ನಿಯಮಬಾಹೀರವಾಗಿ ಗೂಟಾ ಹೊಡ್ಕಂಡಿರುವ “ಡೆಪ್ಯೂಟೇಷನ್” ಪೊಲೀಸಪ್ಪರ ಬೆನ್ನಿಗೆ ನಿಂತಿರೋದ್ಯಾಕೆ ಕಮಿಷನರ್ ಮಹಾದೇವ್?!

0
ಅಪರ ಪೊಲೀಸ್ ಆಯುಕ್ತ ಹೇಮಂತ್ ನಿಂಬಾಳ್ಕರ್
ಅಪರ ಪೊಲೀಸ್ ಆಯುಕ್ತ ಹೇಮಂತ್ ನಿಂಬಾಳ್ಕರ್
ಬಿಡಿಎ ಆಯುಕ್ತ ಮಹಾದೇವ್
ಬಿಡಿಎ ಆಯುಕ್ತ ಮಹಾದೇವ್

ಬೆಂಗಳೂರು: ಮಹಾದೇವ್ ಅವರಂಥ ಅನನುಭವಿ..ಉಢಾಳತನ..ಉಡಾಫೆಯ ಕಮಿಷನರ್ ಅವರಿಂದ ಇನ್ನೇನ್ ನಿರೀಕ್ಷಿಸ್ಲಿಕ್ಕಾಗುತ್ತೆ ಹೇಳಿ..ಬಿಡಿಎ ಆಡಳಿತ ನಡೆಸೊಕ್ಕೆ ಬರದೇ ಸ್ವಲ್ಪ ಕಾಲಾವಕಾಶ ಕೊಡಿ..ಕಡತ ವಿಲೇವಾರಿ ಮಾಡೋದನ್ನು ಕಲೀತಿನಿ ಎನ್ನುವ ಮಟ್ಟದ ಅಧಿಕಾರಿಯನ್ನು ಸರ್ಕಾರ ತಂದ್ ಕೂರ್ಸುತ್ತೆ ಎಂದ್ರೆ ಯಾರನ್ನು ದೂಷಿಸ್ಬೇಕೋ..ಗೊತ್ತಾಗ್ತಿಲ್ಲ ಬಿಡಿ.ಇಂಥಾ ಮಹಾದೇವ್ ಅವರ ಮತ್ತೊಂದು ಯಡವಟ್ಟು ಈಗ ಬಯಲಾಗಿದೆ.

ಮಹಾದೇವ್ ಅವರ ಯಡವಟ್ಟು ಅಂತಿಂಥದ್ದಲ್ಲ. ಸಾಹೇಬ್ರು ಸರ್ಕಾರದ ಆದೇಶಕ್ಕೆ ಕಿಮ್ಮತ್ತಿನ ಬೆಲೆಯೇ ನೀಡಿಲ್ಲ.ಅಕ್ರಮವಾಗಿ-ನಿಯಮಬಾಹೀರವಾಗಿ ಇಟ್ಟುಕೊಂಡಿರುವವರನ್ನು ವಾಪಸ್ ಕಳುಹಿಸಿಕೊಡಿ ಎಂದು ಅಪರ ಪೊಲೀಸ್ ಆಯುಕ್ತ  ಹೇಮಂತ್ ನಿಂಬಾಳ್ಕರ್ ನೀಡಿರುವ ಆದೇಶ ಅದು.ಆದ್ರೆ ಅದ್ಯಾವ ಕಾರಣಕ್ಕೆ ನಿಯಮ ಉಲ್ಲಂಘಿಸುವ ಹುಂಭಧೈರ್ಯವನ್ನು ಸಾಹೇಬ್ರು ತೋರಿಸುತ್ತಿದ್ದಾರೋ ಗೊತ್ತಾಗ್ತಿಲ್ಲ.

ಬಿಡಿಎ  ಆಡಳಿತ ವ್ಯವಸ್ಥೆ ಮಹಾದೇವ್ ಕಮಿಷನರ್ ಆಗಿ ಬಂದ್ಮೇಲೆ ಕಾನೂನುಬದ್ಧವಾಗಿ ಕಾರ್ಯನಿರ್ವಹಿಸುವುದನ್ನೇ ಮರೆತು ಕೂತಿದೆ ಎನ್ನಿಸುತ್ತೆ. ಅಕ್ರಮಗಳಿಗೆ ಸಾಥ್ ಕೊಡ್ತಿದೆಯಾ ಎನ್ನುವ ಶಂಕೆ ಕಾಡುವಂಥ ಸಾಕಷ್ಟು ಬೆಳವಣಿಗೆಗಳು ನಡೆಯುತ್ತಿವೆ.ಇದಕ್ಕೆ ಬಹುದೊಡ್ಡ ಉದಾಹರಣೆ ಸೇವಾ ನೇಮಕಾತಿ ನಿಯಾಮವಳಿ ಉಲ್ಲಂಘನೆ..ಅದರ ಬಗ್ಗೆ  ಪೊಲೀಸ್ ಇಲಾಖೆ ಉನ್ನತಾಧಿಕಾರಿಗಳು ಪದೇ ಪದೇ ಒತ್ತಿ ಹೇಳುತ್ತಿದ್ದರೂ ಅವರ ಆದೇಶಕ್ಕೆ ಕವಡೆ ಕಾಸಿನ ಬೆಲೆ ನೀಡದೆ ಇರುವ ಪ್ರಕರಣ.ಡೆಪ್ಯೂಟೇಷನ್ ಅವಧಿ ಮುಗಿದ ಮೇಲೆಯೂ ನಿಯಮಬಾಹೀರವಾಗಿ ಗೂಟಾ ಹೊಡ್ಕಂಡು ಇರುವ ಪೊಲೀಸ್ರನ್ನು ವಾಪಸ್ ಕಳುಹಿಸಿ ಎಂದು ಸರ್ಕಾರ ಹಾಗೂ  ಅಪರ ಪೊಲೀಸ್ ಆಯುಕ್ತ ಹೇಮಂತ್ ನಿಂಬಾಳ್ಕರ್ ಸ್ಪಷ್ಟವಾಗಿ ಆದೇಶ ನೀಡಿದ್ರೂ  ಆದೇಶ ಪರಿಪಾಲಿಸುವ ಸೌಜನ್ಯ ತೋರಿಲ್ಲ ಮಹಾದೇವ್ ಸಾಹೇಬ್ರು.

ಬಿಡಿಎನಲ್ಲಿ ಪೊಲೀಸ್ ಠಾಣೆಯಂತೆ ಕೆಲಸ ಮಾಡುವ  ಟಾಸ್ಕ್ ಪೋರ್ಸ್ ಇದೆ.ಬಿಡಿಎನ ಆಸ್ತಿಯನ್ನು ಒತ್ತುವರಿ ಮಾಡುವಂತದ್ದಕ್ಕೆ ತಡೆ ಹಾಕುವುದು ಹಾಗೆಯೇ ಬಿಡಿಎ ವ್ಯಾಪ್ತಿಯಲ್ಲಿ ಕಾನೂನು ಸುವ್ಯವಸ್ಥೆ ಕಾಯುವುದು ಪೊಲೀಸರ ಕೆಲಸ.ಈ ವಿಭಾಗಕ್ಕೆ ಪೊಲೀಸರು ಡೆಪ್ಯೂಟೇಷನ್ ಮೇಲೆ ಬಂದು ಕೆಲಸ ಮಾಡಿ ಮತ್ತೆ ವಾಪಸ್ ಹೋಗೋದು ಸಂಪ್ರದಾಯ.ಆದ್ರೆ  ಪೊಲೀಸ್ ಇಲಾಖೆಯ 6   ಸಿಬ್ಬಂದಿಯನ್ನು ನಿಯೋಜನೆ ನಿಯಮಗಳಿಗೆ ವ್ಯತಿರಿಕ್ತವಾಗಿ ಇಟ್ಟುಕೊಳ್ಳಲಾಗಿದೆ.ಅವರನ್ನು ಇಟ್ಟುಕೊಂಡಿರುವುದು ನಿಯಮಬಾಹೀರ ತತ್ ಕ್ಷಣ ವಾಪಸ್ ಕಳುಹಿಸಿಕೊಡಿ ಎಂದು ಹೇಮಂತ್ ನಿಂಬಾಳ್ಕರ್ ಸಾಹೇಬ್ರು ಖಡಕ್ ಆದೇಶ ಕೊಟ್ಟರೆ ಆದೇಶ ಪ್ರತಿಯನ್ನು ತಮ್ಮ ಬುಡದ ಕೆಳಗೆ ಇಟ್ಟುಕೊಂಡು ಕೂರೋದು ಯಾವ್ ರೀತಿಯ ಕಾರ್ಯವೈಖರಿನೋ ಮಹಾದೇವ್ ಅವ್ರೇ ಹೇಳಬೇಕು.ಇದು ದುರಂಹಕಾರವಲ್ಲದೇ ಇನ್ನೇನ್..ಸರ್ಕಾರದ ಆದೇಶದ ಸ್ಪಷ್ಟ ಉಲ್ಲಂಘನೆಯಲ್ಲದೇ ಮತ್ತೇನು.

ನಿಯಮಬಾಹೀರವಾಗಿ ಡೆಪ್ಯುಟೇಷನ್ ಮೇಲೆ ಮುಂದುವರೆದಿರುವ ಪೊಲೀಸರನ್ನು ಮಾತೃ ಇಲಾಖೆಗೆ ಕಳುಹಿಸುವಂತೆ ಹೇಮಂತ್ ನಿಂಬಾಳ್ಕರ್ ಕಮಿಷನರ್ ಗೆ ಬರೆದಿರುವ ಪತ್ರದ ಪ್ರತಿ
ನಿಯಮಬಾಹೀರವಾಗಿ ಡೆಪ್ಯುಟೇಷನ್ ಮೇಲೆ ಮುಂದುವರೆದಿರುವ ಪೊಲೀಸರನ್ನು ಮಾತೃ ಇಲಾಖೆಗೆ ಕಳುಹಿಸುವಂತೆ ಹೇಮಂತ್ ನಿಂಬಾಳ್ಕರ್ ಕಮಿಷನರ್ ಗೆ ಬರೆದಿರುವ ಪತ್ರದ ಪ್ರತಿ

ನಿಯೋಜನೆ ನಿಯಾಮವಳಿಗಳನ್ನು ಉಲ್ಲಂಘಿಸಿ ನಾಗೇಂದ್ರ,ಮಧು,ಮಂಜು,ರಮೇಶ್, ಲಕ್ಷ್ಮಣ್,ಚಿಕ್ಕರಾಮಯ್ಯ ಎನ್ನುವವರು ಬಿಡಿಎ ನಲ್ಲಿ ಕೆಲಸ ಮಾಡುತ್ತಿದ್ದಾರೆನ್ನುವುದನ್ನು ಕನ್ನಡ ಫ್ಲಾಶ್ ನ್ಯೂಸ್ ಈ ಹಿಂದೆಯೇ ಸುದ್ದಿ ಮಾಡಿತ್ತು.ಇದನ್ನು ಗಂಭೀರವಾಗಿ ಪರಿಗಣಿಸಿದ ಸರ್ಕಾರ ಹಾಗೂ ಪೊಲೀಸ್ ಇಲಾಖೆ ತತ್ ಕ್ಷಣಕ್ಕೆ ಅಕ್ರಮವಾಗಿ ಬಿಡಿಎನಲ್ಲಿ ಡೆಪ್ಯೂಟೇಷನ್ ಸೇವೆಯಲ್ಲಿ ಮುಂದುವರೆದಿರುವ ಅಷ್ಟೂ ಜನರನ್ನು ವಾಪಸ್ ಕಳುಹಿಸಿಕೊಡುವಂತೆ ಸೂಚನೆ ನೀಡಿತ್ತು.

ಇಷ್ಟಾದ ಹೊರತಾಗ್ಯೂ ಅವರನ್ನು ಬಿಡಿಎನಲ್ಲಿ ಉಳಿಸಿಕೊಳ್ಳುವ ಪ್ರಯತ್ನ ನಡೆದಿದೆ.ಸರ್ಕಾರದ ಆದೇಶ ಪಾಲಿಸಿದ್ದೇವೆ ಎನ್ನುವುದನ್ನು ತೋರಿಸ್ಲಿಕ್ಕೆ ಕೇವಲ 3 ಸಿಬ್ಬಂದಿಯನ್ನು ಕಳುಹಿಸಿ ಇನ್ನು ಮೂವರನ್ನು ಹಾಗೆಯೇ ಉಳಿಸಿಕೊಳ್ಳಲಾಗಿದೆ.ಇದ್ಯಾವ ರೀತಿಯ ಕರ್ತವ್ಯಪಾಲನೆಯೋ ಗೊತ್ತಾಗ್ತಿಲ್ಲ.

ಯಾವುದೇ ಅಧಿಕಾರಿ-ಸಿಬ್ಬಂದಿ ಡೆಪ್ಯೂಟೇಷನ್ ಗೆ ಹೋದ್ರೆ ಇಂತಿಷ್ಟೇ ವರ್ಷ  ಕೆಲಸ ಮಾಡಿ ಮತ್ತೆ ಮಾತೃ ಇಲಾಖೆಗೆ ವಾಪಸ್ ಆಗಬೇಕಾಗ್ತದೆ.(ಆದ್ರೆ ದೌರ್ಭಾಗ್ಯಪೂರ್ಣ ಸಂಗತಿ ಎಂದ್ರೆ   ಈ ನಿಯಮ ಕೇವಲ ಬಿಡಿಎ ಮಾತ್ರವಲ್ಲ ಯಾವುದೇ ಇಲಾಖೆಗಳಲ್ಲೂ ಪರಿಪಾಲನೆಯಾಗಿಲ್ಲ).ಈ ಆರು ಮಂದಿ ಮಹಾನುಭಾವರದು ಅದೇ ಕಥೆ. ಬಿಡಿಎಗೆ ಬಂದು ಅನೇಕ ವರ್ಷಗಳೇ ಆಗಿವೆ.ಡೆಪ್ಯೂಟೇಷನ್ ಅವಧಿ ಮೀರಿದ್ರೂ ಮಾತೃ ಇಲಾಖೆಗೆ ಹೋಗಿಯೇ ಇಲ್ಲ…ಈ ಬಗ್ಗೆ ಪ್ರಶ್ನಿಸಿದ್ರೆ ಮುಖ್ಯಮಂತ್ರಿ ಯಡಿಯೂರಪ್ಪ..ಅವರ ಮಗ ವಿಜಯೇಂದ್ರ…ಹೋಮ್ ಮಿನಿಸ್ಟರ್ ಬಸವರಾಜ್ ಬೊಮ್ಮಾಯಿ..ಡಿಸಿಎಂ ಡಾ.ಅಶ್ವತ್ಥನಾರಾಯಣ ಅವರ ಹೆಸರೇಳಿಕೊಂಡು ಇಲ್ಲಿಯೇ ಇದ್ದಾರೆ.ಬಿಡಿಎ ಕೂಡ ಇವರಿಗೆ ದೊಡ್ಡವರ ಬೆಂಬಲ-ಕೃಪಕಟಾಕ್ಷ ಇದೆ ಎಂದು ಹೆದರಿಕೊಂಡು ಹಾಳಾಗಿ ಹೋಗ್ಲಿ ಎಂದ್ಕೊಂಡು ಸುಮ್ಮನಿದೆ ಎನ್ತಾರೆ ಸಾಮಾಜಿಕ ಕಾರ್ಯಕರ್ತರಾದ ಚಾಮುಂಡಿ ಶಿವಕುಮಾರ್ ಹಾಗೂ ರವಿಕುಮಾರ್ .

ಬಿಡಿಎ ನ "ಸೂಪರ್ ಕಮಿಷನರ್ !" ಉಪ ಕಾರ್ಯದರ್ಶಿ ಚಿದಾನಂದ್
ಬಿಡಿಎ ನ “ಸೂಪರ್ ಕಮಿಷನರ್ !” ಉಪ ಕಾರ್ಯದರ್ಶಿ ಚಿದಾನಂದ್

ಬಿಡಿಎನ ಜವಾಬ್ದಾರಿಯುತ ಕಮಿಷನರ್ ಆಗಿ ಮಹಾದೇವ್ ಅವರು ಸರ್ಕಾರದ ಮುಖ್ಯಕಾರ್ಯದರ್ಶಿಗಳು ಹಾಗೂ ಪೊಲೀಸ್ ಮುಖ್ಯಾಧಿಕಾರಿಗಳ ಆದೇಶ ಪಾಲಿಸ್ಬೇಕಿತ್ತು.ಆದ್ರೆ ಅದನ್ನು ಮಾಡದಿರುವುದರ ಹಿಂದೆ ಅದ್ಯಾವ ರೀತಿಯ ಹಿತಾಸಕ್ತಿ-ಮರ್ಜಿಗಳಿದೆಯೋ ಗೊತ್ತಾಗ್ತಿಲ್ಲ.ಅಪರ ಪೊಲೀಸ್ ಆಯುಕ್ತ ಹೇಮಂತ್ ನಿಂಬಾಳ್ಕರ್ ಕಟ್ಟಕಡೆಗೆ ವಾರ್ನ್ ಮಾಡುವ ರೀತಿಯಲ್ಲಿ  ಕಮಿಷನರ್ ಮಹಾದೇವ್ ಅವರಿಗೆ ಆರು ಜನರನ್ನು ತತ್ ಕ್ಷಣವೇ ಮಾತೃ ಇಲಾಖೆಗೆ ಕಳುಹಿಸುವಂತೆ ಸೂಚಿಸಬೇಕಾಗಿ ಬಂದಿದ್ದು ವಿಪರ್ಯಾಸ.ಓರ್ವ ಕಮಿಷನರ್ ಪೊಲೀಸ್ ಮೇಲಾಧಿಕಾರಿಗಳಿಂದ ಹೀಗೆ ಹೇಳಿಸಿಕೊಳ್ಳುವಂತಾಗಿದ್ದು ನಾಚಿಕೆಗೇಡಿನ ಸಂಗತಿ.ಕೆಲವು ಮೂಲಗಳ ಪ್ರಕಾರ ತಮ್ಮ ಪಾದ ಬುಡಕ್ಕೆ ಬಂದಿರುವ ಪೊಲೀಸಪ್ಪರನ್ನು ರಕ್ಷಿಸುವ ಕೆಲಸವನ್ನೂ ಸರ್ಕಾರದ ಮಟ್ಟದಲ್ಲಿ ಅವರಿವರಿಗೆ ಹೇಳಿಸಿ ಮಾಡಿಸುವ ಕೆಲಸವನ್ನೂ ಮಹಾದೇವ್ ಮಾಡ್ತಿದ್ದಾರೆನ್ನುವ ಮಾತುಗಳಿವೆ.

ಏಕೆಂದ್ರೆ ಓರ್ವ ಕಮಿಷನರ್ ಆಗಿ ತಮ್ಮ ಸರ್ವಿಸ್ ಮ್ಯಾಟರ್ಸ್ ಗಳನ್ನು ಡಿಸ್ಚಾರ್ಜ್ ಮಾಡ್ಲಿಕ್ಕೆ ಬಾರದೆ ಎಲ್ಲಕ್ಕೂ ಉಪಕಾರ್ಯದರ್ಶಿ ಚಿದಾನಂದ್ ಮೂಲಕ ಮಾಡಿಸುತ್ತಿರುವುದು ಎಲ್ಲರಿಗೂ ಗೊತ್ತಿದೆ.ಅಂದ್ರೆ ಹೆಸರಿಗಷ್ಟೇ ಕಮಿಷನರ್ ಆಗಿ ಸೂಪರ್ ಕಮಿಷನರ್ ಆಗಿ ಕೆಲಸ ಮಾಡುತ್ತಿದ್ದಾರೆ ಚಿದಾನಂದ್.ಈ ಮಹಾನುಭಾವ ಚಿದಾನಂದ್ ಅವ್ರೇ ಬಿಡಿಎನಲ್ಲಿ ಏಕಮೇವಾದ್ವಿತೀಯನಂತೆ ಮೆರೆಯುತ್ತಿದ್ದಾರೆ( ಉಪ ಕಾರ್ಯದರ್ಶಿ  ಚಿದಾನಂದ್ ಅವರ ಕರ್ಮಕಾಂಡ-ಸೇವಾ ಅಕ್ರಮ ಹಾಗೂ ಕಮಿಷನರ್ ಮಹಾದೇವ್ ಅವರನ್ನು ಹೇಗೆಲ್ಲಾ ಯಾಮಾರಿಸುತ್ತಿದ್ದಾರೆನ್ನುವುದನ್ನು ದಾಖಲೆ ಸಮೇತ ರಿಲೀಸ್ ಮಾಡಲಿದೆ ಕನ್ನಡ ಫ್ಲಾಶ್ ನ್ಯೂಸ್).

ಡೆಪ್ಯೂಟೇಷನ್ ಬಂದಿರುವ ಪೊಲೀಸ್ ಸಿಬ್ಬಂದಿಯನ್ನು ನಿಯಾಮವಳಿಯಂತೆ ವಾಪಸ್ ಕಳುಹಿಸಿಕೊಡಬೇಕಾಗಿದ್ದು ಬಿಡಿಎ ಆಡಳಿತಮಂಡಳಿ ಮುಖ್ಯಸ್ಥರಾಗಿ ಮಹಾದೇವ್ ಅವರ ಹೊಣೆಗಾರಿಕೆ ಹಾಗೂ ಬಾಧ್ಯಸ್ಥಿಕೆ ಕೂಡ.ಅದನ್ನು ಅವರು ಮೊದಲು ಮಾಡಬೇಕು.ಪದೇ ಪದೇ ಎಚ್ಚರಿಕೆ ನೊಟೀಸ್ ಪಡೆದುಕೊಳ್ಳುವ ಮಟ್ಟಕ್ಕೆ ತಂದುಕೊಳ್ಳಬಾರದು.ಹೇಮಂತ್ ನಿಂಬಾಳ್ಕರ್ ಕೊಟ್ಟಿರುವ ಆದೇಶ ಪರಿಪಾಲನೆ ಮಾಡೋದ್ರಲ್ಲೂ ಸಾಮಾಜಿಕ ನ್ಯಾಯ ಪರಿಪಾಲಿಸದ ಆಡಳಿತಮಂಡಳಿ ವಿರುದ್ಧ ಕಾನೂನಾತ್ಮಕ ಹೋರಾಟಕ್ಕೆ ಮುಂದಾಗಿದ್ದಾರೆ ಸಾಮಾಜಿಕ ಕಾರ್ಯಕರ್ತರು.ಅದಕ್ಕೆ ಅವಕಾಶ ಕೊಡದೆ ತಮ್ಮ ಜವಾಬ್ದಾರಿಯನ್ನು ಅರ್ಥ ಮಾಡಿಕೊಂಡು ನಿಭಾಯಿಸ್ಬೇಕಿದೆ ಮಹಾದೇವ್ ಸಾಹೇಬ್ರು.ಇಲ್ಲದಿದ್ದರೆ ಮುಖಭಂಗ-ಮುಜುಗರವಂತೂ ಕಟ್ಟಿಟ್ಟಬುತ್ತಿ.

Spread the love
Leave A Reply

Your email address will not be published.

Flash News