ಕೊರೊನಾ ಹೊಡೆತಕ್ಕೆ ಇತಿಹಾಸಪ್ರಸಿದ್ದ “ಗುಡ್ಡೇಕಲ್ ಜಾತ್ರೆ” ರದ್ದು

0

ಶಿವಮೊಗ್ಗ: ಕೊರೊನಾ ಕೇವಲ ಜನರ ಬದುಕನ್ನಷ್ಟೆ ಹೈರಾಣಗೊಳಿಸಿಲ್ಲ..ಜನರ ಬದುಕು-ಆಚಾರವಿಚಾರ-ಸಂಪ್ರದಾಯ-ಹಬ್ಬಹರಿದಿನಗಳ ಮೇಲೂ ಮಾರಕ ಪರಿಣಾಮ ಬೀರುತ್ತಿದೆ.ಕೊರೊನಾ ಕಾರಣಕ್ಕೆ ಈಗಾಗಲೆ ಅದೆಷ್ಟೋ ಹಬ್ಬಹರಿದಿನಗಳು ಹಾಗೂ ಧಾಮಿ೵ಕ ಆಚರಣೆಗಳು ರದ್ದಾಗಿವೆ.ಇದರ ಸಾಲಿಗೆ ಸೇರುತ್ತಿದೆ ಪ್ರಸಿದ್ಧ ಅಡಿಕೃತಿಕೆ ಹಬ್ಬ.

ಅಡಿಕೃತಿಕೆ ಹಬ್ಬ ತಮಿಳುಬಾಂಧವರ ಸಂಭ್ರಮದ ಹಬ್ಬ.ಚನ್ನಗಿರಿ ರಸ್ತೆಯಲ್ಲಿರುವ ಗುಡ್ಡೇಕಲ್ ನ ಶ್ರೀ ಸುಬ್ರಮಣ್ಯೇಶ್ವರ ದೇವಸ್ಥಾನದಲ್ಲಿ ವಿಜೃಂಭಣೆಯಿಂದ ಆಚರಿಸಲಾಗುತ್ತಿದ್ದ ಈ ಹಬ್ಬ ಕೊರೊನಾ ಕಾರಣಕ್ಕೆ ಈ ಬಾರಿ ರದ್ದಾಗಿದೆ.ಈ ಸಂಗತಿಯನ್ನು ಸ್ವತಃ ದೇವಸ್ಥಾನ ಆಡಳಿತಮಂಡಳಿಯೇ ಸ್ಪಷ್ಟಪಡಿಸಿದೆ.ಹಾಗಾಗಿ ಗುಡ್ಡೇಕಲ್ ಸುಬ್ರಮಣ್ಯೇಶ್ವರ ದೇವಸ್ಥಾನದ ಸಂಭ್ರಮವನ್ನು ಕಣ್ ಕಟ್ಟಿಕೊಳ್ಳುವ ಉತ್ಸಾಹದಲ್ಲಿದ್ದ ಜನರಿಗೆ ಕೊರೊನಾ ತಣ್ಣೀರೆಚಿದೆ.

ಆಗಸ್ಟ್ 11 ಹಾಗೂ 12 ರಂದು ಪ್ರತಿ ವರ್ಷದಂತೆ ನಡೆಯಬೇಕಿದ್ದ ಉತ್ಸವಕ್ಕೆ ಸರ್ಕಾರ ತಡೆಯೊಡ್ಡಿರುವುದರಿಂದ ಗುಡ್ಡೇಕಲ್ ನ ಜಾತ್ರೆ ಈ ಬಾರಿ ನಡೆಯುವುದಿಲ್ಲ.ಭಕ್ತಾಧಿಗಳು ದಯವಿಟ್ಟು ಸಹಕರಿಸಬೇಕು.ತಮ್ಮ ತಮ್ಮ ಮನೆಗಳಲ್ಲೇ ಹಬ್ಬದ ಸಂಭ್ರಮವನ್ನು ಆಚರಿಸಿ. ಹಾಗೆಯೇ ಕೊರೊನಾ ಪಿಡುಗು ಆದಷ್ಟು ಶೀಘ್ರ ತೊಲಗಲಿ ಎಂದು ದೇವರಲ್ಲಿ ಪ್ರಾರ್ಥಿಸಿಕೊಳ್ಳಿ ಎಂದು ದೇವಸ್ತಾನ ಟ್ರಸ್ಟ್ ನ  ಕಾರ್ಯದರ್ಶಿ ಲೋಕೇಶ್ ಭಕ್ತಾಧಿಗಳಲ್ಲಿ ಕೋರಿಕೊಂಡಿದ್ದಾರೆ. 

Spread the love
Leave A Reply

Your email address will not be published.

Flash News