ಟ್ರೆಂಡ್ ಸೆಟ್ಟರ್  “ಓಂ” ಬರದಿದ್ರೆ ಶಿವಣ್ಣ ಸೂಪರ್ ಹೀರೋ ಆಗ್ತಿರಲಿಲ್ಲ..ಉಪೇಂದ್ರನ ಉದಯವಾಗ್ತಿರಲಿಲ್ಲ.. ಸಾರ್ವಕಾಲಿಕ ಅತ್ಯದ್ಭುತ “ದೃಶ್ಯಕಾವ್ಯ”ವೇ ಸೃಷ್ಟಿಯಾಗ್ತಿರಲಿಲ್ಲ..

0

ಮೇ.19,1995..

ಕನ್ನಡ ಚಿತ್ರರಂಗ ಎಂದಿಗೂ ಮರೆಯೊಕ್ಕಾಗದ ದಿನ.ಸುವರ್ಣಾಕ್ಷರಗಳಲ್ಲಿ ಬರೆದಿಡುವಂಥ ಸುದಿನ. ಸದಾ ಚರಿತ್ರಾರ್ಹವಾಗುವಂಥ ಘಟನೆಯೊಂದಕ್ಕೆ ನಾಂದಿ ಹಾಡಿದ ದಿನವದು..ಇದೆಲ್ಲಾ ಸಾಧ್ಯವಾಗಿದ್ದು ಹ್ಯಾಟ್ರಿಕ್ ಹೀರೋ ನಟನೆಯ,ರಿಯಲ್ ಸ್ಟಾರ್ ಉಪೇಂದ್ರ ನಿರ್ದೇಶನದ “ಓಂ” ಚಿತ್ರ..ಅಂದಿನಿಂದ ಈ 25 ವರ್ಷಗಳ   “ಓಂ”ನ ಪಯಣದುದ್ದಕ್ಕೂ ನಡೆದೋಗಿರೋದೆಲ್ಲಾ ಇತಿಹಾಸ ಬಿಡಿ..

ಯೆಸ್..ಓಂ ಚಿತ್ರಕ್ಕೆ ಇಂದು 25 ವರ್ಷ.ಇದೇ ದಿನದ 25 ವರ್ಷದ ಹಿಂದೆ ಬೆಳ್ಳಿತೆರೆಗೆ ಸುನಾಮಿಯಂತೆ ಅಪ್ಪಳಿಸಿ,ಎಲ್ಲಾ ದಾಖಲೆ-ಗಣಿತ-ಲೆಕ್ಕಾಚಾರ-ಫಾರ್ಮುಲಾಗಳನ್ನೆಲ್ಲಾ ಬುಡಮೇಲು ಮಾಡಿ ಹೊಸ ಟ್ರೆಂಡ್ ಸೃಷ್ಟಿಸಿದ ಚಿತ್ರ ಓಂ. ಶಿವರಾಜ್ ಕುಮಾರ್ ಅವ್ರ ಇಮೇಜ್ ಬದ್ಲಿಸಿದ,ಉಪೇಂದ್ರನಂಥ ಮಹಾನ್ ನಿರ್ದೇಶಕನ ಉದಯಕ್ಕೆ ಕಾರಣವಾದ ಚಿತ್ರ ಇದು.ಈ ಸಿನೆಮಾ ಮಾಡಿದ್ರೆ ಸಾಕು ಇನ್ ಮನೆಯಲ್ಲಿದ್ದುಬಿಡ್ತೇನೆಂಬ ಲೆಕ್ಕಾಚಾರ ಮಾಡ್ಕೊಂಡಿದ್ಗಂಥ ಪ್ರೇಮಾ ಎನ್ನುವ ನಟಿಯನ್ನು ದಶಕಗಳ ಕಾಲ ಬ್ಯುಸಿಯಿರುವಂತೆ ಮಾಡಿ ಸ್ಟಾರ್ ನಟಿಯನ್ನಾಗಿ ರೂಪಿಸಿದ ಚಿತ್ರ “ಓಂ”.ಹಾಗಾಗಿಯೇ “ಓಂ”ಗೆ “ಓಂ” ನೇ ಸಾಟಿ..ಇದು ಕನ್ನಡ ಚಿತ್ರರಂಗದ ಮಟ್ಟಿಗೆ  ಸಾರ್ವಕಾಲಿಕ ಅತ್ಯದ್ಭುತ ದೃಶ್ಯಕಾವ್ಯ.

ತುಂಬಾ ಇಷ್ಟಪಟ್ಟು ಚಿತ್ರ ನಿರ್ಮಾಣಕ್ಕೆ ಮುಂದಾದ ದೊಡ್ಡಮನೆ ಕುಟುಂಬದ ಯಜಮಾನ ಡಾ.,ರಾಜಣ್ಣ ಅವ್ರೇ ಅತ್ಯಂತ ಸಂತೋಷದಿಂದ ಕ್ಲಾಪ್ ಮಾಡಿದ ಸನ್ನಿವೇಶ
ತುಂಬಾ ಇಷ್ಟಪಟ್ಟು ಚಿತ್ರ ನಿರ್ಮಾಣಕ್ಕೆ ಮುಂದಾದ ದೊಡ್ಡಮನೆ ಕುಟುಂಬದ ಯಜಮಾನ ಡಾ.,ರಾಜಣ್ಣ ಅವ್ರೇ ಅತ್ಯಂತ ಸಂತೋಷದಿಂದ ಕ್ಲಾಪ್ ಮಾಡಿದ ಸನ್ನಿವೇಶ

ಮನೆಗೆ ಬರುತ್ತಿದ್ದ ತನ್ನ ಅಣ್ಣನ ಸ್ನೇಹಿತ “ಸತ್ಯಾ” ನ ಪ್ರೇಮ-ಗಲಾಟೆ-ಸಂಘರ್ಷವನ್ನೆಲ್ಲಾ  ಕ್ರೋಢಿಕರಿಸಿ ಕಾಲೇಜ್ ದಿನಗಳಲ್ಲೇ ಸ್ಟೋರಿ ತಯಾರಿಸಿಟ್ಟುಕೊಂಡಿದ್ದರು ಉಪೇಂದ್ರ. ಇದನ್ನೇ ಸಿನೆಮಾ ಮಾಡ್ತೀನಿ ಎಂದಾಗ ಬೇರೆಯವರಿರಲಿ, ಜತೆಯಲ್ಲಿದ್ದವರೇ ತಲೆಗೆ ಹೊಡೆದಿದ್ದರಂತೆ. ಆದ್ರೆ ಅವತ್ತಿಗೆ ಅವರಾಡಿದ ಮಾತಿಗೆ ತಲೆಕೆಡಿಸಿಕೊಂಡಿದಿದ್ದರೆ ಏನಾಗ್ತಿತ್ತು ನೀವೇ ಊಹಿಸಿ.

ಆದ್ರೆ ಬೈಯ್ಯೋರೇ..ನಮ್ಮ ಮಾರ್ಗದರ್ಶಕರು,ಪ್ರೇರಣೆ ನೀಡೋರು ಎಂಬ ಸಿದ್ಧಾಂತದ ಉಪೇಂದ್ರ  ಇದಕ್ಕೆಲ್ಲಾ ಸೊಪ್ಪಾಕದೆ ತಾನು ಸಿದ್ಧಪಡಿಸಿಟ್ಟುಕೊಂಡಿದ್ದ ಸ್ಕ್ರಿಪ್ಟ್ ಗೆ  ಸೂಕ್ತ ನಿರ್ಮಾಪಕರ ತಲಾಷ್ ಪ್ರಾರಂಭಿಸಿದ್ರು.ಉಪೇಂದ್ರರ ಬೆವರಿನ ಪರಿಶ್ರಮ ಕೈ ಕೊಡಲಿಲ್ಲ.ಒಳ್ಳೆಯ ಹಾಗೂ ಪ್ರಯೋಗಾತ್ಮಕ ಚಿತ್ರಗಳಿಗೆ ಯಾವತ್ತೂ “ನೋ” ಎನ್ನದ “ದೊಡ್ಡಮನೆ”ಯವ್ರಿಗೆ ಈ ಸಂಗತಿ ಗೊತ್ತಾಗಿದ್ದೇ ತಡ, ಡಾ.ರಾಜ್ ಹಾಗೂ  ಸಹೋದರ ವರದಪ್ಪ ಕಥೆ ಹೇಳೊಕ್ಕೆ ಕರೆದು ಕಳುಹಿಸಿದ್ರು.

ಆಡಿಕೊಂಡವರೇ ಹೆಚ್ಚು-ಆದ್ರೆ ದೊಡ್ಡಮನೆ ನನ್ ಕೈ ಬಿಡ್ಲಿಲ್ಲ: ಮೊದಲೇ ಹೇಳಿದಂತೆ ಭೂಗತ ಜಗತ್ತಿನ ರೌಡಿಯಿಸಂ ಕಥೆಯೊಂದನ್ನು ಉಪೇಂದ್ರ ಸಿದ್ದಪಡಿಸಿಟ್ಟುಕೊಂಡಿದ್ದಾರೆನ್ನುವ ಸಂಗತಿ ಗಾಂಧೀನಗರದಲ್ಲಿ ಕೇಳಿಬಂದಾಗ ಮೂಗುಮುರಿದವರೇ ಹೆಚ್ಚು.ರೌಡಿಯಿಸಂ ಚಿತ್ರನಾ..ವರ್ಕೌಟ್ ಆಗೋ ಛಾನ್ಸೇ ಇಲ್ಲ ಎಂದು ಮಾತ್ನಾಡಿಕೊಂಡವ್ರೇ ಬಹಳ..ಆದ್ರೆ “ತರ್ಲೆ ನನ್ಮಗ” ಹಾಗೂ “ಶ್ “ಎನ್ನುವ ಚಿತ್ರಗಳನ್ನು ಮಾಡಿ ತನ್ನ ಕೆಪಾಸಿಟಿಯನ್ನು ಪ್ರೂವ್ ಮಾಡಿದ್ದ ಉಪೇಂದ್ರ ರ ಬಗ್ಗೆ ನಂಬಿಕೆ ಇದ್ದಿದ್ದು ಕೇವಲ ದೊಡ್ಡಮನೆಯ ಯಜಮಾನ ಡಾ,ರಾಜ್ ಕುಮಾರ್ ಗೆ.ಈ  ಕುದಿರಕ್ತದ ಹುಡುಗನ ಮುಖದಲ್ಲಿ ಏನೋ ತೇಜಸ್ಸಿದೆ.ಆತನಲ್ಲಿಅಗಾಧ ಪ್ರತಿಭೆ ಇದೆ ಎಂದು ಭಾವಿಸಿದ್ರು ರಾಜಣ್ಣ.

ತೆಲುಗಿನಲ್ಲಿ ಓಂಕಾರಂ ಆಗಿ ರಿಮೇಕ್ ಆದ ಚಿತ್ರದಲ್ಲಿ ಶಿವಣ್ಣರ ರಗಡ್ ಪಾತ್ರವನ್ನು ಡಾ.ರಾಜ್ ಶೇಖರ್ ನಿಭಾಯಿಸಿದ್ದರು.
ತೆಲುಗಿನಲ್ಲಿ ಓಂಕಾರಂ ಆಗಿ ರಿಮೇಕ್ ಆದ ಚಿತ್ರದಲ್ಲಿ ಶಿವಣ್ಣರ ರಗಡ್ ಪಾತ್ರವನ್ನು ಡಾ.ರಾಜ್ ಶೇಖರ್ ನಿಭಾಯಿಸಿದ್ದರು.

ಸ್ವಲ್ಪ ನಡುಕದಲ್ಲೇ ಸದಾಶಿವನಗರದ ಮನೆಗೆ ತೆರಳಿದ ಉಪೇಂದ್ರ, ಅಣ್ಣಾವ್ರ ಮುಂದೆ ಸ್ಟೋರಿ ಹೇಳುವಾಗ ಅಕ್ಷರಶಃ ನಡುಗಿದ್ದರಂತೆ.ಆದ್ರೆ ಕಥೆ ಹೇಳಿ ಮುಗಿಸಿದ ಮೇಲೆ ಅವರನ್ನು ತಬ್ಬಿಕೊಂಡು “ಯಾವಾಗ ಸಿನೆಮಾ ಮಾಡೋಣ” ಎಂದ್ರಂತೆ..ಇದನ್ನು ಕೇಳಿ ಉಪ್ಪಿ ಕಣ್ಣಾಲಿಗಳು ತುಂಬಿ ಬಂದಿದ್ವಂತೆ.ಬಹುಷಃ ತನ್ನ ಜೀವನದಲ್ಲಿ “ಓಂ” ಚಿತ್ರ ಬಾರದೆ ಹೋಗಿದಿದ್ದರೆ ನಾನು ಏನಾಗುತ್ತಿದ್ದೆನೋ ಗೊತ್ತಿಲ್ಲ.. ದೊಡ್ಡ ಮನೆಯ ಅನ್ನದ ಋಣ ಹಾಗೂ ಆಶೀರ್ವಾದ ಇದ್ದಿದ್ದರಿಂದ್ಲೇ ಓಂ ಚಿತ್ರ ಸಾಧ್ಯವಾಯ್ತು ಎಂದು ಎಲ್ಲಾ ಸಂದರ್ಶನಗಳಲ್ಲೂ ದೊಡ್ಡಮನೆಯ ಋಣವನ್ನು ನೆನಪಿಸಿಕೊಳ್ತಲೇ ಇರುತ್ತಾರೆ ಉಪೇಂದ್ರ.

ಹಿಂದಿಯಲ್ಲಿ "ಅರ್ಜುನ್ ಪಂಡಿತ್" ಆಗಿ ರಿಮೇಕ್ ಆದ ಓಂ ಚಿತ್ರ
ಹಿಂದಿಯಲ್ಲಿ “ಅರ್ಜುನ್ ಪಂಡಿತ್” ಆಗಿ ರಿಮೇಕ್ ಆದ ಓಂ  

ಬೇರೆ ಭಾಷೆಗಳಿಗೂ  ರಿಮೇಕ್ ಆದ ಚಿತ್ರ:  1995 ರಲ್ಲಿ ತೆರೆ ಕಂಡ “ಓಂ” ಚಿತ್ರ ತೆಲುಗಿನಲ್ಲಿ 1997 ರಲ್ಲಿ “ಓಂಕಾರಂ” ರಿಮೇಕ್ ಆಗಿ ತೆರೆ ಕಂಡಿತು.  .ಡಾ.ರಾಜ್ ಶೇಖರ್ ಹೀರೋ ಆಗಿ ನಟಿಸಿದ್ದ ಚಿತ್ರದಲ್ಲಿ ಕನ್ನಡದಲ್ಲಿ ನಟಿಸಿದ್ದ ಪ್ರೇಮಾ ಅವ್ರೇ ನಾಯಕಿಯಾಗಿದ್ರು.2.38 ಗಂಟೆಯ ಚಿತ್ರ  ಡಲ್ ಮೇಕಿಂಗ್ ನಿಂದಾಗಿ ಅವ್ರೇಜ್ ಎನ್ನುವಂಥ ಯಶಸ್ಸು ಪಡೆಯಿತು.ಚಿತ್ರಕ್ಕೆ ನಾದಬ್ರಹ್ಮ ಹಂಸಲೇಖ ಸಂಗೀತ ನೀಡಿದ್ದು ವಿಶೇಷ.ತೆಲುಗಿನ ನೇಟಿವಿಟಿಗೆ ತಕ್ಕಂತೆ ಚಿತ್ರ ನಿರ್ಮಾಣವಾಗದ ಕಾರಣಕ್ಕೆ ಓಂಕಾರ ಚಿತ್ರ ಕನ್ನಡದಲ್ಲಿ ಕಂಡ ಯಶಸ್ಸಿನ ಮುಂದೆ ಶೂನ್ಯ ಎನಿಸಿಬಿಟ್ಟಿತು.ಆದ್ರೆ ಆಶ್ಚರ್ಯ ಏನ್ ಗೊತ್ತಾ,ನಿರ್ದೇಶಕ ಉಪೇಂದ್ರ ಅವರ ತಾಕತ್ತನ್ನು ಕಂಡು ತೆಲುಗು ಚಿತ್ರರಂಗ ನಿಬ್ಬೆರಗಾಗುತ್ತೆ.ಇದೇ ಕಾರಣಕ್ಕೆ ಅನೇಕ ಚಿತ್ರಗಳ ನಿರ್ದೇಶನ ಹಾಗೂ ನಟನೆಗೂ ಅವರಿಗೆ ಅವಕಾಶ ಸಿಗ್ತಾಹೋದ್ವು.

ಇನ್ನು ಬಾಲಿವುಡ್ ನಲ್ಲೂ ಚಿತ್ರ ಅರ್ಜುನ್ ಪಂಡಿತ್ ಹೆಸರಲ್ಲಿ ರಿಮೇಕ್ ಆಯ್ತು.ಸನ್ನಿ ಡಿಯೋಲ್ ಚಿತ್ರದ ಹೀರೋ ಆಗಿ ನಟಿಸಿದ್ರು.ಪ್ರೇಮಾ ಪಾತ್ರದಲ್ಲಿ ಜೂಹಿ ಚಾವ್ಲಾ ನಟಿಸಿದ್ರೂ, ಹ್ಯಾಟ್ರಿಕ್ ಹೀರೋ ಶಿವಣ್ಣ ಹಾಗೂ ಪ್ರೇಮಾ ನಟನೆಯ ಮುಂದೆ ಇವರನ್ನೆಲ್ಲಾ ನಿವಾಳಿಸಿ ತೆಗೆಯಬೇಕೆನ್ನುವ ಮಟ್ಟದ ಮಾತುಗಳು ಕೇಳಿಬಂದವು. ಚಿತ್ರ ಮೇಕಿಂಗ್ ಕಾರಣಕ್ಕೆ ಸೋಲು ಕಾಣಬೇಕಾಯ್ತು.ಆದ್ರೂ ಉಪೇಂದ್ರ ಅವರ ಕ್ರಿಯೇಟಿವಿಟಿ ಬಗ್ಗೆ ಬಾಲಿವುಡ್ ಮಾತ್ನಾಡಿಕೊಳ್ಳುವಂತಾಗಿದ್ದು ಮಾತ್ರ ಇತಿಹಾಸ.

ಹೀಗೆ ರಿಲೀಸ್ ಓಂ ಆಗಿದ್ದು ಅದೆಷ್ಟು ಬಾರಿಯೋ..
ಹೀಗೆ ರಿಲೀಸ್ ಓಂ ಆಗಿದ್ದು ಅದೆಷ್ಟು ಬಾರಿಯೋ..
ಪ್ರತಿ ಬಾರಿ ರಿರಿಲೀಸ್ ಆದಾಗ್ಲೂ "ಓಂ" ಮಾಡಿದ ದಾಖಲೆ ಅಪೂರ್ವ
ಪ್ರತಿ ಬಾರಿ ರಿರಿಲೀಸ್ ಆದಾಗ್ಲೂ “ಓಂ” ದಾಖಲೆ ಅಪೂರ್ವ

ಓಂ ಚಿತ್ರ ನಿರ್ಮಿಸಿದ ದಾಖಲೆಗಳು ಒಂದಾ ಎರಡಾ..:ಡಾ.ರಾಜ್ ಕುಮಾರ್  ಅವರ ಚಿತ್ರಗಳ ದಾಖಲೆ ಬಿಟ್ಟರೆ ಅಂತದ್ದೊಂದು ದಾಖಲೆ ಯನ್ನು ಯಾವುದಾದ್ರು ಒಂದು ಚಿತ್ರ ಮಾಡಿತೆಂದ್ರೆ ಅದು ನಿಸ್ಸಂಶಯವಾಗಿ ಓಂ ಎನ್ನಲೇಬೇಕು.ಅಪ್ಪನ ದಾಖಲೆಯನ್ನು ಮಗನೇ ಮುರಿದಿದ್ದು ಕನ್ನಡ ಚಿತ್ರ ಇತಿಹಾಸದಲ್ಲಿ ಸದಾ  ದಾಖಲೆಯಾಗುಳಿಯುವಂಥ ಅಪರೂಪಾತೀರೂಪ ವಿಷಯ.

ನಿಜ ಜೀವನದಲ್ಲಿಯೂ ರೌಡಿಗಳಾಗಿದ್ದವರನ್ನು ಈ ಚಿತ್ರದಲ್ಲಿ ಬಳಸಿಕೊಂಡಿದ್ದು ಉಪೇಂದ್ರ ಅವರ ಜಾಣ್ಮೆ.ಗಾಂಧೀನಗರದ ಲೆಕ್ಕಾಚಾರಗಳನ್ನೆಲ್ಲಾ ಬುಡಮೇಲು ಮಾಡಿದ್ದಷ್ಟೇ ಅಲ್ಲ,ಸಿದ್ದಸೂತ್ರಗಳನ್ನೆಲ್ಲಾ ಅಳಿಸಿ ಹಾಕಿ ಹೊಸ ಟ್ರೆಂಡನ್ನೇ ನಿರ್ಮಿಸಿದ ಚಿತ್ರ “ಓಂ” ಬಿಡುಗಡೆಯಾದ 25 ವರ್ಷಗಳಲ್ಲಿ ಅತೀ ಹೆಚ್ಚು ಬಾರಿ ರೀರಿಲೀಸ್ ಆದ ಚಿತ್ರ ಯಾವುದಾದ್ರೂ ಇದೆ ಎಂದ್ರೆ ಅದು ಓಂ ಮಾತ್ರ.

ಮರು ಬಿಡುಗಡೆಯಾದಾಗ್ಲೂ ಅನೇಕ ಚಿತ್ರಮಂದಿರಗಳಲ್ಲಿ ಓಂ ಶತದಿನೋತ್ಸವ ಬಾರಿಸಿದೆ ಎನ್ನೋದು ಕನ್ನಡ ಚಿತ್ರರಂಗದ ಹೆಗ್ಗಳಿಕೆ.ಕಪಾಲಿ ಚಿತ್ರಮಂದಿರವೊಂದ್ರಲ್ಲೇ ಈ ಚಿತ್ರ 30 ಬಾರಿ ಬಿಡುಗೆಯಾಗ ಯಶಸ್ವಿಯಾಗಿದೆ.ರಿಲೀಸ್ ಆದ 20 ವರ್ಷಗಳ ನಂತ್ರವೂ 2015ರಲ್ಲಿ ಚಿತ್ರ ಕನ್ನಡ ಚಿತ್ರರಂಗ ಹಿಂದೆಂದೂ ಕಂಡುಕೇಳರಿಯದ  ಭಾರೀ ಮೊತ್ತಕ್ಕೆ ಟೆಲಿವಿಷನ್ ಹಕ್ಕುಗಳು ಮಾರಾಟ ವಾದದ್ದು ಕೂಡ ದಾಖಲೆಯೇ.. ಇದು ಕೆಲವು ದಾಖಲೆಗಳಷ್ಟೇ..ಇನ್ನೂ ಸಾಕಷ್ಟು ದಾಖಲೆಗಳು ಓಂ ಚಿತ್ರದೊಂದಿಗೆ ಬೆರೆತುಕೊಂಡಿದೆ.

 

ಓಂ ಚಿತ್ರದ ಅಪರೂಪಾತೀರೂಪ ದಾಖಲೆಗಳ ಝಲಕ್

*ನಿಜವಾದ ರೌಡಿಗಳನ್ನು ಹಾಕ್ಕೊಂಡು ನಿರ್ದೇಶಕ ಉಪೇಂದ್ರ ಚಿತ್ರ ನಿರ್ದೇಶನ.

*ಗಾಂಧೀನಗರ ಲೆಕ್ಕಾಚಾರಗಳನ್ನು ಯಶಸ್ಸಿನ ಮೂಲಕ ಬುಡಮೇಲು ಮಾಡಿದ ಚಿತ್ರ

*ಗಾಂಧೀನಗರದ ಸಿದ್ಧಸೂತ್ರಗಳನ್ನೆಲ್ಲಾ ಉಡೀಸ್ ಮಾಡಿದ ಏಕಮೇವಾದ್ವಿತೀಯ ಚಿತ್ರ

*25 ವರ್ಷಗಳಲ್ಲಿ ಅತೀ ಹೆಚ್ಚು ಬಾರಿ ರಿರಿಲೀಸ್ ಚಿತ್ರ ಎನ್ನುವ ಹೆಗ್ಗಳಿಕೆ

*ಹೆಚ್ಚು ಬಾರಿ ರಿಲೀಸ್ ಆದಾಗ 100 ದಿನ ಪ್ರದರ್ಶನ ಕಂಡ ಚಿತ್ರ

*ಕಪಾಲಿ ಚಿತ್ರಮಂದಿರದಲ್ಲೇ 30ಕ್ಕೂ ಹೆಚ್ಚು ಬಾರಿ ರಿರಿಲೀಸ್ ಆದ ಚಿತ್ರ

*ಕನ್ನಡ ಚಿತ್ರ ಇತಿಹಾಸದಲ್ಲೇ ದೊಡ್ಡ ಮೊತ್ತಕ್ಕೆ ಮಾರಾಟವಾದ ಟೆಲಿವಿಷನ್ ಹಕ್ಕು

“ಓಂ” ಸೀಕ್ವೆಲ್ಲಾ,ಅಂಥಾ ಧೈರ್ಯವನ್ನೇ ಮಾಡೊಲ್ಲ : ಓಂ ಕನ್ನಡ ಚಿತ್ರರಂಗದ ಮಟ್ಟಿಗೆ ನಾ ಭೂತೋ ನ ಭವಿಷ್ಯತಿ ಎನ್ನುವ ರೇಂಜ್ನ ಸಿನೆಮಾ..ಇಂಥಾ  ಓಂ ನ ಸೀಕ್ವೆಲ್ ಮಾಡೊಕ್ಕಾಗೊಲ್ಲ..ಮಾಡೋದು ಸೂಕ್ತವಲ್ಲ..ನನಗೆ ಮಾಡೊಕ್ಕೆ ಹೆದರಿಕೆ ಇದೆ.ಅವಕಾಶ ಸಿಕ್ರೂ ಮಾಡೋದು ಡೌಟ್..ಏಕೆಂದ್ರೆ ಶತಮಾನಕ್ಕೊಂದು ಓಂ ನಂಥ ಚಿತ್ರಗಳು ನಿರ್ಮಾಣವಾಗ್ತವೆ.ಅಂತದ್ದೇ ಯೋಚನಾಲಹರಿಯಲ್ಲಿ ಮತ್ತೊಂದು ಓಂನಂಥ ಚಿತ್ರ ಮಾಡೊಕ್ಕೆ ಸಾಧ್ಯವಿಲ್ಲ. ಮಾಡಲೂಬಾರದು. ಎಂದೆಲ್ಲಾ ಉಪೇಂದ್ರ ಹೇಳಿದ್ದಾರೆ.

ಎಷ್ಟೋ ಚಿತ್ರಗಳನ್ನು ನಾನೂ ನೋಡಿದ್ದೇನೆ..ಆದ್ರೆ ಮೊದಲ ಪ್ರಯತ್ನದಷ್ಟು ಎರಡನೇ ಪ್ರಯತ್ನಗಳು ಯಶಸ್ವಿಯಾಗೊಲ್ಲ..ಮೂಲ ಕಥೆಯನ್ನು ದ್ವಿತೀಯಾರ್ಧದಲ್ಲಿ ಸಂಭಾಳಿಸಿಕೊಂಡು ಹೋಗೋದು ಕಷ್ಟ..ಆ ಪ್ರಯತ್ನದಲ್ಲಿ ಫೇಲ್ಯೂರ್ ಆಗಿರೋದೆ ಹೆಚ್ಚು..ನನ್ನ ಪ್ರಕಾರ ಕನ್ನಡ ಚಿತ್ರರಂಗಕ್ಕೆ ಓಂ..ಓಂ ಆಗೇ ಉಳಿದಿರಲಿ ಬಿಡಿ..ಅದಕ್ಕೆ ಸೀಕ್ವೆಲ್ ನ ಅವಶ್ಯಕತೆ ಇದೆ ಎಂದು ನನಗೆ ಯಾವತ್ತೂ ಅನಿಸಿಲ್ಲ..ಅನಿಸುವುದು ಬೇಡ…ಓಂ ನ ನೆನಪಲ್ಲೇ ಉಳಿದುಬಿಡೊಕ್ಕೆ ಇಷ್ಟಪಡುತ್ತೇನೆ ಎಂದು ಉಪೇಂದ್ರ ಮಾರ್ಮಿಕವಾಗಿ ಹೇಳ್ತಾರೆ.

“ಓಂ” ಚಿತ್ರದ ಬಗ್ಗೆ ನಿರ್ದೆಶಕ ಉಪೇಂದ್ರ ಚಿತ್ರಲೋಕ.ಕಾಂಗೆ ನೀಡಿದ ಸಂದರ್ಶನ ಹೀಗಿತ್ತು..

Spread the love
Leave A Reply

Your email address will not be published.

Flash News