ನಿಷ್ಕರುಣೆಯ ಮ್ಯಾನೇಜ್ಮೆಂಟ್ ಗಳಿಂದ ಪತ್ರಕರ್ತರಿಗೆ “ಸೋಡಾ ಚೀಟಿ”-“ಸಂಬಳ ಕಟ್”-“ಆವೃತ್ತಿ ಕ್ಲೋಸ್” ಶಿಕ್ಷೆ ?!

0

ಬೆಂಗಳೂರು: ಲಾಕ್ ಡೌನ್ ನಿಂದ ದೇಶದಲ್ಲಿ ಅಲ್ಲಿ ಹಾಗಾಯ್ತು..ಇಲ್ಲಿ ಹೀಗಾಯ್ತು…ಇಷ್ಟ್ ಜನ ಕೆಲಸ ಕಳ್ಕೊಂಡ್ರು..ಇಷ್ಟ್ ಪರ್ಸೆಂಟ್ ಸ್ಯಾಲರಿ ಕಟ್ ಆಯ್ತು.. ಎಂದೆಲ್ಲಾ ಅಮಾನವೀಯ ಹಾಗೂ ನಿಷ್ಕರುಣಿ ಮ್ಯಾನೇಜ್ಮೆಂಟ್ ಗಳ ಬಗ್ಗೆ ಬರೆಯೋ, ಮೈಕ್ ಗಳ ಮುಂದೆ ವದರಾಡೋ ಜರ್ನಲಿಸ್ಟ್ ಗಳ ಕಥೆ ಏನಾಗ್ತಿದೆ ಗೊತ್ತಾ..ಅದೇನೋ ಅಂತಾರಲ್ಲ ದೀಪದ ಕೆಳಗೆ ಕತ್ತಲು ಎನ್ನುವಂತಾಗಿದೆ ಅವರ ಸ್ಥಿತಿ.ಕೆಲಸ ಕಳ್ಕೊಂಡಿರೋರ ಬಗ್ಗೆ ರೋಷಾವೇಶದಿಂದ ವರದಿ ಮಾಡುವ ಪತ್ರಕರ್ತರೇ ತಮ್ಮ ಸಹದ್ಯೋಗಿಗಳಿಗೆ ಮ್ಯಾನೇಜ್ಮೆಂಟ್ ಗಳು ನೀಡ್ತಿರುವ ಸೋಡಾ ಚೀಟಿ(ಕೆಲಸದಿಂದ ವಜಾ ಆದೇಶ) ವಿರುದ್ಧ ಧ್ವನಿ ಎತ್ತೋ ಶಕ್ತಿ ಇದೆಯೇ..ಖಂಡಿತಾ ಇಲ್ಲ..

ಕೊರೋನಾ ಬಗ್ಗೆ ತಮ್ಮ ಜೀವದ ಹಂಗು ತೊರೆದು ಕೆಲಸ ಮಾಡುತ್ತಿರುವವರಲ್ಲಿ ಪತ್ರಕರ್ತರು ಕೂಡ ಒಬ್ರು. ಕೊರೋನಾ ವಾರಿಯರ್ಸ್ ಎಂದು ಕರುದ್ರು ಅವರ ಸೇವೆ ಸ್ಮರಿಸಿ ಯಾರೂ ದೀಪ ಬೆಳಗಲಿಲ್ಲ..ತಮಟೆ ಬಾರಿಸಲಿಲ್ಲ..ಮುಂದೆಯೂ ಏನೂ ನಡೆಯೊಲ್ಲ ಬಿಡಿ..ಆದ್ರೆ ಲಾಕ್ ಡೌನ್ ಸಂದರ್ಭದಲ್ಲಿಯೂ ದುಡಿಯುತ್ತಿರುವ ಅವರನ್ನು ಅಭದ್ರತೆ ಬಾಧಿಸುತ್ತಿರುವುದು ಮಾತ್ರ ದುರಾದೃಷ್ಟಕರ.

ಹೌದು..ಪತ್ರಕರ್ತರಿಗೆ ಉದ್ಯೋಗ ಭದ್ರತೆಯ ಸಮಸ್ಯೆಕಾಡುತ್ತಿದೆ.ಪತ್ರಿಕೋದ್ಯಮ ಎನ್ನೋದೇ ಒಂದು ಅನಿಶ್ಚಿತ ಉದ್ಯೋಗ ಬಿಡಿ..ಬಹುತೇಕ ಪತ್ರಕರ್ತರು ಭದ್ರತೆಯ ನಿರೀಕ್ಷೆಯಲ್ಲೇ ತೊಳಲಾಡ್ತಿರುತ್ತಾರೆ.ಅದೊಂದು ನಿತ್ಯದ ಹೋರಾಟ.ಇನ್ನೇನು ಸೆಟ್ಲ್ ಆದೆ ಎಂದುಕೊಳ್ಳುವಷ್ಟರಲ್ಲಿ ನಿವೃತ್ತರಾಗುವಷ್ಟರ ಮಟ್ಟಿಗಿನ ವಯಸ್ಸಾಗಿರುತ್ತೆ.ಅಂತದ್ದೊಂದು ಶೋಚನೀಯ ಸ್ಥಿತಿ ಇವತ್ತು ಅನೇಕ ಪತ್ರಕರ್ತರದು..

ಹೋಗ್ಲಿ ಬಿಡಿ..ಈಗ ನಾವೇಳಕ್ಕೆ ಹೊರಟಿರುವುದು ಲಾಕ್ ಡೌನ್ ಸಂದರ್ಭದಲ್ಲಿ ಪತ್ರಕರ್ತರಿಗೆ ಎದುರಾಗಿರುವ ಬಹುದೊಡ್ಗ ಸಂಕಷ್ಟ.ಪತ್ರಕರ್ತರಿಂದ ಸಾಕಷ್ಟು ಲಾಭ ಮಾಡಿಕೊಂಡು ಸದೃಢವಾಗಿರುವಂಥ ಸಂಸ್ಥೆಗಳೇ ಪತ್ರಕರ್ತರಿಗೆ ಸೋಡಾ ಚೀಟಿ ಕೊಡ್ಲಿಕ್ಕೆ ಆರಂಭಿಸಿವೆಯಂತೆ.ಹೇಳಿಕೊಳ್ಳೊಕ್ಕೆ ಇವತ್ತು ನಾವ್ ನಂಬರ್ 1…ನಾವ್ ನಂಬರ್ 1 ಎಂದು ಬೀಗಿಕೊಳ್ಳುವ ಸಂಸ್ಥೆಗಳೇ ನಷ್ಟದ ನೆಪವೊಡ್ಡಿ ಅನೇಕರಿಗೆ ಮನೆಗಳಿಗೆ ಕಳುಹಿಸಲಾರಂಭಿಸಿವೆಯಂತೆ. ರಿಸೈನ್ ಮಾಡಿ,ಇಲ್ಲಾಂದ್ರೆ ಟರ್ಮಿನೇಟ್ ಮಾಡ್ತೇವೆ ಎಂಬ ಬೆದರಿಕೆ ಹಾಕ್ತಿವೆ.ಈ ಹಿಂದೆಯೆಲ್ಲಾ ಕೆಲಸ ಬಿಡಿಸುವಾಗ 3 ತಿಂಗಳ ಸಂಬ್ಳವಾದ್ರೂ ಕೊಡ್ತಿದ್ರು.ಈಗ ಅವೇನಿಲ್ಲ,ಕೆಲಸ ಬಿಡುವುದಿದ್ರೆ ಆ ತಿಂಗಳ ಸಂಬ್ಳ ಕೊಡ್ತೇವೆ..ಒಪ್ಪಿಕೊಂಡ್ರೆ ಗೌರವಯುತವಾಗಿ ರಾಜೀನಾಮೆ ಸ್ವೀಕರಿಸ್ತೇವೆ..ಕಾನೂನು..ಸಿದ್ಧಾಂತ..ಬದ್ಧತೆ..ಪ್ರಾಮಾಣಿಕತೆ ಬಗ್ಗೆ ಮಾತ್ನಾಡಿದ್ರೆ ಯಾವ ಬೆನಿಫಿಟ್ಟೂ ಕೊಡ್ದೆ ಟರ್ಮಿನೇಷನ್ ಮಾಡಿ ಕಳುಹಿಸ್ತಾರೆ.

ಬಹುತೇಕ ಸಂಸ್ಥೆಗಳ ಮನಸ್ತಿತಿ ಎಷ್ಟು ದರಿದ್ರವಾಗಿದೆ ಎಂದ್ರೆ ಸತ್ಯಾಸತ್ಯತೆ ಅವಲೋಕಿಸುವ ಗೋಜಿಗೂ ಹೋಗದೆ ಕೆಲಸ ಅರಸಿ ಹೋಗುವ ಪತ್ರಕರ್ತನಿಗೆ ಹಿಂದಿನ ಸಂಸ್ಥೆಯಲ್ಲಿ ಕೆಲಸದಿಂದ ತೆಗೆಯುವಂಥ ತಪ್ಪನ್ನೇನು ಮಾಡಿದ್ರಿ ಎನ್ನುವ ಇಲ್ಲಸಲ್ಲದ ಪ್ರಶ್ನೆಗಳನ್ನು ಕೇಳಿ ಮನನೋಯಿಸುವ ವಿಕೃತಿ ಪ್ರದರ್ಶಿಸ್ತಾರೆಯೇ ವಿನಃ..ಪ್ರತಿಭೆಗೆ ಬೆಲೆ ಕೊಟ್ಟೋ..ಬೇಡ ಹಾಳಾಗಿ ಹೋಗ್ಲಿ ಮಾನವೀಯತೆಯಿಂದಲಾದ್ರೂ ಕೆಲಸ ಕೊಡ್ತಾರಾ ಇಲ್ಲ.. ಅವಮಾನದ ಒಂದಷ್ಟು ಚುಚ್ಚು ಮಾತುಗಳನ್ನಾಡಿ, ಬರಿಗೈಯಲ್ಲಿ ವಾಪಸ್ ಕಳುಹಿಸ್ತಾರೆ(ಇದು ನಮ್ಮ ಇವತ್ತಿನ ಪತ್ರಿಕೋದ್ಯಮದಲ್ಲಿ ಸಂಭವಿಸುತ್ತಿರುವ ವಾಸ್ತವ ಸಂಗತಿ)

ಪ್ರಾತಿನಿಧಿಕ ಸಂಸ್ಥೆಗಳಿದ್ದೂ ನಿಷ್ಪ್ರಯೋಜಕ: ಕನ್ನಡ ಪತ್ರಿಕೋದ್ಯಮಕ್ಕೇನೆ ಬಂದ್ರೆ ಮಂಚೂಣಿಯಲ್ಲಿರುವ ಅನೇಕ ಪತ್ರಿಕೆಗಳು ಲಾಕ್ ಡೌನ್ ಸಮಯದಲ್ಲಿ ಕೆಲಸದಿಂದ ತೆಗೆಯಲಾರಂಭಿಸಿವೆ.ಅದು ದೃಶ್ಯಮಾದ್ಯಮದಲ್ಲಿರಬಹುದು..ಹಾಗೆಯೇ ಮುದ್ರಣ ಮಾದ್ಯಮದಲ್ಲಿರಬಹುದು..ಆದ್ರೆ ಮ್ಯಾನೇಜ್ಮೆಂಟ್ ಗಳ ಕೆಂಗಣ್ಣಿಗೆ ಅಮಾಯಕ ಪತ್ರಿಕಾ ಸಿಬ್ಬಂದಿ ಬಲಿಪಶುಗಳಾಗ್ತಿದ್ದಾರೆನ್ನೋದು ದೌರ್ಭಾಗ್ಯಪೂರ್ಣ.ಎಲ್ಲಾ ಶ್ರಮಿಕರ ಪರ ಹೋರಾಡೊಕ್ಕೆ ಸಾಕಷ್ಟು ಸಂಘಟನೆಗಳಿವೆ.ಆದ್ರೆ ಪತ್ರಿಕಾರಂಗದಲ್ಲಿ ಸಂಘಟನೆಗಳಿದ್ದರೂ ನಯಾಪೈಸೆ ಪ್ರಯೋಜನವಿಲ್ಲಈವರೆಗೂ. ಉದ್ಯೋಗಿಗಳನ್ನು ಕೆಲಸದಿಂದ ತೆಗೆದ ಮ್ಯಾನೇಜ್ಮೆಂಟ್ ಗಳನ್ನು ಪ್ರಶ್ನಿಸಿರುವ,ಅಥವಾ ಅನ್ಯಾಯಕ್ಕೊಳಗಾದ ಯಾವುದೇ ಪತ್ರಕರ್ತನ ಬೆನ್ನಿಗೆ ನಿಂತು ಪತ್ರಕರ್ತರ ಪ್ರಾತಿನಿಧಿಕ ಸಂಸ್ಥೆಗಳು ಹೋರಾಡಿರುವ ಉದಾಹರಣೆಗಳುಂಟೇ .. ಇಲ್ಲ ಬಿಡಿ..ಪ್ರೆಸ್ ಕ್ಲಬ್..ಪ್ರೆಸ್ ಗುಲ್ಡ್..ಕಾರ್ಯನಿರತ ಪತ್ರಕರ್ತರ ಸಂಘಗಳಿದ್ದರೂ ಅವೆಲ್ಲಾ ಪ್ರಯೋಜನಕ್ಕೆ ಬಾರದಷ್ಟು ನಿಷ್ಕ್ರೀಯವಾಗಿವೆ.ಅವುಗಳಿಗೆ ಪತ್ರಕರ್ತರ ಸಮಸ್ಯೆಗಳಾಗ್ಲಿ..ಅವರು ಅನುಭವಿಸುತ್ತಿರುವ ಬವಣೆಗಳ ಬಗ್ಗೆಯಾಗ್ಲಿ ಚಿಂತೆಯೇ ಇಲ್ಲ.ಅವುಗಳ ಉದ್ದೇಶ ಹಾಗೂ ಆಧ್ಯತೆಗಳೇ ಬೇರೆಯಾಗಿರುವಾಗ ಯಾವ್ ಪತ್ರಕರ್ತ ಸತ್ತರೇನು..ಕೆಲಸ ಕಳಕೊಂಡರೇನು ಎನ್ನುವ ಸ್ತಿತಿಯಲ್ಲುಳಿದುಬಿಟ್ಟಿರುವುದು ನಾಚಿಕೆಗೇಡು.

ಕನ್ನಡ ದೃಶ್ಯಮಾದ್ಯಮದಲ್ಲಿ ಕೆಲ ಚಾನೆಲ್ ಗಳು ಪತ್ರಿಕಾ ಸಿಬ್ಬಂದಿಯನ್ನು ಕೆಲಸದಿಂದ ತೆಗೆದಿದ್ರೆ ಇನ್ನು ಕೆಲವು ಅದರ ಸಿದ್ಧತೆಯಲ್ಲಿವೆ.ಬುದ್ದಿವಂತಿಕೆಯಲ್ಲಿ ಒಂದು ಹೆಜ್ಜೆ ಮುಂದ್ಹೋಗಿರುವ ಸಂಸ್ಥೆಗಳು ನೌಕರರ ಸಂಬಳದಲ್ಲಿ ಶೇಕಡಾ 50 ರಿಂದ ಹಿಡಿದು ಶೇಕಡಾ 10ರಷ್ಟು ಕಡಿತ ಮಾಡಿದೆ.ಕೆಲಸ ಉಳಿದ್ರೆ ಸಾಕು ಎನ್ನುವ ಆತಂಕದಲ್ಲಿರುವ ಪತ್ರಿಕಾ ಸಿಬ್ಬಂದಿ ತಮಗೆ ಸಂಸ್ಘೆಗಳು ಮಾಡ್ತಿರುವ ಅನ್ಯಾಯದ ವಿರುದ್ಧ ಧ್ವನಿ ಎತ್ತಲಿಕ್ಕಾಗದೆ ಕೊಟ್ಟಷ್ಟನ್ನು ತೆಗೆದುಕೊಂಡು ಸುಮ್ಮನಾಗುತ್ತಿದ್ದಾರೆ.

ಲಾಕ್ ಡೌನ್ ಸಂದರ್ಭದಲ್ಲಿ ಊರಲ್ಲಿರೋರ ಬಗ್ಗೆಯೆಲ್ಲಾ..ಅವರು ಪಡುತ್ತಿರುವ ಬವಣೆ ಬಗ್ಗೆಯೆಲ್ಲಾ..ಪಡಿತರ ಇಲ್ಲದೆ ಪರಿತಪಿಸುತ್ತಿರುವ ಸಮಸ್ಯೆಗಳ ಬಗ್ಗೆಯೆಲ್ಲಾ ವರದಿ ಮಾಡಿದ ಮಾದ್ಯಮಗಳಲ್ಲಿನ ಪತ್ರಕರ್ತರ ಕುಟುಂಬಗಳೇ ಅನ್ನಾಹಾರವಿಲ್ಲದೆ ಬಳಲಿದ..ಇವತ್ತಿಗೂ ತೊಳಲಾಡುತ್ತಿರುವ ಅದೆಷ್ಟೋ ಕುಟುಂಬಗಳು ಇಂದೂ ಇವೆ.ಯಾರ್ಯಾರೋ ಸಹೃದಯರನ್ನು ಹಿಡಿದು ಸಂತ್ರಸ್ಥರಿಗೆ ಸಹಾಯ ಮಾಡಿಸಿದ ಸಂಸ್ಥೆಗಳು ಅದೇ ಸಮಸ್ಯೆಯಿಂದ ಬಳಲುತ್ತಿರುವ ಸಂಸ್ಥೆಯ ಸಿಬ್ಬಂದಿಗೆ ಸಹಾಯ ಮಾಡಲಾಗದೆ ಹೋದದ್ದು ಎಂಥಾ ದುರಂತ ಅಲ್ವಾ..ಗೊತ್ತಿರುವವರ ಬಳಿ ಅವರಿವರನ್ನು ಕೇಳಿ ಪತ್ರಿಕಾ ಸಿಬ್ಬಂದಿ ಪಡಿತರವನ್ನು ಪಡೆದ ಅದೆಷ್ಟೋ ಉದಾಹರಣೆಗಳಿವೆ ಗೊತ್ತಾ..ಇದೆಲ್ಲಾ ಮ್ಯಾನೇಜ್ಮೆಂಟ್ ಗಳಿಗೆ ತಿಳಿಯೋದೇ ಇಲ್ವಾ.. ಪತ್ರಕರ್ತರ ಮೇಲಾಗುತ್ತಿರುವ ದೌರ್ಜನ್ಯ ಹೊರಪ್ರಪಂಚಕ್ಕು ಗೊತ್ತಾಗೊಲ್ಲ. ಬಿಡಿ..
ದೇಶದಲ್ಲಿರುವ ದೃಶ್ಯ ಹಾಗೂ ಮುದ್ರಣ ಮಾದ್ಯಮಗಳ ಪೈಕಿ ಶೇಕಡಾ 25ಕ್ಕು ಸಂಸ್ಥೆಗಳು ನಷ್ಟದ ನೆವ ಒಡ್ಡಿ ಪತ್ರಕರ್ತರ ಬದುಕುಗಳ ಮೇಲೆ ಗಧಾಪ್ರಹಾರವನ್ನೇ ಮಾಡಲಾರಂಭಿಸಿವೆ.ಕೆಲಸದಿಂದ ನೇರವಾಗಿ ಕೆಲವರನ್ನು ತೆಗದು ಹಾಕಿದ್ರೆ,ಸ್ಯಾಲರಿ ಕಟ್ ಮಾಡುವ,ಭತ್ಯೆ ರದ್ದು ಮಾಡುವ,ಭಡ್ತಿ-ಅಪ್ರೈಸಲ್ ಗಳನ್ನು ತಡೆ ಹಿಡಿಯುವಂಥ ಕೆಲಸವನ್ನು ವ್ಯವಸ್ಥಿತವಾಗಿ ಮಾಡಲಾರಂಭಿಸಿವೆ.ಇದು ಒಂದೆಡೆಯಾದ್ರೆ ಕೆಲವು ಸಂಸ್ಥೆಗಳು ಬಾಗಿಲನ್ನೇ ಮುಚ್ಚುತ್ತಿವೆ.ಇನ್ನು ಕೆಲವು ತಮ್ಮ ಆವೃತ್ತಿ ಹಾಗೂ ಪ್ರಸಾರವನ್ನೇ ನಿಲ್ಲಿಸಲಾರಂಭಿಸಿವೆ.

ಊರಲ್ಲಿರುವವರ ಸಮಸ್ಯೆ ಬಗ್ಗೆ ಮಾತ್ನಾಡಿ,ಅದರ ವಿರುದ್ದ ಜನಾಂದೋಲನವನ್ನೇ ರೂಪಿಸಿ,ಸಂಬಂಧಪಟ್ಟವರ ಗಮನ ಸೆಳೆದು ನ್ಯಾಯ ದೊರಕಿಸಿಕೊಡುವ ಕೆಲಸ ಮಾಡುತ್ತಿರುವ ಪತ್ರಕರ್ತರೇ ಇವತ್ತು ಕೆಲಸ ಕಳೆದುಕೊಳ್ಳುವ ಸ್ಥಿತಿಗೆ ಬಂದಿರುವುದನ್ನು ಪ್ರಶ್ನಿಸುವವರ್ಯಾರು..ಅವರಿಗೆ ನ್ಯಾಯ ದೊರಕಿಸಿಕೊಡುವರ್ಯಾರು..ಯಾರಾದ್ರೂ ಇದ್ದಾರಾ..ಹಾಗಾಗಿನೇ ಪತ್ರಕರ್ತರು ಎಲ್ಲರಿಗೂ ಬೇಕು..ಆದ್ರೆ ಯಾರಿಗೂ ಬೇಡವಾದ ಶ್ರಮಿಕ ಸಮುದಾಯವಾಗಿ ನಿರ್ಲಕ್ಷ್ಯಕ್ಕೊಳಪಟ್ಟಿದೆ.ತುಳಿತಕ್ಕೊಳಗಾಗ್ತಿದೆ.

Spread the love
Leave A Reply

Your email address will not be published.

Flash News