“ಕೊಬ್ಬಿದ ಕಾರ್ಪೊರೇಟರ್ ರಂಪಾಟಕ್ಕೆ ಕ್ಯಾರೆ ಎನ್ನದ “ಖಡಕ್” ಕಾಪ್ ಕುಮಾರಸ್ವಾಮಿ”

0
ಚಾಮರಾಜಪೇಟೆ ಠಾಣೆಯ ಖಡಕ್ ಇನ್ಸ್ ಪೆಕ್ಟರ್ ಕುಮಾರಸ್ವಾಮಿ
ಚಾಮರಾಜಪೇಟೆ ಠಾಣೆಯ ಖಡಕ್ ಇನ್ಸ್ ಪೆಕ್ಟರ್ ಕುಮಾರಸ್ವಾಮಿ
ಐ.ಡಿ ಕಾರ್ಡ್ ತೋರಿಸದೆ ರಾದ್ಧಾಂತ ಮಾಡಿದ ಕೆ.ಆರ್ ಮಾರ್ಕೆಟ್ ವಾರ್ಡ್ ಕಾರ್ಪೊರೇಟರ್ ನಾಜಿಮಾ ಖಾನಮ್
ಐ.ಡಿ ಕಾರ್ಡ್ ತೋರಿಸದೆ ರಾದ್ಧಾಂತ ಮಾಡಿದ ಕೆ.ಆರ್ ಮಾರ್ಕೆಟ್ ವಾರ್ಡ್ ಕಾರ್ಪೊರೇಟರ್ ನಾಜಿಮಾ ಖಾನಮ್

ಬೆಂಗಳೂರು:ಚಾಮರಾಜಪೇಟೆ ಎಂದ್ರೆ ಅದೇನ್  ಜಮೀರ್ ಅಹಮದ್ ರ ಭದ್ರಕೋಟೆನಾ..ಅಲ್ಲಿ ಅವರೇಳಿದ್ದೇ ಕಾನೂನಾ.. ನಡೆಯೋದಾ..ಹುಲ್ಲುಕಡ್ಡಿ ಅಲುಗಲಿಕ್ಕೂ ಜಮೀರ್ ಅಣತಿ ಬೇಕಾ.. ನೀಯತ್ತಾಗಿ ಬದುಕ್ಲಿಕ್ಕೂ ಅಲ್ಲಿ ಸಾಧ್ಯವಿಲ್ವಾ..ಇಂತದೊಂದಿಷ್ಟು ಪ್ರಶ್ನೆಗಳನ್ನು ಸೃಷ್ಟಿಸಿಬಿಟ್ಟಿದೆ ಶಾಸಕ ಜಮೀರ್ ಪ್ರತಿನಿಧಿಸುವ  “ರಿಪಬ್ಲಿಕ್ ಆಫ್ ಚಾಮರಾಜಪೇಟೆ”ಯ ಚಿತ್ರಣ.ಅಂಥಾ ಕೋಟೆಯನ್ನು ಬೇಧಿಸುವ ಮಾತಿರ್ಲಿ,ಎದೆಯುಬ್ಬಿಸಿ ಮಾತ್ನಾಡುವ ಧೈರ್ಯವೂ ಸಾಕಷ್ಟು ಪೊಲೀಸ್ ಅಧಿಕಾರಿಗಳಿಗೆ ಇಲ್ಲ.ಅಂತದ್ದರಲ್ಲಿ ಜಮೀರ್ ಅವರ ಬಲಗೈ ಭಂಟನ ಹೆಂಡತಿ ಹಾಗೂ  ಕಾರ್ಪೊರೇಟರ್ ಹೆಡೆಮುರಿ ಕಟ್ಟಲು ಮುಂದಾಗಿ ಸುದ್ದಿಯಲ್ಲಿದ್ದಾರೆ ಚಾಮರಾಜಪೇಟೆ ಪೊಲೀಸ್ ಠಾಣೆಯ ಇನ್ಸ್ ಪೆಕ್ಟರ್ ಖಡಕ್ ಆಫೀಸರ್ ಕುಮಾರಸ್ವಾಮಿ.

ಬೆಂಗಳೂರಿನ ಪಾರಂಪರಿಕ ಹಾಗೂ ಸಾಂಸ್ಕ್ರತಿಕ ಪ್ರದೇಶಗಳಲ್ಲಿ ಚಾಮರಾಜಪೇಟೆಯೂ ಒಂದು.ಆದ್ರೆ  ಅನೇಕ ವರ್ಷಗಳವರೆಗೆ ಆ ಭವ್ಯಪರಂಪರೆಯ ವೈಭವವನ್ನು ಉಳಿಸಿಕೊಂಡು ಬಂದಿದ್ದ ಚಾಮರಾಜ ಪೇಟೆ ಚಿತ್ರಣ ಈಗ ಬದ್ಲಾಗಿ ಹೋಗಿದೆ ಬಿಡಿ.ಇದಕ್ಕೆ ಬಹುತೇಕ  ಜಮೀರ್ ಅಹಮದ್  ಕಾರಣ ಎನ್ನೋದು ಗುಟ್ಟಿನ ಸಂಗತಿಯೇನಲ್ಲ.ಎಲ್ಲವೂ ತನ್ನ ಕಣ್ ಸನ್ನೆ-ಕೈ ಸನ್ನೆಯಲ್ಲೇ ನಡೆಯಬೇಕು ಎಂಬ ಮನಸ್ಥಿತಿ ಜಮೀರ್ ದು.ಇದು ಸಹಜವಾಗೇ ಅವರ ಹಿಂಬಾಲಕರು-ಬೆಂಬಲಿಗರಲ್ಲೂ ಬೆಳೆದುಬಿಟ್ಟಿದೆ.ಏನೇ ತಪ್ಪು ಮಾಡಿದ್ರೂ ಜಮೀರ್ ಅಹಮದ್ ಅವ್ರ ಹೆಸ್ರನ್ನು ಟ್ರಂಪ್ ಕಾರ್ಡ್ ನಂತೆ ಬಳಸಿಕೊಳ್ತಿದಾರೆ.ಅದಕ್ಕೆ ಅವಕಾಶ ಕೊಟ್ಟರೆ ಆ ಅಧಿಕಾರಿ ಇಂದ್ರಚಂದ್ರ.ನಿರಾಕರಿಸಿದ್ರೆ ಅವರಿಗೆ ಬೈಗುಳ-ಅವರ ವಿರುದ್ದ ಪ್ರತಿಭಟನೆ ಮೀರಿದ್ರೆ ಗೇಟ್ ಪಾಸ್..ಇದು ಜಮೀರ್ ಅಹಮದ್ ಎನ್ನುವ ಸರ್ವಾಧಿಕಾರಿ ಶಾಸಕನ ಕ್ಷೇತ್ರದ ಚಿತ್ರಣ.

ಲಾಕ್ ಡೌನ್ ಸಮಯದಲ್ಲಿ ವ್ಯಾಪಾರಸ್ಥರಿಗೆ ಆಹಾರ ಪೂರೈಸಿ ಮಾನವೀಯತೆ ಪ್ರದರ್ಶಿಸಿದ್ದ ಕುಮಾರಸ್ವಾಮಿ
ಲಾಕ್ ಡೌನ್ ಸಮಯದಲ್ಲಿ ವ್ಯಾಪಾರಸ್ಥರಿಗೆ ಆಹಾರ ಪೂರೈಸಿ ಮಾನವೀಯತೆ ಪ್ರದರ್ಶಿಸಿದ್ದ ಕುಮಾರಸ್ವಾಮಿ

ಇಂಥಾ ಸರ್ವಾಧಿಕಾರಿಯ ಕ್ಷೇತ್ರದಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡಿಕೊಳ್ಳುವುದು ಕೂಡಯಾವುದೇ ಪೊಲೀಸ್ ಅಧಿಕಾರಿಗೆ ನಿಜಕ್ಕೂ ಒಂದು ಸವಾಲು.ಜಮೀರ್ ಬೆಂಬಲಿಗರ ಕಾಟ-ಉಪಟಳ ಸಹಿಸಿ ಕೊಳ್ಳೋದು ಕೂಡ ಕಷ್ಟಕರವೇ.ಸಾಕಷ್ಟು ಅಧಿಕಾರಿಗಳು ಜಮೀರ್ ಗಿಂತ ಆತನ ಚೇಲಾಬಾಲಗಳ ಸಹಜವಾಸವೇ ಬೇಡ ಎಂದು ಬೇರೆಡೆ ವರ್ಗಾವಣೆ ಕೇಳಿಕೊಂಡು ಹೋಗಿದ್ದುಂಟು.ಆದ್ರೆ ಜಮೀರ್ ಕ್ಷೇತ್ರದ ಲ್ಲೇ ಉಳಿದುಕೊಂಡು ಯಾವುದೇ ಅಡೆತಡೆಗೆ ಜಗ್ಗದೆ ಕಾನೂನು ಸುವ್ಯವಸ್ಥೆ ಕಾಯ್ದುಕೊಂಡು ಹೋಗುತ್ತಿರುವ ಖಡಕ್ ಅಧಿಕಾರಿ  ಚಾಮರಾಜಪೇಟೆ ಠಾಣೆಯ ಇನ್ಸ್ ಪೆಕ್ಟರ್ ಕುಮಾರಸ್ವಾಮಿ ಮಾಡಿರುವ ಕೆಲಸ ಸಾರ್ವಜನಿಕವಾಗಿ ಪ್ರಶಂಸೆಗೆ ಪಾತ್ರವಾಗಿದೆ.ಕುಮಾರಸ್ವಾಮಿ ಅವರ ಟೆರರ್ ನೆಸ್ ಗೆ ಇಲಾಖೆಯಲ್ಲೂ ಮೆಚ್ಚುಗೆ ಮಾತು ಕೇಳಿಬಂದಿವೆ.

ಆಗಿದ್ದೇನು?..ಕೆ.ಆರ್ ಮಾರ್ಕೆಟ್ ಕೊರೋನಾ ಭೀತಿಗೆ ತತ್ತರಿಸುವ ಸೂಕ್ಷ್ಮ ವಾರ್ಡ್ ಗಳಲ್ಲೊಂದು.ಕೊರೊನಾ ಲಾಕ್ ಡೌನನ್ನು ಬಿಗಿಯಾಗಿ ಅಳವಡಿಸುವ ನಿಟ್ಟಿನಲ್ಲಿ ಆ ಭಾಗದ ಪೊಲೀಸರು ಪಡುತ್ತಿರುವ ಹರಸಾಹಸ ಪ್ರಶಂಸನೀಯ.ಅದರಲ್ಲೂ ಇದೆಲ್ಲದರ ಮುಂದಾಳತ್ವ ವಹಿಸಿಕೊಂಡು ಕುಮಾರಸ್ವಾಮಿ ಮಾಡುತ್ತಿರುವ ಕೆಲಸವನ್ನು ಒಂದ್ ಹಂತದಲ್ಲಿ ಜಮೀರ್ ಅವರೇ ಹಾಡಿ ಹೊಗಳಿದ್ದರು.ಕೀಪ್ ಇಟ್ ಅಪ್ ಎಂದಿದ್ರು.ಅಂತದ್ದರಲ್ಲಿ ಜಮೀರ್ ಬೆಂಬಲಿಗರು ಶಾಸಕರ ಹೆಸರಿಗೆ ಮಸಿ ಬಳಿಯುವುದಕ್ಕೆ ಏನೆಲ್ಲಾ ಮಾಡ್ಬೇಕೋ ಅದನ್ನೆಲ್ಲಾ ಮಾಡುತ್ತಲೇ ಬಂದಿದ್ದಾರೆ.

ಇಂಥಾ ಸಂದರ್ಭದಲ್ಲಿ ಕಾನೂನು ಸುವ್ಯವಸ್ಥೆ ಕಾಯ್ದುಕೊಳ್ಳಲು  ಮುಂದಾದ ಕುಮಾರಸ್ವಾಮಿ ವಿರುದ್ಧ ಜಮೀರ್ ಬೆಂಬಲಿಗರೆಂದು ಹೇಳಿಕೊಂಡ ಕೆಲ ಕಿಡಿಗೇಡಿಗಳು ದೊಡ್ಡ ರಾದ್ದಾಂತವನ್ನೇ ಸೃಷ್ಟಿಸಿದ್ದಾರೆ.ಇದೆಲ್ಲದರ ಮುಂದಾಳತ್ವ ವಹಿಸಿದ್ದವರು ಕೆ.ಆರ್ ಮಾರ್ಕೆಟ್ ವಾರ್ಡ್ ನ ಕಾರ್ಪೊರೇಟರ್ ನಾಜೀಮಾ ಖಾನಮ್ ಎನ್ನುವ ಹೊಣೆಗೇಡಿ ಮಹಿಳಾ ಕಾರ್ಪೊರೇಟರ್. ಕಾರ್ಪೊರೇಟರ್ ಆಗಿ ಕೆಲಸ ಮಾಡೋ ಯೋಗ್ಯತೆ ಇಲ್ಲದ ಈ ಮಹಾತಾಯಿಗೆ ಅವರ ಜವಾಬ್ದಾರಿಯನ್ನು ನೆನಪಿಸಿಕೊಟ್ಟಿದ್ದೇ ಕುಮಾರಸ್ವಾಮಿ ಮಾಡಿದ ದೊಡ್ಡ ತಪ್ಪು ಎನ್ನುವ ರೀತಿಯಲ್ಲಿ ಜನರನ್ನು ಕಟ್ಟಿಕೊಂಡು ಟಿಪ್ಪು ನಗರದಲ್ಲಿ ಆಕೆ ಪ್ರತಿಭಟನೆ ಮಾಡಿಸಿದ್ದಾರೆ.ಜಮೀರ್ ಬರುವವರೆಗೂ ಜಾಗ ಬಿಟ್ಟು ಕದಲೊಲ್ಲ ಎಂದು ಬಿಗಿಪಟ್ಟು ಹಿಡಿದು ಕೂತ್ ಬಿಟ್ಟಿದ್ದಾರೆ.ಯಾರೆಷ್ಟೇ ಹೇಳಿದ್ರೂ ಕೇಳದೆ ಜಮೀರ್ ಬರ್ಬೇಕು..ಅವರೇ ಫೈಸಲ್ ಮಾಡ್ಬೇಕು ಎಂದು ಸಣ್ಣ ಮಕ್ಕಳಂತೆ ರಚ್ಚೆ ಹಿಡಿದು ಕೂತಿದ್ರು.ಕಾರ್ಪೊರೇಟರ್ ತನ್ನ ತಪ್ಪಿಗೆ ತಿಪ್ಪೆ ಸಾರಿಸೊಕ್ಕೆ ಶಾಸಕ  ಜಮೀರ್ ಹೆಸರು ದುರ್ಬಳಕೆ ಮಾಡಿಕೊಂಡಿದ್ದು ಅಕ್ಷಮ್ಯ.

ಐಡೆಂಟಿಟಿ ಕಾರ್ಡ್ ಕೇಳಿದ್ದೆ ತಪ್ಪಾ?.. ಆದ್ರೆ ಸ್ಪಾಟ್ ನಲ್ಲಿ ಆಗಿದ್ದೇ ಬೇರೆ. ನಿನ್ನೆ ಚಾಮರಾಜಪೇಟೆ ವ್ಯಾಪ್ತಿಯಲ್ಲಿ ಒಂದು ಮರ್ಡರ್ ನಡೆದೋಗಿರುತ್ತೆ.ಆ ಸ್ಟೇಷನ್ ಲಿಮಿಟ್ಸ್ ನ ಇನ್ಸ್ ಪೆಕ್ಟರ್ ಆಗಿದ್ರಿಂದ ಕುಮಾರಸ್ವಾಮಿ ಆ ಕೇಸನ್ನು ಅಟೆಂಡ್ ಮಾಡಿ ಗಸ್ತಿನಲ್ಲಿದ್ದಾಗ ಟಿಪ್ಪು ನಗರ ವ್ಯಾಪ್ತಿಯಲ್ಲಿ ಗುಂಪು ಕಟ್ಟಿಕೊಂಡು ನಾಜಿಮಾ ಖಾನಮ್ ಬರುವಾಗ ಅವರನ್ನು ಅಡ್ಡಗಟ್ಟಿ ವಿಚಾರಿಸಿದ್ದಾರೆ.ತನ್ನನ್ನು ಕಾರ್ಪೊರೇಟರ್ ಎಂದು ಪರಿಚಯಿಸಿಕೊಂಡ ಆಕೆಗೆ ಐಡೆಂಟಿಟಿ ಕಾರ್ಡ್ ತೋರಿಸುವಂತೆ ಕುಮಾರಸ್ವಾಮಿ ಕೇಳಿದ್ದೇ ತಪ್ಪಾಯ್ತು ನೋಡಿ..ನಾನ್ ಕಾರ್ಪೊರೇಟರ್,ನನ್ನತ್ರ ಐಡೆಂಟಿಟಿ ಕಾರ್ಡ್ ಕೇಳ್ತೀರಾ…ನನ್ನ ಕೆಪಾಸಿಟಿ ಏನ್ ಅಂತಾ ಗೊತ್ತಾ….ಎಮ್ಮೆಲ್ಲೆ ಜಮೀರ್ ಅವರಿಗೆ  ಹೇಳಿಸಿ ಟ್ರಾನ್ಸ್ ಫರ್ ಮಾಡಿಸಿಬಿಡ್ತೇನೆ ಎಂದೆಲ್ಲಾ ಅವಾಜ್ ಹಾಕಿದ್ದಾರೆ.ಎಷ್ಟೇ ಪ್ರಚೋದನಾತ್ಮಕವಾಗಿ ಕಾರ್ಪೊರೇಟರ್ ಹಾಗೂ ಅವರ ಬೆಂಬಲಿಗರು ಮಾತ್ನಾಡಿದ್ರೂ ಸ್ವಲ್ಪವೂ ವಿಚಲಿತರಾಗದೆ ಕುಮಾರಸ್ವಾಮಿ ನಿಮ್ ಐಡೆಂಟಿಟಿ ಕಾರ್ಡ್ ತೋರಿಸಿ ಮೇಡಂ..ಎಂದು ಕೇಳುತ್ತಲೇ ಇದ್ದರು.ಐಡೆಂಟಿಟಿ ಕಾರ್ಡ್ ಕೇಳಿದ್ದೇ ಕುಮಾರಸ್ವಾಮಿ ಅವರ ತಪ್ಪೆನ್ನುವ ರೀತಿಯಲ್ಲಿ ಟ್ರೀಟ್ ಮಾಡಿದ ಕಾರ್ಪೊರೇಟರ್ ಖಾನಮ್..ನಾಳೆ ನೋಡ್ ಏನ್ ಮಾಡ್ತೇನೆ ಎಂದು ಚೇತಾವ್ನಿ ಕೊಟ್ಟು ಕಾಲ್ಕಿತ್ತಿದ್ದಾರೆ.ಇದರ ವಿವರಣೆಯನ್ನು ತಕ್ಷಣವೇ  ಮೇಲಾಧಿಕಾರಿಗಳಿಗೆ ಕುಮಾರಸ್ವಾಮಿ ನೀಡಿದ್ದರಲ್ಲದೇ ಕಾರ್ಪೊರೇಟರ್ ತಮ್ಮ ಜತೆ ನಡೆದುಕೊಂಡ ರೀತಿಯನ್ನು ಮೊಬೈಲ್ ನಲ್ಲಿ ಸಾಕ್ಷ್ಯವಾಗಿ ಚಿತ್ರೀಕರಿಸಿಟ್ಟುಕೊಂಡಿದ್ದಾರೆ.

ಕುಮಾರಸ್ವಾಮಿ ಎಂದ್ರೆ ಕೆ.ಆರ್ ಮಾರ್ಕೆಟ್ ವ್ಯಾಪ್ತಿಯ ವ್ಯಾಪಾರಿಗಳಿಗೆ ಆಪದ್ಬಾಂಧವ ರೀತಿ..
ಕುಮಾರಸ್ವಾಮಿ ಎಂದ್ರೆ ಕೆ.ಆರ್ ಮಾರ್ಕೆಟ್ ವ್ಯಾಪ್ತಿಯ ವ್ಯಾಪಾರಿಗಳಿಗೆ ಆಪದ್ಬಾಂಧವ-ಸಹೋದರ ಭಾವ..

ಪ್ರತಿಭಟನೆ ನಡೆಸಿದ್ರೂ ರಾಜಿಯ ಮಾತಿಲ್ಲ.. ಮಾರನೇ ದಿನ ಬೆಳಗಾಗ್ತಿದ್ದಂಗೆ ಇಡೀ ಟಿಪ್ಪೂ ನಗರವನ್ನೇ ಒಂದಾಗಿಸಿಕೊಂಡು ಕಾರ್ಪೊರೇಟರ್ ನಾಜಿಮಾ ಖಾನಮ್ ಪ್ರತಿಭಟನೆ ನಡೆಸಿದ್ದಾರೆ.ಮೇಲಾಧಿಕಾರಿಗಳು ಬಂದ್ರೂ ಕೇ್ರ್ ಮಾಡದೆ ಪ್ರತಿಭಟನೆ ವಾಪಸ್ ಪಡೆಯಲಿಲ್ಲ.ಜಮೀರ್ ಬರ್ಲಿ,ಅವರು ಬಂದು ರಾಜಿ ಪಂಚಾಯ್ತಿ ಮಾಡೋವರೆಗೂ ಜಾಗ ಬಿಟ್ಟು ಕದಲೊಲ್ಲ ಎಂದು ಪಟ್ಟುಹಿಡಿದ್ರು.ಆದ್ರೆ ಜಮೀರ್ ಗೆ ವಿಷಯ ಗೊತ್ತಿದ್ದರಿಂದ ಹೆಚ್ಚು ತಲೆ ಹಾಕದೆ ವಿಷಯವನ್ನು ಕೂಲ್ ಮಾಡಿಸಿದ್ದಾರೆ.(ಪಾದರಾಯನಪುರ ಕಿಡಿಗೇಡಿಗಳ ಕೃತ್ಯ ಬೆಂಬಲಿಸಿ ಇಕ್ಕಟ್ಟಿಗೆ ಸಿಲುಕಿದ್ದ ಜಮೀರ್,ಈ ವಿಷಯದಲ್ಲಿ ತಲೆ ಹಾಕಿ ಮತ್ತೊಂದು ವಿವಾದ ಮೈ ಮೇಲೆ ಎಳೆದುಕೊಳ್ಳಲು ಸಿದ್ಧವಿರಲಿಲ್ಲ).

ಆದ್ರೆ ಇಲ್ಲಿ ಗಮನಿಸ್ಬೇಕಾದ ವಿಷಯ ಎಂದ್ರೆ ಪರಿಸ್ತಿತಿ ಸೂಕ್ಷ್ಮವಾಗಿರುವ ಸಂದರ್ಭದಲ್ಲಿ ಒಂದಷ್ಟು ನಿಯಮ ಪಾಲನೆಗೆ ಪೊಲೀಸ್ ಇಲಾಖೆ ಕಟ್ಟಪ್ಪಣೆ ಮಾಡಿದೆ.ಅದನ್ನು ಪಾಲಿಸಬೇಕಾಗಿರುವುದು ಪ್ರತಿಯೋ ರ್ವರ ಕರ್ತವ್ಯ.ಅದರ ಮೇಲುಸ್ತುವಾರಿ ನೋಡಿಕೊಳ್ಳುವ ಹೊಣೆಗಾರಿಕೆಯನ್ನು ಪೊಲೀಸರಿಗೆ ಸರ್ಕಾರ ನೀಡಿದೆ.ಜಮೀರ್ ಕೃಪಕಟಾಕ್ಷವಿದೆ ಎನ್ನುವ ಅಹಂನಲ್ಲಿ ನಿಯಮ ಧಿಕ್ಕರಿಸಲು ಮುಂದಾದಂಥವ್ರನ್ನು ಕಾನೂನಿನ ಚೌಕಟ್ಟಿನಲ್ಲಿ ಪ್ರಶ್ನಿಸಿ ಅವರ ತಪ್ಪಿನ ಮನವರಿಕೆ ಮಾಡಿಕೊಟ್ಟಿದ್ದು ಕುಮಾರಸ್ವಾಮಿ ಅವರ ತಪ್ಪಾ ಗೊತ್ತಾಗ್ತಿಲ್ಲ.ಒಬ್ಬ ಪೊಲೀಸ್ ಅಧಿಕಾರಿಯಾಗಿ ತನ್ನ ಕರ್ತವ್ಯ ಮಾಡಿದ್ದಕ್ಕೆ ಜನರ ಆಕ್ರೋಶಕ್ಕೆ ತುತ್ತಾಗ್ಬೇಕಾಯಿತು ಕುಮಾರಸ್ವಾಮಿ.ಆದ್ರೆ ಕರ್ತವ್ಯಪಾಲಿಸಿದ ಆತ್ಮತೃಪ್ತಿ ನನಗಿದೆ ಎಂದು ಆತ್ಮೀಯರ ಬಳಿ ಅವರು ಹೇಳಿಕೊಂಡಿದ್ದಾರೆ.

ಟ್ರ್ಯಾಕ್ ರೆಕಾರ್ಡ್ ನಲ್ಲಿ ಬ್ಲಾಕ್ ಸ್ಪಾಟ್ ಗಳಿಲ್ಲ: ಕುಮಾರಸ್ವಾಮಿ ಒಬ್ಬ ದಕ್ಷ-ಪ್ರಾಮಾಣಿಕ ಅಧಿಕಾರಿ ಎನ್ನುವುದರಲ್ಲಿ ಅನುಮಾನವೇ ಇಲ್ಲ.ಅವರ ಟ್ರ್ಯಾಕ್ ರೆಕಾರ್ಡೇ ಇದನ್ನು ಸಾರಿ ಹೇಳುತ್ತದೆ.ಮಲೆನಾಡಿನ ಚಿಕ್ಕಮಗಳೂರು ಜಿ್ಲ್ಲೆ ಬಿರೂರಿನವರಾದ ಕುಮಾರಸ್ವಾಮಿ ಸಮಾಜದಲ್ಲಿ ಕಾನೂನಿನ ಮೂಲಕ ಸುಧಾರಣೆ ತರಬೇಕೆನ್ನುವ ಹಿರಿದಾಸೆಯಲ್ಲಿ ಇಲಾಖೆ ಸೇರಿಕೊಂಡವರು.ಪೀಣ್ಯಾ ಠಾಣೆಯಲ್ಲಿ ಪ್ರೊಬೆಷನರಿಯಾಗಿ ಕೆಲಸ ಮಾಡಿದ್ಮೇಲೆ, ಹೊನ್ನಾಳಿ,ಸಕಲೇಶಪುರ,ಪಟ್ಟನಾಯಕನ ಹಳ್ಳಿ ಠಾಣೆಗಳಲ್ಲಿ ಕೆಲಸ ಮಾಡಿ ಜನಾನುರಾಗಿ ಎನಿಸಿಕೊಂಡವ್ರು.

ಕುಮಾರಸ್ವಾಮಿ ಅವರ ಕಾರ್ಯವೈಖರಿ ಹಾಗೂ ದಕ್ಷತೆಗೆ ಕನ್ನಡಿಯಾದದ್ದು ಅವರು ಲೋಕಾಯುಕ್ತದಲ್ಲಿದ್ದಾಗ ಲೋಕಾಯುಕ್ತ ಭಾಸ್ಕರರಾವ್ ವಿರುದ್ಧದ ಪ್ರಕರಣದ ತನಿಖೆಯ ತಂಡದಲ್ಲಿದ್ದ ಕುಮಾರಸ್ವಾ ಮಿ ಆ ಪ್ರಕರಣದ ಬೆನ್ನತ್ತಿ ಹೆಕ್ಕಿ ತಂದ ಸ್ಪೋಟಕ ಸತ್ಯಗಳು ಅದೆಷ್ಟೋ..ಅವುಗಳನ್ನು ಗಂಭೀರವಾಗಿ ಪರಿಗಣಿಸಿದ್ದೇ ಆಗಿದ್ರೆ ಪ್ರಕರಣಕ್ಕೆ ಸ್ಪೋಟಕ ತಿರುವು ಸಿಗ್ತಿತ್ತು.ಲೋಕಾಯುಕ್ತದಲ್ಲಿದ್ದಾಗ ಅವರ ವರ್ಕಾಲಿಕ್ ನೇಚರ್ ಹಾಗೂ ಕಾರ್ಯತತ್ಪರತೆ ದಂಗುಬಡಿಸಿತ್ತು.ನನ್ನ ಎಕ್ಸ್ ಪೀರಿಯನ್ಸ್ ನಲ್ಲಿ ನೋಡಿದ ಕೆಲವೇ ಕೆಲವು ಪ್ರಾಮಾಣಿಕ ಅಧಿಕಾರಿಗಳಲ್ಲಿ ಕುಮಾರಸ್ವಾಮಿ ಒಬ್ರು” ಎಂದು ಅವರ ಒಡನಾಟದ ದಿನಗಳನ್ನು ಕನ್ನಡ ಫ್ಲಾಶ್ ನ್ಯೂಸ್ ಜತೆಗೆ ಹಂಚಿಕೊಳ್ತಾರೆ ಸಾಮಾಜಿಕ ಕಾರ್ಯಕರ್ತ ಸಾಯಿದತ್ತಾ.

ಸಿಬ್ಬಂದಿಯನ್ನು ಕುಟುಂಬದಂತೆ ಕಾಣುವ ಜನಾನುರಾಗಿ... ಲೋಕಾಯುಕ್ತದಿಂದ  ಕುಮಾರಸ್ವಾಮಿ ಅವರು ನೇರವಾಗಿ ಬಂದಿದ್ದು ಕಾಟನ್ ಪೇಟೆ ಪೊಲೀಸ್ ಠಾಣೆಗೆ. ಅವರು ದಕ್ಷತೆಯ ಜತೆಗೆ ಮಾನವೀಯ ಕಳಕಳಿ-ಸಹಾನುಭೂತಿಯ ಅಧಿಕಾರಿಯೂ ಹೌದು. ಮಾನವೀಯ ಸಂಬಂಧಗಳ ಬಗ್ಗೆ ತುಡಿತವಿದ್ದುದ್ದರಿಂದ್ಲೇ ಅವರು ಠಾಣೆಯ ಪ್ರತಿಯೋರ್ವ ಸಿಬ್ಬಂದಿಯ ಹುಟ್ಟುಹಬ್ಬವನ್ನು ಕೇಕ್ ಕತ್ತರಿಸಿ ಠಾಣೆಯಲ್ಲಿ ಆಚರಿಸಿ ಅವರಿಗೆ ರಜೆ ನೀಡುವ ಸಂಪ್ರದಾಯ ಜಾರಿಗೊಳಿಸಿದ್ರು.ಅದು ಇಂದೂ ಮುಂದುವರೆದುಕೊಂಡು ಬಂದಿದೆ.ಅದಿಷ್ಟೇ ಅಲ್ಲ,ಯಾವ್ದೇ ಠಾಣೆಯಲ್ಲಿ ಕೆಲಸ ಮಾಡಿದ್ರೂ ಅಲ್ಲಿನ ಪ್ರತಿಯೋರ್ವ ಸಿಬ್ಬಂದಿಯನ್ನು ತನ್ನ ಕುಟುಂಬದ ಸದಸ್ಯ ಎನ್ನುವ ರೀತಿಯಲ್ಲಿ ಟ್ರೀಟ್ ಮಾಡುವ ಹೃದಯವಂತಿಕೆ ತಮ್ಮ ಸಾಹೇಬರದು ಎಂದು ಸಿಬ್ಬಂದಿ ಹೇಳುವಾಗ ಎಲ್ಲರಿಗೂ ಅಂಥಾ ಅಂತಃಕರಣವಿದ್ದರೆ ಎಷ್ಟು ಚೆನ್ನಾಗಿರುತ್ತಲ್ವಾ ಎಂದೆನಿಸುತ್ತೆ.

ಹೀಗೆ ತನ್ನ ವೃತ್ತಿಯುದ್ದಕ್ಕೂ ಕರ್ತವ್ಯನಿಷ್ಠೆ-ಪ್ರಾಮಾಣಿಕತೆ-ದಕ್ಷತೆಯಿಂದ ಖಡಕ್  ಹಾಗೂ ಮಾನವೀಯ ಗುಣಗಳಿಂದ್ಲೇ ಜನಾನುರಾಗಿ ಅಧಿಕಾರಿ ಎಂದೇ ಕರೆಯಿಸಿಕೊಂಡಿರುವ ಕುಮಾರಸ್ವಾಮಿ ಮಹಾನ್ ದುರಂಹಕಾರಿ,ಬೇಜವಾಬ್ದಾರಿಯುತ ಹಾಗು ಉಡಾಫೆಯ ಕಾರ್ಪೊರೇಟರ್ ನಾಜಿಮಾ ಖಾನಮ್  ಅವರ ನಿರ್ಲಕ್ಷ್ಯ ಪ್ರಶ್ನಿಸಿ ಸುದ್ದಿಯಾಗಿದ್ದಾರೆ.ಒಂದೊಳ್ಳೆಯ ಕಾರಣಕ್ಕೆ ಇಡೀ ವ್ಯವಸ್ಥೆಯನ್ನು ಎದುರಾಕಿಕೊಂಡ ಕುಮಾರಸ್ವಾಮಿ ಅವರಂಥ ಪ್ರಾಮಾಣಿಕರನ್ನು ರಕ್ಷಿಸುವ ಬಾಧ್ಯಸ್ಥಿಕೆಯನ್ನು ಇಲಾಖೆಯ ಮೇಲಾಧಿಕಾರಿಗಳು ತೋರಬೇಕಿದೆ.ಎಲ್ಲಾ ಹಂತಗಳಲ್ಲೂ ನೈತಿಕ ಸ್ಥೈರ್ಯ ಕೊಡ್ಬೇಕಿದೆ.

Spread the love
Leave A Reply

Your email address will not be published.

Flash News