“ಅನಿಲ್ ಕುಮಾರ್” ಹಣಿಯಲು “ಮಂಜುನಾಥ್ ಪ್ರಸಾದಾ”….?? ಎಷ್ಟ್ ದಿನ ನಡೆಯುತ್ತೋ ಈ ಗೇಮ್ ಶೋ..!!

0

ವಿಶೇಷ ವರದಿ: ದೇವದ್ರತ ಪಡಿಕ್ಕಲ್

ಬೆಂಗಳೂರು:ಬಿಬಿಎಂಪಿಗೆ ನೂತನ ಸಾರಥಿಯ ನಿಯುಕ್ತಿಯಾಗಿದೆ.ಮಂಜುನಾಥ ಪ್ರಸಾದ್,ಈ ಹಿಂದೆ ಬಿಬಿಎಂಪಿ ಆಯುಕ್ತರಾಗಿ ಕೆಲಸ ಮಾಡಿದ್ದವರು..ಅಧಿಕಾರಿಗಳು ಹಾಗೂ ಚುನಾಯಿತ ಪ್ರತಿನಿಧಿಗಳ ನಡುವೆ ಸಾಮ ರಸ್ಯ ಮೂಡಿಸಿಕೊಂಡು ಎಲ್ಲೂ ಅತಿರೇಕದ ವಿವಾದವನ್ನು ಮೈಗೆ ಅಂಟಿಸಿಕೊಳ್ಳದೆ ಕೆಲಸ ಮಾಡಿದ ಅನುಭವ ಅವರಿಗಿದೆ.ಸಚಿವ ಆರ್.ಅಶೋಕ್ ಅವರ ನೀಲಿಗಣ್ಣಿನ ಐಎಎಸ್ ಅಧಿಕಾರಿ ಎಂದೇ ಕರೆಸಿಕೊಳ್ಳುವ ಮಂಜುನಾಥ ಪ್ರಸಾದ್ ಬಿಬಿಎಂಪಿಗೆ ಆನ್ ಡಿಮ್ಯಾಂಡ್ ಮೇಲೆ ಒನ್ಸ್ ಅಗೈನ್ ಕಮಿಷನರ್ ಆಗಿ ಬರೊಕ್ಕೆ ಕಾರಣವೇ ಅವರೆನ್ನಲಾಗ್ತಿದೆ.ಅದು ಸತ್ಯವೂ ಇರಬಹುದು..ಸಾರಾಸಗಟಾಗಿ ಇಲ್ಲ ಎನ್ನೊಕ್ಕಾಗೊಲ್ಲ.

ಮಂಜುನಾಥ್ ಪ್ರಸಾದ್ ಅವರನ್ನೇ ಬಿಬಿಎಂಪಿ ಕಮಿಷನರ್ ಆಗಿ ನಿಯೋಜನೆ ಮಾಡಿಕೊಳ್ಳಲಾಯಿತು ಎನ್ನುವ ಪ್ರಶ್ನೆ ಈ ಕ್ಷಣಕ್ಕೂ ಕಾಡುತ್ತದೆ.ಕೊರೊನಾ ಸನ್ನಿವೇಶವನ್ನು ಅಚ್ಚುಕಟ್ಟಾಗಿ ನಿಭಾಯಿಸಿದ್ದಕ್ಕೆ ಹಿಂದಿನ ಆಯುಕ್ತ ಅನಿಲ್ ಕುಮಾರ್ ಅವರನ್ನು ಪ್ರಧಾನಿ ಮೋದಿ ಅವರ ಕಚೇರಿಯೇ ಹಾಡಿಹೊಗಳಿತ್ತು.ಅಭಿನಂದನೆಗಳ ಮಹಾಪೂರವನ್ನೇ ಹರಿಸಿತ್ತು.ಇಷ್ಟವಿಲ್ಲದಿದ್ದರೂ ರಾಜ್ಯ ಸರ್ಕಾರದ ಅನೇಕ ಸಚಿವರು-ಶಾಸಕರು ಅನಿಲ್ ಕುಮಾರ್ ಅವರನ್ನು ಅಭಿನಂದಿಸಿತು.

ಅನಿಲ್ ಕುಮಾರ್  ಅವರ ವರ್ಗಾವಣೆಗೆ ಚಿತಾವಣೆ ನಡೆಸಿದವರಲ್ಲಿ ಮಂಚೂಣಿಯಲ್ಲಿದ್ದ ಮೇಯರ್ ಗೌತಮ್ ಕುಮಾರ್ ಅವ್ರೇ ಸ್ವತಃ ಅನಿಲ್ ಕುಮಾರ್ ಅವರ ಕಾರ್ಯವನ್ನು ಶ್ಲಾಘಿಸಿದ್ದರು.ಅದು ಎಂಥಾ ಸನ್ನಿವೇ ಶವೊಂದನ್ನು ಸೃಷ್ಟಿಸಿತ್ತು ಎಂದ್ರೆ ಪ್ರಧಾನಿ ಅವರ ಕಚೇರಿಯಿಂದ್ಲೇ ಶಹಬ್ಬಾಸ್ ಗಿರಿ ಬಂತೆಂದ ಮೇಲೆ ಅನಿಲ್ ಕುಮಾರ್ ಅವರನ್ನು ಟಚ್ ಮಾಡೊಕ್ಕೆ ಯಾರಿಂದ್ಲೂ ಸಾಧ್ಯವಿಲ್ಲ ಎಂದು ಮಾತನಾಡಿಕೊಳ್ಳುವಂತಾ ಗಿತ್ತು.ರಾಜ್ಯ ಸರ್ಕಾರ ಅವತ್ತಿಂದ್ಲೇ ಅನಿಲ್ ಕುಮಾರ್ ವರ್ಗಾವಣೆ ಬಗ್ಗೆ ಸೊಲ್ಲೆತ್ತುವುದಿರಲಿ,ಅದರ ಬಗ್ಗೆ ಆಲೋಚಿಸುವುದನ್ನೇ  ಬಿಟ್ಟುಬಿಡ್ತು.ಅಲ್ಲಿಗೆ ಅನಿಲ್ ಕುಮಾರ್ ಸೇಫ್ ಎಂದೇ ಎಲ್ಲರೂ ಮಾತನಾಡಿಕೊಂಡ್ರು.

ಅನಿಲ್ ಕುಮಾರ್ ವಿರುದ್ಧ ಕತ್ತಿ ಮಸಿಯುತ್ತಲೇ ಇದ್ರು “ಅವ್ರು”?: ವರ್ಗಾವಣೆ ಎನ್ನೋ ಬೀಸೋ ದೊಣ್ಣೆಯಿಂದ ತಪ್ಪಿಸಿಕೊಂಡ ಅನಿಲ್ ಕುಮಾರ್ ಕೂಡ ಅಲರ್ಟ್ ಆಗಿಬಿಟ್ರು.ಹಿಂದೆಂದಿಗಿಂತ ಹೆಚ್ಚು ಅಲರ್ಟ್-ಆಕ್ಟೀವ್ ಆಗಿ ಕೆಲಸ ಮಾಡ್ಲಿಕ್ಕೆ ಶುರುಮಾಡಿದ್ರು.ಕೊರೊನಾ ವಿಷಯದಲ್ಲಿ ತಮಗೆ ಬಂದ ಮಾಹಿತಿಗಳನ್ನು ವೈಯುಕ್ತಿಕವಾಗಿ ಆಸಕ್ತಿಯಿಂದ ನಿಭಾಯಿಸಿದರು.ಅದರಲ್ಲೂ ತಮ್ಮ ಇಲಾಖೆ ಅಧಿಕಾರಿಗಳ ನಿರ್ಲಕ್ಷ್ಯದಿಂದ ಸಂಭವಿಸುತ್ತಿರುವ ಸಾವುಗಳಿಗೆ ಸಂತ್ರಸ್ಥರ ಮನೆಗಳ ಬಳಿ ಹೋಗಿ ಕೈಮುಗಿದು ಕ್ಷಮೆ ಯಾಚಿಸಿದರು.ಇದು ಸಾಕಷ್ಟು ವೈರಲ್ ಆಗಿ ಅನಿಲ್ ಕುಮಾರ್ ಬಗ್ಗೆ ಬೆಂಗಳೂರು ಅಭಿಮಾನದಿಂದ ಮಾತನಾಡಿಕೊಳ್ಳುವಂತಾಯ್ತು.

ಆದರೆ ಕೊರೊನಾ ಪರಿಸ್ಥಿತಿ ದಿನೇ ದಿನೇ ಬೆಂಗಳೂರಲ್ಲಿ ನಿಯಂತ್ರಣ ಮೀರಿ ನಾಗಾಲೋಟದಲ್ಲಿ ಸಾಗ್ಲಿಕ್ಕೆ ಯಾವಾಗ ಶುರುಮಾಡ್ತೋ ಆಗ ಶುರುವಾಯ್ತು ನೋಡಿ ಅನಿಲ್ ಕುಮಾರ್ ತಲೆದಂಡಕ್ಕೆ ಕೌಂಟ್ ಡೌನ್.ವರ್ಗಾವಣೆ ಮಾಡುವ ಸನ್ನಿವೇಶ ಎದುರಾದಾಗ್ಲೆಲ್ಲಾ ಯಾವುದಾದರೊಂದು ರೀತಿಯಲ್ಲಿ ಅದರಲ್ಲಿ ತಪ್ಪಿಸಿಕೊಂಡು ಸೇಫ್ ಆಗ್ತಿದ್ದ ಅನಿಲ್ ಕುಮಾರ್ ನೋಡಿದ್ರೆ ಕೊತ ಕೊತ ಕುದಿಯುತ್ತಿದ್ದ ರಾಜ್ಯಸರ್ಕಾರದ ಅನೇಕ ಸಚಿವರುಗಳೇ ಖೆಡ್ಡಾ ತೋಡ್ಲಿಕ್ಕೆ ಶುರುಮಾಡಿದ್ರು.ಸಂದರ್ಭಕ್ಕಾಗಿ ಕಾಯುತ್ತಿದ್ದ ಅವರಿಗೆ ಸುವರ್ಣಾವಕಾಶವಾಗಿ ಸಿಕ್ಕಿದ್ದು ಹೈಕೋರ್ಟ್  ಚಾವಟಿ ಬೀಸಿದ ಸಂದರ್ಭ.

ಹೈಕೋರ್ಟ್ ಚಾವಟಿ ಬೀಸುತ್ತಿದ್ದಂತೆ ರೆಡಿಯಾಗಿತ್ತು ಅನಿಲ್ ಕುಮಾರ್ ಗೆ ಖೆಡ್ಡಾ?: ಕೊರೊನಾ ಸನ್ನಿವೇಶ ನಿಭಾಯಿಸುವಲ್ಲಿ ಬಿಬಿಎಂಪಿ ಸಂಪೂರ್ಣ ವಿಫಲವಾಗಿದೆ.ಸೋಂಕಿತರ ಜೀವ-ಜೀವನದ ಜೊತೆ ಚೆಲ್ಲಾಟವಾಡುತ್ತಿದ್ದೀರಾ ಎಂದು ಯಾವಾಗ ಹಿಗ್ಗಾಮುಗ್ಗಾ ಕೋರ್ಟ್ ಜಾಡಿಸ್ತೋ,ಅದೇ  ಸನ್ನಿವೇಶಕ್ಕಾಗಿ ಕಾಯುತ್ತಿದ್ದ ಸರ್ಕಾರದ ಸಚಿವರು ಕೂಡ ಅಲರ್ಟ್ ಆದ್ರು.ತಮ್ಮ ದಾಳ ಪ್ರಯೋಗಿಸ್ಲಿಕ್ಕೆ ಶುರುವಿಟ್ಟುಕೊಂಡ್ರು.ಇದರ ನೇತೃತ್ವ ವಹಿಸಿದವರ ಪಟ್ಟಿಯಲ್ಲಿ ಕೇಳಿಬಂದ ಮೊದಲ ಹೆಸರು ಸಾಮ್ರಾಟ್ ಆರ್.ಅಶೋಕ್.ಸರ್ಕಾರಕ್ಕೆ ತೀವ್ರ ಮುಜುಗರ ಉಂಟಾಗಿದೆ.ನಾವೆಲ್ಲಾ ನಾಚಿಕೆಯಿಂದ ತಲೆತಗ್ಗಿಸುವಂತಾಯ್ತು ಎಂದು ಬೊಬ್ಬೆ ಹೊಡೆದುಕೊಳ್ಳೊಕ್ಕೆ ಶುರುಮಾಡಿದ್ರು.ಇದೇ ಸೂಕ್ತ ಸನ್ನಿವೇಶ,ಕೈ ಬಿಟ್ಟರೆ ಮೂರ್ಖರಾಗ್ತೀವೆಂದು ನೇರವಾಗಿ ಸಿಎಂ ಮುಂದೆ ಕೂತ್ಕೊಂಡು ಲಾಭಿ ಶುರುಮಾಡಿದ್ರು ಕೆಲವ್ರು.

ಇಂಥಾ ಕಮಿಷನರ್ ಅವ್ರನ್ನು ಉಳಿಸಿಕೊಂಡ್ರೆ ಕೊರೊನಾ ಕಂಟ್ರೋಲ್ ಆಗೋ ಮಾತು ಹಾಳಾಗಿ ಹೋಗ್ಲಿ,ನಮ್ಮ ಸರ್ಕಾರದ ಮಾನವನ್ನು ಜನರ ಎದುರಿಗೆ ಹೈಕೋರ್ಟ್ ಬೆತ್ತಲು ಮಾಡಿಬಿಡುತ್ತೆ..ಹಾಗಾಗಿ ಬದಲಾವಣೆ ಮಾಡಿ..ಇಲ್ಲದಿದ್ದರೆ ಸರ್ಕಾರ ತೀವ್ರ ಮುಜುಗರಕ್ಕೀಡಾಗಬೇಕಾಗುತ್ತೆ ಎಂದು ಸಿಎಂ ಕಿವಿ ಊದಿದ್ದೇ ಊದಿದ್ದು.ಎಷ್ಟೇ ಆದ್ರೂ ಜನರಿಗಲ್ಲದಿದ್ದರೂ ಹೈ ಕೋರ್ಟ್ ಭಯಕ್ಕೆ ಅನಿಲ್ ಕುಮಾರ್ ವರ್ಗಾವಣೆಗೆ ಮುಖ್ಯಮಂತ್ರಿ ಯಡಿಯೂರಪ್ಪ ಸೈ ಎಂದೇ ಬಿಟ್ಟರಂತೆ ಎನ್ನುತ್ತವೆ ಸರ್ಕಾರದ ಉನ್ನತ ಮೂಲಗಳು.

ಕೊರೊನಾ ನಿಯಂತ್ರಣ ತಪ್ಪುವಲ್ಲಿ ಅನಿಲ್ ಕುಮಾರ್  ಮಾತ್ರ ಏಕಮೇವಾದ್ವಿತೀಯ ಕಾರಣನಾ..ಸರ್ಕಾರದ ವೈಫಲ್ಯ ಇಲ್ವೇ?: ಈ ಪ್ರಶ್ನೆಗೆ ಈ ಕ್ಷಣಕ್ಕೂ ಉತ್ತರ ಸಿಗುತ್ತಿಲ್ಲ..ಕೊರೊನಾ  ರಾಜಧಾನಿಯಲ್ಲಿ  ನಿಯಂತ್ರಣ ತಪ್ಪಿದೆ..ಅದರಲ್ಲಿ ನೋ ಡೌಟ್.ಆದ್ರೆ ಅದಕ್ಕೆ ಕಮಿಷನರ್ ಅನಿಲ್ ಕುಮಾರ್ ಮಾತ್ರ ಕಾರಣನಾ..ಬೆಂಗಳೂರಿನ ಕೊವಿಡ್ ಉಸ್ತುವಾರಿ ಆರ್.ಅಶೋಕ್ ಹೊಣೆಗೇಡಿತನ ಏನೂ ಇಲ್ಲವಾ? ಒಟ್ಟಾರೆ ರಾಜ್ಯ ಸರ್ಕಾರ ಎಡವಲೇ ಇಲ್ವಾ?ಅದರ ನೀತಿ-ಧೋರಣೆ-ಕಾರ್ಯಯೋಜನೆಗಳಲ್ಲಿ ಲೋಪಗಳೇ ಇರಲಿಲ್ವಾ?ಇಡೀ ವೈಫಲ್ಯಕ್ಕೆ ಅನಿಲ್ ಕುಮಾರ್ ಅವರನ್ನು ಹೊಣೆ ಮಾಡಿದ್ದು ಯಾವ ನ್ಯಾಯ? ಹೊಸದಾಗಿ ಬಂದಿರುವ ಮಂಜುನಾಥ್ ಪ್ರಸಾದ್ ಅವರ ಅವಧಿಯಲ್ಲೂ ಇಂಥಾ ಲೋಪಗಳಾದ್ರೆ ಅವರನ್ನೂ ವರ್ಗಾವಣೆ ಮಾಡಿಬಿಡುತ್ತಾ ಸರ್ಕಾರ..ಇಂಥಾ ಪ್ರಶ್ನೆಗಳಿಗೆ ಸರ್ಕಾರದ ಬಳಿ ಉತ್ತರವೇ ಇಲ್ಲ..

ತನಗಾದ ಅವಮಾನ-ಮುಜುಗರದಿಂದ ತಪ್ಪಿಸಿಕೊಳ್ಳಲು ಇನ್ನೊಬ್ಬರನ್ನು ಅಪರಾಧಿಸ್ಥಾನದಲ್ಲಿ ನಿಲ್ಲಿಸಬೇಕಷ್ಟೇ? ಕೊರೊನಾ ಸನ್ನಿವೇಶದಲ್ಲಿ ಇಡೀ ಸಂದರ್ಭವನ್ನು ಅಚ್ಚುಕಟ್ಟಾಗಿ-ಪರಿಣಾಮಕಾರಿಯಾಗಿ ನಿಭಾಯಿಸಿದ ಹೊರತಾಗ್ಯೂ ಅಪರಾಧಿ ಸ್ಥಾನದಲ್ಲಿ ನಿಂತಿದ್ದು.. ಎತ್ತಂಗಡಿಯಾದದ್ದು ಅನಿಲ್ ಕುಮಾರ್ ಮಾತ್ರ.ಗೆದ್ದರೆ ಆಡೊಕ್ಕೆ ಬಂದಿದ್ದೆ…ಸೋತ್ರೆ ನೋಡೊಕ್ಕೆ ಬಂದಿದ್ದೆ ಎನ್ನುವ ಹೀನ ಮನಸ್ಥಿತಿಯ ಚುನಾಯಿತ ಪ್ರತಿನಿಧಿಗಳಿಂದ ಅನಿಲ್ ಕುಮಾರ್ ಅವರಂಥ ಅಧಿಕಾರಿಗಳು ಇನ್ನೇನನ್ನು ನಿರೀಕ್ಷಿಸ್ಲಿಕ್ಕೆ ಸಾಧ್ಯವೇಳಿ..

ವರ್ಗಾವಣೆ ಒಂದೇ ಸಂದಿಗ್ಧ ಸಂದರ್ಭಕ್ಕೆ ಸೆಲ್ಯೂಷನ್ನಾ..?: ಇದೆಲ್ಲಕ್ಕಿಂತ ಹೆಚ್ಚಾಗಿ ಬೆಂಗಳೂರಿಗಿಂತ ತಮಿಳ್ನಾಡು..ಮಹಾರಾಷ್ಟ್ರ.. .ದೆಹಲಿ..ಗುಜರಾತ್ ಗಳಲ್ಲಿ ಕೊರೊನಾ ಪರಿಸ್ತಿತಿ ವಿಷಮವಾಗಿದೆ.ಗಂಭೀರವಾಗಿದೆ.ಇಲ್ಲಿಗಿಂತ ಹೆಚ್ಚು ಸಾಂಕ್ರಾಮಿಕತೆ ಹಾಗೂ ಸಾವಿನ ಪ್ರಕರಣಗಳು ಅಲ್ಲಿದೆ.ಹಾಗೆಂದು ಅಲ್ಲಿನ ಕಾರ್ಪೊರೇಷನ್ ವ್ಯವಸ್ಥೆಯನ್ನು ನೋಡಿಕೊಳ್ಳುವ ಮುಖ್ಯಾಧಿಕಾರಿಗಳನ್ನು ವರ್ಗಾವಣೆ ಮಾಡಲಾಗಿದೆಯೇ? ಖಂಡಿತಾ ಇಲ್ಲ..ಏಕೆಂದ್ರೆ ವರ್ಗಾವಣೆ ಒಂದೇ ಇಂಥಾ ಸಂದಿಗ್ಧ ಸಂದರ್ಭಕ್ಕೆ ಸೆಲ್ಯೂಷನ್ ಅಲ್ಲ.ಇದು  ರಾಜ್ಯ ಸರ್ಕಾರಕ್ಕೇಕೆ ತಿಳಿಯಲಿಲ್ಲವೋ ಗೊತ್ತಿಲ್ಲ..

ಈಗ ಎಲ್ಲಾ ಮುಗಿದೋಗಿದೆ..ಯಾವುದೇ ವಿಶ್ಲೇಷಣೆಗಳಿಗೂ ಬೆಲೆ ಇಲ್ಲ.ಅನಿಲ್ ಕುಮಾರ್ ಅವರನ್ನು ಸಾರ್ವಜನಿಕ ಉದ್ದಿಮೆಗಳು ಎನ್ನುವ ಡಮ್ಮಿ ಇಲಾಖೆಗೆ ಎತ್ತಂಗಡಿ ಮಾಡಿಬಿಟ್ಟಿದೆ.ಮಂಜುನಾಥ ಪ್ರಸಾದ್ ಅವರಿಗೆ ರಾಜಗಾಂಭೀರ್ಯದ ಸ್ವಾಗತವನ್ನು ನೀಡಲಾಗಿದೆ.ಅದು ಕೂಡ ಮೂರು ಹುದ್ದೆಗಳ ಹೊಣೆಗಾರಿಕೆಯನ್ನೂ ಅವರಿಗೇ ನೀಡಲಾಗಿದೆ.ಮಂಜುನಾಥ ಪ್ರಸಾದ್ ಹುರುಪಿಂದ್ಲೇ ಅಧಿಕಾರ ಸ್ವೀಕರಿಸಿದ್ದಾರೆ.ಅವರಿಗೂ ಗೊ ತ್ತು,ಪರಿಸ್ಥಿತಿ ಮೊದಲಿದ್ದಂತಿಲ್ಲ..ಸವಾಲಿಂದ ಕೂಡಿದೆ ಎಂದು.ಅದರ ಜೊತೆಗೆ ಎಲ್ಲಾ ಮಾಡಿ ಕೈ ಕೊಟ್ಟಾಗ ಅದರ ನೈತಿಕ ಹೊಣೆಯನ್ನೂ ನನ್ನ ಹೆಗಲಿಗೇರಿಸಿ ಜಾರಿಕೊಳ್ಳುವ ರಾಜಕೀಯದವ್ರ ಮಸಲತ್ತು- ಹಕೀ ಕತ್ತು..ಎಲ್ಲವೂ ಗೊತ್ತಿದೆ.ಹಾಗಾಗಿ ಹೇಗೆ ನಯನಾಜೂಕಾಗಿ ಕೆಲಸ ಮಾಡ್ಬೇಕೆನ್ನುವುದನ್ನು ಅರ್ಥ ಮಾಡಿಕೊಂಡಿಯೇ ಅವರು ಅಧಿಕಾರ ವಹಿಸಿಕೊಂಡಿದ್ದಾರೆ..ಸೋ..ಕಾದು ನೋಡ್ಬೇಕು ಹೊಸ ಕಮಿಷನರ್ ಅವ್ರ ಕಾರ್ಯಾವಧಿ ಹೇಗಿರುತ್ತೆ ಎಂದು..

Spread the love
Leave A Reply

Your email address will not be published.

Flash News