ಜುಲೈ 30-31ಕ್ಕೆ ಸಿಇಟಿ, ಪಿಜಿ ಸಿಇಟಿ ಆಗಸ್ಟ್ 8-9, ಡಿಪ್ಲಮೋ ಸಿಇಟಿ ಆಗಸ್ಟ್-9 ಕ್ಕೆ ಕನ್ಫರ್ಮ್

0

ಬೆಂಗಳೂರು: ಸಾಮಾನ್ಯ ಪ್ರವೇಶ ಪರೀಕ್ಷೆಗಳು (ಸಿಇಟಿ) ಪರೀಕ್ಷೆಗಳನ್ನು ಸರ್ಕಾರ ಜುಲೈ 30, 31 ಕ್ಕೆ ನಡೆಸಲು ನಿರ್ಧರಿಸಿರುವುದಾಗಿ ಉನ್ನತ ಶಿಕ್ಷಣ ಸಚಿವ ಹಾಗೂ ಉಪಮುಖ್ಯಮಂತ್ರಿ ಡಾ.ಅಶ್ಚತ್ಥನಾರಾಯಣ ತಿಳಿಸಿದ್ದಾರೆ.

ಈ ಹಿಂದೆ  ನಿರ್ಧರಿಸಿದ್ದಂತೆಯೇ ಪರೀಕ್ಷೆ ನಡೆಸಲಾಗುತ್ತಿದೆ. ದಿನಾಂಕದಲ್ಲಿ ಯಾವುದೇ ಬದಲಾವಣೆ ಇಲ್ಲ ಎಂದು ತಿಳಿಸಿರುವ ಅವರು ಪಿಜಿಗೆ ಸಂಬಂಧಿಸಿದ  ಸಿಇಟಿ ಪರೀಕ್ಷೆಗಳನ್ನು ಆಗಸ್ಟ್ 8 ಹಾಗೂ 9 ರಂದು ನಡೆಸಲು ನಿರ್ಧರಿಸಲಾಗಿದೆ.ಇನ್ನು  ಡಿಪ್ಲೋಮಾ ಸಿಇಟಿ  ಪರೀಕ್ಷೆಗಳನ್ನು  ಆಗಸ್ಟ್ 9 ಕ್ಕೆ ನಡೆಸಲಾಗುತ್ತೆ ಎಂದು ವಿವರಿಸಿದ್ಗಾರೆ.

ಎಲ್ಲದಕ್ಕೆ ಅನುಕೂಲವಾದಂತೆ  ಸಿಇಟಿ ಪರೀಕ್ಷೆಗೂ ಅನುಕೂಲವಾಗುವಂತೆ  ಹೆಲ್ ಲೈನ್ ಮಾಡ್ತೀವಿ.ಇದರ ಮೂಲಕ ವಿದ್ಯಾರ್ಥಿಗಳು ಸಮಸ್ಯೆ ಹೇಳಿಕೊಳ್ಳಬಹುದು
ಎಲ್ಲಾ ವಿವಿಗಳ ಕುಲಪತಿಗಳು, ಶಿಕ್ಷಣ ತಜ್ಞರ ಜೊತೆ ಚರ್ಚೆ ಮಾಡಿ ಈ ನಿರ್ಧಾರ ಮಾಡಲಾಗಿದೆ.ಇದಕ್ಕೆ  ರಾಜ್ಯಪಾಲರ ಅನುಮತಿಯೂ ದೊರೆತಿದೆ.ಯುಜಿಸಿ ಸಲಹೆ ಪಡೆದು ಇದನ್ನು ಅಂತಿಮಗೊಳಿಸಲಾಗಿದೆ ಎಂದು ತಿಳಿಸಿದ್ದಾರೆ.

ಇನ್ನು ಕಾಲೇಜು ಪ್ರಾರಂಭದ ಬಗ್ಗೆ ಸಾಕಷ್ಟು ಚರ್ಚೆಯಾಗುತ್ತಿದೆ. ಅಕ್ಟೋಬರ್ 1 ರಿಂದ ಮುಂದಿನ ವರ್ಷದ ಶೈಕ್ಷಣಿಕ ವರ್ಷ ಪ್ರಾರಂಭವಾಗಲಿದೆ. ಸೆಪ್ಟಂಬರ್ ಮೊದಲ ತಿಂಗಳ ಆನ್ ಲೈನ್ ನಲ್ಲಿ ತರಗತಿ ಆರಂಭವಾಗುತ್ತಿದ್ದು, ಅಕ್ಟೋಬರ್ ನಿಂದ ಆಫ್ ಲೈನ್ ತರಗತಿ ಗೆ ಅವಕಾಶ ಕಲ್ಪಿಸಲಾಗುತ್ತಿದೆ. ಪ್ರತಿ ವಿವಿಯಲ್ಲಿ ಹೆಲ್ ಲೈನ್ ಪ್ರಾರಂಭಿಸಲಾಗಿದ್ದು, ಅಗತ್ಯ ಮಾಹಿತಿ ಸಂಗ್ರಹ ಮಾಡಲು ವಿದ್ಯಾರ್ಥಿಗಳು ಸಮಸ್ಯೆ ಹೇಳಿಕೊಳ್ಳಲು ಹೆಲ್ಪ್ ಲೈನ್ ಆರಂಭಿಸಲಾಗಿದೆ.ಇದರ ಪ್ರಯೋಜನವನ್ನು ವಿದ್ಯಾರ್ಥಿಗಳು ಪಡೆದುಕೊಳ್ಳಬೇಕೆಂದು ಸಲಹೆ ನೀಡಿದ್ರು.  

Spread the love
Leave A Reply

Your email address will not be published.

Flash News