ಸಚಿವ ಮಾಧುಸ್ವಾಮಿ”ಕ್ಷಮೆ” ಕೇಳಿದಾಕ್ಷಣ ರೈತ ಮಹಿಳೆಗಾದ “ಅವಮಾನ”ಕ್ಕೆ ಪರಿಹಾರನಾ ಸಿಎಂ ಯಡಿಯೂರಪ್ಪ ಅವ್ರೇ..

0

ಕೋಲಾರ/ಬೆಂಗಳೂರು:ಮಾಧುಸ್ವಾಮಿ ಎನ್ನೋ  ಆಸಾಮಿಯನ್ನು ಚಿಕ್ಕನಾಯಕನಹಳ್ಳಿಯ ಜನ ಅದೇನ್ ನೋಡ್ಕಂಡು ಓಟಾಕಿ ಗೆಲ್ಲಿಸಿದ್ರೋ ಗೊತ್ತಾಗ್ತಿಲ್ಲ.ಜನರೊಂದಿಗೆ ಹೇಗೆ ವ್ಯವಹರಿಸ್ಬೇಕೆನ್ನೋ ಸಾಮಾನ್ಯ ಜ್ಞಾನವೂ ಇಲ್ಲದ  ಅನಾಗರಿಕರಂತೆ ವರ್ತಿಸ್ತಾನೆ..ಅವರ ಈ ಯೋಗ್ಯತೆಗೇ ಏನೋ, ಶಾಸಕರಾಗಿ ಆಯ್ಕೆಯಾದ್ರೂ ಸಚಿವ ಸ್ಥಾನ ಒಲಿದುಬರೊಕ್ಕೆ ದಶಕಗಳಷ್ಟು ಟೈಮ್ ಬೇಕಾಯ್ತು.ಸರ್ಕಾರವನ್ನು ಪದೇ ಪದೇ ತೀವ್ರ ಇಕ್ಕಟ್ಟು-ಪೀಕಲಾಟಕ್ಕೆ ಸಿಲುಕಿಸುವಂಥ ಹೊಣೆಗೇಡಿತನ ತೋರುತ್ತಿರುವ  ಇಂಥವ್ರನ್ನು ಇಟ್ಕೊಂಡು..ಸಮರ್ಥಿಸಿಕೊಂಡು  ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅದ್ಯಾವ ಪುರುಷಾರ್ಥ ಸಾಧಿಸ್ತಾರೋ  ಗೊತ್ತಾಗ್ತಿಲ್ಲ.

ಜೆ.ಮಾಧುಸ್ವಾಮಿ..ಬಿ.ಎಸ್ ವೈ ಸರ್ಕಾರದ ಜವಾಬ್ದಾರಿಯುತ ಕಾನೂನು ಸಚಿವ.ಆದ್ರೆ ಅವ್ರ ಯೋಗ್ಯತೆಗೆ ಜನರತ್ರ ಹೇಗೆ ಒಡನಾಡ್ಬೇಕೆನ್ನೋ ಕಾಮನ್ ಸೆನ್ಸ್ ಇಲ್ಲದಂತೆ ವರ್ತಿಸ್ತಲೇ ಬಂದಿದ್ದಾರೆ.ಬಹುಷಃ ಅವರಿಗೆ ಇರುವ ಆ ಸಿಟ್ಟು-ಮುಂಗೋಪವೇ ಅವರಿಗೆ ಮುಳುವಾಗೋದ್ರಲ್ಲಿ ಅನುಮಾನವಿಲ್ಲ.ಹೋದಲ್ಲೆಲ್ಲಾ ತನ್ನ ಹೊಣೆಗೇಡಿತನದಿಂದಾಗಿಯೇ ವಿವಾದ ಮೈಮೇಲೆ ಎಳೆದುಕೊಳ್ತಿದ್ದಾರೆ.ಕೋಲಾರ ಜಿಲ್ಲೆಯಲ್ಲಿ ಕೆರೆ ಒತ್ತುವರಿ ಅಹವಾಲು ಹೇಳಿಕೊಳ್ಳುತ್ತಿದ್ದ ರೈತ ಮಹಿಳೆಯೊಂದಿಗೆ ನಡೆದುಕೊಂಡ ರೀತಿ,ಬಳಸಿದ ಭಾಷೆ ನಿಜಕ್ಕೂ ಮಾಧುಸ್ವಾಮಿ ಅವರಿಗೆ ಶೋಭೆ ತರುವಂತದ್ದಲ್ಲವೇ ಅಲ್ಲ,ಕೊರೊನಾ ಲಾಕ್ ಡೌನ್ ಟೈಮಲ್ಲಿ ಯಾವ್ದೇ ವಿವಾದಕ್ಕೆ ಸಿಲುಕಬಾರದೆಂದು ಸರ್ಕಾರ ಶ್ರಮ ವಹಿಸ್ತಿದ್ರೆ ಅದನ್ನೆಲ್ಲಾ ನೀರಿನಲ್ಲಿ ಹೋಮ ಮಾಡಿಬಿಟ್ಟಿದ್ದಾರೆ ಮಾಧುಸ್ವಾಮಿ.

ಅಷ್ಟಕ್ಕೂ ರೈತ ಮಹಿಳೆ ಕೇಳಬಾರದ್ದೇನು ಕೇಳಿದ್ಲು.. ಹೌದು…ಕೆರೆ ಒತ್ತುವರಿಯಾಗಿದೆ..ಸರ್..ಅದನ್ನು ತೆರವು ಮಾಡಿಸಿ,,ಸರ್ಕಾರಗಳಿಗೆ ಅಹವಾಲು ಕೊಟ್ ಕೊಟ್ ಸಾಕಾಗಿದೆ.ನ್ಯಾಯ ಕೊಡ್ಸಿ ಸಾರ್ ಎಂದು ರೈತ ಮಹಿಳೆ ಕೇಳಿದ್ದೇ ತಪ್ಪಾ..ಅವಳೇನು ಮಾಧುಸ್ವಾಮಿ ಅವರ ಮನೆಯ ಆಸ್ತಿ ಬರೆದುಕೊಡಿ ಎಂದೇನಾದ್ರೂ ಕೇಳಿದ್ಲಾ..ಕೆರೆ ಒತ್ತುವರಿಯಾಗಿದೆ ತೆರವು ಮಾಡ್ಸಿ ಸರ್ ಎಂದು ಕೇಳಿದ್ಲು ಅಷ್ಟೆ…ಆದ್ರೆ ಅಷ್ಟಕ್ಕೆ ತಾಳ್ಮೆ ಕಳೆದುಕೊಂಡ ಮಾಧುಸ್ವಾಮಿ ತಮ್ಮ ಬಂಡವಾಳವನ್ನು ತಾವೇ ಊರ ಜನರ ಮುಂದೆ ಬಯಲು ಮಾಡಿಕೊಂಡು ಬಣ್ಣಗೇಡಿಯಾದ್ರಷ್ಟೆ.ನಾನ್ ಒಳ್ಳೆ ಮನುಷ್ಯನಲ್ಲ..ರಿಕ್ವೆಸ್ಟ್ ಮಾಡ್ಕೋಬೇಕು…ಆರ್ಡರ್ ಮಾಡೋದಲ್ಲ ಎಂದು ಏರುಧ್ವನಿಯಲ್ಲಿ ಮಾತ್ನಾಡುವುದರ ನಡುವೆ ಬಾಯಿಮುಚ್ಚು ರಾಸ್ಕಲ್ ಎಂದು ನಿಂದಿಸಿಬಿಟ್ರು ಇದು ಸರೀನಾ..

ಜತೆಗಿದ್ದ ವೇಸ್ಟ್ ಎಂಪಿ-ಎಮ್ಮೆಲ್ಸಿ:ಒಬ್ಬ ರೈತ ಮಹಿಳೆ ತನ್ನ ಅಹವಾಲು ಹೇಳ್ತಿದ್ದಾಳೆಂದ್ರೆ ಅದನ್ನು ಕೇಳಿಸಿಕೊಳ್ಳೋ ತಾಳ್ಮೆ ಸಚಿವರೆನಿಸಿಕೊಂಡವ್ರಿಗೂ ಇರ್ಲಿಲ್ಲ.ಹಾಗೆಯೇ ಅವರ ಜೊತೆಗಿದ್ದ ಸಂಸದ ಮುನಿಸ್ವಾಮಿ(ಇವರನ್ನು ಆಯ್ಕೆ ಮಾಡಿದ ಜನ ಈಗ ಲಭೋ..ಲಭೋ ಎಂದು ಬಾಯಿ ಬಡಿದುಕೊಳ್ತಿದ್ದಾರಂತೆ) ಹಾಗೂ ಎಮ್ಮೆಲ್ಸಿ ನಾರಾಯಣಸ್ವಾಮಿ ಸಚಿವರನ್ನು ಬೆಂಬಲಿಸಿದ ರೀತಿಯೂ ಒಂದ್ರೀತಿ ಖಂಡನೀಯ.ಸಮಸ್ಯೆ ಹೇಳಿಕೊಳ್ಳೊಕ್ಕೆ ಆಕೆ ಮುಂದೆ ಬರ್ತಿದ್ರೆ ಎಂಪಿ ಹಾಗೂ ಎಮ್ಮೆಲ್ಸಿ ಆಕೆಯನ್ನು ತಡೆಯುವ ಯತ್ನ ಮಾಡ್ತಿದ್ರು ಅವರಿಗೆ ನಿಜಕ್ಕೂ ನಾಚಿಕೆಯಾಗ್ಬೇಕು.

ಇನ್ನು ಸರ್ಕಲ್ ಇನ್ಸ್ ಪೆಕ್ಟರ್ ಅಂಜನಪ್ಪ.ಈತ ಕೂಡ ಒಬ್ಬ ಯೂಸ್ ಲೆಸ್ ಫೆಲೋ..ದೊಡ್ಡವರ ಬೂಟು ನೆಕ್ಕಿಯೇ ಪೋಸ್ಟಿಂಗ್ ಉಳಿಸಿಕೊಂಡಾತ ಎನ್ನುವ ಮಾತು ಕೂಡ ಕೋಲಾರದಲ್ಲಿದೆ.ಸಚಿವರನ್ನು ಕೊಂದಾಕಿಬಿಡ್ತಾಳೇನೋ ಎನ್ನುವ ರೇಂಜ್ನಲ್ಲಿ ಮಧ್ಯ ಪ್ರವೇಶಿಸಿ ಆಕೆಯನ್ನು ದರದರನೇ ಎಳೆಯುವ ಪ್ರಯತ್ನ ಮಾಡ್ತಾನೆ.ಒಬ್ಬ ಹೆಣ್ಣು ಮಗಳನ್ನು ಸಾರ್ವಜನಿಕವಾಗಿ ಆಕೆ ದರದರನೇ ಎಳೆದೊಯ್ಯುವುದು ಎಷ್ಟು ಸೂಕ್ತ..ಹಾಗೆ ಹ್ಯಾಂಡಲ್ ಮಾಡ್ಬೋದು ಎಂದೇನಾದ್ರೂ ಕಾನೂನಲ್ಲಿ ಬರೆದಿದ್ಯಾ..ಸಚಿವರ ಚೇಲಾಗಿರಿ ಮಾಡುವ ಯತ್ನದಲ್ಲಿ ಸರ್ಕಲ್ ಇನ್ಸ್ ಪೆಕ್ಟರ್ ಕೂಡ ಸಾರ್ವಜನಿಕವಾಗಿ ತೀವ್ರ ಟೀಕೆಗೆ ಗುರಿಯಾಗಿದ್ದಾರೆ.

ಮಾಧುಸ್ವಾಮಿ ಹೇಳಿಕೆಯನ್ನು ಗಂಭೀರವಾಗಿ ಪರಿಗಣಿಸದ ರೈತ ಮುಖಂಡರು:ಈ ಟೈಮಲ್ಲಿ ರೈತ ಮುಖಂಡರಾದ ನಂಜುಂಡಸ್ವಾಮಿ,ರುದ್ರೇಶ್..ಸುಂದ್ರೇಶ್ ಅವರಂಥ ತುಂಬಾ ಕಾಡ್ತಾರೆ.ಅದಕ್ಕೆ ಕಾರಣ ನಿಷ್ಕ್ರೀಯವಾಗಿರುವ ರೈತ ಸಂಘ ಹಾಗೂ ನಿರ್ವೀಯರಂತಾಗಿರುವ ರೈತ ಮುಖಂಡರು.ತುಂಬಾ ಬೇಸರವಾಗುತ್ತೆ.ರೈತ ಮಹಿಳೆಗೆ ರಾಸ್ಕಲ್ ಎನ್ನುವ ಪದ ಬಳಕೆ ಮಾಡಿರುವುದು ನಮ್ಮ ರೈತ ಇವತ್ತಿನ ರೈತ ಮುಖಂಡರಿಗೆ ಗಂಭೀರ ವಿಷಯ ಎನಿಸಿಯೇ ಇಲ್ಲ.ನಂಜುಂಡಸ್ವಾಮಿ ಅವರಂಥವರೇನಾದ್ರೂ ಇದ್ದಿದ್ದರೆ ಹೀಗಾಗುತ್ತಿತ್ತೆ..ಇಷ್ಟೊತ್ತಿಗಾಗ್ಲೆ ರೈತರು ಬೀದಿಗಳಿದು ಸರ್ಕಾರವನ್ನೇ ಇಕ್ಕಟ್ಟಿಗೆ ಸಿಲುಕಿಸ್ತಿದ್ರು.ಆದ್ರೆ ಹಾಗಾಗಲು ಈಗ ಅವರಿಲ್ವೇ..ಅವರ ಹೆಸರೇಳಿಕೊಂಡು ರಾಜಕೀಯ ಮುಖಂಡರು ಈಗಿನ “ಖೆ”ಲ ಮುಖಂಡರು ಪ್ರಜ್ಞಾಪೂರ್ವಕವಾಗೇ ಮೌನಧಾರಣೆ ಮಾಡಿದ್ದಾರಲ್ಲ..ಇದು ನಿಜಕ್ಕೂ ನಮ್ಮ ಅನ್ನದಾತರ ದೌರ್ಭಾಗ್ಯವೇ ಸರಿ.

ಸಚಿವರಿಗೆ ಬೆವರಿಳಿಸಿದ್ರಂತೆ ಮುಖ್ಯಮಂತ್ರಿ..ಕ್ಷಮೆ ಕೋರಿದ್ರಂತೆ ದುರಂಹಕಾರಿ ಮಾಧುಸ್ವಾಮಿ?..ಇದು ಅದೆಷ್ಟರ ಮಟ್ಟಿಗೆ ಸತ್ಯನೋ ಗೊತ್ತಿಲ್ಲ..ಮಾಧುಸ್ವಾಮಿ ಹೇಳಿಕೆಯಿಂದ ತೀವ್ರ ಮುಜುಗರಕ್ಕೊಳಗಾದ ಸರ್ಕಾರ ಮತ್ತು ಮುಖ್ಯಮಂತ್ರಿ ಯಡಿಯೂರಪ್ಪ ಸಿಕ್ಕಾಪಟ್ಟೆ ಗರಂ ಆಗಿದ್ದಾರಂತೆ.ಇಂಥಾ ಸಂದರ್ಭದಲ್ಲಿ ಇಂತದ್ದೊಂದು ಬೇಜವಾಬ್ದಾರಿತನದ ಹೇಳಿಕೆಯ ಅಗತ್ಯವಿತ್ತೇ ಎಂದು ಮಾಧುಸ್ವಾಮಿ ಅವರನ್ನು ತರಾಟೆಗೆ ತಗೆದುಕೊಂಡಿದ್ದಾರೆ.

ಮೊದಲು ಕ್ಷಮೆ ಕೋರಿ ನಂತ್ರದ್ದು ನೋಡೋಣ ಎಂದು ಆದೇಶಿಸಿದ್ದಾರೆ.ಈ ಕಾರಣಕ್ಕೆ ಕ್ಷಮೆ ಕೋರಿದ್ದಾಗಿದೆ ಮಾಧುಸ್ವಾಮಿ.ಆದ್ರೆ ಕೈ ಪಕ್ಷದ ನಿಯೋಗ ಈಗಾಗಲೇ ಪೊಲೀಸ್ ಕಮಿಷನರ್ ಗೆ ಭೇಟಿ ಮಾಡಿ ಕಂಪ್ಲೆಂಟ್ ಮಾಡಿದೆ.ಅಲ್ಲದೇ ಹೋರಾಟ ಮಾಡ್ಲಿಕ್ಕೆ ನಿರ್ಧರಿಸಿದೆ.ಆದ್ರೆ ಸರ್ಕಾರ ಈ ಸವಾಲನ್ನು ಹೇಗೆ ಸ್ವೀಕರಿಸುತ್ತೆ ಎನ್ನೋದು ಕುತೂಹಲ ಮೂಡಿಸಿದೆ.ಇನ್ನು ರಾಜ್ಯಾದ್ಯಂತ ವ್ಯಾಪಕ ಆಕ್ರೋಶವೂ ವ್ಯಕ್ತವಾಗ್ತಿದೆ.ಸಾಮಾಜಿಕ ಜಾಲತಾಣಗಳಲ್ಲಂತೂ ಮಾಧುಸ್ವಾಮಿಗೆ ಜನ ಕೆಟ್ಟಾಕೊಳ್ಕ ಬೈಯ್ಯಲು ಶುರುಮಾಡಿದ್ದಾರೆ.

ಒಬ್ಬ ಜವಾಬ್ದಾರಿಯುತ ಕಾನೂನು ಸಚಿವ, ಎಲ್ಲರಿಗಿಂತ ಹೆಚ್ಚು ಓದಿಕೊಂಡಿರುವ ಮಾಧುಸ್ವಾಮಿ ಅಂಥವ್ರು ಬೇಕಾಬಿಟ್ಟಿ ನಾಲಿಗೆ ಹರಿಬಿಟ್ಟು ತಮ್ಮ ವ್ಯಕ್ತಿತ್ವದ ಘನತೆಯನ್ನು ತಾವೇ ಹಾಳು ಮಾಡಿಕೊಳ್ಳುವುದು ಹಾಗೂ ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸೋದು ಎಷ್ಟು ಸರಿ..ರೈತ ಮಹಿಳೆಯನ್ನು ನಿಂದಿಸಿದ ಪ್ರಕರಣವಂತೂ ಸರ್ಕಾರವನ್ನು ತೀವ್ರ  ಇಕ್ಕಟ್ಟಿಗೆ ಸಿಲುಕಿಸಿದೆ.ಈ ಗಂಡಾಂತರದಿಂದ ಸರ್ಕಾರ ಹೇಗೆ ಬರುತ್ತೆನ್ನೋದು ಕುತೂಹಲ ಮೂಡಿಸಿದೆ.

Spread the love
Leave A Reply

Your email address will not be published.

Flash News