ಡಿಪ್ಲಮೋ-ಎಂಜಿನಿಯರಿಂಗ್ ಹಾಗೂ ಪದವಿಯ ಫೈನಲ್ ಸೆಮಿಸ್ಟರ್ ವಿದ್ಯಾರ್ಥಿಗಳಿಗೆ ಮಾತ್ರ ಪರೀಕ್ಷೆ

0

ಬೆಂಗಳೂರು:ಅಂತಿಮ ವರ್ಷದ ಸೆಮಿಸ್ಟರ್ ನಲ್ಲಿರುವ ವಿದ್ಯಾರ್ಥಿಗಳನ್ನು ಬಿಟ್ಟರೆ ಡಿಪ್ಲಮೋ..ಎಂಜಿನಿಯರಿಂಗ್ ಹಾಗೂ ಪದವಿ ವಿದ್ಯಾರ್ಥಿಗಳು ಪರೀಕ್ಷೆ ಬರೆಯುವ ಅವಶ್ಯಕತೆ ಇಲ್ಲ ಎಂದು ರಾಜ್ಯ ಸರ್ಕಾರ ಸ್ಪಷ್ಟಪಡಿಸಿದೆ.ಉನ್ನತ ಶಿಕ್ಷಣ ಸಚಿವ ಡಾ.ಅಶ್ವತ್ಥನಾರಾಯಣ್ ಮೇಲ್ಕಂಡ ವಿಷಯ ಸ್ಪಷ್ಟಪಡಿಸುವ ಮೂಲಕ ವಿದ್ಯಾರ್ಥಿಗಳು ಹಾಗೂ ಪೋಷಕರಲ್ಲಿದ್ದ ಗೊಂದಲ ಹಾಗೂ ಆತಂಕವನ್ನು ದೂರ ಮಾಡಿದ್ದಾರೆ.

ಉನ್ನತ ಶಿಕ್ಷಣದಲ್ಲಿ, ಪದವಿ ಸ್ನಾತಕೋತ್ತರ ವಿದ್ಯಾರ್ಥಿಗಳ ಪರೀಕ್ಷೆ ವಿಚಾರವಾಗಿ ಇದ್ದ ಗೊಂದಲಕ್ಕೆ ಸಚಿವ ಅಶ್ವತ್ಥನಾರಾಯಣ ತೆರೆ ಎಳೆದಿದ್ದು, ಪರೀಕ್ಷೆ ನಡೆಸಲು ಕೊರೊನಾ ಅಡ್ಡಿಪಡಿಸಿದ್ದರಿಂದ 50 ಸಾವಿರ ಆನ್ ಲೈನ್ ಕ್ಲಾಸ್ ಮಾಡಿದ್ದೀವಿ. ವಿಡಿಯೋ ಕಂಟೆಂಟ್ ಕೊಟ್ಟಿದ್ದೇವೆ.ಹಾಗೆಯೇ ವಿದ್ಯಾ ಸಂಸ್ಥೆಗಳು ಶಕ್ತಿಮೀರಿ ಕೆಲಸ ಮಾಡಿವೆ.ಈ ಹಿನ್ನಲೆಯಲ್ಲಿ ವಿದ್ಯಾರ್ಥಿಗಳು,ಪೋಷಕರಿಗೆ ಶುಭ ಸುದ್ದಿಯೊಂದನ್ನು ಸರ್ಕಾರ ನೀಡುತ್ತಿದೆ ಎಂದು ವಿವರಿಸಿದ್ರು.

.

ಡಿಪ್ಲೋಮಾ, ಇಂಜಿನಿಯರ್ ಹಾಗೂ ಪದವಿಯಲ್ಲಿ ಫೈನಲ್ ವರ್ಷದಲ್ಲಿ ಓದುತ್ತಿರಿವ ವಿದ್ಯಾರ್ಥಿಗಳಿಗೆ ಮಾತ್ರ ವಿವಿ ಪರೀಕ್ಷೆ ಬರೆಯಬೇಕಾಗುತ್ತೆ. ಮಿಕ್ಕವರಿಗೆ ಪರೀಕ್ಷೆ ಬರೆಯುವ ಅವಶ್ಯಕತೆ ಇಲ್ಲ. ಫೈನಲ್ ಪರೀಕ್ಷೆ ಜೊತೆಗೆ ಬ್ಯಾಕ್ ಲಾಗ್ ಪರೀಕ್ಷೆಗೂ ಅವಕಾಶ ಕಲ್ಪಿಸಲಾಗಿದೆ. ಸೆಪ್ಟೆಂಬರ್ ನಲ್ಲಿ ಪರೀಕ್ಷೆ ನಡೆಯಲಿವೆ. ಖಾಸಗಿ ಹಾಗೂ ಸರ್ಕಾರಿ ವಿವಿಗಳಿಗೆ ಪರೀಕ್ಷೆ ಮಾಡಲು ಅವಕಾಶ ನೀಡಲಾಗಿದೆ ಎಂದು ಡಿಸಿಎಂ ಅಶ್ಚತ್ಥನಾರಾಯಣ ತಿಳಿಸಿದ್ದಾರೆ.

ಈ ಸೆಮಿಸ್ಟರ್ ನಲ್ಲಿ ಪರೀಕ್ಷೆ ಬರೆಯೋಕ್ಕೆ ಆಗಲ್ಲ ಅನ್ನೋ ವಿಧ್ಯಾರ್ಥಿಗಳಿಗೆ ಮುಂದೆ ಪರೀಕ್ಷೆ ಬರೆಯಲು ಅವಕಾಶ ನೀಡಲಾಗುತ್ತೆ. ಇಂಜಿನಿಯರಿಂಗ್, ಡಿಪ್ಲೊಮಾ, ಪದವಿ ವರ್ಷದ ವಿದ್ಯಾರ್ಥಿಗಳ ಆರೋಗ್ಯ ಹಾಗೂ ಅವರ ಸುರಕ್ಷತೆ‌ ದೃಷ್ಟಿಯಲ್ಲಿಟ್ಟುಕೊಂಡು ಪರೀಕ್ಷೆ ನಡೆಸಲಾಗುತ್ತಿಲ್ಲ.‌ಅವರ ಇಂಟರನಲ್ ಅಸ್ಸೆಸ್ಮೆಂಟ್ ಆಧರಿಸಿ ಮತ್ತು ಹಿಂದಿನ ಅವರ ಪರೀಕ್ಷೆ ಫಲಿತಾಂಶ ನೋಡಿ ಪ್ರಮೋಟ್ ಮಾಡಲಾಗುತ್ತೆ  ಸೆಪ್ಟೆಂಬರ್ ಮೊದಲ‌ ದಿನದಿಂದ ಅಕ್ಯಾಡಮಿಕ್ ಕ್ಲಾಸ್ ಆರಂಭಿಸಲು ತೀರ್ಮಾನ ಮಾಡಲಾಗಿದೆ.ಸೆಪ್ಟೆಂಬರ್ ನಲ್ಲಿ ಆನ್ ಲೈನ್ ಕ್ಲಾಸ್ ಹಾಗೂ ನವೆಂಬರ್ ನಿಂದ ರೆಗ್ಯುಲರ್ ಕ್ಲಾಸ್‌ಗಳು ಆರಂಭವಾಗಲಿವೆ ಎಂದು ಸಚಿವರು ಸ್ಪಷ್ಟಪಡಿಸಿದರು.  

Spread the love
Leave A Reply

Your email address will not be published.

Flash News