ಕಾಶಿ ವಿಶ್ವನಾಥನ ಸನ್ನಿಧಿಯಲ್ಲಿ ಅವಕಾಶ ನಿರಾಕರಣೆ-ಅರ್ಚಕರಿಂದ ರಸ್ತೆಯಲ್ಲೇ “ಸಪ್ತರ್ಷಿ ಆರತಿ “

0
ದೇವಸ್ಥಾನದೊಳಗೆ ನಡೆಯುತ್ತಿದ್ದ ಸಪ್ತರ್ಷಿ ಆರತಿ ವಿಧಿವಿಧಾನ
ದೇವಸ್ಥಾನದೊಳಗೆ ನಡೆಯುತ್ತಿದ್ದ ಸಪ್ತರ್ಷಿ ಆರತಿ ವಿಧಿವಿಧಾನ
ವಿಶ್ವಸ್ಥ ಮಂಡಳಿ ನಿರಾಕರಣೆ ಹಿನ್ನಲೆಯಲ್ಲಿ ದೇವಸ್ಥಾನದ ರಸ್ತೆಯಲ್ಲೇ ಸಪ್ತರ್ಷಿ ಆರತಿಯನ್ನು ನೆರವೇರಿಸುತ್ತಿರುವ ಅರ್ಚಕರು
ವಿಶ್ವಸ್ಥ ಮಂಡಳಿ ನಿರಾಕರಣೆ ಹಿನ್ನಲೆಯಲ್ಲಿ ದೇವಸ್ಥಾನದ ರಸ್ತೆಯಲ್ಲೇ ಸಪ್ತರ್ಷಿ ಆರತಿಯನ್ನು ನೆರವೇರಿಸುತ್ತಿರುವ ಅರ್ಚಕರು

ಕೊರೋನಾ ಲಾಕ್ ಡೌನ್ ಎಫೆಕ್ಟ್ ಈಗಾಗ್ಲೇ ಕಾಶಿ ವಿಶ್ವನಾಥನ ಸನ್ನಿಧಿಗೂ ತಟ್ಟಿದೆ.ದೇಗುಲದ ಬಾಗಿಲು ಈಗಾಗ್ಲೇ ಮುಚ್ಚಿರುವುದರಿಂದ ಪೂಕಾ ಕೈಂಕರ್ಯಗಳು ಸ್ಥಗಿತವಾಗಿವೆ,ಭಕ್ತಾಧಿಗಳು ಕೂಡ ದೇವರ ಸನ್ನಿಧಿಗೆ ಬರಲಿಕ್ಕಾಗದೆ ಕಂಗಾಲಾಗಿದ್ದಾರೆ.ಇದೆಲ್ಲದರ ನಡುವೆ ಭಕ್ತರಿಗೆ ಮತ್ತೊಂದು ಸುದ್ದಿ ಬರಿಸಿಡಿಲಂತೆ  ಎರಗಿದೆ.

ಕಾಶಿ ವಿಶ್ವನಾಥನ ಸನ್ನಿಧಿಯಲ್ಲಿ ಪರಂಪರಾನುಗತವಾಗಿ ಸಪ್ತರ್ಷಿ ಆರತಿ ನಡೆಯುತ್ತಿತ್ತು.ಇದು ಯಾವುದೇ ತೊಂದರೆ ತಕರಾರಿಲ್ಲದೆ ನಡೆಯುತ್ತಿತ್ತು ಕೂಡ.ಆದ್ರೆ ಸರ್ಕಾರದ ವಿಶ್ವಸ್ಥ ಮಂಡಳಿ ಸಪ್ತರ್ಷಿ ಆರತಿಗೆ ಅವಕಾಶ ನಿರಾಕರಿಸಿದೆ.ಇದರಿಂದ ಕಂಗಾಲಾದ ಅರ್ಚಕರು ಪರಿ ಪರಿಯಾಗಿ ಅವಕಾಶ ನೀಡುವಂತೆ ಮನವಿ ಮಾಡಿದ್ದಾರೆ.ಆದ್ರೆ ಸಧ್ಯದ ಸಂದರ್ಭದಲ್ಲಿ ಅವಕಾಶ ನೀಡೊಕ್ಕೆ ಆಗೊಲ್ಲ ಎಂದು ಕಡ್ಡಿಮುರಿದಂತೆ ಹೇಳಿರುವುದರಿಂದ ಏನ್ ಮಾಡ್ಬೇಕೆಂದು  ತೋಚದೆ ಚಿಂತಾಕ್ರಾಂತರಾಗಿದ್ದಾರೆ.

ದೇವಸ್ಥಾನದೊಳಗೆ ಸಪ್ತರ್ಷಿ ಮಾಡಲು ಅವಕಾಶ ನಿರಾಕರಿಸಿದರೇನು,ದೇವಸ್ಥಾನದ ಹೊರಭಾಗದಲ್ಲೇ ಪೂಜಾ ಕೈಂಕರ್ಯ ನೆರವೇರಿಸುತ್ತೇವೆ ಎಂದು ಪಟ್ಟುಹಿಡಿದು ಕೂಡ ಅರ್ಚಕ ಸಮುದಾಯ ದೇವಸ್ಥಾನ ದ ಸಮೀಪದ ರಸ್ತೆಯೊಂದರಲ್ಲೇ ಸಪ್ತರ್ಷಿ ವಿಧಿವಿಧಾನ ನೆರವೇರಿಸುವ ಮೂಲಕ ವಿಶ್ವಸ್ಥ ಮಂಡಳಿಗೆ ಸವಾಲಾಕಿದ್ದಾರೆ.ಅರ್ಚಕರ ಧೋರಣೆ ಹಾಗೂ ಧೈರ್ಯವನ್ನು ಭಕ್ತ ಸಮುದಾಯ ಪ್ರಶಂಶಿಸಿದೆ.

ಕಾಶಿ ವಿಶ್ವನಾಥನ ಸನ್ನಿಧಿಯಲ್ಲಿ ಅವಕಾಶ ನಿರಾಕರಣೆ-ಅರ್ಚಕರಿಂದ ರಸ್ತೆಯಲ್ಲೇ “ಸಪ್ತರ್ಷಿ ಆರತಿ “

Spread the love
Leave A Reply

Your email address will not be published.

Flash News