ಲಾಕ್ ಡೌನ್ ಟೈಮಲ್ಲಿ ಬೆಂಗಳೂರಿಗರು ನೀರು ಕುಡಿದಿದ್ದಕ್ಕಿಂತ ಕೈತೊಳೆದಿದ್ದು….ಸ್ನಾನ ಮಾಡಿದ್ದೇ ಹೆಚ್ಚು

0

ಬೆಂಗಳೂರು: ಇದನ್ನು ಕೇಳಿ ಆಶ್ಚರ್ಯವಾಗ್ಬೋದು..ಆದ್ರೆ ಇದು ಸತ್ಯ.,..ಬೆಂಗಳೂರಿಗರು ನೀರು ಕುಡಿದಿದ್ದಕ್ಕಿಂತ ಕೈ ತೊಳೆದಿದ್ದೇ ಹೆಚ್ಚು..ಸ್ನಾನ ಮಾಡಿದ್ದೇ ಹೆಚ್ಚು..ಇದನ್ನು ನಾವ್ ಹೇಳ್ತಿಲ್ಲ..ಲಾಕ್ ಡೌನ್ ಗೆ ಮುನ್ನ ಇದ್ದ ನೀರಿನ ಬಳಕೆ ಹಾಗೂ ಆನಂತರದ ನೀರಿನ ಬಳಕೆ ಅಂಕಿಅಂಶಗಳನ್ನು ಆಧರಿಸಿ ಸಿದ್ಧಪಡಿಸಿದ ರಿಪೋರ್ಟ್ ಈ ಸತ್ಯವನ್ನು ಸಾರಿ ಹೇಳುತ್ತಿದೆ.

ಲಾಕ್ ಡೌನ್ಟೈಮಲ್ಲಿ  ಜನ ಕೊರೋನಾದ  ಭಯಕ್ಕೋ..ಅಥ್ವಾ ಆರೋಗ್ಯ ರಕ್ಷಣೆಗೋ ಗೊತ್ತಿಲ್ಲ..ನೀರನ್ನಂತೂ ಯತೇಚ್ಛವಾಗಿ ಬಳಸಿದ್ದಾರೆ.ಅದು ಕೂಡ ಜಲಮಂಡಳಿಯ ಇತಿಹಾಸದಲ್ಲಿ ಕಂಡು ಕೇಳರಿಯದಷ್ಟು ಪ್ರಮಾಣದಲ್ಲಿ.ಕೈಗಾರಿಕೆಗಳಿಗೆ ಮೀಸಲಿಟ್ಟ ನೀರನ್ನು ಕೂಡ ಬಿಟ್ಟಿಲ್ಲ..ಎಂದ್ರೆ ನೀವೇ ಊಹಿಸಬಹುದು,ಕೊರೋನಾ ಟೈಮಲ್ಲಿ ಬೆಂಗಳೂರಿಗರು ಯಾವ್ ರೇಂಜ್ನಲ್ಲಿ ನೀರನ್ನು ಡಿಪೆಂಡ್ ಆಗಿದ್ರು ಅಂಥ..

ಕೊರೋನಾ ಲಾಕ್ ಡೌನ್  ಟೈಮ್ ನಲ್ಲಿ ಬೆಂಗಳೂರಿಗರು ನೀರಿನ ಮೇಲೆ ಎಷ್ಟರ ಪ್ರಮಾಣದಲ್ಲಿ ಡಿಪೆಂಡೆಂಟ್ ಆಗಿದ್ರು..ಅದಕ್ಕಾಗಿ ಎಷ್ಟು ಪ್ರಮಾಣದಲ್ಲಿ ನೀರನ್ನು ಬಳಸಿದ್ರು ಎನ್ನುವುದರ ಮಾಹಿತಿನೂ ಕುತೂಹಲಕರವಾಗಿದೆ.ಕಾಮನ್ ಆಗಿ ಗೃಹಬಳಕೆಗೆ ಜಲಮಂಡಳಿ ಶೇಕಡಾ 90 ರಷ್ಟು ನೀರು ಕೊಡ್ತದೆ.ಹಾಗೆಯೇ ಕೈಗಾರಿಕೆಗಳ ಉದ್ದೇಶಕ್ಕೆ ಶೇಕಡಾ 10 ರಷ್ಟು ಪೂರೈಸುತ್ತೆ.ಆದ್ರೆ ಶೇಕಡಾ 100ಕ್ಕೆ ನೂರರಷ್ಟು ನೀರನ್ನು ಜನರು ಬಳಸಿದ್ದಾರೆ ಎನ್ನೋ ಮಾಹಿತಿ ಕೊಡ್ತಾರೆ ಜಲಮಂಡಳಿಯ ಪ್ರಧಾನ ಅಭಿಯಂತರ ಕೆಂಪರಾಮಯ್ಯ.

ಜಲಮಂಡಳಿಯ ಮುಖ್ಯ ಎಂಜಿನಿಯರ್ ರುದ್ರೇಶ್ ಅವ್ರ ಮಾಹಿತಿ ಪ್ರಕಾರ ಶೇಕಡಾ 7ರಿಂದ ಶೇಕಡಾ 9 ರಷ್ಟು ಹೆಚ್ಚುವರಿ ನೀರು ಲಾಕ್ ಡೌನ್ ಟೈಮಲ್ಲಿ ಜನ ಬಳಸಿದ್ದಾರಂತೆ.ಲಾಕ್ ಡೌನ್ ಟೈಮ್ನಲ್ಲಿ ಬೆಂಗಳೂರಿಗರು ಮನೆಯಲ್ಲಿದ್ದು,ಸುರಕ್ಷಿತವಾಗಿರೊಕ್ಕೆ ಹಾಗೆಯೇ  ಶುದ್ಧವಾಗಿರೊಕ್ಕೆ ಹೆಚ್ಚುವರಿ ನೀರು ಬಳಸಿದ್ದಾರೆನ್ನುವುದು ಇದರಿಂದ ಸ್ಪಷ್ಟ. ಸ್ನಾನ ಮಾಡ್ತಿರಿ.. ಆಗಾಗ ಕೈತೊಳೆಯುತ್ತಿರಿ.. ಸ್ಯಾನಿಟೈಸರ್ ಹಾಕಿಕೊಂಡಾಗ್ಲೆಲ್ಲಾ ನೀರಿನಿಂದ ಕೈ ತೊಳೆದುಕೊಳ್ಳಲು ಸರ್ಕಾರ ನೀಡಿದ ಸಲಹೆಯನ್ನೇ ಫಾಲೋ ಮಾಡಿದ್ದರಿಂದ್ಲೇ ನೀರಿನ ಬಳಕೆ ಪ್ರಮಾಣ ಶೇಕಡಾ 7ರಷ್ಟು ಹೆಚ್ಚುವರಿ ಆಯಿತೆನ್ನುತ್ತಾರೆ ರುದ್ರೇಶ್.

ಮೊದಲೇ ಹೇಳಿದಂತೆ ಮಾರ್ಚ್ ನಿಂದ ಮೇ ತಿಂಗಳವರೆಗೂ  ಬೆಂಗಳೂರಿಗರು ಲಾಕ್ ಡೌನ್ ವೇಳೆ  ದಾಖಲೆ ಪ್ರಮಾಣದಲ್ಲಿ ನೀರನ್ನು ಬಳಸಿದ್ದಾರೆ.  ಜಲಮಂಡಳಿಯ ಲೆಕ್ಕದ ಪ್ರಕಾರವೇ  ಫೆಬ್ರವರಿಯಲ್ಲಿ  26,249 ಮಿಲಿಲೀಟರ್ ನೀರು ಬಳಕೆಯಾಗಿದೆ.  ಮಾರ್ಚ್ ನಲ್ಲಿ   26,953 ಮಿಲಿಲೀಟರ್ ನೀರು ಬಳಕೆಯಾಗಿದೆ.  ಏಪ್ರಿಲ್ ನಲ್ಲಿ 27,417 ಮಿಲಿಲೀಟರ್  ಹಾಗೆಯೇ  ಮೇ ತಿಂಗಳಿನಲ್ಲೂ  27,156 ಮಿಲಿಲೀಟರ್ ಬಳಕೆಯಾಗಿದೆ. ಸರಾಸರಿ ಲೆಕ್ಕ ಹಾಕಿದ್ರೆ ಹೆಚ್ಚುವರಿಯಾಗಿ  7-9 ರಷ್ಟು ನೀರು ಬಳಕೆಯಾಗಿದೆ ಎನ್ನೋದು ಸ್ಪಷ್ಟ.

ಬೆಂಗಳೂರಿಗೆ ಪ್ರತಿ ನಿತ್ಯ ಜಲಮಂಡಳಿ ಪೂರೈಸುವ ನೀರಿನಲ್ಲಿ  ಶೇಕಡಾ 90 ರಷ್ಟು ನೀರು ಗೃಹಬಳಕೆಗೆ ವಿನಿಯೋಗವಾದ್ರೆ ಶೇಕಡಾ 10 ರಷ್ಟು ಪ್ರಮಾಣ  ಕೈಗಾರಿಕೆಗಳಿಗೆ ಖರ್ಚಾಗುತ್ತೆ. ಲಾಕ್ ಡೌನ್ ನಿಂದ   ಮಾರ್ಚ್-ಏಪ್ರಿಲ್ ತಿಂಗಳಲ್ಲಂತೂ  ಕೈಗಾರಿಕೆಗಳಂತೂ ಕಂಪ್ಲೀಟ್ ಸ್ಟಾಪ್ ಆಗಿದ್ವು.  ಅವುಗಳ ಬಳಕೆಯ ಶೇಕಡಾ 10 ರಷ್ಟು ನೀರನ್ನು ಕೂಡ ಗೃಹಬಳಕೆಗೆ ಪೂರೈಸಲಾಗಿದೆ.ಅದೇ ನೀರನ್ನು ನಾವು ಕೊರೋನಾದಿಂದ ಸುರಕ್ಷಿತವಾಗಿರೊಕ್ಕೆ  ಕುಡಿಯೋದ್ರ ಜೊತೆಗೆ ಕೈತೊಳೆಯೊಕ್ಕೆ..ಸ್ನಾನ ಮಾಡೊಕ್ಕೆ ಬಳಸಿದ್ದೇವೆ. 

ಕೈಗಾರಿಕೆಗಳ ಪಾಲೂ ಸೇರಿದಂತೆ ಶೇಕಡಾ 100 ರಷ್ಟು ನೀರನ್ನು ಕೊರೋನಾದಿಂದ ಮುಕ್ತವಾಗೊಕ್ಕೆ ಬಳಸಿರುವ ಹಿನ್ನಲೆಯಲ್ಲಿ ವಾಟರ್ ಬಿಲ್ ಕೂಡ ಹೆಚ್ಚಾಗಿ ಬಂದ್ರೂ ಆಶ್ಚರ್ಯಪಡಬೇಕಿಲ್ಲ..ಅದಕ್ಕಾಗಿ ರಾದ್ದಾಂತ ಎಬ್ಬಿಸುವ ಅವಶ್ಯಕತೆ ಇಲ್ಲ.ಏಕೆಂದ್ರೆ ಲಾಕ್ ಡೌನ್ ಜಾರಿ ಮುನ್ನ ಫೆಬ್ರವರಿಯಲ್ಲಿ  ಜಲಮಂಡಳಿಗೆ 111 ಕೋಟಿ ಪಾವತಿಯಾಗುತ್ತಿತ್ತು.. ಆದ್ರೆ ಲಾಕ್ ಡೌನ್ ಜಾರಿಯಾದ ಮಾರ್ಚ್  ವೇಳೆ  ಸಂಗ್ರಹವಾಗಿದ್ದು 97 ಕೋಟಿ. ಏಪ್ರಿಲ್ ನಲ್ಲಿ ಸಂಗ್ರಹವಾಗಿದ್ದು 57 ಕೋಟಿ. .ಬಿಲ್ ಪಾವತಿಯಲ್ಲಿ ರಿಯಾಯ್ತಿ ಕೊಟ್ಟರೂ ಬಳಕೆದಾರರು ಹಣ ಕಟ್ಟಿಲ್ಲ.ಇದರಿಂದ ಜಲಮಂಡಳಿಯ ನಿರ್ವಹಣೆ ಕಷ್ಟವಾಗ್ತಿದ್ರೂ ಜನರ ಹಿತದೃಷ್ಟಿಯಿಂದ ಅವರಿಗೆ ಅವಕಾಶ ಕೊಡಲಾಗಿದೆ.ಹಾಗಂತ ನೀರಿನ ಕನೆಕ್ಷನ್ ಕಟ್ ಮಾಡ್ತೇವೆನ್ನೋ ಭಯ ಬೆಂಗಳೂರಿಗರಿಗೆ ಬೇಡ ಎನ್ತಾರೆ ಮುಖ್ಯ ಎಂಜಿನಿಯರ್ ರುದ್ರೇಶ್.

ಅದೇನೇ ಆಗಲಿ ಲಾಕ್ ಡೌನ್ ನೆವದಲ್ಲಿ ಬೆಂಗಳೂರಿಗರು ನೀರನ್ನು ಕುಡಿದಿದ್ದಕ್ಕಿಂತ ಸ್ನಾನ ಮಾಡೊಕ್ಕೆ..ಕೈ ತೊಳೆಯೊಕ್ಕೆ ಹೆಚ್ಚೆಚ್ಚು ಬಳಸಿದರೆನ್ನುವುದು ಇತಿಹಾಸದ ಪುಟಗಳಲ್ಲಿ ದಾಖಲಾಗಿ ಹೋದದ್ದಂತೂ ಸತ್ಯ.  

 

Spread the love
Leave A Reply

Your email address will not be published.

Flash News