ಹುಟ್ಟುಹಬ್ಬದಂದೂ ಮುನಿರತ್ನಂ ಮುಖದಲ್ಲಿ ನಗುವಿಲ್ಲ….ಆ ನಗು ಕಸಿದುಕೊಂಡಿರೋದು ಯಾರ್ ಗೊತ್ತಾ!?

0
ಮಾಜಿ ಎಮ್ಮೆಲ್ಲೆ ಮುನಿರತ್ನಂ ನಾಯ್ಡು
ಮಾಜಿ ಎಮ್ಮೆಲ್ಲೆ ಮುನಿರತ್ನಂ ನಾಯ್ಡು

ಬೆಂಗಳೂರು:  ಪಾಪ!!  ಮಾಜಿ ಶಾಸಕ ಮುನಿರತ್ನಂ ಸ್ಥಿತಿ ಯಾವ್ ಶತೃಗೂ ಬೇಡ ಅನ್ಸುತ್ತೆ ಕಣ್ರಿ..ಹುಟ್ಟುಹಬ್ಬದ ಸಂಭ್ರಮವಿದ್ದರೂ ಅದನ್ನು ಅನುಭವಿಸ್ಲಿಕ್ಕಾಗದ ನೋವಿನ ಸ್ಥಿತಿ ಅವರದು.ಕಾರ್ಯಕರ್ತರು-ಅಭಿಮಾನಿಗಳು ತಮ್ಮ ನಾಯಕನ ಹುಟ್ಟುಹಬ್ಬ ಆಚರಿಸಿಕೊಳ್ಳಲು ಎಲ್ಲಾ ವ್ಯವಸ್ಥೆ ಇದ್ದ ಹೊರತಾಗ್ಯೂ ಅಧಿಕಾರ-ಹುದ್ದೆ ಎರಡೂ ಇಲ್ಲದ ಯಾವ್ ಸುಖಕ್ಕೆ ಹುಟ್ಟುಹಬ್ಬ ಆಚರಿಸಿಕೊಳ್ಳೊದೆಂದು ಹೇಳಿ ಸುಮ್ಮನಾಗಿಸಿದ್ದಾರಂತೆ.ಆದ್ರೂ ಅಸ್ಥಿತ್ವದ ಪ್ರಶ್ನೆ ಎನ್ನುವ ಕಾರಣಕ್ಕೆ ಅವರ ಅಭಿಮಾನಿಗಳು ಕೊರೊನಾದ ಸಂದರ್ಭದಲ್ಲಿ ಪತ್ರಿಕೆ-ಟಿವಿಗಳಲ್ಲಿ ಜಾಹೀರಾತು ಕೊಟ್ಟು ತೃಪ್ತಿ ಪಟ್ಟುಕೊಳ್ಳುತ್ತಿದ್ದಾರಷ್ಟೇ..ಆದ್ರೆ ಅಧಿಕಾರವಿಲ್ಲದೆ ಕೊತ ಕೊತ ಕುದಿಯುತ್ತಿರುವ ಮುನಿರತ್ನಂ ಮಾತ್ರ ಕೈ ಕೈ ಹಿಸುಕಿಕೊಳ್ಳುತ್ತಿದ್ದಾರೆ.

ಮೈತ್ರಿ ಸರ್ಕಾರ ಪತನಗೊಂಡು ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬರೊಕ್ಕೆ ಕಾರಣವಾದವರಲ್ಲಿ ಮುಖ್ಯವಾದವ್ರೇ ಮುನಿರತ್ನಂನಾಯ್ಡು.ಅವರ ಜೊತೆಗಿದ್ದವರೆಲ್ಲಾ ಶಾಸಕರು-ಮಂತ್ರಿಗಳಾಗಿ ಅಧಿಕಾರ ಅನುಭವಿಸ್ತಿದ್ದಾರೆ.ಗೂಟದ ಕಾರುಗಳಲ್ಲಿ ಜಾಮ್ ಝೂಮ್ ಆಗಿ ಅಡ್ಡಾಡುತ್ತಿದ್ದಾರೆ.ಆದ್ರೆ ಅತೃಪ್ತ ಬಳಗದ ನಾಯಕರಾಗಿದ್ದ ಮುನಿರತ್ನಂ ಅವ್ರೇ ಇಂದು ಯಾವುದೇ ಅಧಿಕಾರ-ಹುದ್ದೆಯಿಲ್ಲದೆ ಪರಿತಪಿಸಬೇಕಾದ..ತಮ್ಮೊಂದಿಗಿದ್ದವರು ಅನುಭವಿಸುತ್ತಿರುವ ಹುದ್ದೆ-ಅಧಿಕಾರವನ್ನು ನೋಡಿಕೊಂಡು ಹೊಟ್ಟೆ ಉರಿದುಕೊಳ್ಳಬೇಕಾಗಿ ಬಂದಿರುವುದು ಎಂಥಾ ವಿಪರ್ಯಾಸ ಅಲ್ವೇ.

ಮುನಿರತ್ನಂ ಅವರಿಗೆ ಬಂದೊದಗಿರುವ ಪರಿಸ್ಥಿತಿ ಯಾವ್ ಶತೃವಿಗೂ ಬರಬಾರದೆಂದು ಇಡೀ ರಾಜಕೀಯ ವಲಯ ಮಾತನಾಡಿಕೊಳ್ಳುತ್ತಿದೆ.ಚುನಾವಣೆ ನಡೆಸಲು ಸರ್ಕಾರ ಸಿದ್ದವಿದ್ದರೂ ಹೈ ಕೋರ್ಟ್ ಅದಕ್ಕೆ ಅಸ್ತು ಎಂದಿಲ್ಲ..ನಕಲಿ ವೋಟರ್ ಐಡಿ ಪ್ರಕರಣದ ಕಾನೂನಾತ್ಮಕ ಗೊಂದಲ ಇನ್ನೂ ಬಗೆಹರಿದಿಲ್ಲ.ಈ ಕಾರಣದಿಂದ್ಲೇ ಎಮ್ಮೆಲ್ಸಿ ಸ್ಥಾನವನ್ನು ನೀಡದ ಅಸಹಾಯಕ ಸ್ತಿತಿಯಲ್ಲಿ ಸರ್ಕಾರವಿದೆ.ಮುನಿರತ್ನ ಈ ಕಾರಣಗಳಿಂದ ಗೆಲ್ಲೋ ಸಾಮರ್ಥ್ಯವಿದ್ದ ಹೊರತಾಗ್ಯೂ ಅಧಿಕಾರಶೂನ್ಯರಾಗಿ ಕುಳಿತುಕೊಳ್ಳಬೇಕಾದ ಸ್ಥಿತಿಯಿದೆ.

ತುಳಸಿ ಮುನಿರಾಜುಗೌಡ
ತುಳಸಿ ಮುನಿರಾಜುಗೌಡ
ತುಳಸಿ ಬೆನ್ನಿಗೆ ನಿಂತಿರುವ ಸಂತೋಷ್ ಜೀ
ತುಳಸಿ ಬೆನ್ನಿಗೆ ನಿಂತಿರುವ ಸಂತೋಷ್ ಜೀ

ಕೊರೊನಾ ಇದ್ದಾಗ್ಯೂ ಅನೇಕ ರಾಜಕೀಯ ಹುಟ್ಟುಹಬ್ಬಗಳು ಅತ್ಯಂತ ಸಂಭ್ರಮದಿಂದ ನಡೆದಿವೆ.ಆದ್ರೆ ಮುನಿರತ್ನ ಅವರ ಹುಟ್ಟುಹಬ್ಬವನ್ನು ಇಡೀ ಆರ್.ಆರ್ ನಗರ ಬೆರಗುಗಣ್ಣಿನಲ್ಲಿ ನೋಡಬೇಕು..ಅದರಲ್ಲೂ ಈ ಸಮಾರಂಭ ಬಿಜೆಪಿ-ಆರ್ ಎಸ್ ಎಸ್ ನಾಯಕರ ಗಮನ ಸೆಳೆಯಬೇಕು..ತಾನು ಎಂಥಾ ಜನನಾಯಕ ಎಂದು ಅರ್ಥ ಮಾಡಿಕೊಳ್ಳಬೇಕೆನ್ನುವ ಪ್ಲ್ಯಾನ್ ಮಾಡಿಕೊಂಡಿದ್ರು ಮುನಿರತ್ನ ಹಾಗೂ ಅಭಿಮಾನಿಗಳು.ಆದ್ರೆ ಯಾವ್ ಹುದ್ದೆ-ಅಧಿಕಾರವನ್ನು ಬಿಂಬಿಸಿಕೊಂಡು ಹುಟ್ಟು ಹಬ್ಬ ಆಚರಿಸಿಕೊಳ್ಳಬೇಕು..ಕೊರೊನಾ ವೇಳೆ ಅದು ಮತ್ತೊಂದು ವಿವಾದಕ್ಕೆ ಎಡೆಮಾಡಿಕೊಟ್ಟರೆ ತನ್ನ ರಾಜಕೀಯ ಭವಿಷ್ಯವೇ ಮುಳುಗೋಗಬಹುದೆನ್ನುವ ಆಲೋಚನೆಯಲ್ಲಿ ಮುನಿರತ್ನ ಅಬ್ಬರದ ಆಚರಣೆಗೆ ಅವಕಾಶ ಕೊಟ್ಟಿಲ್ಲ ಎನ್ನುವುದು ಅವರ ಆಪ್ತ ಕಾರ್ಪೋರೇಟರ್ ಒಬ್ಬರ ಮಾತು.

ಬಹಿರಂಗವಾಗಿ ಹುಟ್ಟುಹಬ್ಬ ಆಚರಿಸಿಕೊಳ್ಳೊಕ್ಕೆ ಆಗಿದಿದ್ದರೇನು..ಟಿವಿ ಚಾನೆಲ್ ಗಳಲ್ಲಿ-ಪೇಪರ್ ಮಾದ್ಯಮಗಳಲ್ಲಿ ಗಂಟೆಗಟ್ಟಲೇ,ಪುಟಗಟ್ಟಲೇ ಜಾಹಿರಾತು ಕೊಟ್ಟು ಬಿಜೆಪಿ,ಆರ್ ಎಸ್ ಎಸ್ ಮುಖಂಡರ ಫೋಟೋಗಳನ್ನು ಹಾಕಿಯಾದ್ರೂ ತನ್ನ ತಾಕತ್ತು ಪ್ರೂವ್ ಮಾಡುವ ಕೆಲಸವನ್ನು ಮಾಡಲಾಗಿದೆ.ಈ ಮೂಲಕವಾದ್ರೂ ಚುನಾವಣೆ ಒಂದ್ವೇಳೆ ಅನೌನ್ಸ್ ಆದ್ರೆ ತನಗೆ ಟಿಕೆಟ್ ಕೊಡಬೇಕೆನ್ನುವ ಪ್ಲ್ಯಾನ್ ಜಾಹಿರಾತು ತಂತ್ರಗಾರಿಕೆ ಹಿಂದಿರಬಹುದು.

ಮುನಿರತ್ನಂ ನಾಯ್ಡು..ಏನೇ ಪ್ರಯತ್ನಿಸಿದ್ರೂ ಮುಖ್ಯಮಂತ್ರಿ ಯಡಿಯೂರಪ್ಪ ಬೆನ್ನಿಗೆ ನಿಂತ್ರೂ ಆರ್.ಆರ್ ನಗರ ಟಿಕೆಟ್ ಗಿಟ್ಟಿಸಿಕೊಳ್ಳೋದು ಕಷ್ಟ ಎನ್ನುವ ವಾತಾವರಣವಿದೆ.ಎಮ್ಮೆಲ್ಸಿ ಸ್ಥಾನಕ್ಕೆ ತನ್ನ ಅಭ್ಯರ್ಥಿಗಳಾದ ಮಾಳವಿಕ ಅವಿನಾಶ್,ಅಶ್ವತ್ಥನಾರಾಯಣ ಅವರನ್ನೇ ಫೈನಲ್ ಮಾಡಬೇಕೆನ್ನುವ ಪಟ್ಟನ್ನಿಡಿದ್ರೂ ಸಂತೋಷ್ ಜೀ ಅವರನ್ನು ಧಿಕ್ಕರಿಸಿ ತನ್ನಾಪ್ತರನ್ನು ಎಮ್ಮೆಲ್ಸಿ ಮಾಡಿದ ಯಡಿಯೂರಪ್ಪ ಆರ್ ಆರ್ ನಗರ ಟಿಕೆಟ್ ವಿಚಾರದಲ್ಲಿ ಸಂತೋಷ್ ಜೀ ಬೇಡಿಕೆಗೆ ಮಣಿಯಲೇಬೇಕಾದ ಅನಿವಾರ್ಯತೆಯನ್ನು ಸೃಷ್ಟಿಸಿಕೊಂಡಿದ್ದಾರೆ.ಆರ್.ಆರ್ ನಗರ ಕ್ಷೇತ್ರವನ್ನು ಪಕ್ಷ ಕಳಕೊಂಡ್ರೂ ಪರ್ವಾಗಿಲ್ಲ..ಮುನಿರತ್ನಂ ನಾಯ್ಡು ಟಿಕೆಟ್ ಸಿಗದೆ ಬಿಜೆಪಿಯೇತರ ಅಭ್ಯರ್ಥಿಯಾಗಿ ನಿಂತ್ ಗೆದ್ರೂ ಪರ್ವಾಗಿಲ್ಲ.ಆರ್ ಆರ್ ನಗರದ ಬಿಜೆಪಿ ಟಿಕೆಟ್ ತನ್ನ ನೀಲಿಗಣ್ಣಿನ ಹುಡುಗ ತುಳಸಿ ಮುನಿರಾಜುಗೌಡ ಅವರಿಗೇನೇ ಕೊಡ್ಬೇಕೆನ್ನುವ ಪಟ್ಟು ಹಿಡಿದು ಕೂತಿದ್ದಾರೆ ಸಂತೋಷ್ ಜೀ.ಯಡಿಯೂರಪ್ಪ ಕೂಡ ಇದಕ್ಕೆ ಒಪ್ಪಲೇಬೇಕಾದ ಅಸಹಾಯಕ ಸ್ತಿತಿಯಲ್ಲಿದ್ದಾರೆ.ಹಾಗಾಗಿ ಮುನಿರತ್ನಂಗೆ ತೊಡಕಾಗಿ ಪರಿಣಮಿಸಿರುವುದು ತುಳಸಿಮುನಿರಾಜು ಗೌಡ ಅವರಿಗಿಂತ ಹೆಚ್ಚು ಅವರ ಮಾನಸಗುರು ಸಂತೋಷ್ ಜೀ..ಮುನಿರತ್ನಂ ಅವರನ್ನು ಕನಸಿನಲ್ಲೂ ಕಾಡೋ ವ್ಯಕ್ತಿತ್ವವೂ ಸಂತೋಷ್ ಜೀನೇ..

ಭೇಟಿ ಮಾಡಿ ಆರ್ ಆರ್ ನಗರ ಎಲೆಕ್ಷನ್ ಹಾಗೂ ಟಿಕೆಟ್ ಬಗ್ಗೆ ಮಾತ್ನಾಡಿದಾಗಲೆಲ್ಲಾ ಯಡಿಯೂರಪ್ಪ ಪ್ರಸ್ತಾಪಿಸುವ ಸಂಗತಿಯೂ ಇದೇ..ಒಂದ್ ಹಂತದಲ್ಲಿ ಯಡಿಯೂರಪ್ಪ ಅವರಿಗೆ ಮುನಿರತ್ನಂ ಅವರ ಬಾಯನ್ನು ಮುಚ್ಚಿಸೊಕ್ಕೆ ಸಿಕ್ಕಿರುವ ಅಸ್ತ್ರ ಕೂಡ ಇದೇ.ಸಂತೋಷ್ ಜೀ ಅವರನ್ನು ಕನ್ವೀನ್ಸ್ ಮಾಡಿ..ನನ್ನದೇನೂ ಅಭ್ಯಂತರವಿಲ್ಲ ಎಂದೇ ಹೇಳಿಕೊಂಡು ಬರುತ್ತಿದ್ದಾರೆ. ಮುನಿರತ್ನಂ ಕೂಡ ಇದೇ ಪ್ರಯತ್ನದಲ್ಲಿದ್ದರೂ ಸರಿಯಾದ ಪ್ಲ್ಯಾನ್ ಹೊಳೆಯುತ್ತಿಲ್ಲ..ಹಾಗಾಗಿನೇ ಇವತ್ತಿನ ಹುಟ್ಟುಹಬ್ಬದ ವೇಳೆ ಯಡಿಯೂರಪ್ಪ ಅವರಿಗಿಂತ ಹೆಚ್ಚು ದೊಡ್ಡದಾಗಿ ಸಂತೋಷ್ ಜೀ ಫೋಟೋ ಹಾಕಿದ್ದಾರೆ.ಅವರನ್ನೇ ಹಾಡಿ ಹೊಗಳಿದ್ದಾರೆ.ಆದ್ರೆ ಈ ಪ್ಲ್ಯಾನ್ ವರ್ಕೌಟ್ ಆಗ್ತದೆನ್ನೋದು ಕೂಡ ಡೌಟೇ… 

Spread the love
Leave A Reply

Your email address will not be published.

Flash News