ಕೊರೊನಾ ಭ್ರಷ್ಟಾಚಾರ ವಿಷಯದಲ್ಲಿ ಈ ಮಾಜಿ ಸಿಎಂಗಳಿಬ್ಬರು ಕೆಸರೆರಚಾಡಿಕೊಳ್ಳುತ್ತಿರುವುದೇಕೆ ?!

0

ಬೆಂಗಳೂರು: ಮಾಜಿ ಸಿಎಂಗಳ ನಡುವೆ ಟ್ವೀಟ್ ಸಮರ ಮುಂದುವರೆದಿದೆ.ಕೊರೊನಾ ಸಂದರ್ಭದಲ್ಲಿ ಸರ್ಕಾರದ ಮಟ್ಟದಲ್ಲಿ ನಡೆದಿದೆ ಎನ್ನಲಾದ ಅಕ್ರಮ-ಭ್ರಷ್ಟಾಚಾರಕ್ಕೆ ಸಂಬಂಧಿಸಿದಂತೆ  ಮಾಜಿ ಸಿಎಂ ಸಿದ್ದರಾಮಯ್ಯ  ಸುದ್ದಿಗೋಷ್ಠಿ ನಡೆಸಿದ್ರೆ ಈ ನಡೆಯನ್ನು ಮತ್ತೋರ್ವ ಮಾಜಿ ಸಿಎಂ ಎಚ್.ಡಿ ಕುಮಾರಸ್ವಾಮಿ ತೀವ್ರವಾಗಿ ಖಂಡಿಸಿ ಟ್ವೀಟ್ ಮಾಡಿದ್ರು.ಇದಕ್ಕೆ ಕೆಂಡಾಮಂಡಲವಾಗಿರುವ ಸಿದ್ಧರಾಮಯ್ಯ ತಮ್ಮ ಟ್ವೀಟ್ ನಲ್ಲಿ ಕುಮಾರಸ್ವಾಮಿ ಅವರ ಕಾಲೆಳೆಯುವ ಕೆಲಸ ಮಾಡಿದ್ದಾರೆ.

ಕೊರೊನಾದಂಥ ಸಂದಿಗ್ದ ಸ್ಥಿತಿಯಲ್ಲೂ ಸರ್ಕಾರ ಭ್ರಷ್ಟಾಚಾರ ನಡೆಸುತ್ತಿದೆ ಎಂದು ದಾಖಲೆ ಸಮೇತ ಸುದ್ದಿಗೋಷ್ಠಿ ನಡೆಸಿ ಸಿದ್ಧರಾಮಯ್ಯ ಆರೋಪದ ಬಾಂಬ್ ಬಿಸಾಕಿದ್ರು.ಇದಕ್ಕೆ ವ್ಯತಿರತಿಕ್ತವಾಗಿ ರಿಯಾಕ್ಟ್ ಮಾಡಿದ ಕುಮಾರಸ್ವಾಮಿ ಇಂಥಾ ಸಂದರ್ಭ ಆರೋಪ ಮಾಡುವಂತದ್ದಲ್ಲ.ಸರ್ಕಾರ ಮಾಡುತ್ತಿರುವ ಕೆಲಸಕ್ಕೆ ಸಂಬಂಧಿಸಿದಂತೆ ಸಲಹೆ-ಸಹಕಾರ ನೀಡುವಂತದ್ದು.ಹಾಗಾಗಿ ಆರೋಪ ಮಾಡುವುದರಿಂದ ಪ್ರಯೋಜನವಿಲ್ಲ.ಕೈ ಜೋಡಿಸಿ ಕೆಲಸ ಮಾಡಬೇಕೆಂದು ತಿರುಗೇಟು ನೀಡಿದ್ರು.

ಮಾಜಿ ಸಿಂ ಹೆಚ್.ಡಿ.ಕೆ ಗೆ ಟ್ವೀಟ್ ಗೆ ಕೊತ ಕೊತ ಕುದ್ದು ಹೋಗಿರುವ ಸಿದ್ಧರಾಮಯ್ಯ ಇಂದು ತೀಕ್ಷ್ಣವಾಗಿ ಪ್ರತಿಕ್ರಿಯೆ ನೀಡಿದ್ದಾರೆ. ಕೋವಿಡ್ ಸಂದರ್ಭದಲ್ಲಿ ಯಾವುದೇ ಭ್ರಷ್ಟಾಚಾರ ಆರೋಪ ಮಾಡಬಾರದು
ಸರ್ಕಾರದ ಲೋಪಗಳನ್ನು ಎತ್ತಿ ಹಿಡಿಯೋದು ಬೇಡ.ಅದನ್ನು  ಕೋವಿಡ್ ಸಂದರ್ಭದಲ್ಲಿ ಪ್ರಸ್ತಾಪಿಸುವುದು ಬೇಡವೇ  ಬೇಡ..ದಯವಿಟ್ಟು   ಸರ್ಕಾರಕ್ಕೆ ಸಹಕರಿಸಿ ಎಂದು ಮನವಿ ಮಾಡಿಕೊಳ್ಳುತ್ತೀರಲ್ಲಾ, 
ಆಶಾ ಕಾರ್ಯಕರ್ತೆಯರ ಮುಷ್ಕರ,ಪೌರ ಕಾರ್ಮಿಕರ ಮುಷ್ಕರಕ್ಕೆ ಸಿದ್ದತೆ, ಕೆಎಸ್‌ಆರ್‌ಟಿಸಿ ನೌಕರರ ಸಂಬಳ ರಹಿತ ಕಡ್ಡಾಯ ರಜೆ,ಆಸ್ಪತ್ರೆಗಳಲ್ಲಿ ವೈದ್ಯರು ನರ್ಸಗಳ ಕೊರತೆ ನಮ್ಮ ನಡುವಿರುವ ಸಮಸ್ಯೆಗಳಲ್ವೆ..ಸರ್ಕಾರ ವ್ಯವಸ್ಥೆಯನ್ನು ಸರಿಯಾಗಿ ಸಂಭಾಳಿಸಿದ್ದೇ ಆಗಿದ್ರೆ ಪರಿಸ್ಥಿತಿ ಈ ರೀತಿ ಆಗುತ್ತಿತ್ತೇ ಎಂದು ಮಾದ್ಯಮಗಳಲ್ಲಿ ಬಂದ ವರದಿಯನ್ನು ಟ್ಯಾಗ್ ಮಾಡಿ ತಿರುಗೇಟು ಕೊಟ್ಟಿದ್ದಾರೆ ಸಿದ್ಧರಾಮಯ್ಯ. 

ಇಷ್ಟೆಲ್ಲಾ ಲೋಪಗಳನ್ನು ಎತ್ತಿ ತೋರಿಸಿದ್ದೇ ನನ್ನ ತಪ್ಪಾ..ಸರ್ಕಾರ ಏನೇ ಮಾಡಿದ್ರೂ ಬಾಯಿಮುಚ್ಚಿಕೊಂಡು ಸುಮ್ಮನೆ ಕೂರಬೇಕಾ..ಹಾಗಾದ್ರೆ ವಿಪಕ್ಷವಾಗಿ ನಮ್ಮ ಕೆಲಸವೇನು ಎನ್ನುವ ರೀತಿಯಲ್ಲಿ ಪ್ರಶ್ನಿಸಿರುವ ಸಿದ್ಧರಾಮಯ್ಯ ಅಕ್ರಮಗಳ ವಿರುದ್ದ ಮಾತನಾಡೋದನ್ನು ಬಿಟ್ಟು ಸರ್ಕಾರಕ್ಕೆ  ಸಹಕರಿಸಬೇಕಂತೆ. ಬುದ್ದಿ ಹೇಳುವವರು ಈ ಸುದ್ದಿ ಓದಲಿ ಎಂದು ವ್ಯಂಗ್ಯಭರಿತ ದಾಟಿಯಲ್ಲಿ ತಿರುಗೇಟು ನೀಡಿದ್ದಾರೆ.ಕೊರೊನಾ ಸನ್ನಿವೇಶದಲ್ಲಿ ಈ ಟ್ವೀಟ್ ಸಮರ ಹೆಚ್ಚು ಗಮನ ಸೆಳೆದಿದೆ. 

Spread the love
Leave A Reply

Your email address will not be published.

Flash News