ಕೊರೊನಾ ಸೋಂಕನ್ನು ಕ್ರೈಸ್ತ ಪಾದ್ರಿಗಳು “ಗೌಪ್ಯ”ಗೊಳಿಸುತ್ತಿರುವುದೇಕೆ?? ಅದು ದೈವನಿಂದನೆಯಷ್ಟೇ ಅಲ್ಲ,ಕಾನೂನುಬಾಹೀರವೂ ಹೌದಲ್ವಾ….!!

0
ಮಹಾಧರ್ಮಾಧ್ಯಕ್ಷ ಡಾ.ಪೀಟರ್ ಮಚಾದೋ
ಮಹಾಧರ್ಮಾಧ್ಯಕ್ಷ ಡಾ.ಪೀಟರ್ ಮಚಾದೋ
ಕೊರೊನಾದಿಂದ ಸಾವನ್ನಪ್ಪಿದ ಫಾದರ್ ಅಂತೋಣಿಸ್ವಾಮಿ
ಕೊರೊನಾದಿಂದ ಸಾವನ್ನಪ್ಪಿದ ಫಾದರ್ ಅಂತೋಣಿಸ್ವಾಮಿ

ಬೆಂಗಳೂರು: ಕ್ರೈಸ್ತಪಾದ್ರಿಗಳು ದಿನೇ ದಿನೇ ಕೊರೊನಾ ಸೋಂಕಿತರಾಗುತ್ತಿರುವುದು…ಸಾವಿಗೆ ಈಡಾಗುತ್ತಿರುವುದರಿಂದ ಕ್ರೈಸ್ತ ಭಕ್ತಾಧಿಗಳು ತೀವ್ರ ಆತಂಕಗೊಂಡಿದ್ದಾರೆ.ಚರ್ಚ್ ಗಳಲ್ಲಿ ಪೂಜಾರಾಧನೆಯಲ್ಲಿ ಪಾಲ್ಗೊಳ್ಳಲು ಹೆದರುತ್ತಿದ್ದಾರೆ.ಈ ನಡುವೆ ಕ್ರೈಸ್ತ ಪಾದ್ರಿಗಳ ಕೊರೊನಾ ಸೋಂಕಿನ ಸಂಗತಿಯನ್ನು ಧರ್ಮಸಭೆ ಗೌಪ್ಯವಾಗಿಡುತ್ತಿರುವುದು ಆತಂಕಗೊಂಡಿರುವ ಕ್ರೈಸ್ತರಲ್ಲಿ ಆಕ್ರೋಶವನ್ನೂ ಮೂಡಿಸಿದೆ.ಭಕ್ತಾಧಿಗಳ ನಡುವೆಯೇ ಇದ್ದು ಪೂಜಾರಾಧನೆ ಮಾಡುವ ಫಾ  ದರ್ಸ್ ಮಾಡುತ್ತಿರುವುದು ಆತ್ಮಸಾಕ್ಷಿಗೆ ತದ್ವಿರುದ್ಧವಾದ ಕೆಲಸ ಅಷ್ಟೇ ಅಲ್ಲ,ಕಾನೂನುಬಾಹೀರ ಎನ್ನೋದು  ಕ್ರೈಸ್ತರ ಆಕ್ರೋಶ.

ಬೆಂಗಳೂರಿನ ಚರ್ಚ್   ಫಾದರ್ಸ್ ಗಳಲ್ಲಿ  ಕೊರೊನಾ ಸೋಂಕು ಕ್ರಮೇಣ ಕಾಣಿಸಿಕೊಳ್ಳಲು ಶುರುಮಾಡಿದೆ.ಆದ್ರೆ ದುರಾದೃಷ್ಟದ ಸಂಗತಿ ಏನ್ ಗೊತ್ತಾ.. ಧರ್ಮ ಬೋಧನೆ ಮಾಡಬೇಕಾದ ಈ ಫಾದರ್ಸ್ ಗಳೇ ಅದನ್ನು ಪಾಲನೆ ಮಾಡುತ್ತಿಲ್ಲ.ಕೊರೊನಾ ಸೋಂಕಿನ ಸಂಗತಿಯನ್ನು ಅರ್ಚ್ ಬಿಷಪ್ ಪೀಟರ್ ಮಚಾದೋ ಅವರ ಗಮನಕ್ಕೆ ತಂದಷ್ಟೇ ಸುಮ್ಮನಾಗುತ್ತಾರೆ.ಪೀಟರ್ ಮಚಾದೋ ಅವರು ಸರಿಯಾದ ಆದೇಶ ಕೊಟ್ಟಿದ್ದೇ ಆಗಿದಿದ್ದರೆ ಇವತ್ತು ಫಾದರ್ಸ್ ಗಳು ಬಹಿರಂಗವಾಗಿ ಬಂದು ತಮಗೆ ಕೊರೊನಾ ಸೋಂಕಿದೆ ಎನ್ನುವ ಮಾಹಿತಿ ಕೊಡುತ್ತಿದ್ದರು.ಎಲ್ಲಕ್ಕಿಂತ ಹೆಚ್ಚಾಗಿ ಭಕ್ತರ ಬಗ್ಗೆ ಕಾಳಜಿ ಇದ್ದಿದ್ದರೆ ಅದನ್ನು ಅವರ ಗಮನಕ್ಕಾದ್ರೂ ತರುತ್ತಿದ್ದರು.ಆದ್ರೆ ಇದ್ಯಾವುದನ್ನೂ ಮಾಡದೆ ತಮಗೆ ಕೊರೊನಾ ಬಂದಿರುವುದನ್ನು ಮುಚ್ಚಿಟ್ಟು ದೇವನಿಂದನೆ ಜೊತೆ ಕಾನೂನನ್ನೂ ಉಲ್ಲಂಘಿಸ್ತಿದ್ದಾರೆ.

ಒಂದು ಅಂದಾಜಿನ ಪ್ರಕಾರ ಡಜನ್ ಗಿಂತಲೂ   ಹೆಚ್ಚು ಫಾದರ್ಸ್ ಗಳಿಗೆ ಕೊರೊನಾ ಸೋಂಕಿದೆ ಎನ್ನಲಾಗ್ತಿದೆ.ಅದರಲ್ಲಿ ಒಂದಿಬ್ಬರು ಹೆಸರುಗಳನ್ನಷ್ಟೇ ಬಹಿರಂಗಗೊಳಿಸಲಾಗುತ್ತಿದೆ.ಉಳಿದವರಿಗೆ ಗೌಪ್ಯವಾಗೇ ಇದ್ದುಕೊಂಡು ಬಿಡಿ..ಯಾರಿಗೂ ಹೇಳ್ಬೇಡಿ..ಯಾರೊಂದಿಗೂ ಬೆರೆಯಬೇಡಿ ಎಂದು ಹೇಳಲಾಗ್ತಿದೆಯಂತೆ.ಇದು ತಪ್ಪಲ್ವೇ..ಪೂಜಾವಿಧಿವಿಧಾನಗಳ ವಿಷಯ ಬಂದ್ರೆ ಚರ್ಚ್ ನಲ್ಲಿ ಭಕ್ತರ ನಡುವೆ ಇರಬೇಕಾದ ಫಾದರ್ಸ್  ಗಳು ತಮ್ಮ ಕೊರೊನಾ ಸೋಂಕನ್ನು ಮುಚ್ಚಿಟ್ಟುಕೊಂಡು ಹೇಗೆ ಇರುತ್ತಾರೋ..ಕ್ರೈಸ್ತ ಧರ್ಮಕ್ಕೆ ಇದು ಕಳಂಕ ತರುವ ನಾಚಿಕೆಗೇಡಿನ ಸಂಗತಿ ಎನ್ನುತ್ತಾರೆ ಅಖಿಲ ಕರ್ನಾಟಕ ಕನ್ನಡ ಕ್ರೈಸ್ತದ ಒಕ್ಕೂಟದ ಮುಖಂಡ ರಫಾಯಲ್ ರಾಜ್.

ಕೊರೊನಾ ಸೋಂಕಿಗೆ ತುತ್ತಾಗಿರುವ ಫಾದರ್
ಕೊರೊನಾ ಸೋಂಕಿಗೆ ತುತ್ತಾಗಿರುವ ಫಾದರ್, ಫಾ.ಡಾಮಿನಿಕ್ ಜೇವಿಯರ್ 
ಕೊರೊನಾ ಸೋಂಕಿಗೆ ತುತ್ತಾಗಿರುವ ಮತ್ತೋರ್ವ ಫಾದರ್ ಸುಸೈನಾಥನ್
ಕೊರೊನಾ ಸೋಂಕಿಗೆ ತುತ್ತಾಗಿರುವ ಮತ್ತೋರ್ವ ಫಾದರ್, ಫಾ. ಸುಸೈನಾಥನ್

ಫಾದರ್ಸ್ ಗಳಿಗೆ ಕೊರೊನಾ ಸೋಂಕು ಮುಚ್ಚಿಡುವಂತೆ ಅರ್ಚ್ ಬಿಷಪ್ ಆದೇಶ ಹೊರಡಿಸಿದ್ದಾರಾ?..ಕೊರೊನಾ ಸೋಂಕನ್ನು ದೃಢಪಡಿ ಸದೆ ಗೌಪ್ಯಗೊಳಿಸಿರುವುದು ಭಕ್ತಾಧಿಗಳ ಕಿವಿಗೆ ಬೀಳುತ್ತಿದ್ದಂತೆ ಕೆಂಡಾಮಂಡಲವಾಗಿದ್ದಾರೆ.ದೇವರ ಸ್ಥಾನವನ್ನು ಪ್ರತಿನಿಧಿಸುತ್ತಾರೆನ್ನುವ ಗೌರವ ಇಟ್ಟುಕೊಂಡಿದ್ವಿ.ಅದನ್ನೂ ಕಳಕೊಳ್ಳುವಂತೆ ಮಾಡಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.ಕೊರೊನಾ ಸೋಂಕಿನ ಸಂಗತಿಯನ್ನು ಭಕ್ತರ ಗಮನಕ್ಕೂ ತಾರದೆ ಗೌಪ್ಯವಾಗಿಡಿ ಎಂಬ ಫರ್ಮಾನ್ ಏನಾದ್ರೂ ಅರ್ಚ್ ಬಿಷಪ್ ಪೀಟರ್ ಮಚಾದೋ ಅವರಿಂದ ಹೊರಟಿದೆಯಾ ಎಂದು ಪ್ರಶ್ನೆ ಮಾಡಲಾರಂಭಿಸಿದ್ದಾರೆ.ಆದ್ರೆ ಫಾದರ್ಸ್ ಗಳು ಇದ್ಯಾವುದನ್ನು ಹೇಳದೆ ಕದ್ದುಮುಚ್ಚಿ ಕ್ವಾರಂಟೈನ್ ಮಾಡಿಕೊಳ್ಳುತ್ತಿದ್ದಾರೆ.

ಫಾದರ್ ಅಂತೋಣಿಸ್ವಾಮಿ ಸಾವನ್ನಪ್ಪಿದ್ದು ಕೊರೊನಾದಿಂದ ಎಂದು ದೃಢೀಕರಿಸಿದ ಮಹಾಧರ್ಮಾಧ್ಯಕ್ಷರ ನಿವಾಸದ ಅಧೀಕೃತ ಪ್ರಕಟಣೆ
ಫಾದರ್ ಅಂತೋಣಿಸ್ವಾಮಿ ಸಾವನ್ನಪ್ಪಿದ್ದು ಕೊರೊನಾದಿಂದ ಎಂದು ದೃಢೀಕರಿಸಿದ ಮಹಾಧರ್ಮಾಧ್ಯಕ್ಷರ ನಿವಾಸದ ಅಧೀಕೃತ ಪ್ರಕಟಣೆ

ಇದೆಲ್ಲಕ್ಕಿಂತ ಅಪಾಯಕಾರಿಯಾದ ಮತ್ತೊಂದು ಅಚಾತುರ್ಯ ನಡೆದೋಗಿದೆ.ಮೊನ್ನೆ ತಾನೇ ಕ್ರೈಸ್ತ ಧರ್ಮಗುರು ಫಾದರ ಅಂತೋಣಿಸ್ವಾಮಿ ಹೃದಯಾಘಾತದಿಂದ ತೀರೋದ್ರು ಎಂದು ಸುದ್ದಿಯಾಯ್ತು,ಆಗಲೇ ಅವರಿಗೆ ಕೊರೊನಾ ಏನಾದ್ರೂ ಇತ್ತಾ ಎನ್ನುವ ಪ್ರಶ್ನೆ ಕಾಡಿತ್ತು.ಅವರು ಸತ್ತಿದ್ದು ಹಾರ್ಟ್ ಅಟ್ಯಾಕ್ ನಿಂದ್ಲೋ..ಅಥವಾ ಕೊರೊನಾದಿಂದ್ಲೋ ಎನ್ನುವುದನ್ನು ಧರ್ಮಾಧ್ಯಕ್ಷರ ಕಚೇರಿ ಕೂಡ ದೃಢಪಡಿಸಲಿಲ್ಲ.ಆದ್ರೆ ಒಂದು ಆತಂಕದ ಅನುಮಾನ ಮಾತ್ರ ಎಲ್ಲರಲ್ಲೂ ಇತ್ತು.

ಫಾದರ್ ಅಂತೋಣಿಸ್ವಾಮಿ ಸತ್ತಿದ್ದು ಕೊರೊನಾದಿಂದ್ಲೇ.. ಕಾರಣ ಕೊರೊನಾ  ಯಾವ ವಿಷಯದ ಕುರಿತಾಗಿ ಆತಂಕ ಹಾಗೂ  ಅನುಮಾನ ಎರಡೂ ಇತ್ತೋ ಅದು ಇಂದು ಸತ್ಯವಾಗಿದೆ.ಫಾದರ್ ಅಂತೋಣಿಸ್ವಾಮಿ ಅವರಿಗೆ ಕೊರೊನಾ ಸೋಂಕಿದ್ದುದು ಸತ್ಯ ಎನ್ನುವುದನ್ನು ಅರ್ಚ್ ಬಿಷಪ್ ಪೀಟರ್ ಮಚಾದೋ ಅವರೇ ಒಪ್ಪಿಕೊಂಡು ಅಧೀಕೃತ ಹೇಳಿಕೆಯನ್ನೂ ನೀಡಿದ್ದಾರೆ.ಅದು ಇಂದು ದೃಢಪಟ್ಟಿದೆ ಎನ್ನುವುದು ಅವರ ವಾದ.ಆದ್ರೆ ಹೀಗೊಂದು ಹೇಳಿಕೆ ಕೊಟ್ಟಿರುವ ಮಹಾಧರ್ಮಾಧ್ಯಕ್ಷರಿಗೇನೆ ಈಗ ಭಯ ಶುರುವಾಗಿದೆ.ಅದೇ ಕೊರೊನಾ ಸೋಂಕಿನ ಭಯ.

ಕೊರೊನಾ ಸೋಂಕಿಗೆ ತುತ್ತಾಗಿರುವುದನ್ನು ಮಾಜಿ ಮಹಾಧರ್ಮಾಧ್ಯಕ್ಷ ಬರ್ನಾಡ್ ಮೊರಾಸ್ ಹೇಳಿಕೊಂಡಿದ್ದರು.
ಕೊರೊನಾ ಸೋಂಕಿಗೆ ತುತ್ತಾಗಿರುವುದನ್ನು ಮಾಜಿ ಮಹಾಧರ್ಮಾಧ್ಯಕ್ಷ ಬರ್ನಾಡ್ ಮೊರಾಸ್ ಸ್ವತಃ  ಹೇಳಿಕೊಂಡಿದ್ದರು.

ಫಾದರ್ ಅಂತೋಣಿಸ್ವಾಮಿ ಅವರ ಅಂತ್ಯಸಂಸ್ಕಾರವನ್ನು ಮುಂದೆ ನಿಂತೆ ಮಾಡಿದವ್ರು ಇದೇ ಪೀಟರ್ ಮಚಾದೋ.ಅವರೊಂದಿಗೆ ಹತ್ತಾರು ಫಾದರ್ಸ್..ಸಿಸ್ಟರ್ಸ್..ಸಂಬಂಧಿಗಳು ಹಾಗೂ ಭಕ್ತರೂ ಇದ್ದರು. ಕೊರೊನಾದಿಂದ ಸಾವನ್ನಪ್ಪಿದ ಅಂತೋಣಿಸ್ವಾಮಿ ಅಂತ್ಯಸಂಸ್ಕಾರದಲ್ಲಿ ಪಾಲ್ಗೊಂಡವರಿಗೆ ತಮಗೆಲ್ಲಿ ಸೋಂಕು ಹರಡ್ಬೋದೋ ಎಂದು ಹೆದರಿದ್ದಾರೆ.ಅರ್ಚ್ ಬಿಷಪ್ ಮಚಾದೋ ಅವರೇ  ಕಂಗಾಲಾಗಿ ಹೋಗಿದ್ದಾರೆ.ಆದ್ರೆ ಇಲ್ಲಿ ಪ್ರಶ್ನೆ ಇರೋದು ಅಂತೋಣಿಸ್ವಾಮಿ ಅವರಿಗೆ ಕೊರೊನಾ ಇತ್ತೆನ್ನುವ ಸಂಗತಿ ಮೊದ್ಲೇ ಅವರಿಗೆ ಗೊತ್ತಿತ್ತಾ..ಅಥ್ವಾ ಶವಸಂಸ್ಕಾರದ ನಂತರ ಗೊತ್ತಾಯ್ತಾ ಎನ್ನೋದು.ಕೊರೊನಾ ಇದೆ ಎನ್ನುವುದು ಗೊತ್ತಿದ್ರೆ ರಿಸ್ಕ್ ತಗೊಂಡು ಅವರಿಗೆ ಅಂತ್ಯಸಂಸ್ಕಾರದಲ್ಲಿ ಪಾಲ್ಗೊಳ್ಳುವ ಅವಶ್ಯಕತೆ ಇತ್ತಾ ಎಂದು ಮಹಾಧರ್ಮಾಧ್ಯಕ್ಷರ ನಿವಾಸದ ಮೂಲಗಳು ತಿಳಿಸಿವೆ.

ಫಾ.ಅಂತೋಣಿ ಸ್ವಾಮಿ  ಸೋಂಕಿನ ಮೂಲವೂ ಕೊರೊನಾದಿಂದ ಸಾವನ್ನಪ್ಪಿದ ಅವರ ಸಹೋದರ: ಫಾದರ್ ಅಂತೋಣಿಸ್ವಾಮಿ ಅವರಿಗೆ ಕೊರೊನಾ ಹೇಗೆ ಬಂದಿರಬಹುದು ಎನ್ನುವ ಪ್ರಶ್ನೆಗೆ ಉತ್ತರ ಕೊರೊನಾ ಸೋಂಕಿನಿಂದ ಬಲಿಯಾದ ಅವರ ಸಹೋದರನ ಸಂಪರ್ಕ.ಅಂತೋಣಿಸ್ವಾಮಿ ಅವರ ನಿಧನಕದ ಒಂದೆರೆಡು ದಿನಗಳ ಹಿಂದೆ ಅವರ ಸಹೋದರ ಕೊರೊನಾದಿಂದ ಸಾವನ್ನಪ್ಪಿದ್ರು.ಕಲ್ಲಪಲ್ಲಿ ಸ್ಮಶಾಣದಲ್ಲಿ ನಡೆದ ಅಂತ್ಯಸಂಸ್ಕಾರದಲ್ಲಿಯೂ ಪಾಲ್ಗೊಂಡಿದ್ರು.ಆ ಸಂಪರ್ಕದಿಂದ್ಲೇ ಅಂತೋಣಿಸ್ವಾಮಿ ಅವರಿಗೂ ಕೊರೊನಾ ಸೋಂಕು ತಗುಲಿರಬಹುದು ಎಂದು ಹೇಳಲಾಗ್ತಿದೆ.ಆದ್ರೆ ತಮ್ಮ ಸಹೋದರ ಕೊರೊನಾದಿಂದ ಸಾವನ್ನಪ್ಪಿದ ಸಂಗತಿಯನ್ನು ಫಾದರ್ ಅಂತೋಣಿಸ್ವಾಮಿ ಯಾರ ಗಮನಕ್ಕೂ ತಾರದೆ ಗೌಪ್ಯಗೊಳಿಸಿದ್ದರೆನ್ನಲಾಗಿದೆ.

ಚರ್ಚ್ ಗಳಲ್ಲಿ ಕೆಲಸ ಮಾಡುವ,ಭಕ್ತರ ನಡುವೆಯೇ ಸದಾ ಇರುವ ಫಾದರ್ಸ್ ಗಳು ತಮಗೆ ಕೊರೊನಾ ಸೋಂಕು ಬಂದ್ರೆ ಅದನ್ನು ಮುಚ್ಚಿಡುವಂತದ್ದು ಯಾವ ನ್ಯಾಯ ಹೇಳಿ..ಫಾದರ್ಸ್ ಗಳಿಂದ ಭಕ್ತಾಧಿಗಳು ಅನ್ಯಾಯವಾಗಿ ಸೋಂಕಿಗೆ ಒಳಗಾಗುವುದು ಸರಿನಾ..ಕೊರೊನಾ ಸೋಂಕು ದಿನೇ ದಿನೇ ಫಾದರ್ಸ್ ಗಳಲ್ಲಿ ಹೆಚ್ಚಾಗುತ್ತಿರುವುದರ ನಡುವೆಯೂ ಚರ್ಚ್ ಗಳಲ್ಲಿ ಪೂಜೆ ನೆರವೇರಿಸುವ ಅಗತ್ಯವಾದ್ರೂ ಏನಿದೆ..ಸೋಂಕಿನ ಗಂಭೀರತೆ ಕಡಿಮೆಯಾಗುವವರೆಗೂ ಚರ್ಚ್ ಗಳನ್ನು ಓಪನ್ ಮಾಡುವ ಕಾರಣವಾದ್ರೂ ಏನಿದೆ ಎಂದು ಪ್ರಶ್ನಿಸ್ತಾರೆ ರಫಾಯಲ್ ರಾಜ್. ಕೇವಲ ಫಾದರ್ಸ್ ಗಳ ಹಿತ ಕಾಯೋದಷ್ಟೆ ತನ್ನ ಕೆಲಸವಲ್ಲ..ಭಕ್ತಾಧಿಗಳ ಕ್ಷೇಮವನ್ನು ಕಾಯ್ದುಕೊಳ್ಳುವುದು ಕೂಡ ಸೂಕ್ತ ಎನ್ನುವುದನ್ನು ಅರ್ಚ್ ಬಿಷಪ್ ಪೀಟರ್ ಮಚಾದೋ ಅರ್ಥ ಮಾಡಿಕೊಳ್ಳಬೇಕಾಗಿದೆ.

Spread the love
Leave A Reply

Your email address will not be published.

Flash News