ಯಡಿಯೂರಪ್ಪಂದು 2 ಸಾವಿರ ಕೋಟಿ ಕೊರೊನಾ ಲೂಟಿ ಸರ್ಕಾರ:ಮಂತ್ರಿಗಳೆಲ್ಲಾ ಪರ್ಸಂಟೇಜ್ ಗಿರಾಕಿಗಳೇ..

0

ಬೆಂಗಳೂರು:ಕೊರೊನಾ ಹೆಸರಲ್ಲಿ 2 ಸಾವಿರ ಕೋಟಿ ಹಗರಣ ನಡೆದಿದೆ.ಇದಕ್ಕೆ ಪೂರಕವಾದ ಸಾಕ್ಷ್ಯ ನಮ್ಮ ಬಳಿ ಇದೆ..ಲೆಕ್ಕ ಕೇಳಿ ಈವರೆಗೂ ಅನೇಕ ಪತ್ರ ಬರೆದಿದ್ರೂ ಸರ್ಕಾರದ ಯಾವುದೇ ಪ್ರತಿನಿಧಿಯಿಂದಲೂ ಉತ್ತರವಿಲ್ಲ ಎಂದು ವಿಪಕ್ಷ ನಾಯಕ ಸಿದ್ಧರಾಮಯ್ಯ ಕಿಡಿ ಕಾರಿದ್ದಾರೆ.

ಕೆಪಿಸಿಸಿ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿದ ಅವರು,ಕೊರೊನಾ ಹೆಸರಿನಲ್ಲಿ ಸರ್ಕಾರ ನಡೆಸಿರುವ ಅಕ್ರಮ ಒಂದಾ ಎರಡಾ..ಹತ್ತಿರತ್ತಿರ 2 ಸಾವಿರ ಕೋಟಿಯಷ್ಟು ಅಕ್ರಮ ನಡೆದಿದೆ.ವೆಂಟಿಲೇಟರ್,ಮಾಸ್ಕ್,ಸ್ಯಾನಿಟೈಸರ್ಸ್..ಬೆಡ್ಸ್..ಕೊವಿಡ್ ಸೆಂಟರ್ ಗಳ ಸ್ಥಾಪನೆ ಹೀಗೆ..ಪ್ರತಿಯೊಂದರಲ್ಲೂ ಕೋಟಿಗಳಷ್ಟು ಹಣವನ್ನು ಲೂಟಿ ಮಾಡಲಾಗಿದೆ.ಇದರ ಬಗ್ಗೆ ಪ್ರಶ್ನಿಸುವುದು ವಿರೋಧಪಕ್ಷವಾಗಿ ನಮ್ಮ ತಪ್ಪಾ ಎಂದು ಸಿದ್ಧರಾಮಯ್ಯ ಗುಡುಗಿದ್ದಾರೆ.

ರಾಜ್ಯ ಸರ್ಕಾರ 4,167 ಕೋಟಿ, ಆರೋಗ್ಯ ಇಲಾಖೆ 700 ಕೋಟಿ,ಬಿಬಿಎಂಪಿ 200 ಕೋಟಿಗಳನ್ನು ವಿವಿಧ ಸಲಕರಣೆಗಳ ಖರೀದಿಗಾಗಿ ಖರ್ಚು ಮಾಡಿದೆ.ಏನೇ ತಿರುಗಿಸಿ ಮುರುಗಿಸಿ ಲೆಕ್ಕ ಹಾಕಿದ್ರು 2ವರೆ ಸಾವಿರ ಇದಕ್ಕೆಲ್ಲಾ ಖರ್ಚಾಗಿದ್ರೆ ಹೆಚ್ಚು.ಉಳಿದ 2 ಸಾವಿರ ಕೋಟಿಯಷ್ಟು ಜನರ ತೆರಿಗೆ ಹಣವನ್ನು ಯಡಿಯೂರಪ್ಪ ಸರ್ಕಾರ ಲೂಟ್ ಮಾಡಿದೆ ಎಂದು ಸಿದ್ಧರಾಮಯ್ಯ ವಿವರಿಸಿದರು.

ಮಾರುಕಟ್ಟೆಯಲ್ಲಿ 1.500 ಬೆಲೆಯ  ಥರ್ಮಲ್ ಸ್ಕ್ಯಾನರ್ ನ್ನು ನಮ್ಮ ಸರ್ಕಾರ  5,945 ರೂಗೆ ಖರೀದಿಸಿದೆ.80-100 ರೂ ನಷ್ಟಿರಬಹುದಾದ ಸ್ಯಾನಿಟೈಸರ್ಸ್ ನ್ನು 250 ರು ಕೊಟ್ಟು ಖರೀದಿಸಲಾಗಿದೆ.ಚೀನಾದಿಂದ 3ವರೆ ಲಕ್ಷದಷ್ಟು ಕಳಪೆ ಕಿಟ್ ಖರೀದಿಸಲಾಗಿದೆ. 330 ರೂ ಇರುವ ಪಿಪಿಇ ಕಿಟ್ ಗಳನ್ನು 999 ರೂ ಗೆ ಖರೀದಿಸಲಾಗಿದೆ.ಮಾರುಕಟ್ಟೆಯಲ್ಲಿ ಬಿಕರಿಯಾಗುವ 25-50 ರೂ ಬೆಲೆಯ ಮಾಸ್ಕ್ ಗಳನ್ನು 125 ರಿಂದ 210 ರೂ ಖರೀದಿಸಿದೆ.ಆರೋಗ್ಯಕ್ಕೆ ಹಾನಿಕರವಾದ ಸ್ಯಾನಿಟೈಸರ್ ಗಳನ್ನು ಖರೀದಿಸಿರುವುದರ ಹಿಂದೆ ಹಣ ಲೂಟಿಯ ದುರುದ್ದೇಶ ಅಡಗಿದೆ ಎಂದು ಸಿದ್ದರಾಮಯ್ಯ ಆರೋಪಿಸಿದರು.

ಇದೇ ವೇಳೆ ಮಾತನಾಡಿದ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್, ಕೊರೊನಾದಂಥ ಸಂಕಷ್ಟದ ಸಮಯದಲ್ಲಿ ಜನ ಮೂಲಭೂತ ಸೌಕರ್ಯಗಳಿಲ್ಲದೆ ಜನ ಪರದಾಡುತ್ತಿದ್ದಾರೆ.ಜೀವನ ನಿರ್ವಹಣೆ ಕಷ್ಟಕರವಾಗಿದೆ.ಒಂದು ಹೊತ್ತಿನ ಊಟಕ್ಕೂ ಜನ ಪರದಾಡುವಂಥ ಪರಿಸ್ತಿತಿ ಇದೆ.ಇಂಥದ್ದರ ನಡುವೆ ತಮ್ಮ ಸ್ವಾರ್ಥಹಿತಾಸಕ್ತಿಗಾಗಿ ಜನರ ತೆರಿಗೆ ಹಣವನ್ನು  ಲೂಟಿ ಮಾಡುತ್ತಿದ್ದೀರಲ್ಲ..ದೇವರು ನಿಮ್ಮನ್ನು ಕ್ಷಮಿಸುತ್ತಾನಾ..ಜನ ನಿಮ್ಮನ್ನು ಕ್ಷಮಿಸ್ತಾರಾ..ಖಂಡಿತಾ ಇಲ್ಲ..ಎಲ್ಲಾ ತನಿಖಾ ಸಂಸ್ಥೆಗಳು ನಿಮ್ಮ ವ್ಯಾಪ್ತಿಯಲ್ಲೇ ಬರುತ್ತವಲ್ವಾ,,ತನಿಖೆ ನಡೆಸಿ ಸತ್ಯಾಂಶ ರಾಜ್ಯದ ಜನತೆ ಎದುರು ಬರಲಿ ಎಂದು ಸವಾಲೆಸಿದಿದ್ದಾರೆ.  

Spread the love
Leave A Reply

Your email address will not be published.

Flash News