“ವೀರ” ಸಾರ್ವಕರ್ ವಿವಾದದ ಮೂಲಪುರುಷರೇ ಈ “ತ್ರಿಮೂರ್ತಿ”?!

0

ಬೆಂಗಳೂರು:ವೀರ ಸಾವರ್ಕರ್ ವಿವಾದ ತಣ್ಣಗಾಗುತ್ತಲೇ ಇಲ್ಲ..ಸರ್ಕಾರವೇ ಅದನ್ನು ತಣ್ಣಗೆ ಮಾಡೊಕ್ಕೆ ಯತ್ನಿಸಿದ್ರೂ ಅದರ ಸುತ್ತ ದಿನೇ ದಿನೇ ಒಂದಲ್ಲಾ ಒಂದು ವಿವಾದಗಳು ಗಿರಕಿ ಹೊಡೆಯುತ್ತಲೇ ಇವೆ.ಕೊರೋನಾ ಲಾಕ್ ಡೌನ್ ಟೈಮಲ್ಲಿ ಮಾಡೊಕ್ಕೆ ಸಿಕ್ಕಾಪಟ್ಟೆ ಕೆಲಸಗಳಿರುವಾಗ ಸಾವರ್ಕರ್ ವಿವಾದವನ್ನೇಕೆ ಎಳೆದು ತರಲಾಗಿದೆ.ಅದನ್ನು ತಣ್ಣಗಾಗೊಕ್ಕೆ ಏಕೆ ಬಿಡಲಾಗ್ತಿಲ್ಲ ಎನ್ನುವ ಪ್ರಶ್ನೆಗಳು ಕಾಡಹತ್ತಿವೆ.ಬೇಡವೇ ಬೇಡವಾಗಿದ್ದ ಈ ವಿವಾದಕ್ಕೆ ಕಾರಣ ಯಾರು..ಇದರ ಮೂಲ ಪುರುಷರು ಯಾರು..ಯಾರನ್ನು ಮೆಚ್ಚಿಸ್ಲಿಕ್ಕೆ ಈ ಎಲ್ಲಾ ಹೈಡ್ರಾಮಾ ನಡೆಯಿತು..ಅವರ  ಉದ್ದೇಶಗಳು ಏನಿದ್ವು..ಏನ್ ಮಾಡ್ಲಿಕ್ಕೆ ಹೋಗಿ ಏನೆಲ್ಲಾ ಮಾಡಿಕೊಂಡ್ರೂ..ಈ ಎಲ್ಲಾ ದಂಡಿ ಪ್ರಶ್ನೆಗಳಿಗೆ EXCLUSIVE ಆದ ಉತ್ತರವನ್ನು ಹೊತ್ತು ತಂದಿದೆ ಕನ್ನಡ ಫ್ಲಾಶ್ ನ್ಯೂಸ್.

ವೀರ ಸಾವರ್ಕರ್ ದೇಶಪ್ರೇಮಿಯೋ..ಅಲ್ವೋ..ಎನ್ನುವ ವಾದ ನಡೆಯುತ್ತಿರುವುದು ಈಗೇನಲ್ಲ..ಅದಕ್ಕೊಂದು ದೊಡ್ಡ ಇತಿಹಾಸವಿದೆ.ಬಿಜೆಪಿ ಪಾಲಿಗೆ ವೀರ ಸಾವರ್ಕರ್ ಅವತಾರಪುರುಷ..ಆದ್ರೆ ಕಾಂಗ್ರೆಸ್ ಇದನ್ನು ಒಪ್ಪಿಕೊಳ್ಳೊಲ್ಲ..ಅದು ಪಕ್ಷಗಳ ಸೈದ್ಧಾಂತಿಕ ಸಂಘರ್ಷವಿರ್ಬೋದು ಬಿಡಿ..ಆದ್ರೆ ಬಿಜೆಪಿ ಅಧಿಕಾರದಲ್ಲಿದ್ದಾಗ್ಲೆಲ್ಲಾ  ವೀರ ಸಾವರ್ಕರ್ ಅವರ ವಿಚಾರದಲ್ಲಿ ದೊಡ್ಡ ವಾಕ್ಸಮರೇ ನಡೆದೋಗ್ತದೆ.ಆದ್ರೆ ಈ ಬಾರಿ ಯಾರಿಗೂ ಬೇಡವಾಗಿದ್ದ ಸಾವರ್ಕರ್ ವಿಚಾರವನ್ನು ಎಳೆದುತಂದಿದ್ದರ ಹಿಂದೆ ದೊಡ್ಡ ರಾಜಕೀಯ ಷಡ್ಯಂತ್ರ-ಮಸಲತ್ತು-ಓಲೈಕೆ-ಅಧಿಕಾರದ ಹಪಾಹಪತನವಿತ್ತೆನ್ನುವ ಅಭಿಪ್ರಾಯವನ್ನು ಖುದ್ದು ಬಿಜೆಪಿಯೊಳಗಿನ ಮುಖಂಡರು-ಕಾರ್ಯಕರ್ತರೇ  ವ್ಯಕ್ತಪಡಿಸ್ತಾರೆ.

ಶಾಸಕ ವಿಶ್ಚನಾಥ್
ಶಾಸಕ ಎಸ್.ಆರ್. ವಿಶ್ಚನಾಥ್
ಮುನೀಂದ್ರಕುಮಾರ್
ಮುನೀಂದ್ರಕುಮಾರ್
ಕಾರ್ಪೊರೇಟರ್ ಸತೀಶ್
ಕಾರ್ಪೊರೇಟರ್ ಸತೀಶ್

ಇವ್ರೇ ಆ  ವಿವಾದದ ರೂವಾರಿಪುರುಷರು..ವಿವಾದ ಶುರುವಾಗುವುದೇ ಯಲಹಂಕ ವಿಧಾನಸಭಾ ಕ್ಷೇತ್ರದಲ್ಲಿ.ಕ್ಷೇತ್ರ ಶಾಸಕ ಬಿಜೆಪಿಯ ಎಸ್.ಆರ್ ವಿಶ್ವನಾಥ್.ಹೇಳಿಕೇಳಿ ವಿಶ್ಚನಾಥ್ ಅವ್ರದು. ಆರ್ ಎಸ್ ಎಸ್ ಮೂಲ.ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ರಾಜಕೀಯ ಕಾರ್ಯದರ್ಶಿ.ವಿವಾದದ ಮೂಲಪುರುಷರೇ ಈ ವಿಶ್ಚನಾಥ್..ವಿವಾದದ ಕಿಡಿ ಹಚ್ಚಿಕೊಂಡಿದ್ದೇ ಇಲ್ಲಿ.ಒಂದೆಡೆ ಯಡಿಯೂರಪ್ಪ ಅವರನ್ನು ಮೆಚ್ಚಿಸುವುದು ಇನ್ನೊಂದೆಡೆ ಸಂಘಪರಿವಾರದವ್ರ ದೃಷ್ಟಿಯಲ್ಲಿ ಹೀರೋ ಆಗಬೇಕೆನ್ನುವ ಕಾರಣಕ್ಕೆ ಪ್ರಯೋಗಿಸಿದ ಅಸ್ತ್ರವೇ ಸಾವರ್ಕರ್ ಹೆಸರು ಎನ್ನುವುದು ಬಿಜೆಪಿಯಲ್ಲಿರೋ ಹಿರಿಯರ ಅಭಿಪ್ರಾಯ.

ಈ ಎರಡು ಕಾರಣಗಳಿಗಾಗಿ ಬಹುದೊಡ್ಡ ರಿಸ್ಕನ್ನು ಮೈಮೇಲೆ ಎಳೆದುಕೊಳ್ಳೊಕ್ಕೆ ಸಿದ್ಧವಾದ ವಿಶ್ವನಾಥ್ ಅವರ ಧೈರ್ಯವನ್ನು ಮೆಚ್ಚಲೇಬೇಕು.ಈ ಬುದ್ಧಿವಂತಿಕೆ ಭಾಗವಾಗಿ ಯಲಹಂಕ ಉಪನಗರ ವಾರ್ಡ್ ನ ಕಾರ್ಪೊರೇಟರ್ ಎಂ,ಸತೀಶ್ ಅವರ ಮೂಲಕ 29-0-2020 ರಂದು ಆಡಳಿತ ಪಕ್ಷದ ನಾಯಕ ಮುನೀಂದ್ರ ಕುಮಾರ್ ಅವರಿಗೆ ಪತ್ರವೊಂದನ್ನು ಬರೆಯಿಸುತ್ತಾರೆ. ಬಹುಷಃ ವೀರ ಸಾವರ್ಕರ್ ಬಗ್ಗೆ ಶಾಸಕರಿ ಗಿರುವಷ್ಟು ಮಾಹಿತಿ ಇಲ್ಲದ ಸತೀಶ್ ತಮ್ಮ ವಾರ್ಡ್ ವ್ಯಾಪ್ತಿಯಲ್ಲಿ ನಿರ್ಮಾಣವಾಗಿರುವ 400 ಮೀಟರ್ ಫ್ಲೈ ಓವರ್ ಗೆ ಸಾವರ್ಕರ್ ಹೆಸರಿಡಬೇಕೆಂದು ಮನವಿ ಮಾಡ್ತಾರೆ.

ವೀರ ಸಾವರ್ಕರ್ ವಿಚಾರದಲ್ಲಿ ಹೇಗೆಲ್ಲಾ ಡ್ರಾಮಾ ನಡೆಯಿತೆಂದ್ರೆ,ಕೆಲವು ಮೂಲಗಳ ಪ್ರಕಾರ ಈ ವಿಚಾರದ ಬಗ್ಗೆ ಶಾಸಕ ವಿಶ್ವನಾಥ್ ಮುನೀಂದ್ರಕುಮಾರ್ ಜೊತೆ ಮುಂಚೆಯೇ ಮಾತನಾ ಡಿದ್ದಾರಂತೆ.ತುಂಬಾ ಸೂಕ್ಷ್ಮವಾದ ವಿಚಾರವನ್ನು ಬುದ್ದಿವಂತಿಕೆಯಿಂದಲೇ ಹ್ಯಾಂಡಲ್ ಮಾಡಬೇಕೆಂದ ಬಿಬಿಎಂಪಿ ಆಡಳಿತ ಪಕ್ಷದ ಮುನೀಂದ್ರ ಕುಮಾರ್ ಪ್ರಸ್ತಾವನೆಯ ಪತ್ರವನ್ನು ತಮಗೆ ಬರೆಯುವಂತೆ ಐಡ್ಯಾ ಕೊಟ್ರಂತೆ.ನೀವು ಲೆಟರ್ ಕೊಡಿ,ಅದನ್ನು ಅಪ್ರೂವಲ್ ಮಾಡಿಸೋ ಜವಾಬ್ದಾರಿ ನಂದೆಂದು ಒಪ್ಪಿಕೊಂಡೇ ಈ ಎಲ್ಲಾ ಗೇಮ್ ಪ್ಲ್ಯಾನ್ ಮಾಡಲಾಯಿತೆನ್ನಲಾಗಿದೆ.

ಮೇಯರ್ ಅವರಿಗೇನೆ ಈ ವಿಚಾರ ಗೊತ್ತಿಲ್ಲ ಎಂದ್ರೇಗ್ಹೇ..? :ಬಿಬಿಎಂಪಿಯ ಸಾಕಷ್ಟು ವಿಚಾರಗಳಲ್ಲಿ ಮೇಯರ್ ಅವರನ್ನು ಸರ್ಕಾರವಾಗ್ಲಿ,ಸಂಘ ಪರಿವಾರವಾಗ್ಲಿ ಏಕೆ ದೂರವಿಟ್ಟಿದೆ ಎನ್ನೋದೇ ಗೊತ್ತಾಗ್ತಿಲ್ಲ.ವೀರ ಸಾವರ್ಕರ್  ರಂಥ ಅತ್ಯಂತ ಸೂಕ್ಷ್ಮವಾದ ವಿಚಾರವನ್ನೂ ಅವರ ಗಮನಕ್ಕೆ ತಂದಿಲ್ಲ ಎನ್ನುವುದು ಆಶ್ಚರ್ಯಕರ. 400 ಮೀಟರ್ ಉದ್ದದ ಮೇಲ್ಸೇತುವೆಗೆ ಸಾವರ್ಕರ್ ಅವರ ಹೆಸರನ್ನು ಇಡುವ  ವಿಚಾರದಲ್ಲಿ ಆರೋಪ-ಪ್ರತ್ಯಾರೋಪಗಳು ಸೃಷ್ಟಿಯಾಗಿ ಪ್ರತಿಭಟನೆ ನಡೆದ ಮೇಲೆಯೇ ಮೇಯರ್ ಗೌತಮ್ ಕುಮಾರ್ ಗೆ ಗೊತ್ತಾದದ್ದಂತೆ.  ಕೌನ್ಸಿಲ್ ಮೀಟಿಂಗ್ನಲ್ಲಿ ಈ ವಿಚಾರಕ್ಕೆ ಕುರಿತಾದ ಅನುಮೋದನೆ ಪಡೆಯಲಾಗಿದೆ ಎಂದು.ಕೌನ್ಸಿಲ್ ಮೀಟಿಂಗ್ನ ಕೊನೇ ಕ್ಷಣಗಳಲ್ಲಿ ತಮ್ಮ ಹಿತಾಸಕ್ತಿಗೆ ಅನುಗುಣವಾಗಿ ಧಾವಂತದಲ್ಲಿ ಅಪ್ರೂವಲ್ ಪಡೆಯುವ ನಡುವೆಯೇ ವೀರಸಾವರ್ಕರ್ ನಾಮಕರಣದ ವಿಚಾರವನ್ನು ಅಪ್ರೂವ್ಡ್ ಮಾಡಲಾಗಿದೆಯಾ ಗೊತ್ತಾಗ್ತಿಲ್ಲ.ಆದ್ರೆ 29-02-2020ರ ಕೌನ್ಸಿಲ್ ಮೀಟಿಂಗ್ನಲ್ಲಿ ಪದ್ಮನಾಭ ರೆಡ್ಡಿ ಹಾಗೂ ಮುನೀಂದ್ರಕುಮಾರ್ ಇದಕ್ಕೆ ಅಪ್ರೂವಲ್ ಕೊಡಿಸಿರುವುದಂತೂ ಸತ್ಯ.

ಪಕ್ಷದ ಮುಖಂಡರು ಹಾಗೂ ಸಂಘಪರಿವಾರದ ದೃಷ್ಟಿಯಲ್ಲಿ ಹೀರೋಯಿಸಂ ತೋರಿಸ್ಲಿಕ್ಕೆ ಹೋದವ್ರು ಅದರಲ್ಲೇನಾದ್ರೂ ಯಶಸ್ವಿಯಾದ್ರಾ..ಖಂಡಿತಾ ಇಲ್ಲ..ಸರ್ಕಾರವೇ ಕೋವಿಡ್-19 ಸಂದರ್ಭದಲ್ಲಿ ಅನಗತ್ಯ ವಿವಾದ ಬೇಡವೆಂದು ಮೇಲ್ಸೇತುವೆ ಕಾನ್ಸೆಪ್ಟನ್ನೇ ಕೈ ಬಿಟ್ಟು ವಿಶ್ಚನಾಥ್ ಸೇರಿದಂತೆ ಬಿಬಿಎಂಪಿ ಆಡಳಿತ ವ್ಯವಸ್ಥೆಯನ್ನು ತರಾಟೆಗೆ ತೆಗೆದುಕೊಂಡಿದೆ.ಆದ್ರೂ ಪಟ್ಟುಬಿಡದ ವಿಶ್ಚನಾಥ್ ಕೆಲವರನ್ನು ಛೂ ಬಿಟ್ಟು ಮೇಲ್ಸೇತುವೆ ವಿವಾದವನ್ನು ಜೀವಂತವಾಗಿಡೊಕ್ಕೆ ಯತ್ನಿಸ್ತಿದ್ದಾರೆನ್ನೋ ಆರೋಪ ಕೇಳಿಬರುತ್ತಿದೆ.

ವೀರ ಸಾವರ್ಕರ್ ಹೆಸರನ್ನೇ ಇಡಬೇಕೆಂದು ಬಿಬಿಎಂಪಿ ಮೇಯರ್ ಗೆ ಪ್ರಸ್ತಾವನೆ
ವೀರ ಸಾವರ್ಕರ್ ಹೆಸರನ್ನೇ ಇಡಬೇಕೆಂದು ಬಿಬಿಎಂಪಿ ಅವರಿಗೆ ಮೇಯರ್ ಗೆ  ಪ್ರಸ್ತಾವನೆ
ವೀರ ಸಾವರ್ಕರ್ ಹೆಸರು ಬೇಡ..ಪ್ರೊ.ಎಂ.ಡಿ ನಂಜುಂಡಸ್ವಾಮಿ ಹೆಸರನ್ನಿಡಿ ಎಂದು ಮನವಿ
ವೀರ ಸಾವರ್ಕರ್ ಹೆಸರು ಬೇಡ..ಪ್ರೊ.ಎಂ.ಡಿ ನಂಜುಂಡಸ್ವಾಮಿ ಹೆಸರನ್ನಿಡಿ ಎಂದು ಮನವಿ

ಯಾವೆಲ್ಲಾ ಹೆಸರುಗಳನ್ನಿಡಬೇಕೆನ್ನುವ ಪ್ರಸ್ತಾಪವಿದೆ ಗೊತ್ತಾ? : ಇದೆಲ್ಲದರ ನಡುವೆ ಇದೀಗ ಮತ್ತೊಂದಷ್ಟು ವಿಚಾರಗಳು ಮೇಲ್ಸೇತುವೆ ನಾಮಕರಣ ವಿವಾದವನ್ನು ಜೀವಂತವಾಗಿಡೊಕ್ಕೆ ಯತ್ನಿಸ್ತಿವೆ ಕೆಲವೊಂದು ಸಂಘಟನೆಗಳು.ಕನ್ನಡ ಚಳುವಳಿಯ ಗುರುದೇವ್ ನಾರಾಯಣಕುಮಾರ್ ರೈತ ಹೋರಾಟದ ಸಾಕ್ಷಿಪ್ರಜ್ಞೆಯಂತಿದ್ದ ಪ್ರೊ.ಎಂ.ಡಿ ನಂಜುಂಡಸ್ವಾಮಿ ಹೆಸರನ್ನು ಮೇಲ್ಸೇತುವೆಗೆ ನಾಮಕರಣ ಮಾಡುವಂತೆ ಮೇಯರ್ ಗೆ ಮನವಿ ಮಾಡಿದ್ದಾರೆ.ವಂದೇ ಮಾತರಂ ಸಂಘಟನೆಯ ಮುಖಂಡ ಶಿವಕುಮಾರ್ ನಾಯ್ಕ ಹಾಗೂ ಹಿಂದೂಪರ ಹೋರಾಟಗಾರ ಪುನೀತ್ ಕೆರೆಹಳ್ಳಿ ಅವ್ರು ಸಾವರ್ಕರ್ ಹೆಸರನ್ನು ಬಿಟ್ಟು ಬೇರ್ಯಾರ ಹೆಸರನ್ನು ಇಡಬಾರದೆಂದು ಎಚ್ಚರಿಕೆ ಕೊಟ್ಟು ಹೋಗಿದ್ದಾರೆ.ಒಂದ್ ಹೆಜ್ಜೆ ಮುಂದ್ಹೋಗಿ ಮೇಲ್ಸೇತುವೆಗೆ  ಸಾವರ್ಕರ್ ಹೆಸರನ್ನು ಬರೆಯಿಸಿ ಬಂದಿದ್ದಾರೆ.

ಇನ್ನು ಕೆಲವರು ಇನ್ಫೋಸಿಸ್ ನ ಸುಧಾಮೂರ್ತಿ ಅವರ ಹೆಸರನ್ನಿಡಿ ಎಂದು ಒತ್ತಾಯಿಸಿದ್ದಾರೆ.ಯೋಧರ ಪರವಾಗಿ ಸದಾ ಧ್ವನಿ ಎತ್ತುತ್ತಾ ಬಂದಿರುವ ಶಶಾಂಕ್ ಅವ್ರು ಮೇಯರ್ ಹಾಗೂ ಕಮಿಷನರ್ ಅವರನ್ನು ಭೇಟಿ ಮಾಡಿ ಮೇಜರ್ ಸಂದೀಪ್ ಉನ್ನಿಕೃಷ್ಣನ್ ರಸ್ತೆಯಲ್ಲಿ ನಿರ್ಮಾಣವಾಗಿರುವ ಈ ಮೇಲ್ಸೇತುವೆಗೆ  ಸಂದೀಪ್ ಹೆಸರನ್ನೇ ಮುಂದುವರೆಸಿ ಎಂದು ಮನವಿ ಮಾಡಿದ್ದಾರೆ.ಇದಕ್ಕೆ ಪುಷ್ಠಿ ನೀಡುವಂತೆ  ಸಾಮಾಜಿಕ ಕಾರ್ಯಕರ್ತ ಎಚ್.ಎಂ.ವೆಂಕಟೇಶ್  ಕೂಡ ಸಂದೀಪ್ಪೀ ಉನ್ನಿಕೃಷ್ಣನ್ ಹೆಸರನ್ನೇ ಮುಂದುವರೆಸಿ ಸಾಧ್ಯವಾಗದಿದ್ರೆ ಪೀಪಲ್ಸ್ ಫ್ಲೈ ಓವರ್ ಹೆಸರನ್ನು ಇಡುವಂತೆ ಮನವಿ ಮಾಡಿದ್ದಾರೆ. ಮಾಜಿ ಮುಖ್ಯಮಂತ್ರಿ ಸಿದ್ಧರಾಮಯ್ಯ ಕೂಡ ಸಂದೀಪ್ ಉನ್ನಿಕೃಷ್ಣನ್ ಹೆಸರಿಡುವುದು ಸೂಕ್ತ ಎಂದು ಅಭಿಪ್ರಾಯಿಸಿದ್ದಾರೆ.

ಅದೇನೇ ಆಗಲಿ,ಯಾವುದೋ ಸ್ವಾರ್ಥ ಹಿತಾಸಕ್ತಿಗಳಿಗೆ…ಇನ್ನ್ಯಾರನ್ನೋ ಮೆಚ್ಚಿಸ್ಲಿಕ್ಕೆ ಇಲ್ಲದ ವಿವಾದವನ್ನು ಸೃಷ್ಟಿಸಿ ಅದು ಹತ್ತಾರು ವಿರೋದಾಭಾಸದ ತಿರುವು-ಸೈದ್ಧಾಂತಿಕ ಭಿನ್ನಾಭಿಪ್ರಾಯ-ಸಂಘರ್ಷಕ್ಕೆ ಕಾರಣವಾಗುವಂತೆ ಮಾಡಿದ ವಿವಾದದ ಮೂಲಪುರುಷರಿಗೆ ಪ್ರಜ್ಞಾವಂತರು ಹಿಡಿಶಾಪ ಹಾಕ್ತಿರೋದಂತೂ ಸತ್ಯ.

 

Spread the love
Leave A Reply

Your email address will not be published.

Flash News