ಬೆಂಗಳೂರಿನ “ಹೆಣ್ಣೂರಿ”ನಲ್ಲಿ ಕೊರೋನಾ ಮರಣಮೃದಂಗ-ಮಹಿಳೆ ಬಲಿ-ರಾಜಧಾನಿಗೆ ಕಾದಿದೆಯಾ ಗಂಡಾಂತರ!

0

ಬೆಂಗಳೂರು:ರಾಜಧಾನಿ ಬೆಂಗಳೂರಿನಲ್ಲಿ ಕೊರೋನಾ ಅಟ್ಟಹಾಸ ಮುಗಿಯುವಂಗೆ ಕಾಣ್ತಿಲ್ಲ.ಕೊರೋನಾ ಇನ್ನೇನು ಕಂಟ್ರೋಲ್ ಗೆ ಬಂತು ಎಂದು ನೆಮ್ಮದಿಯಲ್ಲಿ ಲಾಕ್ ಡೌನ್ ಸಡಿಲಿಕೆ ಮಾಡಿದ ಬೆನ್ನಲ್ಲೇ ಕೊರೋನಾ ಸೋಂಕಿನ ಪ್ರಕರಣಗಳು ಹೆಚ್ಚಾಗುತ್ತಲಿರುವುದು ಆತಂಕ ಮೂಡಿಸಿದೆ.ಅದರ ಬೆನ್ನಲ್ಲೇ ಹೆಣ್ಣೂರಿನಲ್ಲಿ ಕೊರೋನಾ ಸೋಂಕಿತ ಮಹಿಳೆಯೊಬ್ಬಳು ಖಾಸಗಿ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾಳೆ.ಇದರಿಂದಾಗಿ ಹೆಣ್ಣೂರು ಹಾಗೂ ಸುತ್ತಮುತ್ತಲ ಪ್ರದೇಶದಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿದೆ. 

ಸಿಲಿಕಾನ್ ವ್ಯಾಲಿ ಬೆಂಗಳೂರಿಗೆ ಕೊರೋನಾ ಹಾಟ್ ಸ್ಪಾಟ್ ಎನ್ನುವ ಕುಖ್ಯಾತಿ ಬಂದೊದಗಿದೆ.ಇದಕ್ಕೆ ಕಾರಣ ಹತೋಟಿಗೆ ಬಾರದ ಕೊರೋನಾ ಪ್ರಕರಣ.ಪಾದರಾಯನಪುರ ಹಾಗೂ ಹೊಂಗಸಂದ್ರಕ್ಕೆ ಸೀಮಿತವಾಗಿದ್ದ ಈ ಆತಂಕ ಇದೀಗ ಬಿಬಿಎಂಪಿಯ ಹಗದೂರು  ವಾರ್ಡ್ ಗೆ ಶಿಫ್ಟ್ ಆದಂತಿದೆ.ಇಲ್ಲಿ ಸಂಭವಿಸಿರುವ 57ರ ಆಸುಪಾಸಿನ ಮಹಿಳೆಯ ಸಾವು  ಆತಂಕವನ್ನು ಇಮ್ಮಡಿಗೊಳಿಸಿದೆ.ತೀವ್ರ ಉಸಿರಾಟದ ಸಮಸ್ಯೆಯಿಂದ ಬಳಲುತ್ತಿದ್ದ ಆಕೆಗೆ ಕೊರೋನಾ ಸೋಂಕಿರುವುದು ದೃಢಪಟ್ಟಿದ್ದು.ಹೀಗಾಗಿ ಖಾಸಗಿ ಆಸ್ಪತ್ರೆಯಲ್ಲಿ ದಾಖಲಿಸಲಾಗಿತ್ತು.ಆದ್ರೆ ಆರೋಗ್ಯಸ್ಥಿತಿ ಕಂಟ್ರೋಲ್ ಗೆ ಬಾರದ ಹಿನ್ನಲೆಯಲ್ಲಿ ಕೊನೆಯುಸಿರೆಳೆದಿದ್ದಾಳೆ.ಆಕೆ ಸತ್ತಿರುವುದು ಕೊರೋನಾದಿಂದ್ಲೇ ಎಂದು ಬಿಬಿಎಂಪಿ ಮುಖ್ಯ ಆರೋಗ್ಯಾಧಿಕಾರಿ ಡಾ.ವಿಜಯೇಂದ್ರ ಕನ್ನಡ ಫ್ಲಾಶ್ ನ್ಯೂಸ್ ಗೆ ಸ್ಪಷ್ಟಪಡಿಸಿದ್ದಾರೆ.

ತೀವ್ರ ಉಸಿರಾಟದ ತೊಂದರೆಯಿಂದ ಬಳಲುತ್ತಿದ್ದ ಮಹಿಳೆಯ ಸ್ವಾಬ್ ಟೆಸ್ಟ್‌ನ್ನು ಹೈದರಾಬಾದ್‌ನ ಲ್ಯಾಬ್ ಗೆ ಕಳುಹಿಸಲಾಗಿತ್ತು.ಆಗ ವರದಿಯಲ್ಲಿ ಕೊರೋನಾ ಪಾಸಿಟಿವ್ ದೃಢಫಟ್ಟಿತ್ತು.ಈ ಹಿನ್ನಲೆಯಲ್ಲಿ ಮೇ.6 ರಂದು ಬೆಂಗಳೂರು ನಾರ್ಥ್ ಆಸ್ಪತ್ರೆ ಗೆ ಅಡ್ಮಿಟ್ ಮಾಡಲಾಗಿತ್ತು.ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದ ಮಹಿಳೆ ಇಂದು ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾಳೆ.ಇದರಿಂದಾಗಿ ಈಕೆಗೆಚಿಕಿತ್ಸೆ ನೀಡಿದ್ದ ಆಸ್ಪತ್ರೆಯ 7 ಸಿಬ್ಬಂದಿಯನ್ನು ಕ್ವಾರಂಟೈನ್ ಮಾಡಲಾಗಿದ್ದು ಜಿಲ್ಲಾಧಿಕಾರಿ ಶಿವಮೂರ್ತಿ ಅವರ ಆದೆಶದ ಮೇರೆಗೆ  15 ದಿನಗಳ ಕಾಲ ಆಸ್ಪತ್ರೆ ಬಂದ್ ಮಾಡಲಾಗಿದೆ. ಮಹಿಳೆಯ ಮೃತ ದೇಹವನ್ನು ಸಿ.ವಿ.ರಾಮನ್ ನಗರದ ಆಸ್ಪತ್ರೆಯಲ್ಲಿ ಇರಿಸಲಾಗಿದ್ದು,ಕುಟುಂಬಸ್ಥರಿಗೆ ಮೃತ ದೇಹ ರವಾನೆ ಮಾಡಿಲ್ಲ

zಮಹಿಳೆಯ ಸಾವಿನಿಂದ ಆಕೆಯ ಜೊತೆ ವಾರ್ಡ್ ನಲ್ಲಿದ್ದ ಏಳು ರೋಗಿಗಳಿಗೆ ಆತಂಕ ಶುರುವಾಗಿದೆ.ಹಾಗೆಯೇ ಆಕೆಯ ಜತೆಗಿದ್ದ  ಸಂಬಂಧಿಗಳಿಗೂ ಹೆದರಿಕೆ ಶುರುವಾಗಿದೆ. 25 ಜನರ ಪ್ರಥಮ ಸಂಪರ್ಕಿತರ ಪಟ್ಟಿ ಸಿದ್ದ ಮಾಡಲಾಗಿದ್ದು,ಹೆಣ್ಣೂರು ವಾರ್ಡ್ ನಲ್ಲಿ ಭೀತಿ ಶುರುವಾಗಿದೆ.ಆಸ್ಪತ್ರೆಯ ಸುತ್ತಮುತ್ತಲ ಪ್ರದೇಶವನ್ನು ಸೀಲ್ ಡೌನ್ ಮಾಡಲಾಗಿದೆ.ಬಿಬಿಎಂಪಿ ಆಯುಕ್ತ ಅನಿಲ್ ಕುಮಾರ್ ಹಾಗೂ ಜಿಲ್ಲಾಧಿಕಾರಿ ಶಿವಮೂರ್ತಿ ಅವರು ಈ ಬಗ್ಗೆ ಮಾತುಕತೆ ನಡೆಸಿದ್ದಾರೆನ್ನಲಾಗಿದ್ದು ಮುಂದೆ ಏನ್ ಕ್ರಮ ಕೈಗೊಳ್ಳಬೇಕೆನ್ನುವ ಚಿಂತೆಯಲ್ಲಿದ್ದಾರೆ.

ಕೊರೋನಾ ಇನ್ನೇನು ಕಂಟ್ರೋಲ್ ಗೆ ಬಂತೆನ್ನುವ ನಿಟ್ಸುಸಿರಿನಲ್ಲಿ ನೆಮ್ಮದಿಯಿಂದಿದ್ದ ಬೆಂಗಳೂರಿಗರಿಗೆ ಹೆಣ್ಣೂರಿನ ಮಹಿಳೆಯ ಸಾವು ಮತ್ತಷ್ಟು ಆತಂಕ ಹೆಚ್ಚಿಸಿದೆ. ಲಾಕ್ ಡೌನ್ ಸಡಿಲಿಕೆ ಆದ್ಮೇಲೆ ಜನ ಸಾಮಾಜಿಕ ಅಂತರ ಕಾಯ್ದುಕೊಳ್ಳದೆ ಬೇಕಾಬಿಟ್ಟಿ ಓಡಾಡುತ್ತಿರುವುದರಿಂದ ಕಂಗಾಲಾಗಿ ಹೋಗಿರುವ ಬಿಬಿಎಂಪಿ ಕಟ್ಟುನಿಟ್ಟಿನ ಕ್ರಮ ಜರುಗಿಸದೇ ಹೋದಲ್ಲಿ ಮತ್ತಷ್ಟು ಪ್ರಕರಣಗಳು ವರದಿಯಾಗುವುದರಲ್ಲಿ ಅನುಮಾನವೇ ಇಲ್ಲ ಎಂಬ ಸ್ಪೋಟಕ ಮಾಹಿತಿಯನ್ನು  ಆರೋಗ್ಯ ಇಲಾಖೆಯ ಮೂಲಗಳು ಕನ್ನಡ ಫ್ಲಾಶ್ ನ್ಯೂಸ್ ಗೆ ನೀಡಿವೆ.

Spread the love
Leave A Reply

Your email address will not be published.

Flash News