ವಿವಾದಿತ “ದೇವಮಾನವ”ನ ವಿರುದ್ಧ ಗೆದ್ದು ಬಿಡಿಎ ಪಾಲಿಗೆ ಆಪದ್ಬಾಂಧವನಾದ ಸಾಯಿದತ್ತಾ

0
ಬಿಡಿಎಗೆ ಕೋಟ್ಯಾಂತರ ಮೌಲ್ಯದ ಸ್ವತ್ತನ್ನು ಉಳಿಸಿಕೊಟ್ಟ ಸಾಮಾಜಿಕ ಕಾರ್ಯಕರ್ತಸಾಯಿದತ್ತಾ
ಬಿಡಿಎಗೆ ಕೋಟ್ಯಾಂತರ ಮೌಲ್ಯದ ಸ್ವತ್ತನ್ನು ಉಳಿಸಿಕೊಟ್ಟ ಸಾಮಾಜಿಕ ಕಾರ್ಯಕರ್ತಸಾಯಿದತ್ತಾ
ಬನಶಂಕರಿ 2ನೇ ಹಂತದಲ್ಲಿರುವ ಆಸೋರಾಂಬಾಪೂ ಆಶ್ರಮ
ಬನಶಂಕರಿ 2ನೇ ಹಂತದಲ್ಲಿರುವ ಆಸೋರಾಂಬಾಪೂ ಆಶ್ರಮ

ಬೆಂಗಳೂರು: ಒಬ್ಬ ಸಾಮಾಜಿಕ ಹೋರಾಟಗಾರನಿಗೆ ಅವನ ಬದ್ಧತೆ ಹಾಗೂ ಹೋರಾಟಕ್ಕೆ ಇದಕ್ಕಿಂತ ದೊಡ್ಡ ಜಯ ಮತ್ತೊಂದು ಬೇಕಿಲ್ಲವೇನೋ..ತುಂಡು ಜಾಗಕ್ಕೂ ಬೇಲಿ ಸುತ್ತುವವರೇ ಹೆಚ್ಚಾಗಿರುವವರ ನಡುವೆ ಸರ್ಕಾರಿ ಸ್ವತ್ತನ್ನು ಹೋರಾಟದ ಮೂಲಕ ಉಳಿಸಿಕೊಡುವಂಥ ಕೆಲಸವಿದೆಯೆಲ್ಲಾ ಅದು ಸಾಮಾನ್ಯದ್ದೇನಲ್ಲ..ಅಂತದ್ದೊಂದು ಹೋರಾಟದ ಮೂಲಕ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ(ಬಿಡಿಎ)ಕ್ಕೆ ಕೋಟ್ಯಾಂತರ ಮೌಲ್ಯದ ಭೂಮಿ ಉಳಿಸಿಕೊಡುವ ಕೆಲಸ ಮಾಡಿದ್ದಾರೆ ಸಾಮಾಜಿಕ ಕಾರ್ಯಕರ್ತ ಸಾಯಿದತ್ತಾ.

ಯೆಸ್..ತನ್ನ ಸ್ವತ್ತುಗಳನ್ನು ಇರೋಬರಿಗೆಲ್ಲಾ ಮಾರಾಟ ಮಾಡುವುದರಲ್ಲೇ ನಿರತವಾಗಿ ತನ್ನ ಸ್ಥಿತಿಯನ್ನು ಬರ್ಬಾದ್ ಮಾಡ್ಕೊಂಡಿರುವ ಬೆಂಗಳೂರು ಅಭಿವೃದ್ದಿ ಪ್ರಾಧಿಕಾರಕ್ಕೆ ಸಾಮಾಜಿಕ ಕಾರ್ಯಕರ್ತ ಹತ್ತಿರತ್ತಿರ ಐದಾರು ಕೋಟಿ ಮೌಲ್ಯದ ಸ್ವತ್ತನ್ನು ಉಳಿಸಿಕೊಟ್ಟಿದ್ದಾರೆ.ನಾಗರಿಕ ಸೌಲಭ್ಯದ ನಿವೇಶನವನ್ನು ಸ್ವಾರ್ಥ ಹಿತಾಸಕ್ತಿಗೆ ಬಳಸಿಕೊಂಡು ಎಂಜಾಯು್ ಮಾಡುತ್ತಿದ್ಗ ಸ್ವಘೋಷಿತ ದೇವಮಾನವ ಆಸೋರಾಂ ಬಾಪೂ ಆಶ್ರಮದ ವಿರುದ್ಧ ಕಾನೂನಾತ್ಮಕ ಹೋರಾಟ ನಡೆಸಿ ಅದರಲ್ಲಿ ಗೆಲ್ಲುವ ಮೂಲಕ ಬಿಡಿಎಗೇನೆ ಸ್ವತ್ತು ಸೇರುವಂತೆ ಮಾಡಿದ್ದಾರೆ.

ವಿವಾದಿತ ದೇವಮಾನವ ಆಸೋರಾಂ ಬಾಪೂ
ವಿವಾದಿತ ದೇವಮಾನವ ಆಸೋರಾಂ ಬಾಪೂ

ಸಾಮಾಜಿಕ-ಶೈಕ್ಷಣಿಕ-ಧಾರ್ಮಿಕ ಉದ್ದೇಶದ ಕೆಲಸಗಳನ್ನು ಮಾಡುವ ವ್ಯಕ್ತಿ ಹಾಗೂ ಸಂಘಸಂಸ್ಥೆಗಳಿಗೆ ನಾಗರಿಕಸೌಲಭ್ಯ(ಸಿಎ)ದ ನಿವೇಶನ ನೀಡುವ ಸಂಪ್ರದಾಯ ಬಿಡಿಎ ನಲ್ಲಿದೆ.ಆಸೋರಾಂ ಬಾಪೂ ಅವರ ಕೀರ್ತಿ ಉತ್ತುಂಗದಲ್ಲಿದ್ದಾಗ ಅವರಿಗೆ ಬಿಡಿಎ ಭಾರೀ ಗಾತ್ರದ ನಿವೇಶನವೊಂದನ್ನು ಬನಶಂಕರಿ 2ನೇ ಹಂತದ ವ್ಯಾಪ್ತಿಯಲ್ಲಿ ನೀಡಿತ್ತು.ನಿವೇಶನ ಮಂಜೂರು ಮಾಡುವ ಸಮಯದಲ್ಲಿ ಒಂದಷ್ಟು ಕಂಡೀಷನ್ಸ್ ಕೂಡ ಹಾಕಲಾಗಿತ್ತು.ಆದ್ರೆ ಹೇಳಿ ಕೇಳಿ ದುಡ್ಡು ಮಾಡೋದನ್ನೇ ದಂಧೆಯನ್ನಾಗಿಸಿಕೊಂಡಿದ್ದ ಆಸೋರಾಂ ಬಾಪೂ ಆಶ್ರಮದ ಆಡಳಿತಮಂಡಳಿ ಆಶ್ರಮದ ಜಾಗವನ್ನು ಪಕ್ಕಾ ಕಮರ್ಷಿಯಲ್ ಗೆ ಬಳಸಿಕೊಂಡು ಸಿಎ ನಿವೇಶನದ ಎಲ್ಲಾ ನಿಯಮ ಉಲ್ಲಂಘಿಸ್ತು.ಇದನ್ನು ಪ್ರಶ್ನಿಸಿ ಸಾಯಿದತ್ತಾ ಹೋರಾಟಕ್ಕೆ ಮುಂದಾಗಿ ಅನೇಕ ವರ್ಷಗಳ ನಂತರ ಹೋರಾಟದಲ್ಲಿ ವಿಜಯಿಯಾಗಿ ಸ್ವತ್ತು ಬಿಡಿಎ ಪಾಲಾಗುವಂತೆ ಮಾಡಿದ್ದಾರೆ.

ಆಸೋರಾಂ ಬಾಪೂ ಆಶ್ರಮದ ಸ್ವತ್ತು ಇವತ್ತಿನ ಮಾರುಕಟ್ಟೆ ಹೋಲಿಕೆಯಲ್ಲಿ ಹತ್ತಿರತ್ತಿರ 5ಕೋಟಿ ಬೆಲೆ ಬಾಳುತ್ತೆ.ಕಳ್ಳ ಕಣ್ಮುಚ್ಚಿಕೊಂಡು ಕೋಟ್ಯಾಂತರ ಹಣ ಕೊಟ್ಟು ಅದನ್ನು ಖರೀದಿಸ್ತಾನೆ.ಅಂತದ್ದರಲ್ಲಿ ಆಶ್ರಮದ ಆಡಳಿತ ಮಂಡಳಿ ಕೂಡ ಈ ಆಶ್ರಮದ ಜಾಗವನ್ನು ಕೊಳ್ಳೆ ಹೊಡೆದು ಸ್ವಂತದ್ದನ್ನಾಗಿಸಿಕೊಳ್ಳುವ ದುರಾಸೆಯಲ್ಲಿತ್ತು.ಇದು ಬಿಡಿಎ ಆಡ:ಳಿತ ಮಂಡಳಿಗೆ ಗೊತ್ತಿದ್ರೂ ಆಶ್ರಮದ ಪರ ನಿಂತ ಐಎಎಸ್ ಅದರಲ್ಲೂ ಉತ್ತರ ಭಾರತ ಐಎಎಸ್ ಅಧಿಕಾರಿಗಳ ಲಾಭಿಯಿಂದ ಆಶ್ರಮದ ವಿರುದ್ದ ಧ್ವನಿ ಎತ್ತೊಕ್ಕೆ ಸಾಧ್ಯವಾಗಿರಲಿಲ್ಲ.ಬಿಡಿಎ ಆಡಳಿತ ಮಂಡಳಿಗೆ ಆಶ್ರಮದ ಜಾಗವನ್ನು ವಾಪಸ್ ಪಡೆಯಬೇಕೆನ್ನುವ ಮನಸಿದ್ದರೂ ಒತ್ತಡಗಳಿಂದ ಹಿಂದಕ್ಕೆ ಸರಿಯುತ್ತಿತ್ತು.ಆಗ ಬಿಡಿಎ ನೆರವಿಗೆ ಬಂದವ್ರೇ ಸಾಯಿದತ್ತಾ.ದಾಖಲೆಗಳ ಸಮೇತ ಕಾನೂನಾತ್ಮಕ ಹೋರಾಟ ಕೈಗೊಂಡು ಕೊನೆಗೂ ಆ ಸ್ವತ್ತು ಬಿಡಿಎ ವ್ಯಾಪ್ತಿಗೆ ಬರುವಂತೆ ಮಾಡಿದ್ದಾರೆ.

ನಿಮ್ಗೆ ಗೊತ್ತಿರಲಿ ಎಂದು ಹೇಳ್ತೇವೆ ಕೇಳಿ..ಬಿಡಿಎ ಇವತ್ತು ತನ್ನನ್ನೇನು ಬರ್ಬಾದ್-ದಿವಾಳಿ ಎಂದು ಘೋಷಿಸಿಕೊಳ್ಳುವ ಮಟ್ಟಕ್ಕೇನು ಬಂದಿದೆ.ಅದು ಅದರ ಸ್ವಯಂಕೃತಾಪರಾಧ.ಏಕೆಂದ್ರೆ ಲ್ಯಾಂಡ್ ಆಡಿಟಿಂಗ್ ಮಾಡದೆಯೇ ತನ್ನ ಆಸ್ತಿ ಎಷ್ಟಿದೆ ಎನ್ನುವುದರ ಬಗ್ಗೆ ಅರಿವಿಲ್ಲದಂತೆ ವರ್ತಿಸ್ತಾ ಬಂದಿದೆ ಬಿಡಿಎ.ಆಗ್ಲೇ ಸಾಯಿದತ್ತಾ ಇದರ ಬಗ್ಗೆ ಲೋಕಾಯುಕ್ತಕ್ಕೆ ಕಂಪ್ಲೆಂಟ್ ಕೊಟ್ಟು ಲ್ಯಾಂಡ್ ಆಡಿಟಿಂಗ್ ಗೆ ಆದೇಶ  ನೀಡುವಂತೆ ಮಾಡಿದ್ದು ಕಡ್ಮೆ ಸಾಧನೆಯೇನಲ್ಲ.ಅಲ್ಲಿವರೆಗೂ ಗಾಢ ನಿದ್ರೆಯಿಲ್ಲಿದ್ದ ಬಿಡಿಎ ಲ್ಯಾಂಡ್ ಆಡಿಟಿಂಗ್ ಗೆ ಮುಂದಾಗಿ ಒಂದಲ್ಲಾ ಎರಡಲ್ಲಾ 6 ಸಾವಿರ ಎಕ್ರೆಯಷ್ಟು ಬೃಹತ್ ಭೂಮಿ ಪತ್ತೆ ಮಾಡಿತು. ಸಾಯಿದತ್ತಾ ಹೋರಾಟ ನಡೆಸದಿದ್ದರೆ ಇದೆಲ್ಲಾ ಸಾಧ್ಯವೇ ಆಗ್ತಿರಲಿಲ್ಲ..ಇದು ಹೆಗ್ಗಳಿಕೆಯಲ್ಲ,ವಾಸ್ತವ.

ಸಾಯಿದತ್ತಾ ಮಾಡಿರುವ ಸಾಮಾಜಿಕ ಕಳಕಳಿಯ ಕೆಲಸಕ್ಕೆ ಬಿಡಿಎ ಆಡಳಿತ ಮಂಡಳಿ ಹರ್ಷ ವ್ಯಕ್ತಪಡಿಸಿದೆ.ಸಾಯಿದತ್ತಾ ಕಾರ್ಯವನ್ನು ಮುಕ್ತ ಕಂಠದಿಂದ ಶ್ಲಾಘಿಸಿದೆ.ಸಾಯಿದತ್ತಾ ಅವರಂಥ ಸಾಮಾಜಿಕ ಕಾರ್ಯಕರ್ತರ ಅವಶ್ಯಕತೆ ಇವತ್ತಿನ ದಿನಗಳಲ್ಲಿ ಎಷ್ಟರ ಮಟ್ಟಿಗೆ ಇದೆ ಎನ್ನುವುದು ಈ ಕೆಲಸದಿಂದ ಸಾಬೀತಾಗಿದೆ ಎಂದು ಹಾಡಿ ಹೊಗಳಿದ್ದಾರೆ.ಸರ್ಕಾರಿ ಸ್ವತ್ತನ್ನು ಎಂಜಾಯ್ ಮಾಡುತ್ತಾ ಬಂದಿದ್ದ ಆಸೋರಾಂ ಬಾಪೂ ಆಶ್ರಮದ ಕೈಯಿಂದ ಸ್ವತ್ತನ್ನು ಬಿಡಿಸಿ ಬಿಡಿಎಗೆ ಸಿಗುವಂತೆ ಮಾಡಿದ ಸಾಯಿದತ್ತಾ ಕೆಲಸಕ್ಕೆ ಕನ್ನಡ ಫ್ಲಾಶ್ ನ್ಯೂಸ್ ಅಭಿನಂದನೆ ವ್ಯಕ್ತಪಡಿಸಿದೆ.

Spread the love
Leave A Reply

Your email address will not be published.

Flash News