“ಬಿಡಿಎ” ನೂತನ ಆಯುಕ್ತರ ನೇಮಕವೇ ನಿಯಮಬಾಹೀರ….. ಕಮಿಷನರ್ ಹುದ್ದೆಗೆ ಅವ್ರು ಅರ್ಹರೇ ಅಲ್ಲ..?!

0
 ಬಿಡಿಎ ನೂತನ ಆಯುಕ್ತ ಡಾ,ಮಹಾದೇವ್
ಬಿಡಿಎ ನೂತನ ಆಯುಕ್ತ ಡಾ,ಮಹಾದೇವ್

ಬೆಂಗಳೂರು: ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ(ಬಿಡಿಎ)ದ ಆಯುಕ್ತರಾಗಿ ಡಾ.ಹೆಚ್.ಆರ್.ಮಹಾದೇವ್ ಅಧಿಕಾರ ವಹಿಸಿಕೊಂಡ ಬೆನ್ನಲ್ಲೇ ವಿವಾದ ಶುರುವಾಗಿದೆ. ಅವರ ನೇಮಕವೇ ನಿಯಮಬಾಹೀರ ಎನ್ನುವ ವಾದವೊಂದು ಶುರುವಾಗಿದೆ.ಕಾರ್ಯದರ್ಶಿ ಹುದ್ದೆ ಜೇಷ್ಠ್ಯತೆಯನ್ನು ಹೊಂದಿರಬೇಕಾದವ್ರನ್ನು ಆಯುಕ್ತರನ್ನಾಗಿ ನಿಯೋಜಿಸಬೇಕು.ಆದ್ರೆ ಮಹಾದೇವ್ ಆ ಗ್ರೇಡ್ ಗಿಂತ ಕಡಿಮೆ ಹುದ್ದೆಯಲ್ಲಿರುವ ಅಧಿಕಾರಿ ಎನ್ನೋದು ವಿವಾದಕ್ಕೆ ಪ್ರಮುಖ ಕಾರಣ ಎನ್ನಲಾಗ್ತಿದೆ.ಮಹಾದೇವ್ ಅವರ ನಿಯೋಜನೆ ಹಿಂದೆ ದೊಡ್ಡ ಮಟ್ಟದ ಲಾಭಿ ಕೆಲಸ ಮಾಡಿದೆ ಎನ್ನುವ ಆರೋಪ ಕೂಡ ಕೇಳಿಬಂದಿದೆ.

ಬಿಡಿಎ ಆಯುಕ್ತರಾಗಿ ಒಂದಷ್ಟು ಪರಿಣಾಮಕಾರಿ ಕೆಲಸ ಮಾಡುತ್ತಿದ್ದ ಡಾ.ಪ್ರಕಾಶ್ ಅವರನ್ನು ಇದ್ದಕ್ಕಿದ್ದಂತೆ ಡಿಸ್ಟರ್ಬ್ ಮಾಡಿ ಮೈಸೂರು ಪ್ರಾದೇಶಿಕ ಆಯುಕ್ತರಾಗಿ ನಿಯೋಜನೆ ಮಾಡಿದಾಗ್ಲೇ ಅದರ ಹಿಂದೆ ಏನೋ ಮಸಲತ್ತಿದೆ ಎನ್ನುವ ಶಂಕೆ ಮೂಡಿತ್ತು.ಅವರ ಸ್ಥಾನಕ್ಕೆ ಬೀದರ್ ಜಿಲ್ಲಾಧಿಕಾರಿ ಮಹಾದೇವ್ ಅವರನ್ನು ತಂದುಕೂರಿಸಿದ್ದರ ಬಗ್ಗೆಯೂ ಅನುಮಾನದ ಕಿಡಿ ಹೊತ್ತಿಕೊಂಡಿತ್ತು.ಅದರ ಬೆನ್ನತ್ತಿ ಹೊರಟ ಕನ್ನಡ ಫ್ಲಾಶ್ ನ್ಯೂಸ್ ಗೆ ಪ್ರಕಾಶ್ ಅವರ ವರ್ಗಾವಣೆ ಹಿಂದಿನ ಚಿತಾವಣೆ ಹಾಗೂ ಮಹಾದೇವ್ ಅವರ ನಿಯೋಜನೆ ಹಿಂದಿನ ಮಸಲತ್ತಿನ ಹಿಂದಿನ ಸತ್ಯಗಳು ಬಯಲಾಗಿವೆ.

ಹಾಗೆ ನೋಡಿದ್ರೆ ಮಹಾದೇವ್ ಅವರನ್ನು ಬಿಡಿಎ ಆಯುಕ್ತರನ್ನಾಗಿ ನಿಯೋಜನೆ ಮಾಡ್ಲಿಕ್ಕೇನೆ ಬರೊಲ್ಲ..ಇದನ್ನು ನಾವ್ ಹೇಳ್ತಿಲ್ಲ..ನೇಮಕಾತಿ ನಿಯಮಗಳೇ ಸಾರಿ ಹೇಳುತ್ತವೆ.ಬಿಡಿಎ ಆಯುಕ್ತರಾಗಿ ನಿಯೋಜನೆಗೊಳ್ಳುವವರ ಹುದ್ದೆಯ ಸಾಮರ್ಥ್ಯ ಜಿಲ್ಲಾಧಿಕಾರಿಗಿಂತ ಉನ್ನತ ಅಂದ್ರೆ ಕಾರ್ಯದರ್ಶಿ ಗ್ರೇಡ್ ನದ್ದಾಗಿರಬೇಕು ಎನ್ನುತ್ತೆ ನೇಮಕಾತಿ ನಿಯಮ. 2006ರ ಬ್ಯಾಚ್ ನ  ಐಎಎಸ್ ಅಧಿಕಾರಿ( ಕೆಎಎಸ್ ಪ್ರಮೋಟಿ ) .ಪ್ರಕಾಶ್ ಅವರ ಹುದ್ದೆಯ ಸಾಮರ್ಥ್ಯ ಕಾರ್ಯದರ್ಶಿ ಶ್ರೇಣಿಯದ್ದಾಗಿತ್ತು.ಮೈಸೂರು ಪ್ರಾದೇಶಿಕ ಆಯುಕ್ತರಾಗಿ ನಿಯೋಜನೆಗೊಂಡಿರುವುದು ಅದೇ ಕಾರ್ಯದರ್ಶಿ ಶ್ರೇಣಿಯ ಅಧಿಕಾರಿ ಎನ್ನುವ ಕಾರಣಕ್ಕೆ..

ದಿಢೀರ್ ವರ್ಗಾವಣೆಗೊಂಡ ಹಿಂದಿನ ಆಯುಕ್ತ ಡಾ.ಪ್ರಕಾಶ್
ಸರ್ಕಾರದ ಚಿತಾವಣೆಗೆ ವರ್ಗಾವಣೆಗೊಂಡ ಹಿಂದಿನ ಆಯುಕ್ತ ಡಾ.ಪ್ರಕಾಶ್
ನೇಮಕಾತಿ ವಿಷಯದಲ್ಲಿ ಮಹಾದೇವ್ ಅವರ ನಿಯೋಜನೆ ನಿಯಮಬಾಹೀರ ಎನ್ನುತ್ತೆ ಬಿಡಿಎ ಆಕ್ಟ್ 1976
ನೇಮಕಾತಿ ವಿಷಯದಲ್ಲಿ ಮಹಾದೇವ್ ಅವರ ನಿಯೋಜನೆ ನಿಯಮಬಾಹೀರ ಎನ್ನುತ್ತೆ ಬಿಡಿಎ ಆಕ್ಟ್ 1976

ಆದ್ರೆ  ಡಾ.ಎಚ್.ಆರ್  ಮಹಾದೇವ್ ಅವರ ನಿಯೋಜನೆ ಮುಖ್ಯಮಂತ್ರಿಗಳ ವಿವೇಚನೆಗೆ ಬಿಟ್ಟಿದ್ದಾಗಿದ್ರೂ ಹುದ್ದೆಗೆ ಸಂಬಂಧಿಸಿದಂಥೆ ಜೇಷ್ಠ್ಯತೆ ಹಾಗೂ ಶ್ರೇಣಿಯನ್ನು ಫಾಲೋ ಮಾಡಲೇಬೇಕಾಗುತ್ತೆ.ಆದ್ರೆ ಮಹಾದೇವ್ ಅವರ ನಿಯೋಜನೆ ವಿಷಯದಲ್ಲಿ ಸರ್ಕಾರದ ಸಚಿವಾಲಯ ಹಾಗೂ ಮುಖ್ಯಮಂತ್ರಿಗಳ ಕಾರ್ಯಾಲಯ ತುಂಬಾ ಬಾಲಿಶವಾಗಿ,ನಿಯಮಬಾಹೀರ ಎನ್ನುವಂತ ರೀತಿಯಲ್ಲೇಕೆ ನಡೆದುಕೊಳ್ತೋ ಎನ್ನೋದೇ ಗೊತ್ತಾಗ್ತಿಲ್ಲ..ಏಕೆಂದ್ರೆ ಮಹಾದೇವ್ ಹಿರಿಯ ಕೆಎಎಸ್ ಅಧಿಕಾರಿಯಾಗಿ ನಂತ್ರ 2008ರಲ್ಲಿ ಐಎಎಸ್ ಅಧಿಕಾರಿಯಾಗಿ ಭಡ್ತಿ ಪಡೆದ್ರೂ ಅವರ ಶ್ರೇಣಿ ಕಾರ್ಯದರ್ಶಿ(ಐಎಎಸ್ ನಂತ್ರದ ಮೇಲಿನ ಶ್ರೇಣಿ) ಸ್ಥಾನಕ್ಕೆ ಸಮನಾಗಿಲ್ಲ..ಅವರು ಜಿಲ್ಲಾಧಿಕಾರಿಯ ಮಟ್ಟದ ಐಎಎಸ್ ಅಧಿಕಾರಿಯಾಗಿದ್ದಾರೆಯೇ ಹೊರತು ಇನ್ನೂ ಕಾರ್ಯದರ್ಶಿ ಹುದ್ದೆಯನ್ನು ಅಲಂಕರಿಸುವ ಮಟ್ಟದಲ್ಲಿ ಭಡ್ತಿ ಪಡೆದಿಲ್ಲ..

ಬಿಡಿಎ  ಕಮಿಷನರ್ ಹುದ್ದೆಗೆ ನಿಯೋಜನೆಗೊಳ್ಳುವವರ  ಶ್ರೇಣಿ ಜಿಲ್ಲಾಧಿಕಾರಿಗಿಂತ ಹಿರಿದಾದ  ಕಾರ್ಯದರ್ಶಿ ಶ್ರೇಣಿಯದ್ದು.ಈವರೆಗೆ ಬಿಡಿಎನಲ್ಲಿ ಆಯುಕ್ತರಾಗಿ ಕೆಲಸ ಮಾಡಿದ ಎಲ್ಲರೂ ಇದೇ ಸೆಕ್ರೆಟರಿ ಶ್ರೇಣಿಯ ಐಎಎಸ್  ಅಧಿಕಾರಿಗಳೇ ಆಗಿದ್ದಾರೆ.ಪರಿಸ್ತಿತಿ ಹೀಗಿರುವಲ್ಲಿ ಮಹಾದೇವ್ ಅವರ ನಿಯೋಜನೆ ವಿಷಯದಲ್ಲಿ ಈ ಎಲ್ಲಾ ನಿಯಮಗಳನ್ನು ಗಾಳಿಗೆ ತೂರಿದ್ದೇಕೆ ಎನ್ನುವ ಶಂಕೆ ಕಾಡುತ್ತಿದೆ.ಮಹಾದೇವ್ ಅವರನ್ನು ಬೀದರ್ ನಿಂದ ಕರೆಯಿಸಿ ದಿಢೀರ್ ಪ್ರತಿಷ್ಟಾಪಿಸಿದ್ದೇಕೆ ಎನ್ನುವ ಪ್ರಶ್ನೆ ಸೃಷ್ಟಿಯಾಗಿದೆ.ನಿಯೋಜನೆ ಸಮಯದಲ್ಲಿ ನಿಯಮ ಮೀರುವುದು ಕಾನೂನು ಪ್ರಕಾರ ಶಿಕ್ಷಾರ್ಹ ಅಪರಾಧವೂ ಹೌದು..ಮಹಾದೇವ್ ಅವರ ವಿಷಯದಲ್ಲಿ ಯಾರನ್ನು ಶಿಕ್ಷಿಸೋದು ಎನ್ನುವುದೇ ಪ್ರಶ್ನೆಯಾಗುಳಿದಿದೆ.

ಮಹಾದೇವ್ ಅವರ ನಿಯೋಜನೆ ಹಿಂದೆ ವಿಜಯೇಂದ್ರ ಕೈವಾಡ?!
ಮಹಾದೇವ್ ಅವರ ನಿಯೋಜನೆ ಹಿಂದೆ ವಿಜಯೇಂದ್ರ ಕೈವಾಡ?!

ಜಿಲ್ಲಾಧಿಕಾರಿ ಹುದ್ದೆಯಲ್ಲಿದ್ದ  ಮಹಾದೇವ್ ಅವರನ್ನು ಕಾರ್ಯದರ್ಶಿ ಶ್ರೇಣಿಗೆ ಸಮನಾದ ಕಮಿಷನರ್ ಹುದ್ದೆಗೆ ತಂದುಕೂರಿಸುವುದರ ಹಿಂದೆ ಸಾಕಷ್ಟು ಲಾಭಿ-ಹಿತಾಸಕ್ತಿ ಕೆಲಸ ಮಾಡಿವೆ ಎನ್ನೋದು ಸಾಮಾಜಿಕ ಕಾರ್ಯಕರ್ತ ಸಾಯಿದತ್ತಾ ಆರೋಪ.ಅಧಿಕಾರಿ ಯಾರೇ ಕಮಿಷನರ್ ಹುದ್ದೆಗೆ ನಿಯೋಜನೆಗೊಳ್ಳಲಿ ನಮ್ಮದೇನೂ ಅಭ್ಯಂತರವಿಲ್ಲ.ಆದ್ರೆ ಇಂಥದ್ದೊಂದು ಮಹತ್ವದ ನಿರ್ದಾರ ತೆಗೆದುಕೊಳ್ಳುವ ವೇಳೆ ಆ ಶ್ರೇಣಿಗೆ ಸಮನಾಗಿರದ ಅಧಿಕಾರಿಯನ್ನು ತಂದು ಕೂರಿಸಲಾಗ್ತದೆ ಎಂದ್ರೆ ಇದಕ್ಕೇನು ಅರ್ಥ ಎನ್ನುವುದು ಅವರ ಪ್ರಶ್ನೆ.ಇದರ ಹಿಂದೆ ಸರ್ಕಾರದ ದುರುದ್ದೇಶ-ದುರ್ಲಾಭ ಅಡಗಿದೆ ಎನ್ತಾರೆ.

ನಿಯೋಜನೆ ನಿಯಮಗಳನ್ನು ಬೈಪಾಸ್ ಮಾಡಿ  ಮಹಾದೇವ್ ಅವರನ್ನು  ಬಿಡಿಎ ಆಯುಕ್ತರನ್ನಾಗಿಸುವ ಸರ್ಕಾರದ ಕ್ರಮದ ಹಿಂದೆ ಯಡಿಯೂರಪ್ಪರ ಹಿರಿಮಗ ವಿಜಯೇಂದ್ರರ ಕೈವಾಡ ಇದೆ ಎನ್ನಲಾಗ್ತಿದೆ.ಇಡೀ ಐಎಎಸ್-ಐಪಿಎಸ್ ಅಧಿಕಾರಿಗಳ ವರ್ಗಾವಣೆ ವ್ಯವಸ್ಥೆಯನ್ನು ಖುದ್ದಾಗಿ ಮೆಂಟೇನ್ ಮಾಡುತ್ತಿದ್ದಾರೆನ್ನುವ ಗುರುತ ಆರೋಪವೂ ಅವರ ಮೇಲಿದೆ.ತಂದೆ ಯಡಿಯೂರಪ್ಪ ಅವರನ್ನು ಮುಂದೆ ಬಿಟ್ಟು ಹಿಂದಿನಿಂದ ಈ ಎಲ್ಲಾ ವ್ಯವಸ್ಥೆಯನ್ನು ನೋಡಿಕೊಳ್ಳುವ ಕೆಲಸ ವಿಜಯೇಂದ್ರ ಮಾಡುತ್ತಿದ್ದಾರೆನ್ನುವುದು ಈಗಿನ ಆರೋಪವಲ್ಲ.ಮಹಾದೇವ್ ಅವರ ವರ್ಗಾವಣೆ ಹಿಂದೆಯೂ ವಿಜಯೇಂದ್ರ ಅವರ ಕೈವಾಡ ಹಾಗು ಹಿತಾಸಕ್ತಿ ಅಡಗಿರುವ ಸಾಧ್ಯತೆಗಳು ಹೆಚ್ಚಾಗಿವೆ ಎನ್ನಲಾಗ್ತಿದೆ.

ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ಆಕ್ಟ್ 1976 ರ ನಿಯೋಜನೆ ನಿಯಾಮವಳಿ ಮೀರಿ ಅರ್ಹವೇ ಅಲ್ಲದ ಅಧಿಕಾರಿಯನ್ನು ಕಾರ್ಯದರ್ಶಿ ಶ್ರೇಣಿಯ ಹುದ್ದೆಗೆ ತಂದ್ ಕೂರಿಸುವುದ್ರ ವಿರುದ್ಧ ಕಾನೂನಾತ್ಮಕ ಸಮರವೊಂದು ಸಿದ್ಧವಾಗ್ತಿದೆ.ಯಾರೋ ಹಿತಾಸಕ್ತಿಗೆ..ಇನ್ನ್ಯಾರದೋ ಮರ್ಜಿಗೆ ಕೆಲಸ ಮಾಡುವ ಅಧಿಕಾರಿಯನ್ನು ಜವಾಬ್ದಾರಿಯುತ ಹುದ್ದೆಗೆ ತಂದ್ ಕೂರಿಸುವುದನ್ನು ಒಪ್ಪೊಕ್ಕಾಗುತ್ತಾ,ಇದನ್ನು ಪ್ರಶ್ನಿಸುವ ಜೊತೆಗೆ ಕಾನೂನಾತ್ಮಕ ಹೋರಾಟ ನಡೆಸೋದಾಗಿಯೂ ಸಾಕಷ್ಟು ಸಾಮಾಜಿಕ ಕಾರ್ಯಕರ್ತರು ಎಚ್ಚರಿಸಿದ್ದಾರೆ.ಇದನ್ನು ಸರ್ಕಾರ  ನಿರ್ಲಕ್ಷ್ಯಿಸದೆ  ಗಂಭೀರವಾಗಿ ಪರಿಗಣಿಸಬೇಕಾಗಿದೆ.ಇಲ್ಲವಾದಲ್ಲಿ ಕಾನೂನು ಚೌಕಟ್ಟಿನಲ್ಲಿ ಆಗಬಹುದಾದ ಮುಖಭಂಗ ಹಾಗೂ ಮುಜುಗರ ಎದುರಿಸ್ಲಿಕ್ಕೆ ಸರ್ಕಾರ ಸಿದ್ಧವಾಗ್ಬೇಕಾಗುತ್ತೇನೋ..

Spread the love
Leave A Reply

Your email address will not be published.

Flash News