ಪೊಲೀಸ್ರಿಗೆ ಗುಡ್ ನ್ಯೂಸ್-ಇನ್ಮುಂದೆ ಕ್ವಾರಂಟೈನ್ ಟೈಮ್ ಕೂಡ ಡ್ಯೂಟಿ ಸಮಯ..

0

ಬೆಂಗಳೂರು: ರಾಜ್ಯ ಸರ್ಕಾರ   ಪೊಲೀಸ್ ಸಿಬ್ಬಂದಿಗೆ ಸಿಹಿ ಸುದ್ದಿ ನೀಡಲು ಮುಂದಾಗಿದೆ.ಕ್ವಾರಂಟೈನ್ ಅವಧಿಯಲ್ಲಿದ್ದರೆ ಅದನ್ನು ರಜೆ ಎಂದು ಪರಿಗಣಿಸುತ್ತಿದ್ದ ನಿಲುವನ್ನು ಸರ್ಕಾರ ಬದಲಿಸಿದೆ.ಹಾಗಾಗಿ ಇನ್ಮುಂದೆ ಕ್ವಾರಂಟೈನ್ ಅವಧಿಯನ್ನೂ ಕರ್ತವ್ಯದ ಅವಧಿ ಎಂದು ಪರಿಗಣಿಸಲು ತೀರ್ಮಾನಿಸಿದೆ.

ಕ್ವಾರಂಟೈನ್ ಅವಧಿಯನ್ನ ಕರ್ತವ್ಯದ ಅವಧಿ ಎಂದು ಪರಿಗಣಿಸುವಂತೆ ಡಿಜಿಪಿ ಪ್ರವೀಣ್ ಸೂದ್ ಎಲ್ಲಾ ಠಾಣೆಗಳ ಅಧಿಕಾರಿಗಳಿಗೂ ಸೂಚಿಸಿದ್ದಾರೆ.ಇದಕ್ಕೆ  ಇತ್ತೀಚೆಗೆ ಪೊಲೀಸರಲ್ಲು ಕಂಡು ಬರುತ್ತಿರುವ ಸೋಂಕೇ ಕಾರಣ ಎನ್ನಲಾಗ್ತಿದೆ.

ಸೋಂಕಿತರ ಜೊತೆ ಸಂಪರ್ಕ ಹೊಂದಿ  ಹಲವಾರು ಪೊಲೀಸರು  ಕ್ವಾರಂಟೈನ್ ಆಗುತ್ತಿದ್ದಾರೆ.  ಕರ್ತವ್ಯ ನಿರ್ವಹಣೆ ಸಮಯದಲ್ಲಿ ಪೊಲೀಸರು ಸೋಂಕಿತರ ಜೊತೆ ಸಂಪರ್ಕಕ್ಕೆ ಬಂದಿರುತ್ತಾರೆ. ಅದ್ರಿಂದ ಪೊಲೀಸರು ಹೋಂ ಕ್ವಾರಂಟೈನ್ ಅಥವಾ ಸಾಂಸ್ಥಿಕ ಕ್ವಾರಂಟೈನ್ ಇರುವಾಗ ಕರ್ತವ್ಯದ ಅವಧಿ ಎಂದು ಪರಿಗಣಿಸಲು ನಿರ್ಧರಿಸಲಾಗಿದೆ.

ರಾಜ್ಯದಲ್ಲಿ ವ್ಯಾಪಕವಾಗಿ ಹರಡುತ್ತಿರುವ ಮಾಹಾಮಾರಿ ಕೊರೊನಾ ಹಿನ್ನಲೆಯಲ್ಲಿ ಪ್ರತಿನಿತ್ಯ ಸಾರ್ವಜನಿಕರ ಜೊತೆ ನೇರ ಸಂಪರ್ಕಕ್ಕೆ ಪೊಲೀಸರು ಬರುತ್ತಿರುವುದರಿಂದ ಸೋಂಕು ತಗುಲುವ ಸಾಧ್ಯತೆ ಹೆಚ್ಚು. ಈಗಾಗಲೇ ಅನೇಕ  ಪೊಲೀಸ್ ಸಿಬ್ಬಂದಿಗೂ ಸೋಂಕು ತಗುಲಿ ಅವರು ಅಸ್ಪತ್ರೆಗೆ ದಾಖಲಾಗಿದ್ದಾರೆ.

ಸೋಂಕಿತರ ಜೊತೆ ಕರ್ತವ್ಯ ನಿರ್ವಹಿಸಿದ್ದ ಹಲವು ಸಿಬ್ಬಂದಿ ಪ್ರಾಥಮಿಕ ಮತ್ತು ದ್ವಿತೀಯ ಸಂಪರ್ಕ ಹೊಂದಿದವರಾಗಿ ಕ್ವಾರಂಟೈನ್ ಆಗಿದ್ದಾರೆ.ಹಾಗಾಗಿ  ಕ್ವಾರಂಟೈನ್‌ ಅವಧಿಯನ್ನು ಕರ್ತವ್ಯದ ಅವಧಿ ಎಂದು ಪರಿಗಣಿಸಬೇಕೆಂದು ಡಿಜಿಪಿ ಆದೇಶಿಸಿ8ದ್ದಾರೆ.ಅಂದ್ಹಾಗೆ ಈ ಆದೇಶ ತರಬೇತಿ ನಿಮಿತ್ತ ಹೊರರಾಜ್ಯದಿಂದ ಪ್ರಯಾಣ ಬೆಳೆಸಿದ ಸಿಬ್ಬಂದಿಗೂ ಅನ್ವಯವಾಗಲಿದೆ.  

Spread the love
Leave A Reply

Your email address will not be published.

Flash News