ಗುರುರಾಘವೇಂದ್ರ ಬ್ಯಾಂಕ್ ಮಾಜಿ ಸಿಇಓ ಆತ್ಮಹತ್ಯೆಗೆ ಹೊಸ ಟ್ವಿಸ್ಟ್….11 ನಿರ್ದೇಶಕರಿಂದ್ಲೇ ತಮ್ಮ ತಂದೆ ಆತ್ಮಹತ್ಯೆ-ಮಗಳಿಂದ ದೂರು-FIR ದಾಖಲು

0

ಬೆಂಗಳೂರು:ಬಹುಕೋಟಿ ವಂಚನೆ ಆರೋಪ ಎದುರಿಸುತ್ತಿದ್ದ  ಗುರುರಾಘವೇಂದ್ರ ಕೋ ಆಪರೇಟಿವ್ ಸೊಸೈಟಿ ನಿವೃತ್ತ ಸಿಇಓ ಹಾಗೂ ಹಾಲಿ ಸೂಪರ್ ವೈಸರ್ ವಾಸುದೇವ ಮಯ್ಯ ಆತ್ಮಹತ್ಯೆಗೆ ಹೊಸ ತಿರುವು ದೊರೆತಿದೆ. ವಾಸುದೇವ ಮಯ್ಯ ಅವರ ಅಮಾಯಕತೆ ಹಾಗೂ ವ್ಯವಹಾರಿಕ ಪರಿಜ್ಞಾನ ಇಲ್ಲದ ಮನಸ್ಥಿತಿಯನ್ನೇ ದುರ್ಬಳಕೆ ಮಾಡಿಕೊಂಡು ಸಾವಿರಾರು ಕೋಟಿ ಅಕ್ರಮ ನಡೆಯೊಕ್ಕೆ ಬ್ಯಾಂಕ್ ಆಡಳಿತ ಮಂಡಳಿಯ 11 ಜನ ಕಾರಣ ಎಂದು ಮಯ್ಯ ಅವರ ಪುತ್ರಿ ಸುಬ್ರಮಣ್ಯಪುರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.

ವಾಸುದೇವ ಮಯ್ಯ ಅವರ ಪುತ್ರಿ ರಶ್ಮಿ ಎನ್ನುವವರು ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.ದೂರಿನಲ್ಲಿ ಸಿಇಓ ಸಂತೋಷ ಕುಮಾರ್, ರವಿ ಐತ್ಯಾಳ, ರಾಕೇಶ್, ಶ್ರೀಪಾದಹೆಗಡೆ ಮತ್ತು ಪ್ರಶಾಂತ್ ಸೇರಿದಂತೆ 11 ಜನರು ನೀಡುತ್ತಿದ್ದ ಮಾನಸಿಕ ಕಿರುಕುಳವೇ  ತನ್ನ ತಂದೆ ಆತ್ಮಹತ್ಯೆಗೆ ಕಾರಣ.ಅವ್ರು ಅಕ್ರಮ ಎಸಗುವಷ್ಟು ದುರುಳರಾಗಿರಲಿಲ್ಲ.ಅವರ ಅಮಾಯಕತೆಯನ್ನೇ ಪ್ರಸ್ತುತ ಅಧಿಕಾರದಲ್ಲಿರುವ ಆಡಳಿತ ಮಂಡಳಿ ಸದಸ್ಯರು ಮಿಸ್ಯೂಸ್ ಮಾಡ್ಕೊಂಡಿದ್ದಾರೆ.ಅವರ ಷಡ್ಯಂತ್ರಕ್ಕೆ ತಮ್ಮ ತಂದೆ ಅನ್ಯಾಯವಾಗಿ ಬಲಿಯಾದ್ರು ಎಂದು ದೂರಿನಲ್ಲಿ ರಶ್ಮಿ ವಿವರಿಸಿದ್ದಾರೆ.

ಸಾಲ ಪಡೆದವರು ದಿನನಿತ್ಯ ಒಂದಲ್ಲಾ ಒಂದು ರೀತಿಯಲ್ಲಿಕಿರುಕುಳ ನೀಡುತ್ತಿದ್ದರು.ಬ್ಯಾಂಕ್ ಬೋರ್ಡ್ ಸದಸ್ಯರಿಂದ್ಲೇ ಇಷ್ಟೆಲ್ಲಾ ಆಯ್ತು.ನನ್ನನ್ನು ದಾಳವಾಗಿ ಬಳಸಿಕೊಂಡ್ರಷ್ಟೆ.ಅವರ ಅನುಮತಿಯಂತೆ ಸಾಲನೀಡಲಾಯ್ತು.

ಬ್ಯಾಂಕ್ ವ್ಯವಹಾರದ ಗಂಧಗಾಳಿಯಿಲ್ಲದ ತಮ್ಮ ತಂದೆಯವರನ್ನು ಸಿಇಓ ಸ್ಥಾನದಲ್ಲಿ ಕುಳ್ಳರಿಸಿ ದರ್ಬಾರ್ ಮಾಡಿದವ್ರು ಬೋರ್ಡ್ ಆಫ್ ಡೈರೆಕ್ಟರ್ಸ್.ಅವರ ರಬ್ಬರ್ ಸ್ಟ್ಯಾಂಪ್ ನಮ್ಮ ತಂದೆಯವರಾಗಿದ್ರು.ಅವರು ನಿರಾಕರಿಸಿದ್ರೂ ಅವರಿಗೆ ಬೆದರಿಕೆ ಹಾಕಿ ಅನೇಕ ಲೆಕ್ಕಪತ್ರಗಳಿಗೆ ಸಹಿ ಹಾಕಿಸಿಕೊಳ್ಳಲಾಯಿತು.ವ್ಯವಹಾರ ಮೇಲ್ನೋಟಕ್ಕೆ ನಮ್ಮ ತಂದೆಯವರ ಅಧಿಕಾರ ವ್ಯಾಪ್ತಿಯಲ್ಲಿ ಇತ್ತಾದ್ರೂ ಕಂಪ್ಯೂಟರ್ ಪಾಸ್ ವರ್ಡ್ ಬೋರ್ಡ್ ಆಫ್ ಡೈರೆಕ್ಟರ್ಸ್ ಗಳ ಬಳಿ ಇತ್ತು ಎಂದು ರಶ್ಮಿ ವಿವರಿಸಿದ್ದಾರೆ.

ತಮ್ಮ ತಂದೆಯನ್ನು ನಾಮಾಕವಸ್ಥೆಗೆ ಸಿಇಓ ಮಾಡಿ,ಎಲ್ಲಾ ವ್ಯವಹಾರ-ವಹಿವಾಟನ್ನು ನೋಡಿಕೊಳ್ಳುತ್ತಿದ್ದ  ಬ್ಯಾಂಕ್ ಬೋರ್ಡ್ ಆಫ್ ಡೈರೆಕ್ಟರ್ಸ್  2019ರಲ್ಲಿ RBI  ನಡೆಸಿದ ಆಡಿಟ್ ವೇಳೆ ಸರಿಯಾಗಿ ದತ್ತಾಂಶ ನೀಡದೇ ಅನುಮಾನ ತಮ್ಮ ತಂದೆ ಮೇಲೆ ಬರುವಂತೆ ಮಾಡಲಾಗಿತ್ತು.ಅಲ್ಲದೇ RBI ಪರಿವೀಕ್ಷಣೆ ವೇಳೆ ತಮ್ಮ ತಂದೆ ಕಡೆಯಿಂದ ಬಲವಂತವಾಗಿ ದಾಖಲೆಗಳ ಮೇಲೆ ಸಹಿ ಪಡೆಯಲಾಗಿತ್ತು.ಇದೆಲ್ಲವನ್ನೂ ಅವರು ಮನೆಯಲ್ಲಿ ನಮ್ಮ ಜೊತೆ ಶೇರ್ ಮಾಡುತ್ತಿದ್ದರು.ತಮ್ಮ ತಂದೆ ಆತ್ಮಹತ್ಯೆ ಮಾಡಿಕೊಳ್ಳುವಷ್ಟು ಬಲಹೀನರಾಗಿರಲಿಲ್ಲ.ಆದ್ರೆ ಮಾಡದ ತಪ್ಪಿಗೆ ಅಪರಾಧಿ ಸ್ಥಾನದಲ್ಲಿ ನಿಲ್ಲಿಸಿದ್ದು ಹಾಗೆಯೇ ಬ್ಯಾಂಕ್ ಗ್ರಾಹಕರು ಇಲ್ಲಸಲ್ಲದ ರೀತಿಯಲ್ಲಿ ಹಿಡಿಶಾಪ ಹಾಕುತ್ತಿದ್ದರಿಂದ ಬೇಸತ್ತು ಡೆತ್ ನೋಟ್ ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡರು.ನನ್ನ ತಂದೆ ಸಾವಿಗೆ ಬೆಲೆ ಸಿಗಬೇಕಾದ್ರೆ ಎಲ್ಲಾ 11 ಜನ ತಪ್ಪಿತಸ್ಥರಿಗೆ ಶಿಕ್ಷೆ ಆಗಬೇಕೆಂದು ದೂರಿನಲ್ಲಿ ಮನವಿ ಮಾಡಿಕೊಂಡಿದ್ದಾರೆ.

ಬ್ಯಾಂಕ್ ನ 11  ಆಫ್ ಡೈರೆಕ್ಟರ್ಸ್ ವಿರುದ್ದ FIR: ಆತ್ಮಹತ್ಯೆಗೂ ಮುನ್ನ ಮಯ್ಯ ಅವರು ಬರೆದ ಡೆತ್ ನೋಟ್ ನಲ್ಲಿನ ಸಂಗತಿಗಳು ಹಾಗೂ ಅವರ ಮಗಳು ರಶ್ಮಿ ನೀಡಿದ ದೂರಿನ ಮೇರೆಗೆ ಸುಬ್ರಮಣ್ಯಪುರ ಪೊಲೀಸರು ಸಿಇಓ ಸಂತೋಷ ಕುಮಾರ್, ರವಿ ಐತ್ಯಾಳ, ರಾಕೇಶ್, ಶ್ರೀಪಾದಹೆಗಡೆ ಪ್ರಶಾಂತ್,ರಘುನಾಥ್, ರೆಡ್ಡಿ ಬ್ರದರ್ಸ್, ಕುಮರೇಶ್, ರಜತ್, ತಲ್ಲಂ ಅವರ  ವಿರುದ್ಧ ಎಫ್ ಐಆರ್ ದಾಖಲಿಸಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಇನ್ನೂ ಸ್ಪೋಟಕ ಮಾಹಿತಿಗಳು ಪೊಲೀಸರಿಗೆ ದಕ್ಕಿದ್ದು ಹಗರಣದಲ್ಲಿ ಭಾಗಿಯಾದವರ ಬಗ್ಗೆಯೂ ತನಿಖೆ ಮುಂದುವರೆದಿದೆ. 

Spread the love
Leave A Reply

Your email address will not be published.

Flash News