ಬಿಡಿಎಗೆ “ದೋಖಾ” ಮಾಡಿದ ಪ್ರತಿಷ್ಟಿತ ಸಂಸ್ಥೆಗಳ “ವಂಚನೆ”ಗೆ ಶಿಕ್ಷೆಯಾಗುತ್ತೋ..ಅಥ್ವಾ “ಮಾಫಿ” ಖಾಯಮ್ಮಾ?!

0

ಬೆಂಗಳೂರು:ಬರೀ ಕೆಟ್ಟ ಕಾರಣಗಳಿಗೆ ಸುದ್ದಿಯಾಗ್ತಿದ್ದ ಬಿಡಿಎ ಫಾರ್ ಎ ಚೇಂಜ್ ಇದೇ ಮೊದಲ ಬಾರಿಗೆ ಒಳ್ಳೆ ಕಾರಣಕ್ಕೆ ಸುದ್ದಿಯಾಗ್ತಿದೆ.ಒಳ್ಳೇ ಕಾರಣ ಎಂದ್ರೆ ಬಿಡಿಎ ತನಗೆ ತಾನೇ ಬೆನ್ ತಟ್ಟಿಕೊಳ್ಳುವಂಥ ಮಹತ್ಸಾಧನೆ ಯೇನಲ್ಲ..ಆದ್ರೆ ಮನಸ್ ಮಾಡಿದ್ರೆ ಬಿಡಿಎ ಜೋಳಿಗೆ ತುಂಬಬಲ್ಲಂಥ ಆದಾಯದ ಮೂಲಕ್ಕೆ ಸಂಬಂಧಿಸಿದ ವಿಷಯ.ಇಷ್ಟಾದ್ರೂ ಈ ಆದಾಯದ ಮೂಲವನ್ನು ಅನ್ನ ಕೊಡುವ  ಬಿಡಿಎ ಉದ್ದಾರಕ್ಕೆ ಆಡಳಿತ ವ್ಯವಸ್ಥೆ ಬಳಸಿಕೊಳ್ತದಾ…ಎನ್ನೋದೇ  ಅನುಮಾನ.

ಬೆಂಗಳೂರು ಅಭಿವೃದ್ದಿ ಪ್ರಾಧಿಕಾರದ ಸ್ಥಿತಿ ಇವತ್ತು  ತನ್ನ ನೌಕರರಿಗೆ ಸಂಬಳ ಕೊಡ್ಲಿಕ್ಕಾಗದಷ್ಟು ಬರ್ಬಾದ್ ಆಗಿದೆ ಎನ್ನೋದು ಎಲ್ಲರಿಗೂ ಗೊತ್ತಿರುವ ಸಂಗತಿ.ಹಿಂದೊಂದು ಕಾಲವಿತ್ತು, ತನ್ನ ನಿರ್ವಹಣೆ ಯನ್ನು ತಾನೇ   ಮಾಡಿಕೊಳ್ಳುವಷ್ಟು ಆರ್ಥಿಕವಾಗಿ ಸಧೃಡವಾಗಿತ್ತು  ಬಿಡಿಎ.ಆದ್ರೆ   ಕಮಿಟ್ಮೆಂಟ್ ಇಲ್ಲದವರ ಅಂದಾದರ್ಬಾರ್ ನಿಂದ ಬಿಡಿಎ ಪರಿಸ್ಥಿತಿ ಇವತ್ತು ಸಂಪೂರ್ಣ ಹಳ್ಳ ಹಿಡಿದೋಗಿದೆ.ನಿಮ್ಗೆ ಗೊತ್ತಿರಲಿ ಅಂಥಾ ಹೇಳ್ತೇವೆ ಕೇಳಿ,ಬಿಡಿಎ ಆಡಳಿತ ವ್ಯವಸ್ಥೆ ನೋಡಿಕೊಳ್ಳುವ ಇಲ್ಲಿನ ಬಾಸ್ ಗಳಿಗೇನೇ ಬಿಡಿಎ ವ್ಯಾಪ್ತಿಯಲ್ಲಿ ಇರುವ ಆಸ್ತಿಗಳೆಷ್ಟನ್ನುವ ಮಾಹಿತಿ ಇಲ್ಲ ಎಂದ್ರೆ ಇನ್ನೆಷ್ಟರ ಮಟ್ಟಿಗಿನ ಪರಿಣಾಮಕಾರಿ ಹಾಗೂ ಉತ್ತಮ ಆಡಳಿತವನ್ನು ಇವ್ರಿಂದ ನಿರೀಕ್ಷಿಸಬಹುದೋ ನೀವೇ ಅಂದಾಜಿಸಿ.

ಹೋಗ್ಲಿ ಬಿಡಿ..ವಿಷಯಕ್ಕೆ ಬರೋಣ.ಬಿಡಿಎ ವಿವಿಧ ಸಾರ್ವಜನಿಕ ಹಾಗೂ ಸಮಾಜಮುಖಿ ಕಾರ್ಯಗಳ ಉದ್ದೇಶದಲ್ಲಿ ಕೆಲಸ ಮಾಡೋ ಸಂಘಸಂಸ್ಥೆಗಳಿಗೆ ಸಿಎ ನಿವೇಶನ(ಸಿವಿಕ್ ಅಮೆನಿಟಿಸ್) ನೀಡಿದೆ. ಇಂದಿ ಗೂ ನೀಡ್ತಾ ಬಂದಿದೆ.ಬಿಡಿಎ ತನ್ನ ವ್ಯಾಪ್ತಿಯಲ್ಲಿ 1400ಕ್ಕೂ ಹೆಚ್ಚು ಸಿಎ ನಿವೇಶಗಳನ್ನು ಸಂಘಸಂಸ್ಥೆಗಳಿಗೆ ಕೊಟ್ಟಿದೆ.ಕೊಡುವಾಗ ಸರ್ಕಾರದ ನಿಯಾಮಗಳಿಗಳಂತೆ ಇಂತಿಷ್ಟು ಅವಧಿಗೆ ಇಂತಿಷ್ಟು ಕನಿಷ್ಠಾ ತೀಕನಿಷ್ಠ ಶುಲ್ಕವನ್ನು ಫಿಕ್ಸ್ ಮಾಡಿದೆ.ಆದ್ರೆ ದುರಂತ ಏನ್ ಗೊತ್ತಾ, ಸಿಎ ನಿವೇಶನಗಳನ್ನು ಪಡೆದ ಅನೇಕ  ಸಂಘಸಂಸ್ಥೆಗಳು ಇವತ್ತು ಅವುಗಳನ್ನು ನಿಗಧಿತ ಉದ್ದೇಶವನ್ನು ಮರೆತು ಲಾಭ ಮಾಡಿಕೊಳ್ಳುವ ಆರ್ಥಿಕ ಗಳಿಕೆಯ ಕೇಂದ್ರಗಳನ್ನಾಗಿ ಮಾಡ್ಕೊಂಡಿವೆ.ಸಿಎ ನಿವೇಶನಗಳಲ್ಲಿ ವಾಣಿಜ್ಯ ಕೇಂದ್ರ(ಶಾಲೆಗಳು ಇವತ್ತು ಅಕ್ಷರದಾಸೋಹದ ಕೇಂದ್ರಗಳಾಗಿ ಎಲ್ಲಿ ಉಳಿದಿವೆ ಹೇಳಿ…)ಗಳು ತಲೆ ಎತ್ತಿ ನಿಂತಿವೆ.ಅದರಲ್ಲೇ ಕೋಟಿ ಕೋಟಿ ದುಡಿವ ಸಂಘಸಂಸ್ಥೆಗಳು ಬಿಡಿಎಗೆ ಕೊಡ್ಬೇಕಾದ ಕನಿಷ್ಠ ಗುತ್ತಿಗೆ ಹಣವನ್ನೂ ಕೊಡ್ದೆ ನಿರ್ಲಕ್ಷ್ಯ ವಹಿಸಿರುವುದನ್ನು ಮೋಸ..ದಗಾ..ವಂಚನೆ..ದೋಖಾ ಎನ್ನಬೇಕೋ ಬೇಡ್ವೋ..

ಬಿಡಿಎಗೆ ದೋಖಾ ಮಾಡ್ಲಿಕ್ಕೆ ಅವಕಾಶ ಕೊಟ್ಟೋರೆ ನಾಲಾಯಕ್-ಅಡ್ಡಕಸುಬಿ ಅಧಿಕಾರಿಗಳಲ್ವೇ?.. ಸಂಘಸಂಸ್ಥೆಗಳು ಗುತ್ತಿಗೆ ಶುಲ್ಕ ಕಟ್ಟದೆ ಬಾಕಿ ಉಳಿಸಿಕೊಂಡಿರುವುದಕ್ಕೆ ಬಿಡಿಎನ ಕೆಲ ಎಂಜಿಲುಕಾಸಿಗೆ ನಾಲಿಗೆ ಒಡ್ಡುವ ಭ್ರಷ್ಟಾತೀಭ್ರಷ್ಟ ಅಧಿಕಾರಿಸಿಬ್ಬಂದಿಯೂ ಕಾರಣವಾಗ್ತಾರೆ.ಯಾರಾದ್ರೂ ಪ್ರಶ್ನೆ ಮಾಡಿ ದರಷ್ಟೇ  ನೊಟೀಸ್ ಭಯದ ಅಸ್ತ್ರ ಪ್ರಯೋಗಿಸುವ ಕೆಲ ನಾಲಾಯಕ್ ಹಾಗೂ  ಅಡ್ಡಕಸುಬಿ ಅಧಿಕಾರಿ ಸಿಬ್ಬಂದಿ ಈ ಸಂಘಸಂಸ್ಥೆಗಳಿಂದ ಪರ್ಸಂಟೇಜ್  ತಿಂದ್ರೆ ಹೊರತು ಬಿಡಿಎಗೆ ಬರ್ಬೇಕಾದ ಲಾಭ ಮಾತ್ರ ಸಂಗ್ರಹಿಸಿ ಕೊಡಲಿಲ್ಲವೇಕೆ..? ಅವರಿಗೆ ನಿಜಕ್ಕು ಬದ್ಧತೆ ಇದ್ದಿದ್ದೇ ಆಗಿದ್ರೆ,ನೂರಾರು ಕೋಟಿ ಮೊತ್ತದ ಗುತ್ತಿಗೆ ಬಾಕಿ ಯಾವತ್ತೋ ಜೋಳಿಗೆ ಸೇರ್ಬೇಕಿತ್ತು.ಇದನ್ನೊಂದು ಹೊಸ ಶೋಧದ ರೀತಿಯಲ್ಲಿ ಬಿಂಬಿಸುವ ಅಗತ್ಯವೇ ಸೃಷ್ಟಿಯಾಗ್ತಿರಲಿಲ್ಲ.ಆದ್ರೆ ಸತ್ಯವೇನು ಗೊತ್ತಾ,ಗುತ್ತಿಗೆ ಬಾಕಿ ಬರಬೇಕಿರೋದು  ಬಿಡಿಎನಲ್ಲಿರೋರಿಗೇಗೆ ಇಷ್ಟವಿರಲಿಲ್ಲ.

ಬಿಡಿಎ 1400 ಸಿಎ ನಿವೇಶನಗಳನ್ನೇನು ಸಂಘಸಂಸ್ಥೆಗಳಿಗೆ ಲೀಸ್ ಆಧಾರದಲ್ಲಿ ನೀಡಿದೆ.ಅದರಲ್ಲಿ ಬಹುತೇಕ ಸಿಎ ನಿವೇಶನಗಳು ಗುತ್ತಿಗೆ ಬಾಕಿ ಪಾವತಿಸಿಲ್ಲ.ಗುತ್ತಿಗೆ ಅವಧಿ ಮುಗಿದ್ರೂ ಹಣ ಪಾವತಿಸುವ ಗೋಜಿಗೆ ಹೋಗಿಲ್ಲ.ಪಡೆದ ಉದ್ದೇಶವೇ ಏನೋ..ಆದ್ರೆ ಅವುಗಳನ್ನು ಬಳಸಿಕೊಳ್ತಿರೋದೇ ಇನ್ನೇನಕ್ಕೋ..ಗುತ್ತಿಗೆ ಅವಧಿ ಮುಗಿದ್ಮೇಲೆ ಮರುನವೀಕರಣ ಮಾಡ್ಕೋಬೇಕೆನ್ನುವ ಕಾಮನ್ ಸೆನ್ಸೂ ಇಲ್ಲದೆ ಸಂಘಸಂಸ್ಥೆಗಳು ನಡೆದುಕೊಂಡಿವೆ.ಇದೆಲ್ಲಾ ಮೇಲ್ನೋಟಕ್ಕೆ ಕಣ್ಣಿಗೆ ರಾಚುವ ಅಕ್ರಮ ಎಂದು ಗೊತ್ತಿದ್ರೂ ಕ್ರಮ ಕೈಗೊಳ್ಳದೆ ಸುಮ್ಮನಾದ ಬಿಡಿಎನ ಕೆಲ ನಾಲಾಯಕ್ ಗಳಿಂದಾಗಿ  ಮೊದಲ ಹಂತದ ಲೆಕ್ಕ ಪರಿಶೋಧನೆಯಲ್ಲಿ 152,14,87,699..(152 ಕೋಟಿ 14 ಲಕ್ಷದ 87 ಸಾವಿರದ 699 ರೂ.) ಬಿಡಿಎ ಖಜಾನೆಗೆ ಸೇರದೆ ಬಿಟ್ಟೋಗಿದೆ.ಆದ್ರೆ ನೊಟೀಸ್ ಭಯ ಹುಟ್ಟಿಸಿ ಅಧಿಕಾರಿ-ಸಿಬ್ಬಂದಿ ಪೀಕಿರುವ ಹಣ ಅದೆಷ್ಟೋ.

ಅತೀ ದೊಡ್ಡ ಮೊತ್ತವಾದ 81 ಕೋಟಿ 27 ಲಕ್ಷದ 63 ಸಾವಿರದ 32 ರೂ ಗುತ್ತಿಗೆ ಬಾಕಿ ಉಳಿಸಿಕೊಂಡಿರುವ ರಾಜ್ಯ ಒಕ್ಕಲಿಗರ ಸಂಘ                           
ಅತೀ ದೊಡ್ಡ ಮೊತ್ತವಾದ 81 ಕೋಟಿ 27 ಲಕ್ಷದ 63 ಸಾವಿರದ 32 ರೂ ಗುತ್ತಿಗೆ ಬಾಕಿ ಉಳಿಸಿಕೊಂಡಿರುವ ರಾಜ್ಯ ಒಕ್ಕಲಿಗರ ಸಂಘ
4 ಕೋಟಿ 32 ಲಕ್ಷದ 28 ಸಾವಿರದ 911 ರೂ ಗುತ್ತಿಗೆ ಬಾಕಿ ಉಳಿಸಿಕೊಂಡಿರುವ ಆಕ್ಸ್ ಫರ್ಡ್ ಇಂಗ್ಲೀಷ್ ಶಾಲೆ                   
4 ಕೋಟಿ 32 ಲಕ್ಷದ 28 ಸಾವಿರದ 911 ರೂ ಗುತ್ತಿಗೆ ಬಾಕಿ ಉಳಿಸಿಕೊಂಡಿರುವ ಆಕ್ಸ್ ಫರ್ಡ್ ಇಂಗ್ಲೀಷ್ ಶಾಲೆ       

ಕಮಿಷನರ್ ಸಾಹೇಬ್ರಿಗೆ ತಡವಾಗಿ ಜ್ಞಾನೋದಯ ಆಗಿದ್ದೇಗೆ..ಬಿಡಿಎ ಕಮಿಷನರ್ ಪ್ರಕಾಶ್ ಅವರ ಕಾಳಜಿ ಮೆಚ್ಚುವ ಬೆನ್ನಲ್ಲೇ ಅವರಿಗೆ ದಿಡೀರ್ ಸೃಷ್ಟಿಯಾಗಿರುವ ಆಸಕ್ತಿ-ಕಾಳಜಿ ಬಗ್ಗೆಯೂ ಪ್ರಶ್ನೆ ಮೂಡುತ್ತೆ.ಅವರು ಬಂದ ದಿನಗಳಿಂದ್ಲೂ ಇದರ ಬಗ್ಗೆ ಕೇಳಿದಾಗ್ಲೆಲ್ಲಾ ಏನೋ ನೆವ-ಸಬೂಬು ಹೇಳಿ ಜಾರಿಕೊಳ್ಳುತ್ತಿದ್ದ ಪ್ರಕಾಶ್ ಅವ್ರು ಪತ್ರಿಕೆಗಳಲ್ಲಿ ಈ ಬಗ್ಗೆ ಎಚ್ಚರಿಕೆಯ ಜಾಹಿರಾತು ನೀಡಿರುವುದು ಅಚ್ಚರಿ ಮೂಡಿಸಿದೆ.ಬಿಡಿಎ ಆಸ್ತಿಗಳ ಬಗ್ಗೆ ಇಷ್ಟೊಂದು ಕಾಳಜಿ ಬಂತಾ ಎಂದು ಆಶ್ಚರ್ಯನೂ ಕೂಡ ಆಗ್ತದೆ.ಇದರ ಹಿಂದೆ ಬೇರೆ ಉದ್ದೇಶಗಳೇನಾದ್ರೂ ಇವೆಯೇ ಎಂಬ ಪ್ರಶ್ನೆ ಕೂಡ ಮೂಡುತ್ತೆ.

ಸಂಕಷ್ಟದಲ್ಲಿರುವ ಸರ್ಕಾರದ ಬೊಕ್ಕಸಕ್ಕೆ ಗುತ್ತಿಗೆ ಹಣ ಸೇರೋಗುತ್ತಾ?:ಲಾಕ್ ಡೌನ್ ಸಂದರ್ಭದಲ್ಲಿ ಕಮಿಷನರ್ ಪತ್ರಿಕೆಗಳಲ್ಲಿ ಜಾಹಿರಾರು ನೀಡಿ ಗುತ್ತಿಗೆ ಶುಲ್ಕ ಬಾಕಿ ಪಾವತಿಗೆ  15 ದಿನಗಳ ಗಡುವು ನೀಡಿರೋದು ಸಾಕಷ್ಟು ಅನುಮಾನಕ್ಕೆ ಕಾರಣವಾಗುತ್ತೆ.ಕೊರೊನಾ ಲಾಕ್ ಡೌನ್ ಸಮಯದಲ್ಲಿ ಸರ್ಕಾರ ಪದೇ ಪದೇ ಸಂಕಷ್ಟದಲ್ಲಿದೆ ಎಂದು ಹೇಳ್ತಿದೆ.ಕಾರ್ನರ್ ನಿವೇಶನಗಳನ್ನು ಹರಾಜು ಮಾಡಿ ಸರ್ಕಾರದ ಬೊಕ್ಕಸಕ್ಕೆ ಹಣ ಸೇರಿಸ್ತೇವೆ ಎಂದು ಬೇರೆ ಹೇಳಿದೆ.ಎಲ್ಲೆಲ್ಲಿ ಆದಾಯದ ಮೂಲಗಳಿವೆಯೋ ಅದನ್ನೆಲ್ಲಾ ಕ್ರೋಢೀಕರಿಸುವುದಾಗಿ ಹೇಳಿರುವುದರಿಂದ ಈ ನೊಟೀಸ್ ಕೂಡ ಅದರ ಮತ್ತೊಂದು ಪ್ರಯತ್ನನಾ ಎಂದೆನಿಸ್ತಿದೆ.ಒಂದ್ವೇಳೆ ಊಹೆಗಳು ಹಾಗೆಯೇ ಸತ್ಯವಾದ್ರೆ ಬಿಡಿಎಗೆ ಬಂದ ಲಾಭ ಸಂಪೂರ್ಣ ಶೂನ್ಯ.ಬಿಡಿಎ ಕಲೆಕ್ಟ್ ಮಾಡಿದರೆ ಒಂದು ಅಕೌಂಟಬಿಲಿಟಿಯಾದ್ರೂ ಇರುತ್ತೆ,ಆದ್ರೆ ಸರ್ಕಾರದ ಬೊಕ್ಕಸಕ್ಕೆ ಹೋಗ್ತಿರುವ ಹಾಗೆಯೇ ಖರ್ಚಾಗುತ್ತಿರುವ ಹಣಕ್ಕೆ ಲೆಕ್ಕವೇ ಇಲ್ಲದ ಸನ್ನಿವೇಶದಲ್ಲಿ ಇದು ಕೂಡ ಅದರೊಳಗೆ ಸೇರೋಗುತ್ತಾ ಎನ್ನುವ ಶಂಕೆ ಸಹಜವಾಗೇ ಕಾಡುತ್ತಿದೆ.

15 ಕೋಟಿ 84 ಲಕ್ಷದ 18 ಸಾವಿರದ 663ರೂ ಬಾಕಿ ಉಳಿಸಿಕೊಂಡಿರುವ ಪೀಪಲ್ ಎಜುಕೇಷನ್ ಸೊಸೈಟಿ               
15 ಕೋಟಿ 84 ಲಕ್ಷದ 18 ಸಾವಿರದ 663ರೂ ಬಾಕಿ ಉಳಿಸಿಕೊಂಡಿರುವ ಬೆಂಗಳೂರಿ ನ ಪ್ರತಿಷ್ಟಿತ  ಪೀಪಲ್ ಎಜುಕೇಷನ್ ಸೊಸೈಟಿ(PES  ಇನ್ಸಿಟ್ಯೂಟ್) 

ಪ್ರೆಷರ್ ಗೆ ಮಣಿಯೋದೇ ಇಲ್ವಾ ಕಮಿಷನರ್ ಪ್ರಕಾಶ್:ಕಮಿಷನರ್ ಪ್ರಕಾಶ್ ಅವರ ಕಾಳಜಿ ಬಗ್ಗೆ ಮೆಚ್ಚುಗೆ ಇದ್ದರೂ ಗುತ್ತಿಗೆ ಬಾಕಿ ಪಟ್ಟಿಯಲ್ಲಿರುವ ಪ್ರತಿಷ್ಟಿತ ಸಂಘಸಂಸ್ಥೆಗಳವರ ಒತ್ತಡ ತಂತ್ರಕ್ಕೆ ಮಣಿಯೋದೇ ಇಲ್ವಾ ಎನ್ನುವುದನ್ನು ಕರಾರುವಕ್ಕಾಗಿ ಹೇಳೊಕ್ಕೆ ಸಾಧ್ಯವೇ ಇಲ್ಲ..ಏಕೆಂದ್ರೆ ಪಟ್ಟಿಯಲ್ಲಿರುವ ಕೆಲ ಬಾಕಿದಾರರು ಸರ್ಕಾರವನ್ನೇ ನಿಯಂತ್ರಿಸುವಷ್ಟು ಪ್ರಭಾವಿಗಳಾ ಗಿದ್ದಾರೆ.ಅವರು ತಮ್ಮ ಬುದ್ದಿ ಓಡಿಸಿ ಸರ್ಕಾರದ ಮೂಲಕವೇ ಕಮಿಷನರ್ ಮೇಲೆ ಒತ್ತಡ ತಂದ್ರೆ ,ಇಲ್ಲ ಸಾರ್ ಆಗೊಲ್ಲ..ಎಂದು ಕಡ್ಡಿ ಮುರಿದಂಗೆ ಹೇಳೊಕ್ಕಾಗುತ್ತಾ.ಆದ್ರೂ ಯಾವುದೇ ಒತ್ತಡಕ್ಕೆ ಮಣಿಯುವ ಪ್ರಶ್ನೆಯೇ ಇಲ್ಲ ಎಂದಿದ್ದಾರೆ ಪ್ರಕಾಶ್.ಅದನ್ನು ಕೂಡ ನೋಡೇ ಬಿಡೋಣ ಎನ್ನುವುದು ಸಾಮಾಜಿಕ ಕಾರ್ಯಕರ್ತ ಸಾಯಿದತ್ತಾ ಸವಾಲ್.

ಸಿಎ ನಿವೇಶನಗಳಿಂದ ಬರಬೇಕಿರುವ ಗುತ್ತಿಗೆ ಶುಲ್ಕವನ್ನು ಅಧಿಕಾರಿ-ಸಿಬ್ಬಂದಿ ನೀಯತ್ತಾಗಿ ಸಂಗ್ರಹ ಮಾಡಿಕೊಟ್ಟರೆ ಬಿಡಿಎ ಜೋಳಿಗೆ ಭರ್ತಿಯಾಗಿ,ಆರ್ಥಿಕ ಸಂಕಷ್ಟ ಸ್ವಲ್ಪ ಮಟ್ಟಿಗೆ ದೂರವಾಗೋದ್ರಲ್ಲಿ ಅನುಮಾನವೇ ಇಲ್ಲ.ಪಟ್ಟಿಯನ್ನೇನೋ ಧೈರ್ಯಮಾಡಿ ಪ್ರಕಟಿಸಲಾಗಿದೆ.ಆದ್ರೆ ಅವುಗಳಲ್ಲಿ ಎಷ್ಟು ಸಂಘಸಂಸ್ಥೆಗಳು ನೀಯತ್ತಾಗಿ  ಬಾಕಿಯನ್ನು ಪಾವತಿಸುತ್ತವೆ ಎನ್ನೋದೇ ದೊಡ್ಡ ಪ್ರಶ್ನೆ.ಪಟ್ಟಿ ಪ್ರಕಟಿಸಿ ತಮ್ಮ ಬೆನ್ ತಟ್ಟಿಕೊಂಡಿರುವ ಕಮಿಷನರ್ ಪ್ರಕಾಶ್ ಅವರಿಗೆ ಇದು ಸವಾಲು ಕೂಡ.

ಗುತ್ತಿಗೆ ಶುಲ್ಕ ಬಾಕಿ ಉಳಿಸಿಕೊಂಡಿರುವ  ಟಾಪ್ 10 “ದೋಖಾ”   ಸಂಸ್ಥೆಗಳ ವಿವರ

ಸಂಸ್ಥೆ ಹೆಸರು.                                           ಬಾಕಿ ಉಳಿಸಿಕೊಂಡಿರುವ ಗುತ್ತಿಗೆ ಹಣ 

ರಾಜ್ಯ ಒಕ್ಕಲಿಗರ ಸಂಘ                            81 ಕೋಟಿ 27 ಲಕ್ಷದ 63 ಸಾವಿರದ 32 ರೂ

ಪೀಪಲ್ ಎಜುಕೇಷನ್ ಸೊಸೈಟಿ               15 ಕೋಟಿ 84 ಲಕ್ಷದ 18 ಸಾವಿರದ 663ರೂ

ಗೊಮಟೇಶ ವಿದ್ಯಾಪೀಠ                           14 ಕೋಟಿ 91 ಲಕ್ಷದ 48 ಸಾವಿರದ 729 ರೂ

ಆಕ್ಸ್ ಫರ್ಡ್ ಇಂಗ್ಲೀಷ್ ಶಾಲೆ                   4 ಕೋಟಿ 32 ಲಕ್ಷದ 28 ಸಾವಿರದ 911 ರೂ

ದಂಡಪಾಣಿ  ಜ್ಞಾನ ಮಂದಿರ                    3 ಕೋಟಿ 1 ಲಕ್ಷದ 67 ಸಾವಿರದ 243 ರೂ

ಜಗದ್ಗರು ರೇಣುಕಾಚಾರ್ಯ ಶಾಲೆ             2 ಕೋಟಿ 95 ಲಕ್ಷದ 77 ಸಾವಿರದ 517 ರೂ

ಕಾಸ್ಮೋಪಾಲಿಟಿನ್ ಎಜುಕೇಷನ್  ಟ್ರಸ್ಟ್   2 ಕೋಟಿ 75 ಲಕ್ಷದ  96 ಸಾವಿರದ  687 ರೂ

ವಿಜಯ ಬ್ಯಾಂಕ್ ಎಂಪ್ಲಾಯಿಸ್ ಸಂಸ್ಥೆ    2 ಕೋಟಿ  59  ಲಕ್ಷದ 67 ಸಾವಿರದ   554  ರೂ

ಉದಯ ವಿದ್ಯಾಕೇಂದ್ರ                             2  ಕೋಟಿ 40 ಲಕ್ಷದ 55 ಸಾವಿರದ 812 ರೂ 

ಕಾರ್ಮೆಲ್ ಎಜುಕೇಷನ್ ಸೊಸೈಟಿ            2 ಕೋಟಿ 16 ಲಕ್ಷದ 46 ಸಾವಿರದ  08 ರೂ  

Spread the love
Leave A Reply

Your email address will not be published.

Flash News