ಕೊಡಗಿನಲ್ಲಿ ತತ್ ಕ್ಷಣಕ್ಕೆ ರೆಸಾರ್ಟ್-ಹೋಂಸ್ಟೇ ಬಂದ್ ಮಾಡುವಂತೆ ಡಿಸಿ ಆದೇಶಿಸಿದ್ದೇಕೆ?

0

ಕೊಡಗು(ಮಡಿಕೆರಿ):ಪ್ರವಾಸೋದ್ಯಮಕ್ಕೆ ಹೆಸರಾದ ಕೊಡಗು ಮಳೆಗಾಲದಲ್ಲಿ ಜೀವಕಳೆಯಿಂದ ನಳನಳಿಸುತ್ತೆ.ಅದು ಆ ಜಿಲ್ಲೆಯ ಸ್ಪೆಷಾಲಿಟಿ ಕೂಡ.ಈ ಕಾರಣಕ್ಕೆ ಮಳೆಗಾಲದಲ್ಲಿ ಹೋಂ ಸ್ಟೇ-ರೇಸಾರ್ಟ್ ಗಳು ಈ ಹೊತ್ತಿಗಾಗ್ಲೇ ಫುಲ್ ಬುಕ್ಕಿಂಗ್ ಆಗ್ಬೇಕಿತ್ತು.

ಆದ್ರೆ ಕೊರೊನಾ ಹೊಡೆತ ಮಡಿಕೆರಿಯ ಪ್ರವಾಸೋಧ್ಯಮವನ್ನೇ ಬುಡಮೇಲು ಮಾಡಿದೆ.ಇದರ ಹೊಡೆತ ಪ್ರವಾಸೋದ್ಯಮಕ್ಕೆ ಹೆಚ್ಚಿನ ಬೇಡಿಕೆ ಹಾಗೂ ಲಾಭ ತಂದುಕೊಡುತ್ತಿದ್ಗ ಹೋಂ ಸ್ಟೇ..ರೆಸಾರ್ಟ್ ಹಾಗೂ ವಸತಿಗೃಹಗಳ ಬ್ಯುಸಿನೆಸ್ಸನ್ನೇ ಫುಲ್ ಥಂಡಾ ಹೊಡೆಸಿವೆ.

ಪ್ರವಾಸಿಗರೇ ಇಲ್ಲದ ಮೇಲೆ ಇವೆಲ್ಲವನ್ನೂ ಓಪನ್ ಮಾಡಿಟ್ಟುಕೊಂಡು ಏನ್ ಮಾಡ್ಬೇಕು.ಇವುಗಳ ಚಟುವಟಿಕೆ ಪ್ರಾರಂಭಿಸಿದ್ರೆ ಆಗುವ ಖರ್ಚನ್ನೇ ಹೊಂದಿಸಲಿಕ್ಕೆ ಆಗುತ್ತಿಲ್ಲ ಎನ್ನುವುದು ಮಾಲೀಕರ ಅಳಲು.ಅಲ್ಲದೇ ಲಾಕ್ ಡೌನ್ ಫ್ರೀ ಆದ್ಮೇಲೆ ರೆಸಾರ್ಟ್-ಹೋಂ ಸ್ಟೇ ಗಳ ಬ್ಯುಸಿನೆಸ್ ನ್ನು ಪ್ರಾಯೋಗಿಕವಾಗಿ ಆರಂಭಿಸಿದ್ರೂ ಲಾಸ್ ಕಟ್ಟಿಟ್ಟಬುತ್ತಿ.ಇಂಥಾ ಪರಿಸ್ಥಿತಿಯಲ್ಲಿ ವ್ಯವಹಾರ ನಡೆಸೊಕ್ಕೆ ಆಗುವುದಿಲ್ಲ ಎನ್ನುವ ಅಳಲನ್ನು ಜಿಲ್ಲಾಡಳಿತಕ್ಕೂ ಮನವರಿಕೆ ಮಾಡಿಕೊಟ್ಟಿದ್ದರು.

ಇದೆಲ್ಲದರ ನಡುವೆಯೇ ಕೊರೊನಾ ಸೋಂಕು ಜಿಲ್ಲೆಯಲ್ಲಿ ದಿನೇ ದಿನೇ  ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಮುಂಜಾಗ್ರತಾ ಕ್ರಮವಾಗಿ ಜಿಲ್ಲಾಧಿಕಾರಿ ಅನ್ನಿಸ್ ಕಣ್ಮಣಿಜಾಯ್  ಜಿಲ್ಲೆಯ ಎಲ್ಲಾ ರೆಸಾರ್ಟ್‌, ವಸತಿಗೃಹಗಳು, ಹೋಂಸ್ಟೇಗಳನ್ನು ಬಂದ್ ಮಾಡುವಂತೆ ಆದೇಶಿಸಿದ್ದಾರೆ..ಮುಂದಿನ ನಿರ್ದೇಶನ ಬರುವವರೆಗೆ ಯಾವುದೇ ಮುಂಗಡ ಬುಕ್ಕಿಂಗ್ ಮಾಡಿಕೊಳ್ಳದಂತೆ ಸೂಚನೆ ಕೊಟ್ಟಿರುವುದರಿಂದ ಮಾಲೀಕರು ಅನಿವಾರ್ಯವಾಗಿ ಎಲ್ಲಾ ವ್ಯವಹಾರವನ್ನು ಸ್ಥಗಿತಗೊಳಿಸಿದ್ದಾರೆ. 

Spread the love
Leave A Reply

Your email address will not be published.

Flash News