡ್ಕೊಂಡು ತಮ್ಮ ಪ್ರಚಾರದ ಗೀಳು ತೀರಿಸಿಕೊಳ್ಳುವ ಮಟ್ಟಕ್ಕೆ ಅದು ಹೋಗ್ಬಾರ್ದು..ಕನ್ನಡ ಸಂಸ್ಕ್ರತಿ ಸಚಿವ ಸಿ.ಟಿ ರವಿ ಮಾಡಿದ್ದಾರೆನ್ನುವ ಘನಘೋರ ಅಪರಾಧಕ್ಕೆ ಇಷ್ಟೆಲ್ಲಾ ಹೇಳಬೇಕಾಯ್ತು ನೋಡಿ.

ಕೊರೋನಾ ಲಾಕ್ ಡೌನ್ ಸಮಯದಲ್ಲಿ ಕಲಾವಿದರು ಹಸಿವಿಂದ ಬಳಲ್ತಿದ್ದರೆ ಅವರಿಗೆ ಆಹಾರಧಾನ್ಯ ಪೂರೈಸುವ ಕೆಲಸವನ್ನು ಇಲಾಖೆ ಸಚಿವರಾಗಿ ಸಿ.ಟಿ ರವಿ ಮೊದ್ಲೇ ಮಾಡ್ಬೇಕಿತ್ತು.ಹಾಗೆ ಮಾಡಿದಿದ್ದರೆ ಅದು ಅವರ ದೊಡ್ಡತನ ಎನಿಸಿಕೊಳ್ತಿತ್ತು.ಆದ್ರೆ ಕಲಾವಿದರ ಹಸಿವು ಅವರ ಗಮನಕ್ಕೆ ಬರೊಕ್ಕೆ ಒಂದು ತಿಂಗಳೇ ಬೇಕಾಯ್ತು.ಅವ್ರು ಸತ್ತಿದ್ದಾರೋ ಬದುಕಿದ್ದಾರೋ ಎನ್ನುವುದನ್ನು ವಿಚಾರಿಸುವ ಕನಿಷ್ಟ ಸೌಜನ್ಯವನ್ನು ತೋರದೆ ಕೊನೆಗೆ ಹೇಗೂ ಅಡ್ಜೆಸ್ಟ್ ಆದ ದಿನಸಿ ವಿತರಿಸಲು ಮುಹೂರ್ತ ನಿಗಧಿ ಮಾಡಿದ್ದಾರೆ.

ಕಲಾವಿದರಿಗೆ ಹಾಗೆನೇ ದಿನಸಿ ಕೊಟ್ಟಿದ್ದರೆ ಸಚಿವರು ದೊಡ್ಡವರಾಗಿಬಿಡ್ತಿದ್ದರೇನೋ..ಆದ್ರೆ ಈ ಮಹಾನುಭಾವ ತಾನೊಬ್ಬ ಸಚಿವ..ತಾನ್ ಮಾಡ್ತಿರೋದು ಬಹುದೊಡ್ಡ ಕಾರ್ಯ ಎನ್ನುವುದನ್ನು ಬಿಂಬಿಸಲು ಕಲಾವಿದರಿಗೆ ಅವರ ವೇಷಭೂಷಣ ಸಮೇತ ಬಂದು ದಿನಸಿ ಪದಾರ್ಥ ತೆಗೆದುಕೊಂಡು ಹೋಗ್ಬೇಕೆಂದು ಹೇಳಿ,ಹಾಗೆಯೇ ಮಾಡಿದ್ದಾರೆನ್ನುವ ವಿಷಯ ಇದೀಗ ಕಲಾವಿದರ ವಲಯದಲ್ಲಿ ದೊಡ್ಡ ಾಕ್ರೋಶ ಮೂಡಿಸಿದೆ.

ಪಡಿತರಕ್ಕಾಗಿ ತಾಸುಗಟ್ಟಲೇ ಬಿಸಿಲಿನ ಝಳದಲ್ಲಿ ವೇಷಭೂಷಣ ಸಮೇತ ಕಾದು ನಿಂತ ಕಲಾವಿದರು
ಪಡಿತರಕ್ಕಾಗಿ ತಾಸುಗಟ್ಟಲೇ ಬಿಸಿಲಿನ ಝಳದಲ್ಲಿ ವೇಷಭೂಷಣ ಸಮೇತ ಕಾದು ನಿಂತ ಕಲಾವಿದರು
ಕನ್ನಡಪರ ಸಂಘಟನೆಗಳ ಒಕ್ಕೂಟದ ಅಧ್ಯಕ್ಷ ಕೆ.ನಾಗೇಶ್
ಕನ್ನಡಪರ ಸಂಘಟನೆಗಳ ಒಕ್ಕೂಟದ ಅಧ್ಯಕ್ಷ ಕೆ.ನಾಗೇಶ್

ಇಂದು ಅದೆಷ್ಟೋ  ಕಲಾವಿದರು ಹಸಿದ ಹೊಟ್ಟೆಯಲ್ಲಿ ದಿನದೂಡುವಂಥ ಸ್ತಿತಿಯಿದೆ.ಇಂಥದ್ದರಲ್ಲಿ ಅವರಿಗೆ ವೇಷಭೂಷಣ ಹಾಕಿಸಿಯೇ ಪಡಿತರ ವಿತರಿಸಿದ್ದು ಸಚಿವರ ವಿಕೃತಿ ಹಾಗೂ ಅಹಂನ ಪರಮಾವದಿ ಅಲ್ದೆ ಇನ್ನೇನು ಎನ್ನುವ ಕನ್ನಡಪರ ಸಂಘಟನೆಗಳ ಒಕ್ಕೂಟದ ಕೆ..ನಾಗೇಶ್, ..ಇಷ್ಟವಿಲ್ಲದಿದ್ದರೂ ಅದೆಷ್ಟೋ ಕಲಾವಿದರು ವಿವಿಧ ವೇಷಭೂಷಣ ತೊಟ್ಟು ಪಡಿತರ ಪಡೆದು ಹೋಗುವಾಗ ಸಚಿವರಿಗೆ ಹಿಡಿಶಾಪ ಹಾಕಿದ್ದಾರೆ  ಎಂದು ಕನ್ನಡ ಫ್ಲಾಶ್ ನ್ಯೂಸ್ ಗೆ ತಿಳಿಸಿದ್ದಾರೆ.

ಕಲಾವಿದರನ್ನು ಸರ್ಕಾರವೇನು ಬಿಕ್ಷುಕರಂತೆ ಕಾಣುತ್ತಿದೆಯೇ ಎಂದು ಪ್ರಶ್ನಿಸಿರುವ ಕಲಾವಿದರ ಒಕ್ಕೂಟ,ಸಚಿವರು ಕಲಾವಿದರನ್ನು  ಹೀಗೆ ವೇಷಭೂಷಣ ಸಮೇತ ಕರೆಯಿಸಿ ಪಡಿತರ ವಿತರಿಸಿದ್ದಾರೆನ್ನುವ ಸುದ್ದಿ ಮೊದ್ಲೇ ಗೊತ್ತಿದ್ದರೆ ಅದನ್ನು ಸ್ವೀಕರಿಸಲು ಬಿಡುತ್ತಿರಲಿಲ್ಲ,ಪಾಪ..ಹಸಿದ ಹಿನ್ನಲೆಯಲ್ಲಿ ತಮಗಾದ ಅವಮಾನ ಲೆಕ್ಕಿಸದೆ ಕಲಾವಿದರು ಪಡಿತರ ತೆಗೆದುಕೊಂಡು ಹೋಗಿದ್ದಾರೆ ಎಂದು ಕಲಾವಿದರ ದಯನೀಯ ಪರಿಸ್ಥಿತಿಯನ್ನು ಅನಾವರಣಗೊಳಿಸಿದ್ದಾರೆ ಕಲಾವಿದರ ಒಕ್ಕೂಟದ ನಾಗರಾಜ್.

ಪಡಿತರ ವಿತರಣೆಗೂ ಡ್ರೆಸ್ ಕೋಡ್ ನ್ನು ಪರಿಪಾಲಿಸುವಂತೆ ಕನ್ನಡ ಮತ್ತು ಸಂಸ್ಕ್ರತಿ ಇಲಾಖೆ ಕಲಾವಿದರನ್ನು ಬಲವಂತ ಮಾಡುತ್ತೆ ಎಂದ್ರೆ ಅದಕ್ಕಿಂತ ದೊಡ್ಡ ಅವಮಾನ ಮತ್ತೊಂದಿಲ್ಲ.ಇದು ಸಚಿವರ ಕೀಳು ಪ್ರಚಾರದ ಮನಸ್ಥಿತಿ ತೋರಿಸುತ್ತೆ ಎಂಬ ಆರೋಪ ಕೇಳಿಬರುತ್ತಿದೆ.ಅಷ್ಟೇ ಅಲ್ಲ,ಸಚಿವರು ಹಾಗೊಮ್ಮೆ ಮಾಡಿದ್ದೇ ನಿಜವಾದ್ರೆ ಬಹಿರಂಗವಾಗಿ ಕಲಾವಿದರ ಕ್ಷಮೆಯಾಚಿಸಬೇಕೆಂದು ನಾಗೇಶ್ ಒತ್ತಾಯಿಸಿದ್ದಾರೆ.ಇಲ್ಲವಾದಲ್ಲಿ ಲಾಕ್ ಡೌನ್ ಮುಗಿಯತ್ತಿದ್ದಂಗೆ ಸಿ,ಟಿ ರವಿ ವಿರುದ್ದ ಉಗ್ರ ಪ್ರತಿಭಟನೆ ನಡೆಸಬೇಕಾಗ್ತದೆ ಎಂದು ಎಚ್ಚರಿಸಿದ್ದಾರೆ.

Spread the love
Leave A Reply

Your email address will not be published.

Flash News