ಹೊಣೆಗೇಡಿ ಹೇಳಿಕೆ ಕೊಟ್ಟು ತಮ್ಮ ಹಳ್ಳ ತಾವೇ ತೋಡಿಕೊಂಡ್ರಾ ಎಮ್ಮೆಲ್ಲೆ ಸಾಹೇಬ್ರು?!

0
ಬಾಯಿಚಪಲಕ್ಕೆ ನಾಲಿಗೆ ಹರಿಬಿಟ್ಟು ವಿವಾದಕ್ಕೆ ಸಿಲುಕಿರುವ ಬಂಗಾರಪೇಟೆ ಎಮ್ಮೆಲ್ಲೆ ನಾರಾಯಣಸ್ವಾಮಿ
ಬಾಯಿಚಪಲಕ್ಕೆ ನಾಲಿಗೆ ಹರಿಬಿಟ್ಟು ವಿವಾದಕ್ಕೆ ಸಿಲುಕಿರುವ ಬಂಗಾರಪೇಟೆ ಎಮ್ಮೆಲ್ಲೆ ನಾರಾಯಣಸ್ವಾಮಿ

ಬೆಂಗಳೂರು/ಬಂಗಾರಪೇಟೆ: ಈ ಶಾಸಕ ಮಹಾನುಭಾವ ಸರಿಯಾಗಿದಿದ್ದರೆ ತನ್ನ ಕ್ಷೇತ್ರದ ಮೇಲೆ ಸರಿಯಾದ ಹಿಡಿತ ಇದ್ದಿದ್ದೇ ಆಗಿದ್ದರೆ..ಅವರ  ಕ್ಷೇತ್ರದಲ್ಲೇ ದಕ್ಷ ತಹಸೀಲ್ದಾರ್  ಹಾಡಹಗಲೇ ಕೊಲೆಯಾಗುತ್ತಿರಲಿಲ್ಲ.. ದುಷ್ಟರು-ದುರುಳರು ನಿರ್ಭೀತವಾಗಿ ಕಾನೂನನ್ನೇ ಕೈಗೆತ್ತಿಕೊಳ್ಳುವ ಮಟ್ಟಕ್ಕೆ ಬೆಳೆಯುತ್ತಿರಲಿಲ್ಲ..ತನ್ ಮನೆಯನ್ನೇ ಸರಿಯಾಗಿಟ್ಟುಕೊಳ್ಳುವ ಯೋಗ್ಯತೆ ಇಲ್ಲ..ಶಾಸಕರಾಗಿ ಹೇಗೆ ನಡೆದುಕೊಳ್ಳಬೇಕೆನ್ನುವ ಕಾಮನ್ ಸೆನ್ಸೂ ಮೊದ್ಲೇ ಇಲ್ಲ..ತಹಸೀಲ್ದಾರ್ ಕೊಲೆಯ ನೈತಿಕ ಹೊಣೆ ಹೊರಬೇಕಾಗ್ತದೆ ಎನ್ನುವ ಕಾರಣಕ್ಕೆ ವಿಷಯಾಂತರ ಮಾಡಲಿಕ್ಕೆ ಹೋಗಿ ಮುಜುಗರಕ್ಕೀಡಾಗಿದ್ದಾರೆ. ಬಾಯಿ ಚಪಲಕ್ಕೆ  ನಾಲಿಗೆಯನ್ನು ಬೇಕಾಬಿಟ್ಟಿ ಹರಿಬಿಟ್ಟು ಇಡೀ ಮಾಹಿತಿ ಹಕ್ಕು ಕಾರ್ಯಕರ್ತರ ಆಕ್ರೋಶಕ್ಕೆ ತುತ್ತಾಗಿದ್ದಾರೆ.ಶಾಸಕರ ಜಾತಕವನ್ನು ಬಯಲಿಗೆಳೆಯುವ ಮಟ್ಟಕ್ಕೆ ಮಾಹಿತಿ ಹಕ್ಕು ಕಾರ್ಯಕರ್ತರನ್ನು ರೊಚ್ಚಿಗೊಬ್ಬಿಸಿದ್ದಾರೆ ಬಂಗಾರಪೇಟೆ ಎಮ್ಮೆಲ್ಲೆ ಎಸ್.ಎನ್ ನಾರಾಯಣಸ್ವಾಮಿ.

ಎಸ್.ಎನ್.ನಾರಾಯಣಸ್ವಾಮಿ..ಬಂಗಾರಪೇಟೆ ಕಾಂಗ್ರೆಸ್ ಎಮ್ಮೆಲ್ಲೆ…ಇಂಥಾ ಎಮ್ಮೆಲ್ಲೆಗಳು ಅಭಿವೃದ್ದಿಕಾರ್ಯಗಳಿಗಿಂತ ವಿವಾದಗಳಿಂದ್ಲೇ ಸುದ್ದಿಯಾಗ್ತಾರೆ.ಏನೋ ಹೇಳುವ ಭರಾಟೆಯಲ್ಲಿ ಇನ್ನೇನನ್ನೋ ಹೇಳಿ ವಿವಾದದ ಕೆಸರನ್ನು ಮುಖ-ಮೈಗೆಲ್ಲಾ ಮೆತ್ತಿಕೊಂಡ್ ಬಿಡ್ತಾರೆ.ತಾನು ಏನ್ ಹೇಳ್ತಿದ್ದೇನೆ..ಮಾಡ್ತಿದ್ದೇನೆ..ಅದು ಯಾವ್ ರೀತಿ ರಿಫ್ಲೆಕ್ಟ್ ಆಗುತ್ತೆನ್ನುವ ಸಾಮಾನ್ಯಜ್ಞಾನವೂ ಇಲ್ಲದಂತೆ ವರ್ತಿಸ್ತಾರೆ.ಈ ನಾರಾಯಣ ಸ್ವಾಮಿ  ಅವರ ವಿವೇಚನಾರಹಿತವಾದ ಹೇಳಿಕೆಯೊಂದು ಇದೀಗ ದೊಡ್ಡ ವಿವಾದವನ್ನೇ ಸೃಷ್ಟಿಸಿದೆ.ಅಷ್ಟೇ ಅಲ್ಲ,ಮಾಹಿತಿ ಹಕ್ಕು ಕಾರ್ಯಕರ್ತರ ಸಮುದಾಯವನ್ನೇ ರೊಚ್ಚಿಗೆಬ್ಬಿಸಿದೆ.ಎಮ್ಮೆಲ್ಲೆ ಅವರ ಹೊಣೆಗೇಡಿತನದ ಹೇಳಿಕೆಯೇ ಅವರನ್ನುಸಾರ್ವಜನಿಕವಾಗಿ ಬೆತ್ತಲಾಗುವಂತೆ ಮಾಡಿದೆ.

ಸರ್ಕಾರಿ ನೌಕರರ ಸಂಘ ಬಂಗಾರಪೇಟೆಯ ಮಿನಿವಿಧಾನಸೌಧದ ಮುಂದೆ ಹತ್ಯೆಯಾದ ತಹಸೀಲ್ದಾರ್ ಅವರಿಗೆ ಶೃದ್ದಾಂಜಲಿ ಸಲ್ಲಿಸಲು ಸಭೆಯೊಂದನ್ನು ಹಮ್ಮಿಕೊಂಡಿತ್ತು.ಅದರಲ್ಲಿ ಪಾಲ್ಗೊಂಡಿದ್ದ ಶಾಸಕ ನಾರಾಯಣಸ್ವಾಮಿ,ಮಾತಿನ ಭರಾಟೆಯಲ್ಲಿ ಮಾಹಿತಿ ಹಕ್ಕು ಕಾರ್ಯಕರ್ತರನ್ನು ಎಳೆದು ತರುತ್ತಾರೆ.ವಿಷಯ ಇದ್ದಿದ್ದು ತಹಸೀಲ್ದಾರ್ ಹತ್ಯೆಗೆ ಶೃದ್ಧಾಂಜಲಿ,ಅದಕ್ಕೆ ಸಂಬಂಧಿಸಿದಂತೆ ಹಂತಕನ ವಿಷಯವನ್ನು ಮಾತನಾಡೋದನ್ನು ಬಿಟ್ಟು..ಅಂಥವರಿಗೆ ಶಿಕ್ಷೆ ನೀಡಬೇಕೆನ್ನುವುದಕ್ಕೆ ಒತ್ತು ನೀಡಿ ಮಾತನಾಡಬೇಕಿದ್ದ ನಾರಾಯಣಸ್ವಾಮಿ ಅವರಿಗೆ ಮಾಹಿತಿ ಹಕ್ಕು ಕಾರ್ಯಕರ್ತರ ಮೇಲೆ ಅದೇನ್ ಸಿಟ್ಟಿತ್ತೋ ಏನೋ ಗೊತ್ತಿಲ್ಲ.ಸರ್ಕಾರಿ ನೌಕರರು ಕೆಲಸ ಮಾಡ್ಲಿಕ್ಕೆ ಬಿಡದವರು ಮಾಹಿತಿ ಹಕ್ಕು ಕಾರ್ಯಕರ್ತರು.ಅಂಥವ್ರನ್ನು ಗೂಂಡಾ ಕಾಯ್ದೆ ಅಡಿ ಬಂಧಿಸ್ಬೇಕು..ಅವರೆಲ್ಲಾ ಬ್ಲ್ಯಾಕ್ ಮೇಲರ್ಸ್ ಎಂದು ವಾಚಾಮಗೋಚರವಾಗಿ ಬೈಯ್ದು ತಮ್ಮ ಬಾಯಿ ಚಪಲ ತೀರಿಸಿಕೊಂಡ್ರು.

ನಿವೃತ್ತ ಶಿಕ್ಷಕನಿಂದ ಕೊಲೆಯಾದ ತಹಸೀಲ್ದಾರ್ ಚಂದ್ರಮೌಳೇಶ್ವರ್
ನಿವೃತ್ತ ಶಿಕ್ಷಕನಿಂದ ಕೊಲೆಯಾದ ತಹಸೀಲ್ದಾರ್ ಚಂದ್ರಮೌಳೇಶ್ವರ್

ಕೊಲೆಯಾದ ತಹಸೀಲ್ದಾರ್ ಗೂ ಮಾಹಿತಿ ಹಕ್ಕು ಕಾರ್ಯಕರ್ತರಿಗೂ ಏನ್ ಸಂಬಂಧ..ತಹಸೀಲ್ದಾರ್ ಕೊಲೆಯಾದದ್ದು ನಿವೃತ್ತ ಶಿಕ್ಷಕನಿಂದ,ಅದು ಭೂವ್ಯಾಜ್ಯದ ವಿಷಯಕ್ಕೆ ಸಂಬಂಧಿಸಿದಂತೆ ಸರ್ವೆ ಮಾಡಲು ಹೋದಾಗ..ಇಲ್ಲಿ ಮಾಹಿತಿ ಹಕ್ಕು ಕಾರ್ಯಕರ್ತರನ್ನು ಎಳೆದು ತರುವ ಅಗತ್ಯವೇನಿತ್ತು ಎನ್ನುವುದು ಆರ್ ಟಿಐ ಕಾರ್ಯಕರ್ತರ ಆಕ್ರೋಶ.ಹಾಗೆ ನೋಡಿದ್ರೆ ಅಧಿಕಾರಿಗಳಿಗೆ ಒಳ್ಳೆಯ  ಕೆಲಸ ಮಾಡದಂತೆ ಹೆಚ್ಚು ಒತ್ತಡ ಇರುವುದು ಶಾಸಕರಿಂದ.ಅವರ ಬೆರಳುಗಳ ಸನ್ನೆಯಲ್ಲಿಯೇ ಕೆಲಸ ಮಾಡಬೇಕಾದ ಅನಿವಾರ್ಯತೆಯಲ್ಲಿ ಅಧಿಕಾರಿಗಳಿದ್ದಾರೆ.ಮುಕ್ತವಾಗಿ-ಪಾರದರ್ಶಕವಾಗಿ ಕೆಲಸ ಮಾಡಲಿಕ್ಕಾಗದಷ್ಟು ಉಸಿರುಗಟ್ಟಿಸುವ ವಾತಾವರಣ ನಿರ್ಮಿಸಿರುವುದು ರಾಜಕಾರಣಿಗಳೇ ಹೊರತು ಕೇವಲ ಮಾಹಿತಿ ಕೇಳಿ ಅರ್ಜಿ ಹಾಕುವ ಮಾಹಿತಿ ಹಕ್ಕು ಕಾರ್ಯಕರ್ತರಲ್ಲ ಎನ್ನುವುದು ಎಮ್ಮೆಲ್ಲೆ ನಾರಾಯಣಸ್ವಾಮಿಗೂ ಗೊತ್ತಿದೆ.ಇಷ್ಟಿದ್ರೂ ತಹಸೀಲ್ದಾರ್ ಅವರ ಶೃದ್ಧಾಂಜಲಿ ಸಭೆಯಲ್ಲಿ ಮಾಹಿತಿ ಹಕ್ಕು ಕಾರ್ಯಕರ್ತರನ್ನೇಕೆ ಎಳೆದು ತಂದ್ರೋ..ಎನ್ನುವುದು ಮಾಹಿತಿ ಹಕ್ಕು ಕಾರ್ಯಕರ್ತ ವೀರೇಶ್ ಅವರ ಪ್ರಶ್ನೆ.

ಮಾನ್ಯ ಶಾಸಕರ ಬಂಡವಾಳ ಬಟಾಬಯಲಾಗಿದೆ
ಮಾನ್ಯ ಶಾಸಕರ ಬಂಡವಾಳ ಬಟಾಬಯಲಾಗಿದೆ
ಶಾಸಕರು ಇಷ್ಟೆಲ್ಲಾ ಸಂಪಾದನೆ ಮಾಡಿದ್ದು ಹೇಗೆ?
ಶಾಸಕರು ಇಷ್ಟೆಲ್ಲಾ ಸಂಪಾದನೆ ಮಾಡಿದ್ದು ಹೇಗೆ?
ಏದುಸಿರು ಬಿಟ್ಟುಕೊಂಡು ಓದಬೇಕು ಶಾಸರು ಮಾಡಿರುವ ಜಮೀನಿನ ವಿವರ
ಏದುಸಿರು ಬಿಟ್ಟುಕೊಂಡು ಓದಬೇಕು ಶಾಸರು ಮಾಡಿರುವ ಜಮೀನಿನ ವಿವರ

ಊರು ಎಂದ ಮೇಲೆ ಹೊಲಗೇರಿ ಇದ್ದಿದ್ದೆ..ಮಾಹಿತಿ ಹಕ್ಕು ಕಾರ್ಯಕರ್ತರಲ್ಲಿ ಎಲ್ಲರೂ ಸಂಭಾವಿತರಿಲ್ಲ..ಪ್ರಾಮಾಣಿಕರಿಲ್ಲ ಒಪ್ಪಿಕೊಳ್ಳೋಣ( ಅಂದ್ಹಾಗೆ ಈ ಮಾತು ಕೇವಲ ಮಾಹಿತಿ ಹಕ್ಕು ಕಾರ್ಯಕರ್ತರಿಗೆ ಸಂಬಂಧಿಸಿದ್ದಲ್ಲ..ಎಲ್ಲಾ ಕ್ಷೇತ್ರಗಳಲ್ಲಿ ಕೆಲಸ ಮಾಡುವವರಿಗೂ ಅನ್ವಯಿಸುತ್ತೆ).ಆದ್ರೆ ಇವತ್ತು ಆಳುವ ವ್ಯವಸ್ಥೆಗಳು..ಅದನ್ನು ನಿಯಂತ್ರಿಸುವವರ ಹುಳುಕುಗಳೇನಾದ್ರೂ ಹೊರಬರೊಕ್ಕೆ ಸಾಧ್ಯವಾಗಿದೆ ಎಂದ್ರೆ ಅದು ವಿರೋಧ ಪಕ್ಷಗಳಿಂದಲ್ಲ,ಬದ್ಲಾಗಿ ಮಾಹಿತಿ ಹಕ್ಕಿನಿಂದ ಎನ್ನುವುದನ್ನು ಒಪ್ಪಲೇಬೇಕಾಗುತ್ತೆ.

ಎಷ್ಟೊಂದು ಕಾರು..ಟ್ರ್ಯಾಕ್ಟರ್ಸ್..ಇವೆಲ್ಲಾ ಶಾಸಕರ ರಕ್ತ-ಬೆವರಿನ ದುಡಿಮೆನಾ..
ಎಷ್ಟೊಂದು ಕಾರು..ಟ್ರ್ಯಾಕ್ಟರ್ಸ್..ಇವೆಲ್ಲಾ ಶಾಸಕರ ರಕ್ತ-ಬೆವರಿನ ದುಡಿಮೆನಾ..

ಇವತ್ತು ರಾಜಕಾರಣಿಗಳು-ಅಧಿಕಾರಿಗಳು ಯಾರಿಗಾದ್ರೂ ಹೆದರುತ್ತಾರೆ ಎಂದ್ರೆ ಅದು ಮಾಹಿತಿ ಹಕ್ಕು ಕಾರ್ಯಕರ್ತರಿಗೆ,ಹಾಗೆಯೇ ಒಂದಷ್ಟು ಅಕ್ರಮಗಳು ತಪ್ಪಿವೆ ಎಂದ್ರೆ ಅದರ ಕ್ರೆಡಿಟ್ ಕೂಡ ಮಾಹಿತಿ ಹಕ್ಕು ಕಾರ್ಯಕರ್ತರಿಗೆ ದಕ್ಕಬೇಕಾಗುತ್ತೆ.ಇದೆಲ್ಲ ನಾರಾಯಣಸ್ವಾಮಿ ಅವರಿಗೂ ಗೊತ್ತಿದೆ.ಇಷ್ಟಾದ ಹೊರತಾಗ್ಯೂ ಮಾಹಿತಿ ಹಕ್ಕು ಕಾರ್ಯಕರ್ತರ ಮೇಲೆ ಇಲ್ಲಸಲ್ಲದ ಆರೋಪ ಹೊರಿಸಿ ತುಚ್ಚವಾಗಿ ಮಾತನಾಡಿದ್ದು ಅವರ ಹಳ್ಳವನ್ನು ಅವರೇ ತೋಡಿಕೊಳ್ಳುವಂತೆ ಮಾಡಿದೆ.

ತಹಸೀಲ್ದಾರ್ ಹತ್ಯೆ ಖಂಡಿಸಿ ನಡೆದ ಶೃದ್ಧಾಂಜಲಿ ಸಭೆ ವೇಳೆ ಬಾಯಿಚಪಲಕ್ಕೆ ಶಾಸಕ ನಾರಾಯಣಸ್ವಾಮಿ ನಾಲಿಗೆ ಹರಿಬಿಟ್ಟ ಸನ್ನಿವೇಶ
ತಹಸೀಲ್ದಾರ್ ಹತ್ಯೆ ಖಂಡಿಸಿ ನಡೆದ ಶೃದ್ಧಾಂಜಲಿ ಸಭೆ ವೇಳೆ ಬಾಯಿಚಪಲಕ್ಕೆ ಶಾಸಕ ನಾರಾಯಣಸ್ವಾಮಿ ನಾಲಿಗೆ ಹರಿಬಿಟ್ಟ ಸನ್ನಿವೇಶ

ಮಾಹಿತಿ ಹಕ್ಕು ಕಾರ್ಯಕರ್ತರು ಹಣಕ್ಕೆ ಬಿಕರಿಯಾಗುವವರು,ಒಂದಷ್ಟು ಕೈ ಬೆಚ್ಚಗೆ ಮಾಡಿದ್ರೆ ನೀಯತ್ತನ್ನೇ ಮಾರಿಕೊಳ್ಳುತ್ತಾರೆನ್ನುವಷ್ಟು ಕ್ಷುಲ್ಲಕವಾಗಿ ಮಾತನಾಡಿದ್ದರ ಬೆನ್ನಲ್ಲೇ ಅವರ ವಿರುದ್ದ ತಿರುಗಿಬಿದ್ದ ಆರ್ ಟಿಐ ಕಾರ್ಯಕರ್ತರು ನಾರಾಯಣಸ್ವಾಮಿ ಅವರ ಬಂಡವಾಳವನ್ನೇ ಸಮಾಜದೆದುರು ಬಿಚ್ಚಿಡುವ ಸಾಹಸಕ್ಕೆ ಕೈ ಹಾಕಿದ್ದಾರೆ.ಜನಸೇವಕರಾದ ಎಮ್ಮೆಲ್ಲೆ ಸಾಹೇಬ್ರು  ಕ್ಷೇತ್ರವನ್ನು ಹೇಗೆ ಉದ್ದಾರ ಮಾಡಿದ್ದಾರೋ ಗೊತ್ತಿಲ್ಲ,ತಮ್ಮ ಉದ್ದಾರವನ್ನು ಹೇಗೆ ಮಾಡಿಕೊಂಡಿದ್ದಾರೆ ನೋಡಿ ಎನ್ನುವುದನ್ನು ಸಾಕ್ಷ್ಯ ಸಮೇತ ಬಿಚ್ಚಿಟ್ಟಿದ್ದಾರೆ.ಆ ಸಂಗತಿಗಳನ್ನು ನೋಡಿದ್ರೆ ಖುದ್ದು ನಾರಾಯಣಸ್ವಾಮಿ ಅವರಿಗೇನೆ  ನನಗೆ ಇವೆಲ್ಲಾ ಬೇಕಿತ್ತಾ.. ನನ್ನ ಹಳ್ಳವನ್ನು ನಾನೇ ತೋಡಿಕೊಂಡ್ನಲ್ಲಪ್ಪಾ ಎಂದೆನಿಸದೆ ಇರಲಾರದು.ಏಕಂದ್ರೆ ಅವರ ಜಾತಕವನ್ನೇ ಕೆಲ ಕ್ಷಣಗಳಲ್ಲಿ ಮಾಹಿತಿ ಹಕ್ಕು ಕಾರ್ಯಕರ್ತರು ಒಗ್ಗಟ್ಟಾಗಿ ಜಗಜ್ಜಾಹೀರುಗೊಳಿಸಿದ್ದಾರೆ.ಅವರು ಬಟಾಬಯಲುಗೊಳಿಸಿರುವ ಸಾಕ್ಷ್ಯಾಧಾರಗಳು ಕನ್ನಡ ಫ್ಲಾಶ್ ನ್ಯೂಸ್ ಗೆ ಲಭ್ಯವಾಗಿದೆ.

ನಾರಾಯಣಸ್ವಾಮಿ ಆಸ್ತಿ ವಿವರದ ಮೇಲೆ ಕಣ್ಣಾಕಿದ್ರೆ ಎಮ್ಮೆಲ್ಲೆ ಸಾಹೇಬ್ರು ಜನರ ತೆರಿಗೆ ಹಣವನ್ನು ಹೇಗೆಲ್ಲಾ ಲೂಟ್ ಮಾಡಿದ್ದಾರೆನ್ನೋದು ಗೊತ್ತಾಗುತ್ತೆ.ಅಪಾರ ಪ್ರಮಾಣದ ಜಮೀನು..ಕೋಟ್ಯಾಂತರ ನಗದು.ಒಡವೆ, ಹತ್ತಾರು ಕಾರು-ಟ್ರ್ಯಾಕ್ಟರ್ಸ್..ಇವೆಲ್ಲಾ ಸಾಹೇಬ್ರೇನು.ರಕ್ತ ಬೆವರು ಹರಿಸಿ ದುಡಿದಿದ್ದಲ್ಲ,ಎಮ್ಮೆಲ್ಲೆ ಆದ್ಮೇಲೆ ಸಂಪಾದಿಸಿದ್ದು.ಇದೆಲ್ಲಾ ಹೇಗೆ ಸಾಧ್ಯವಾಯ್ತು..ಇದರ ಬಗ್ಗೆ ತನಿಖೆ ಆಗಬೇಕು.ಆಸ್ತಿ ವಿವರ ಮೂಲ ಪತ್ತೆಯಾಗಬೇಕೆಂದು ಪಟ್ಟುಹಿಡಿದಿದ್ದಾರೆ.ಇದಕ್ಕೆ ಸಂಬಂಧಿಸಿದಂತೆ ಯಾರ್ಯಾರಿಗೆ ಪತ್ರ ಬರೆದು ತನಿಖೆಗೆ ಒತ್ತಾಯಿಸಬೇಕೋ ಅದನ್ನೆಲ್ಲಾ ಮಾಡಲಾರಂಭಿಸಿದ್ದಾರೆ.ತಮ್ಮ ಬಗ್ಗೆ ಹಗುರ ಹಾಗೂ ಕ್ಷುಲ್ಲಕವಾಗಿ ಮಾತನಾಡಿದ ಶಾಸಕ ನಾರಾಯಣಸ್ವಾಮಿ ಅವರ ಜಾತಕ ಹೊರತೆಗೆದು ಇವರೆಷ್ಟು ಸಾಚಾ-ಸಂಭಾವಿತ ಎನ್ನುವುದನ್ನು ಜಗತ್ತಿಗೆ ತೋರಿಸಿ ಬಂಡವಾಳ ಬಯಲು ಮಾಡಲು ಹಠಕ್ಕೆ ಬಿದ್ದಿದ್ದಾರೆ ಮಾಹಿತಿ ಹಕ್ಕು ಕಾರ್ಯಕರ್ತರು.

ಏನೋ ಮಾತನಾಡಲು ಹೋಗಿ ನಾಲಿಗೆ ಹರಿಬಿಟ್ಟ ಶಾಸಕ ನಾರಾಯಣಸ್ವಾಮಿ ಇದೀಗ ತಮ್ಮ ಬಂಡವಾಳವನ್ನು ತಾವೇ ಹರಾಜು ಹಾಕಿಕೊಳ್ಳುವ ಸ್ಥಿತಿಗೆ ಬಂದು ನಿಂತಿದ್ದಾರೆ.ಜವಾಬ್ದಾರಿಯುತ ಶಾಸಕರಾಗಿ ನಡೆದುಕೊಳ್ಳೋದನ್ನು ಬಿಟ್ಟು ಹೊಣೆಗೇಡಿಯಂತೆ ವರ್ತಿಸಿದ್ದಕ್ಕೆ ದೊಡ್ಡ ಬೆಲೆ ತೆರಬೇಕಾಗಿ ಬಂದಿದೆ.ತಾನು ಸಾಚಾ ಆಗಿದಿದ್ದರೆ ಮಾತ್ರ ಶಾಸಕ ನಾರಾಯಣಸ್ವಾಮಿ ಊರಿನ ಹೊಲಸಿನ ಬಗ್ಗೆ ಮಾತನಾಡ್ಬೇಕಿತ್ತು.ಆದ್ರೆ ತಮ್ಮ ಬುಡದಲ್ಲೇ ಕೆಸರಿರುವಾಗ ಬೇರೆಯವ್ರನ್ನು ತುಚ್ಛವಾಗಿ ಮಾತನಾಡಿದ್ದು ಸರಿಯಲ್ಲ..ಅವರ ಪರಿಸ್ತಿತಿ ಬೀದಿಯಲ್ಲಿ ಹೋಗುತ್ತಿದ್ದ ಮಾರಿಗೆ ಆಮಂತ್ರಣ ಕೊಟ್ಟು ಮನೆಗೆ ಕರೆಯಿಸಿಕೊಂಡಂತಾಗಿದೆ.

ಹೊಣೆಗೇಡಿ ಹೇಳಿಕೆ ಕೊಟ್ಟು ತಮ್ಮ ಹಳ್ಳ ತಾವೇ ತೋಡಿಕೊಂಡ್ರಾ ಎಮ್ಮೆಲ್ಲೆ ಸಾಹೇಬ್ರು?!

 

Spread the love
Leave A Reply

Your email address will not be published.

Flash News