ಎಸಿಬಿಗೆ ದಂಡಿ ದೂರು: ಬಿಬಿಎಂಪಿ ಮೇಯರ್-ಕಮಿಷನರ್ ದ್ವೇಷ,ಜಿದ್ದಿನ  ಕೆಸರೆರೆಚಾಟವೇ?-“ದ್ವೇಷಾಗ್ನಿ”ಯಲ್ಲಿ ಚಳಿ ಕಾಯಿಸಿಕೊಂಡ ನೌಕರ ಸಂಘಗಳು

0

ಬೆಂಗಳೂರು:ಒಂದಾ ನಾನ್ ಉಳಿಬೇಕು..ಇಲ್ಲ ನೀನ್ ಉಳೀಬೇಕು..ನನ್ನದೊಂದ್ ಕಣ್ಣು ಹೋದ್ರೂ ಪರ್ವಾಗಿಲ್ಲ,ನಿನ್ನ ಎರಡೂ ಕಣ್ಣು ಕುರುಡಾಗ್ಬೇಕು.”.

ಹೀಗೆ ಹಾವು ಮುಂಗುಸಿಯಂತೆ ಪರಸ್ಪರ ದ್ವೇಷ ಕಾರಲಿಕ್ಕೆ ಶುರುಮಾಡಿದ್ದಾರೆ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಪೂಜ್ಯ ಮಹಾಪೌರರಾದ ಗೌತಮ್ ಕುಮಾರ್ ಹಾಗೂ ಕಮಿಷನರ್ ಅನಿಲ್ ಕುಮಾರ್ .ಬಿಬಿಎಂಪಿ ಎನ್ನೋ ದೋಣಿಯ ನಾವಿಕರಾಗಬೇಕಾದ ಇಬ್ಬರಲ್ಲೂ ಸಮನ್ವಯ ಹಳಿ ತಪ್ಪಿದೆ.ಸಂಬಂಧ ಹಳಸೋಗಿದೆ. ಅಭಿವೃದ್ಧಿ ವಿಷಯದಲ್ಲಿ ಕೈ ಜೋಡಿಸ್ಬೇಕಾದವರು ಜಿದ್ದಿಗೆ ಬಿದ್ದು ಕೆಸರೆರಚಾಟದಲ್ಲಿ ತೊಡಗಿದ್ದಾರೆ.ಇದಕ್ಕೆ ಮೊನ್ನೆ ನಡೆದ ವಿದ್ಯಾಮಾನ ಮತ್ತೊಂದು ಸಾಕ್ಷಿ.

ಬಿಬಿಎಂಪಿ ಆಡಳಿತ ಹಾಗೂ ಬೆಂಗಳೂರು ಅಭಿವೃದ್ಧಿ ವಿಷಯದಲ್ಲಿ ಜೋಡೆತ್ತುಗಳಾಗಿ ಕೆಲಸ ಮಾಡ್ಬೇಕು ಬಿಬಿಎಂಪಿ ಮೇಯರ್ ಹಾಗೂ ಕಮಿಷನರ್.ಆದ್ರೆ ದುರಂತ ನೋಡಿ, ದ್ವೇಷ-ಪ್ರತೀಕಾರ-ಜಿದ್ದು ತೀರಿಸಿ ಕೊಳ್ಳುವಷ್ಟು ಸಂಘರ್ಷ ತಾರಕಕ್ಕೇರಿದೆ.ಭುಜಕ್ಕೆ ಭುಜ ಕೊಟ್ಟು ಕೆಲಸ ಮಾಡ್ಬೇಕಾದವ್ರು ಪರಸ್ಪರ ತೊಡೆ ತಟ್ಟಿಕೊಳ್ತಿದ್ದಾರೆ.ಒಂದ್ ಹೆಜ್ಜೆ ಮುಂದ್ಹೋಗಿ ಮೇಯರ್  ಸಾಮಾಜಿಕ ಕಾರ್ಯಕರ್ತರ ಮುಖೇನ ಕಮಿಷನರ್ ವಿರುದ್ಧ ಎಸಿಬಿಗೆ ಒಂದಲ್ಲಾ ಎರಡಲ್ಲಾ ಬ್ಯಾಕ್ ಟು ಬ್ಯಾಕ್ ಬರೋಬ್ಬರಿ 7 ದೂರು ಸಲ್ಲಿಸುವಂತೆ ಮಾಡಿದ್ದಾರೆನ್ನುವ ಮಾತು ಕೇಳಿಬರುತ್ತಿದೆ.ಇದೇ ಸಂದರ್ಭವನ್ನು ಕಾಯ್ತಿದ್ದ ಬಿಬಿಎಂಪಿ ನೌಕರ ಯೂನಿಯನ್ಸ್ ಕಮಿಷನರ್ ಬೆನ್ನಿಗೆ ನಿಂತವರಂತೆ ಹೋರಾಟ ಮಾಡಿ, ಅವರಿಂದ ಹೊಗಳಿಸಿಕೊಳ್ಳುವ ಗೇಮ್ ಪ್ಲೇ ಮಾಡಿವೆ.ಬೆಂಕಿಬಿದ್ದ ಮನೆಯೊಳಗೆ ಚಳಿ ಕಾಯಿಸಿಕೊಳ್ಳುವ ಹೀನಪ್ರವೃತ್ತಿ ಪ್ರದರ್ಶಿಸಿವೆ.

ಕೊರೋನಾ ಲಾಕ್ ಡೌನ್ ಸಂದರ್ಭದಲ್ಲಿ ಸಾಕಷ್ಟು ಯೋಜನೆಗಳ ಅನುಷ್ಟಾನದಲ್ಲಿ ಕಮಿಷನರ್ ಅನಿಲ್ ಕುಮಾರ್ ವ್ಯಾಪಕ ಭ್ರಷ್ಟಾಚಾರ ಮಾಡಿದ್ದಾರೆ.ಟೆಂಡರ್ ನಿಯಮ ಉಲ್ಲಂಘಿಸಿ ಲೂಟಿ ಮಾಡಿದ್ದಾರೆ. ಇದಷ್ಟೇ ಅಲ್ಲ,ಇನ್ನೂ ಸಾಕಷ್ಟು ವಿಷಯದಲ್ಲೂ ಅಕ್ರಮ ಎಸಗಿದ್ದಾರೆನ್ನುವ  ಒಕ್ಕಣೆಯ ಏಳು ದೂರುಗಳನ್ನು ಕಮಿಷನರ್ ವಿರುದ್ಧ ಎಸಿಬಿಗೆ ಸಲ್ಲಿಸಲಾಗಿದೆ.ಸಲ್ಲಿಕೆ ಮಾಡಿರುವುದು ಹಿರಿಯ ಮಾಹಿತಿ ಹಕ್ಕು ಕಾರ್ಯಕರ್ತ,ಮಾಹಿತಿ ಹಕ್ಕುಗಳ ಬಗ್ಗೆ ಆಳವಾದ ಅಧ್ಯಯನ ಮಾಡಿರುವ ವೀರೇಶ್.ಅವ್ರು ಸಲ್ಲಿಸಿದ ದೂರು ಬಿಬಿಎಂಪಿಯಲ್ಲಿ ದೊಡ್ಡ ಬಿರುಗಾಳಿಯನ್ನೇ ಬೀಸಿದೆ.ಆದ್ರೆ ಆ ದೂರುಗಳೆಲ್ಲಾ ಕಪೋಲಕಲ್ಪಿತ., ದುರುದ್ದೇಶಪೂರ್ವಕ,ಸ್ವಹಿತಾಸಕ್ತಿ  ಒಳಗೊಂಡಿದೆ ಎನ್ನುವುದು ಬಿಬಿಎಂಪಿ ನೌಕರರ ಆರೋಪ.

ಅಮೃತರಾಜ್
ನೌಕರ ಮುಖಂಡ ಅಮೃತರಾಜ್
ನೌಕರ ಮುಖಂಡ ಬಾಬು
ನೌಕರ ಮುಖಂಡ ಬಾಬು

ಬೇಳೆ ಬೇಯಿಸಿಕೊಂಡ ನೌಕರ ಸಂಘಟನೆಗಳು: ಈ ಕಾರಣಕ್ಕೆ ದೂರುದಾರ ವೀರೇಶ್ ಬಂಧಿಸ್ಬೇಕೆನ್ನೋ ಒತ್ತಾಯ ಮಾಡಿ ಪ್ರತಿಭಟನೆ ಮಾಡಿದ್ರು.ಆಶ್ಚರ್ಯ ಎಂದ್ರೆ ಸಾಕಷ್ಟು ವಿಷಯಗಳಲ್ಲಿ ಪರಸ್ಪರ ಅಭಿಪ್ರಾಯಬೇಧ ಇರುವ ಅಮೃತ್ ರಾಜ್ ಹಾಗೂ ಬಾಬು ಅವರ ನೌಕರ ಬಣಗಳು ಪ್ರತ್ಯೇಕ ಪೋಡಿಯಂನಲ್ಲಿ ಕಮಿಷನರ್ ಪರ ನಿಂತಿದ್ದು ಆಶ್ಚರ್ಯ.ಇದರ ಹಿಂದೆ ಕಮಿಷನರ್ ಅವ್ರೊಂದಿಗೆ ಮತ್ತಷ್ಟು ಆಪ್ತರಾಗ್ವೇಕು.ಆ ಮೂಲಕ ತಮ್ಮ ಬೇಳೆ ಬೇಯಿಸಿಕೊಳ್ಳಬೇಕೆನ್ನುವ ದುರುದ್ದೇಶ ಇತ್ತೆನ್ನುವುದು ಬೇರೆ ವಿಷಯ ಬಿಡಿ.

ಆದ್ರೆ ದೂರು ಕೊಡುವಾಗ ಅದಕ್ಕೆ ಪೂರಕವಾದ ದಾಖಲೆಯನ್ನು ಲಗತ್ತಿಸಿದಿದ್ದರೆ ವೀರೇಶ್ ಅವರ ವಿರುದ್ಧ ಆಕ್ರೋಶ ಇಷ್ಟೊಂದು ವ್ಯಾಪಕವಾಗುತ್ತಿರಲಿಲ್ಲವೇನೋ..ಸಾಕಷ್ಟು ಸಂದರ್ಭಗಳಲ್ಲಿ ದಾಖಲೆ ಸಲ್ಲಿಸುವುದನ್ನು ಮರೆಯದ ಹಿರಿಯ ಆಕ್ಟಿವಿಸ್ಟ್ ಈ ಬಾರಿ ಏಕೆ ಆ ಸೂಕ್ಷ್ಮ ಮರುತ್ರೋ ಗೊತ್ತಿಲ್ಲ.ಏಕೆಂದ್ರೆ “ವೀರೇಶ್ ಬಗ್ಗೆ ಆತ ಒಬ್ಬ ಮೇಯರ್ ಚೇಲಾ..ಹಣ ಕೊಟ್ಟು ಮೇಯರ್ ಅವ್ರೇ ಈ  ಆರ್ ಟಿಐ ಹಾಕಿಸಿದ್ದಾರೆ… ತಮಗೆ ಲಾಭ ಬರದಿದ್ದಾಗ ಒಂದಷ್ಟು ಹೆಸರು ಮಾಡಿರುವ ವೀರೇಶ್ ಅವರಂಥ RTI ಕಾರ್ಯಕರ್ತರನ್ನು ಮೇಯರ್ ಅಸ್ತ್ರವಾಗಿ ಬಳಸಿದ್ದಾರೆ..ಎಂದೆಲ್ಲಾ ಮಾತುಗಳು ಪಾಲಿಕೆ ಕ್ಯಾಂಪಸ್ ನಲ್ಲಿ ಕೇಳಿ ಬರೊಕ್ಕೆ ವೀರೇಶ್ ಅವ್ರ ಆ ತಪ್ಪು ಕಾರಣವಾಗ್ತದೆ.ದೂರಿನ ಜತೆ ಅಕ್ರಮ ನಡೆದಿದೆ ಎನ್ನುವುದಕ್ಕೆ ಪುರಾವೆ ಒದಗಿಸುವ ದಾಖಲೆಗಳನ್ನು ಸೇರಿಸಿ ಕೊಟ್ಟಿದಿದ್ದರೆ ಈ ಸಮಸ್ಯೆಯೇ ಎದುರಾಗ್ತಿರಲಿಲ್ಲ.ವೀರೇಶ್ ಅವರನ್ನು ಒಟ್ಟಾರೆ ಪ್ರಕರಣದಲ್ಲಿ ಮೇಯರ್ ಚೇಲಾ ಎಂದು ಬಿಂಬಿಸಲಾಗ್ತಿರುವುದಂತೂ ಸತ್ಯ.

ಕಮಿಷನರ್ ವಿರುದ್ದ ಎಸಿಬಿಗೆ ದೂರು ನೀಡಿದ ಮಾಹಿತಿ ಹಕ್ಕು ಕಾರ್ಯಕರ್ತ ವೀರೇಶ್
ಕಮಿಷನರ್ ವಿರುದ್ದ ಎಸಿಬಿಗೆ ದೂರು ನೀಡಿದ ಮಾಹಿತಿ ಹಕ್ಕು ಕಾರ್ಯಕರ್ತ ವೀರೇಶ್

ವೀರೇಶ್ ನೆಪಮಾತ್ರನಾ..ಸೂತ್ರಧಾರ ಮೇಯರ್ ಗೌತಮ್ ಅವ್ರಾ..?!  ವೀರೇಶ್ ಅವರ ಸುತ್ತ ಸುತ್ತುತ್ತಾ ಪ್ರಕರಣ ಬಂದ್ ನಿಲ್ಲೋದು ನೇರವಾಗಿ ಬಿಬಿಎಂಪಿ ಮೇಯರ್ ಗೌತಮ್ ಕುಮಾರ್ ಹತ್ರನೇ..ಬಿಬಿಎಂಪಿಯಲ್ಲಿ ಏನೇನ್ ನಡೆಯುತ್ತೆ ಎನ್ನೋದನ್ನು ಸಾರ್ವಜನಿಕವಾಗಿ ಹೇಳಬೇಕೇನಿಲ್ಲ.ಆದ್ರೆ ಮೇಯರ್ ಜೊತೆಗಿನ ಕಮಿಷನರ್ ಸಂಬಂಧವಂತೂ ಸ್ವಲ್ಪವೂ ಚೆನ್ನಾಗಿಲ್ಲ ಎನ್ನೋದು ಮಾತ್ರ ಸತ್ಯ.ಮಾದ್ಯಮಗಳ ಮುಂದೆನೇ ಕಮಿಷನರ್ ವಿರುದ್ಧ ಸಲ್ಲಿಕೆಯಾಗಿರುವ ಏಳು ದೂರುಗಳ ಬಗ್ಗೆ ಗಟ್ಟಿಧ್ವನಿಯಲ್ಲಿ ಮೇಯರ್ ಮಾತಾಡ್ತಾರೆನ್ನೋದಕ್ಕಿಂತ ದೊಡ್ಡ ಉದಾಹರಣೆ ಮತ್ತೊಂದು ಬೇಕೆ.

ಮೇಯರ್ ಗೌತಮ್ ಕುಮಾರ್, ಕಮಿಷನರ್ ವಿರುದ್ಧ ಮಾದ್ಯಮಗಳ ಮೂಲಕ ಹರಿಹಾಯುತ್ತಲೇ ಬರುತ್ತಿರೊಕ್ಕೆ ಕಾರಣವೇನು.ಅಭಿವೃದ್ಧಿ ಮಂತ್ರ ಜಪಿಸಿದ್ದಷ್ಟೇ ಮೇಯರ್ ಸೌಭಾಗ್ಯ.ಅಭಿವೃದ್ಧಿಯಂತೂ ಶೂನ್ಯ.ಇಂತದ್ದರ ನಡುವೆ ಕಮಿಷನರ್ ಜೊತೆ ಬೆಂಗಳೂರು ಅಭಿವೃದ್ಧಿಗೋಸ್ಕರವಾದ್ರೂ ಸಮನ್ವಯ ಸಾಧಿಸ್ಬೇಕಾಗಿದ್ದುದು ಅವರ ಕರ್ತವ್ಯ.ಆದ್ರೆ ಆ ಪ್ರಯತ್ನವನ್ನೇ ಅವ್ರು ಮಾಡ್ಲಿಲ್ಲ ಎನ್ನೋದನ್ನು ಬಿಬಿಎಂಪಿಯ ಗೋಡೆ ಗೋಡೆಗಳು ಹೇಳ್ತವೆ. ತನ್ನ ಮಾತನ್ನು ಕಮಿಷನರ್ ಕೇಳ್ತನೇ ಇಲ್ಲ ಎನ್ನುವ ದೂರನ್ನು ಆರ್.ಅಶೋಕ್, ಪಿ.ಸಿ ಮೋಹನ್,ಅರವಿಂದ ಲಿಂಬಾವಳಿ ಅವರ ಮಟ್ಟದಲ್ಲು ಮುಟ್ಟಿಸಿದ್ದು ಕಮಿಷನರ್ ಅನಿಲ್ ಕುಮಾರ್ ಅವರ “ಈಗೋ ಟಚ್ ” ಮಾಡಿತೆನ್ನೋದು ಕೂಡ ಸುಳ್ಳಲ್ಲ.

ಕಮಿಷನರ್ ಟ್ರಾನ್ಸ್ ಫರ್ ಗೆ ಮೇಯರ್ ಲಾಭಿ ಮಾಡಿಸಿದ್ರಾ?! ಆದ್ರೆ ಇದಕ್ಕೆ ಸೊಪ್ಪಾಕದ ಕಮಿಷನರ್ ಮತ್ತಷ್ಟು ಅಂತರ ಕಾಯ್ದುಕೊಳ್ಳಲಾರಂಭಿಸಿದ್ರು.ಇದಕ್ಕೆ ಸುಮ್ಮನಾಗದ ಮೇಯರ್,ದೊಡ್ಡ ಮಟ್ಟದಲ್ಲಿ ಲಾಭಿ ಮಾಡಿಸಿ ಕಮಿಷನರ್ ವರ್ಗಾವಣೆಗೆ ಚಿತಾವಣೆ ಮಾಡಿಸಿದರೆನ್ನುವ ಮಾತುಗಳಿವೆ.ಆದ್ರೆ ಕೇಂದ್ರ ಸರ್ಕಾರದ ಸೇವೆಯಲ್ಲಿ ಕೆಲಸ ಮಾಡಿದ್ದ ಅನಿಲ್ ಕುಮಾರ್ ಗೆ ಡೆ್ಲ್ಲಿಯಲ್ಲಿ ಬಿಜೆಪಿ ಮಟ್ಟದ ನಾಯಕರ ಜೊತೆಗಿದ್ದ ಉತ್ತಮ ಬಾಂಧವ್ಯವನ್ನು ಎನ್ ಕ್ಯಾಶ್ ಮಾಡ್ಕೊಂಡು ಆರ್ಡರ್ ಆದ  ವರ್ಗಾವಣೆಯನ್ನು ಕೆಲ ನಿಮಿಷಗಳಲ್ಲೇ ಕ್ಯಾನ್ಸಲ್ ಮಾಡಿಸಿದ್ದು ಕೂಡ ಸತ್ಯ.ಆಗ್ಲೇ ಮೀಸೆಮಾಮ ಕಡ್ಮೆ ಆಸಾಮಿಯಲ್ಲ..ಅವ್ರನ್ನು ಟಚ್ ಮಾಡೋದು ಅಷ್ಟು ಸುಲಭವಲ್ಲ ಎಂದ್ಕೊಂಡ ಮೇಯರ್ ಗೌತಮ್ ಕುಮಾರ್,ಸ್ವಲ್ಪ ದಿನ ಅವರೊಂದಿಗೆ ಚೆನ್ನಾಗಿರುವ ರೀತಿಯಲ್ಲಿ ವ್ಯವಹರಿಸಲಾರಂಭಿಸಿದ್ರು.ಆದ್ರೆ ಕಮಿಷನರ್ ವಿರುದ್ಧ ಪ್ರತೀಕಾರ ತೀರಿಸಿಕೊಳ್ಳೋ ಸಂದರ್ಭಕ್ಕಾಗಿ ಹೊಂಚಾಕ್ತಲೇ ಇದ್ದರೆನ್ನುವುದು ಕಮಿಷನರ್ ಹಾಗೂ ಮೇಯರ್ ನಡುವಿನ ಹಗ್ಗಜಗ್ಗಾಟದ ಬಗ್ಗೆ ಸಮಗ್ರ ಮಾಹಿತಿಯುಳ್ಳ ಹಿರಿಯ ಪತ್ರಕರ್ತರ ಅಭಿಪ್ರಾಯ.

ಏನೇ ಮಾಡಿದ್ರೂ..ಯಾರಿಂದ್ಲೇ ಹೇಳಿಸಿದ್ರೂ..ಎಂತೆಂಥವ್ರಿಂದ ಪ್ರೆಷರ್ ತಂದ್ರೂ ಕಿಮಿಕ್ ಗಿಮಿಕ್ ಎನ್ನದ ಕಮಿಷನರ್ ಗೆ ತನ್ನ ತಾಕತ್ತು ತೋರಿಸ್ಲೇಬೇಕೆನ್ನುವ ಜಿದ್ದಿಗೆ ಬಿದ್ದ ಮೇಯರ್ ತೋರಿದ್ದು ಖಂಡಿತಾ ಜಾಣತನವಲ್ಲ…ಅದು ಅವರ ಮಹಾನ್ ಯಡವಟ್ಟಾ ಗೊತ್ತಾಗ್ತಿಲ್ಲ.(ವೀರೇಶ್ ಮೂಲಕ ಅವ್ರೇ ದೂರನ್ನು ಕೊಡಿಸಿದ್ದು  ನಿಜವೇ ಆಗಿದ್ದಲ್ಲಿ…) ಮಾಹಿತಿ ಕೊಡುವ ವೇಳೆ ಅಕ್ರಮಕ್ಕೆ ಸಂಬಂಧಿಸಿದ ಸಾಕ್ಷ್ಯಗಳನ್ನು ಕೂಡ ಪೂರೈಸಬೇಕಿತ್ತು.ಅದನ್ನು ಬಿಟ್ಟು ಕಮಿಷನರ್ ಮಾನ-ಮರ್ಯಾದೆಯನ್ನು ಕೊರೊನಾ ಟೈಮಲ್ಲೇ ಸಾರ್ವಜನಿಕವಾಗಿ ಹರಾಜಾಕಿದ್ರೆ ದೊಡ್ಡ ಸುದ್ದಿಯಾಗುತ್ತೆನ್ನುವ ಆತುರಕ್ಕೆ ಬಿದ್ದು ವೀರೇಶ್ ಅವರಿಂದ ದೂರು ಕೊಡ್ಸಿ ತಮ್ಮ ಸ್ವಾರ್ಥಕ್ಕೆ ಸಾಮಾಜಿಕ ಕಾರ್ಯಕರ್ತನನ್ನು ಬಲಿಪಶುವಾಗಿಸಿದ್ರು ಅಷ್ಟೇ ಎಂದು ಒಟ್ಟಾರೆ ಘಟನೆಯನ್ನು ವಿಶ್ಲೇಷಿಸ್ತಾರೆ ಸಾಮಾಜಿಕ ಕಾರ್ಯಕರ್ತ ರಾಘವೇಂದ್ರ.

ಕಮಿಷನರ್ ಬೆಂಬಲಿಸಿ ನೌಕರ ಮುಖಂಡ ಬಾಬು ನೇತೃತ್ವದಲ್ಲಿ ನಡೆಸಲಾದ ಪ್ರತಿಭಟನೆ
ಬಿಬಿಎಂಪಿ ಕಮಿಷನರ್ ಅನಿಲ್ ಕುಮಾರ್ ಅವರನ್ನು  ಬೆಂಬಲಿಸಿ ನೌಕರ ಮುಖಂಡ ಬಾಬು ನೇತೃತ್ವದಲ್ಲಿ ನಡೆಸಲಾದ ಪ್ರತಿಭಟನೆ

ವೀರೇಶ್ ಅವರಂಥ ಹಿರಿಯ ಮಾಹಿತಿ ಹಕ್ಕು ಕಾರ್ಯಕರ್ತ ಹಾಗೆ ಮಾಡ್ತಾರಾ..? ಹಾಗೆ ಮಾಡುವವರಲ್ಲ ಹಿರಿಯ ಸಾಮಾಜಿಕ ಕಾರ್ಯಕರ್ತ ವೀರೇಶ್ ಅವ್ರನ್ನು ತನ್ನ ದ್ವೇಷದ ಪ್ರತೀಕಾರಕ್ಕೆ ಕಮಿಷನರ್ ವಿರುದ್ದ ಒಂದು ಅಸ್ತ್ರವಾಗಿ ಬಳಸಿಕೊಂಡಿದ್ದಾರೆನ್ನುವುದೇ ಸತ್ಯವಾದ್ರೆ ಅದು ನಿಜಕ್ಕೂ ತಪ್ಪು.ಆದ್ರೆ ವೀರೇಶ್ ಹಾಗೆ ದುಡುಕೋರಲ್ಲ,ಅವರಿಗೊಂದು ಬದ್ದತೆಯಿದೆ.ಸಾಮಾಜಿಕ ಕಳಕಳಿಯಿದೆ.ಮೇಯರ್ ಮಾತನ್ನು ಕೇಳ್ಕಂಡು ಕಮಿಷನರ್ ಅವ್ರ ವಿರುದ್ಧ ದೂರು ಕೊಡುವಷ್ಟು ಸಣ್ಣತನ ಹಾಗೂ ವಿವೇಚನೆಯ ಕೊರತೆ ಅವರಿಗಿಲ್ಲ.ಆದ್ರೆ ವೀರೇಶ್ ಅವ್ರನ್ನು ಮೇಯರ್ ಬಳಿ ಕರೆದುಕೊಂಡು ಹೋಗಿ ಪರಿಚಯಿಸಿಕೊಂಡು ಕಮಿಷನರ್ ವಿರುದ್ಧ ದೂರು ನೀಡುವಂತೆ ಮಾಡಿದ ಶಕ್ತಿಗಳ ವಿರುದ್ಧ ತನಿಖೆಯಾಗ್ಬೇಕಿದೆ.ಅವರ್ಯಾರು ಎನ್ನುವ ಮಾಹಿತಿ ನಮಗಿದೆ ಅದನ್ನು ಬಹಿರಂಗಪಡಿಸಿ ಪಾಲಿಕೆ ಕ್ಯಾಂಪಸ್ ನೊಳಗೆ ಬರದಂತೆ ಮಾಡುವ ನಿಟ್ಟಿನಲ್ಲಿ ಮನವಿ ಮಾಡಲಾಗಿದೆ.ಮೇಯರ್ ಹಾಗೂ ಕಮಿಷನರ್ ನಡುವೆ ಹುಳಿ ಹಿಂಡುವ ಕೆಲಸ ಮಾಡಿದವರಿಗೆ ಶಿಕ್ಷೆಯಾಗ್ಬೇಕೆನ್ನುತ್ತಾರೆ ನೌಕರ ಸಂಘದ  ಪ್ರತ್ಯೇಕ ಬಣಗಳ ಮುಖಂಡರು.

ತಮ್ಮ ವಿರುದ್ಧ ಕೇಳಿಬಂದಿರುವ ದೂರುಗಳನ್ನು ಕಮಿಷನರ್ ಅನಿಲ್ ಕುಮಾರ್ ಗಂಭೀರವಾಗಿ ಪರಿಗಣಿಸಿದ್ದಾರೆ.ಸಾಕ್ಷ್ಯಗಳು ಇದ್ರೆ ಪ್ರೂವ್ ಮಾಡ್ಬೇಕು.ಇಲ್ಲವಾದಲ್ಲಿ ದೂರುದಾರರ ವಿರುದ್ಧ ಮಾನನಷ್ಟ ಮೊಕದ್ದಮೆ ದಾಖಲಿಸುವ ಚಿಂತನೆ ನಡೆಸಿದ್ದಾರೆ.ಇದು ಒಂದ್ ಪಾರ್ಟ್ ಆದ್ರೆ,ತಮ್ಮ ತೇಜೋವಧೆಗೆ ಚಿತಾವಣೆ ಮಾಡಿರುವ ವ್ಯಕ್ತಿಗಳಿಗೆ ಹೇಗೆ ಬುದ್ಧಿ ಕಲಿಸ್ಬೇಕೆನ್ನುವ ನಿಟ್ಟಿನಲ್ಲೂ ಪ್ರಯತ್ನ ಮುಂದುವರೆದಿದೆ ಯಂತೆ.ಕಾಲ ಪರಿಪಕ್ವವಾದಾಗ ಎಲ್ಲರ ಅಸಲೀಯತ್ತು ಬಯಲಾಗಲಿದೆ ಎಂದು ತಮ್ಮ ಆತ್ಮೀಯರ ಬಳಿ ಕೌಂಟರ್ ಸ್ಟೇಟ್ಮೆಂಟ್ ಕೊಟ್ಟಿದ್ದಾರನ್ನಲಾಗಿದೆ.

ಕಮಿಷನರ್ ಮಾನ ಹರಾಜಾಕ್ಲಿಕ್ಕೆ ದೂರು ಕೊಡಿಸಿದ್ರಾ ಗೌತಮ್.? : ಮೇಯರ್ ಗೌತಮ್ ಮಾಹಿತಿ ಹಕ್ಕುಕಾರ್ಯಕರ್ತ ವೀರೇಶ್ ಮೂಲಕ ದೂರು ಕೊಡಿಸುವ ಮೂಲಕ ಕಮಿಷನರ್ ಮಾನ ಹರಾಜಾಕ್ದೆ..ತಕ್ಕ ಪಾಠ ಕಲಿಸ್ದೆ..ಇದರಿಂದ ಅವರ ಅಹಂ ಕಡ್ಮೆಯಾಗುತ್ತೆ.ನನ್ನೊಂದಿಗೆ ಕಾಂಪ್ರಮೈಸ್ ಆಗ್ತಾರೆ..ಕೈ ಜೋಡಿಸಿ ಕೆಲಸ ಮಾಡ್ತಾರೆ..ಅವರನ್ನು ತನ್ನ ಹತೋಟಿಯಲ್ಲಿ ಇಟ್ಟುಕೊಳ್ಳಬಹುದೆಂದು ಭಾವಿಸಿದ್ರೂ ತಪ್ಪೇ.ಒಂದ್ ಹಂತದಲ್ಲಿ ಇದು ಉಂಟುಮಾಡಿರುವ ಬ್ಯಾಡ್ ಇಂಪ್ಯಾಕ್ಟ್ ಇದೆಯೆಲ್ಲಾ ಅದು ಮೇಯರ್ ಅವ್ರಿಗಾದ ಮುಖಭಂಗ ಎಂದೇ ವಿಶ್ಲೇಷಿಸಲ್ಪಡುತ್ತಿದೆ..

ಬಿಬಿಎಂಪಿ ಕಮಿಷನರ್ ಅನಿಲ್ ಕುಮಾರ್ ಅವರ ಬೆನ್ನಿಗೆ ನಿಂತು, ದೂರುದಾರ ವೀರೇಶ್ ಬಂಧಿಸುವಂತೆ ಒತ್ತಾಯಿಸಿ ನೌಕರ ಮುಖಂಡ ಅಮೃತರಾಜ್ ನೇತೃತ್ವದಲ್ಲಿ ನಡೆಸಲಾದ ಪ್ರತಿಭಟನೆ
ಬಿಬಿಎಂಪಿ ಕಮಿಷನರ್ ಅನಿಲ್ ಕುಮಾರ್ ಅವರ ಬೆನ್ನಿಗೆ ನಿಂತು, ದೂರುದಾರ ವೀರೇಶ್ ಬಂಧಿಸುವಂತೆ ಒತ್ತಾಯಿಸಿ ನೌಕರ ಮುಖಂಡ ಅಮೃತರಾಜ್ ನೇತೃತ್ವದಲ್ಲಿ ನಡೆಸಲಾದ ಪ್ರತಿಭಟನೆ

.ನೌಕರರ ಎರಡು ಬಣಗಳು ತಮ್ಮ ದ್ವೇಷದ ಭಾವನೆಯನ್ನು ಬದಿಗೊತ್ತಿ ಕಮಿಷನರ್ ಅವರ  ಪರ ನಿಲ್ಲುತ್ತಾರೆಂದ್ರೆ( ಅವರ ಉದ್ದೇಶ-ಹಿತಾಸಕ್ತಿ ಏನೇ ಇರಬಹುದು)  ಮೇಯರ್ ಗೆ ಅವಮಾನ ಮಾಡಿದಂತಲ್ವೇ..ಇದು ಗೌತಮ್ ಅವ್ರಿಗೇಕೆ ಅರ್ಥವಾಗ್ತಿಲ್ಲೋ ಗೊತ್ತಾಗ್ತಿಲ್ಲ.ಏಕಂದ್ರೆ ಮೇಯರ್ ಪರ ನಿಂತ್ರೆ ಆಗೋ ಲಾಭವೇನು ಇಲ್ಲ..ಆದ್ರೆ ತಮ್ಮ “ಬಾಸ್” ಕಮಿಷನರ್ ಬೆನ್ನಿಗೆ ನಿಂತ್ರೆ ಕೆಲಸ ಗಟ್ಟಿಯಾಗುತ್ತೆ.ಒಂದು ಒಳ್ಳೆಯ ಬಾಂಧವ್ಯ ಬೆಳೆಯುತ್ತೆ ಎನ್ನೋದು ನೌಕರರ ಲೆಕ್ಕಾಚಾರವಾಗಿದ್ರೂ ಆಶ್ಚರ್ಯವಿಲ್ಲ.

ಇದೆಲ್ಲಾ ನಿಜ..ಆದ್ರೆ ಕಮಿಷನರ್ ಮೇಲೆ ಮೇಯರ್ ಮಾಡಿದ್ದಾರೆನ್ನುವ ಮಸಲತ್ತು,ಅದಕ್ಕೆ ಪ್ರತಿಯಾಗಿ ಕಮಿಷನರ್ ಅನಿಲ್ ಕುಮಾರ್ ರೂಪಿಸಿದ್ದಾರೆನ್ನುವ ಪ್ರತೀಕಾರದ ಭಾವನೆಗಳಿವೆಯೆಲ್ಲಾ ಅದು ಯರಿ ಗೂ ಒಳ್ಳೇದಲ್ಲ.ಒಂದು ವರ್ಷದ ಅವಧಿಯಲ್ಲಿ ಮೇಯರ್ ಏನ್ ಮಾಡಿದ್ದಾರೆನ್ನುವುದೇ ಅವರ ಬೆಳವಣಿಗೆ ಹಾಗೂ ಅವರನ್ನು ಆಯ್ಕೆ ಮಾಡಿ ಕಳುಹಿಸಿರುವ ಪಕ್ಷದ ಮೇಲೆ ರಿಫ್ಲೆಕ್ಟ್ ಆಗುತ್ತೆ.

ಹಾಗೆಯೇ ಕಮಿಷ ನರ್ ಸಾಹೇಬ್ರಿಗೂ ಅವರು ಇರುವಷ್ಟು ದಿನ ಬೆಂಗಳೂರನ್ನು ಅಭಿವೃದ್ಧಿ ಪಥದತ್ತ ಕೊಂಡೊಯ್ಯುವಲ್ಲಿ ಮೇಯರ್ ಜತೆ ಸೇರಿ ಹೇಗೆ ಕೆಲಸ ಮಾಡಿದ್ರೆನ್ನೋದೇ “ಕೆರಿಯರ್” ಗೆ ಮುಖ್ಯವಾಗುತ್ತೆ. ಹಾಗಾಗಿ ಮೇಲ್ಕಂಡ ಪ್ರಕರಣದಲ್ಲಿ ತಪ್ಪು ಯಾರಿಂದ ಆಗಿದೆ ಎನ್ನುವುದು ಇನ್ವಿಸ್ಟಿಗೇಷನ್ ನಲ್ಲಿ ಪ್ರೂವ್ ಆಗುತ್ತೆ..ಅರಾಚೆ ಸಂಬಂಧಗಳನ್ನು ಉತ್ತಮಪಡಿಸಿಕೊಂಡು ಹೋಗೋದು ಅವರ ವ್ಯಕ್ತಿತ್ವ ಹಾಗೂ ಸ್ಥಾನದ ಘನತೆ ದೃಷ್ಟಿಯಿಂದಲೂ ಸೂಕ್ತವಾದೀತು.

Spread the love
Leave A Reply

Your email address will not be published.

Flash News