ಬಿಡಿಎನಲ್ಲಿ ಜಾತಿಯ ವಿಷಬೀಜ ಬಿತ್ತಲಾರಂಭಿಸಿದ್ದಾರಾ ಡಿಎಸ್-1 ಚಿದಾನಂದ್!!-ಕಮಿಷನರ್ ಮಹಾದೇವ್ ದಿವ್ಯಮೌನವೇ ಇದಕ್ಕೆ ಕುಮ್ಮಕ್ಕು ನೀಡುತ್ತಿದೆಯೇ??

0
ಬಿಡಿಎ ನಲ್ಲಿ ಜಾತಿಯ ವಿಷಬೀಜ ಎತ್ತುತ್ತಿರುವ ಉಪಕಾರ್ಯದರ್ಶಿ-1 ಚಿದಾನಂದ್
ಬಿಡಿಎ ನಲ್ಲಿ ಜಾತಿಯ ವಿಷಬೀಜ ಎತ್ತುತ್ತಿರುವ ಉಪಕಾರ್ಯದರ್ಶಿ-1 ಚಿದಾನಂದ್
ಜಾತಿ ಕಾಲಂನ್ನು ಕಡ್ಡಾಯವಾಗಿ ತುಂಬುವಂತೆ ಚಿದಾನಂದ್ ಬಿಡಿಎ ನ ಎಲ್ಲಾ ಕಚೇರಿ-ವಿಭಾಗಗಳಿಗೆ ರವಾನಿಸಿದ ಅರ್ಜಿ ನಮೂನೆ
“ಜಾತಿ” ಕಾಲಂನ್ನು ಕಡ್ಡಾಯವಾಗಿ ತುಂಬುವಂತೆ ಚಿದಾನಂದ್ ಬಿಡಿಎ ನ ಎಲ್ಲಾ ಕಚೇರಿ-ವಿಭಾಗಗಳಿಗೆ ರವಾನಿಸಿದ ಅರ್ಜಿ ನಮೂನೆ

ಬೆಂಗಳೂರು: ರಾಜಧಾನಿ ಬೆಂಗಳೂರು ಅಭಿವೃದ್ಧಿಯಲ್ಲಿ ನಿರ್ಣಾಯಕ ಪಾತ್ರ ವಹಿಸ್ಬೇಕಿದ್ದ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದಲ್ಲಿ ಜಾತಿಯ ಹೊಲಸು ರಾಜಕಾರಣ ತಲೆ ಎತ್ತಿದೆ.ಜಾತಿ ಎನ್ನೋದೇ ನಗಣ್ಯವಾಗಿದ್ದ,ಕೋಮುಸಾಮರಸ್ಯ ನೆಲೆಯೂರಿದ್ದ ಬಿಡಿಎನಲ್ಲಿ  ಜಾತಿ ಮೇಲೆ ನೌಕರರ ಸಾಮರ್ಥ್ಯವನ್ನು ಅಳೆಯುವ ಹೀನಾತೀಹೀನ ಪ್ರವೃತ್ತಿ ಶುರುವಾಗಿದೆ.ಬಿಡಿಎ ಎನ್ನುವ ಕುಟುಂಬದ ಮುಖ್ಯಸ್ಥರಾಗಿ ಇದೆಲ್ಲವನ್ನು ತಡೆಯಬೇಕಿದ್ದ ಕಮಿಷನರ್ ಮಹಾದೇವ್ ಅದೇಕೋ ದಿವ್ಯಮೌನ ವಹಿಸಿರುವಂತದ್ದು ಜಾತಿ ರಾಜಕಾರಣಕ್ಕೆ ಅವರೇ ಪರೋಕ್ಷವಾಗಿ ಕುಮ್ಮಕ್ಕು ನೀಡುತ್ತಿದ್ದಾರಾ ಎನ್ನುವ ಶಂಕೆಯನ್ನು ಮತ್ತಷ್ಟು ಬಲಗೊಳಿಸಿದೆ.ಬಿಡಿಎ ಎನ್ನುವ ಶಾಂತಕೊಳದಲ್ಲಿ ಜಾತಿಯ ವಿಷಯ ದೊಡ್ಡ ಅಲ್ಲೋಲಕಲ್ಲೋಲವನ್ನೇ ಸೃಷ್ಟಿಸಿಬಿಟ್ಟಿದೆ.

ಬಿಡಿಎನಲ್ಲಿ ಇಷ್ಟ್ ವರ್ಷ ಅಕ್ರಮ-ಹಗರಣ-ಭ್ರಷ್ಟಾಚಾರ ಮಾತ್ರ ತಾಂಡವವಾಡುತ್ತಿತ್ತು.ಆದರೆ ಇದೀಗ ಅದಕ್ಕಿಂತ ಕೀಳು ಹಾಗೂ ಕೆಟ್ಟದಾದ ಎಲ್ಲಕ್ಕಿಂತ ಹೆಚ್ಚು ಅಪಾಯಕಾರಿಯಾದ ವಿಷಯವೊಂದು ತಲೆ ಎತ್ತುತ್ತಿದೆ.ಮೂಲಮಟ್ಟದಲ್ಲಿ ಅದಕ್ಕೆ ಕಡಿವಾಣ ಹಾಕದಿದ್ರೆ ಇಡೀ ಬಿಡಿಎ ಯನ್ನೇ ಆಪೋಷನ ತೆಗೆದುಕೊಳ್ಳುವ ಅಪಾಯವಿದೆ.ಅಕ್ರಮ-ಭ್ರಷ್ಟಾಚಾರವನ್ನು ಸಹಿಸಿಕೊಳ್ಳಬಹುದು ಆದ್ರೆ ಜಾತಿ ಎನ್ನುವ ವಿಷಬೀಜವನ್ನು ಬಿತ್ತುವ ಕೀಳುಮಟ್ಟದ ಪ್ರವೃತ್ತಿಯನ್ನು ಕೆಲ ಅಧಿಕಾರಿಗಳೇ ಶುರುವಿಟ್ಟುಕೊಂಡಿದ್ದಾರೆ.ಇಂತದ್ದೊಂದು ಹೀನ ಮತ್ತು ಕೀಳು ಮಟ್ಟದ ಕೆಲಸಕ್ಕೆ ಕೈ ಹಾಕಿರುವ ಆರೋಪದಲ್ಲಿ ಕೇಳಿಬರುತ್ತಿರುವ ಮೊದಲ ಹೆಸರು ಉಪಕಾರ್ಯದರ್ಶಿ-1 ಹುದ್ದೆಯಲ್ಲಿರುವ ಕೆಎಎಸ್ ಅಧಿಕಾರಿ ಚಿದಾನಂದ್.ಚಿದಾನಂದ್ ಮಾಡಿರುವ ಮಹಾನ್ ಯಡವಟ್ಟಿನ ಕೆಲಸಕ್ಕೆ ಪೂರಕವಾದ ದಾಖಲೆ ಕನ್ನಡ ಫ್ಲಾಶ್ ನ್ಯೂಸ್ ಗೆ ಎಕ್ಸ್ ಕ್ಲ್ಯುಸಿವ್ ಆಗಿ ಲಭ್ಯವಾಗಿದೆ.

ಚಿದಾನಂದ ಎನ್ನುವ ಈ ಮಹಾನುಭಾವ ಮಾಡೋ ಕೆಲಸವನ್ನು ನೀಯತ್ತಾಗಿ-ಪ್ರಾಮಾಣಿಕವಾಗಿ ಮಾಡಿದ್ದರೆ ಇವತ್ತು ಬಿಡಿಎ ಎಲ್ಲಿಗೋ ಹೋಗ್ತಿತ್ತು.ಆದ್ರೆ ಮಾಡೋ ಕೆಲಸ ಪಕ್ಕಕ್ಕಿಟ್ಟು ಕೇವಲ ಜಾತಿ ರಾಜಕಾರಣ ವನ್ನು ಮಾಡ್ತಾ ತನ್ನ ಸಮುದಾಯದ ಅಧಿಕಾರಿ ಸಿಬ್ಬಂದಿಯನ್ನು ಮೇಲಕ್ಕೆತ್ತಿ ಉಳಿದವರನ್ನು ಕೀಳಾಗಿ ಟ್ರೀಟ್ ಮಾಡುವ ಮಹಾಜಾತಿವಾದಿತನ ಪ್ರದರ್ಶಿಸುತ್ತಿದ್ದಾರೆ.ಜಾತಿಯಲ್ಲಿ ತಾನು ವೀರಶೈವ ಎಂದು ಹೇಳಿಕೊಂಡು ತನಗೆ ಮುಖ್ಯಮಂತ್ರಿ ಯಡಿಯೂರಪ್ಪ,ಅವರ ಮಗ ವಿಜಯೇಂದ್ರ ಅವರ ಕೃಪಕಟಾಕ್ಷವಿದೆ ಎಂದು ಬಿಂಬಿಸಿಕೊಂಡು ಮೆರೆಯುತ್ತಿದ್ದಾರೆ. ಜಾತಿಯಲ್ಲಿ ವೀರಶೈವ ಆಗಿರುವ ಮಿಕಷನರ್ ಮಹಾದೇವ್ ತನ್ನ ಜೇಬಿನಲ್ಲಿದ್ದಾರೆ.ಅವರು ತನ್ನ ಬೆರಳ ಸನ್ನೆಯಲ್ಲಿಯೇ ಕೆಲಸ ಮಾಡೋದು,ತಾನು ಹೇಳಿದ ಫೈಲ್ ಗೆ ಸಹಿ ಹಾಕ್ತಾರೆ.ತಾನ್ ಹಾಕಿದ ಗೆರೆಯನ್ನು ದಾಟುವುದಿಲ್ಲ ಎಂದು ಪ್ರೊಜೆಕ್ಟ್ ಮಾಡ್ತಿದ್ದಾರೆನ್ನುವ ಆರೋಪ ವ್ಯಾಪಕವಾಗಿ ಕೇಳಿಬರುತ್ತಿದೆ.

ಚಿದಾನಂದ್ ಅವರ ಜಾತಿವಾದಿತನಕ್ಕೆ ಬ್ರೇಕ್ ಹಾಕದೆ ದಿವ್ಯ ಮೌನ ವಹಿಸಿರುವುದೇಕೆ ಬಿಡಿಎ ಕಮಿಷನರ್ ಮಹಾದೇವ್??
ಚಿದಾನಂದ್ ಅವರ ಜಾತಿವಾದಿತನಕ್ಕೆ ಬ್ರೇಕ್ ಹಾಕದೆ ದಿವ್ಯ ಮೌನ ವಹಿಸಿರುವುದೇಕೆ ಬಿಡಿಎ ಕಮಿಷನರ್ ಮಹಾದೇವ್??

ಈ ಚಿದಾನಂದ್ ಎಷ್ಟು ಪ್ರಖರವಾದ ಜಾತಿವಾದಿ ಎಂದ್ರೆ ಬಿಡಿಎನಲ್ಲಿ ಈವರೆಗೂ ಯಾರೇ ಕಮಿಷನರ್ ಆಗಲಿ..ಡಿಎಸ್ ಗಳಾಗಿ ಕೆಲಸ ಮಾಡಲಿ….ಅಥವಾ ವಿವಿಧ ಹುದ್ದೆಗಳಲ್ಲಿ ಅಧಿಕಾರಿಗಳಾಗಿ ಬಂದೋಗಲಿ ಯಾರೊಬ್ಬರೂ ಅಧಿಕಾರಿ ಸಿಬ್ಬಂದಿಯ ಜಾತಿಯನ್ನು ಕೇಳಿರಲೇ ಇಲ್ಲ..ಅದು ಕಾನೂನುಬಾಹೀರವೂ ಕೂಡ.ಯಾವುದೇ ಕಚೇರಿಯಲ್ಲಿ ಯಾರೇ ಕೆಲಸ ಮಾಡಲಿ,ಅವರ ಜಾತಿಯನ್ನು ಕೇಳುವ ಅಧಿಕಾರ ಹಾಗೂ ಅವಕಾಶ ಎರಡೂ ಮೇಲಾಧಿಕಾರಿಗಳಿಗೆ ಇರೋದಿಲ್ಲ.ಹಾಗೆಲ್ಲಾ ಕೇಳಬಾರದೆನ್ನುತ್ತೆ ಸರ್ಕಾರಿ ನೇಮಕಾತಿ ನಿಯಾಮವಳಿ.ಆದ್ರೆ ಈ ಮಹಾನ್ ಜಾತಿವಾದಿ ಚಿದಾನಂದ್ ಬಿಡಿಎ ನಲ್ಲಿರುವ ಎಲ್ಲಾ ಶಾಖೆಗಳ ಕಚೇರಿಗಳಿಗೂ ಒಂದು ಸುತ್ತೋಲೆಯನ್ನು ಹೊರಡಿಸಿದ್ದಾನೆ.ಆ ಸುತ್ತೋಲೆಯಲ್ಲಿ ಜಾತಿ ಕಾಲಂನ್ನು ಹಾಕಿ ಅದನ್ನು ಕಡ್ಡಾಯವಾಗಿ ಫಿಲ್ ಮಾಡುವಂತೆ  ಆದೇಶಿಸಿದ್ದಾರಂತೆ.ಬಿಡಿಎ ನ ಇತಿಹಾಸದಲ್ಲಿ ಈವರೆಗೂ ಯಾವೊಬ್ಬ ಅಧಿಕಾರಿಯೂ ನೌಕರ ಸಿಬ್ಬಂದಿಯ ಜಾತಿಯನ್ನು ಕೇಳುವ ಅಥವಾ ಪ್ರಶ್ನಿಸುವ ಧೈರ್ಯವನ್ನು ತೋರಿರಲಿಲ್ಲ.ಆದ್ರೆ ಚಿದಾನಂದ್ ಆ ಹುಂಭತನವನ್ನು ಪ್ರದರ್ಶಿಸಿ ತಾನೆಷ್ಟು ಪ್ರಖರ ಜಾತಿವಾದಿ ಎನ್ನುವುದನ್ನು ತನ್ನ ಹೀನಾತೀಹೀನ ಮನಸ್ತಿತಿಯಿಂದ್ಲೇ ಪ್ರೂವ್ ಮಾಡಿದ್ದಾರೆ.

ಚಿದಾನಂದ್ ಬಾಯಲ್ಲಿ ಮಿಸ್ಯೂಸ್ ಆಗ್ತಿದೆ ಮುಖ್ಯಮಂತ್ರಿಗಳ ಹೆಸರು!
ಚಿದಾನಂದ್ ಬಾಯಲ್ಲಿ ಮಿಸ್ಯೂಸ್ ಆಗ್ತಿದೆ ಮುಖ್ಯಮಂತ್ರಿಗಳ ಹೆಸರು!
ವಿಜಯೇಂದ್ರ ತನ್ನ ಬೆನ್ನಿಗಿದ್ದಾರೆಂದೇ ಲಂಗುಲಗಾಮಿಲ್ಲದೆ ಅಂದಾದರ್ಬಾರ್ ನಡೆಸುತ್ತಿದ್ದಾರಾ ಚಿದಾನಂದ್
ಚಿದಾನಂದ್ ಬೆನ್ನಿಗೆ ವಿಜಯೇಂದ್ರ ಇರೋದು ಸತ್ಯನಾ?!

ಬಿಡಿಎನ ಶಾಖೆ ಹಾಗೂ ವಿವಿಧ ವಿಭಾಗಗಳಲ್ಲಿ ಕೆಲಸ ಮಾಡುವ ಅಧಿಕಾರಿ ಹಾಗೂ ನೌಕರ ಸಿಬ್ಬಂದಿಯ ವಿವರವನ್ನು ಕೇಳುವ ಅಧಿಕಾರ ಚಿದಾನಂದ್ ಗೆ ಇದೇ ಎಂದು ಇಟ್ಟುಕೊಳ್ಳೋಣ..ಅದು ಅವರ ಕರ್ತವ್ಯದ ಭಾಗವೂ ಆಗಿರ್ಬೋದು ಒಪ್ಪಿಕೊಳ್ಳೋಣ.ಆದ್ರೆ ಜಾತಿ ಕೇಳಬೇಕೆನ್ನುವುದು ಎಲ್ಲಾದ್ರೂ ಉಲ್ಲೇಖವಾಗಿದೆಯೇ?ಏಕೆಂದ್ರೆ ಕೆಲಸಕ್ಕೆ ಸೇರುವ ಸಂದರ್ಭದಲ್ಲಿಯೇ ಇದೆಲ್ಲವನ್ನು ವೆರಿಫಿಕೇಷನ್ ಮಾಡಿಯೇ ಪ್ರತಿಯೊಬ್ಬರಿಗೂ ಕೆಲಸ ನೀಡಲಾಗಿರುತ್ತೆ.ಇಂತದ್ದೊಂದು ಸಣ್ಣ ಕಾಮನ್ ಸೆನ್ಸೂ ಕೆಎಎಸ್ ಓದಿರುವ ಚಿದಾನಂದ್ ಗೆ ಇಲ್ಲವಾಯ್ತಾ?ಜಾತಿ ಕೇಳುವ ಮೂಲಕ ಇಡೀ ಬಿಡಿಎ ನಲ್ಲಿ ಕೋಲಾಹಲವನ್ನು ಎಬ್ಬಿಸಿರುವ ಚಿದಾನಂದ್ ಅವ್ರನ್ನು ಅವರ ಯಡವಟ್ಟಿಗೆ ಕೆಲಸದಿಂದ್ಲೇ ಅಮಾನತುಗೊಳಿಸ್ಬೇಕು.ಇಂಥಾ ಕೆಟ್ಟ ಜಾತಿವಾದಿ ಅಧಿಕಾರಿಯಿಂದ ಬಿಡಿಎನಲ್ಲಿರುವ ಕೋಮುಸಾಮರಸ್ಯ ಕದಡಿ ಹೋಗುತ್ತೆ.ಜಾತಿಯಾಧಾರದ ಮೇಲೆ ನೌಕರರನ್ನು ಒಡೆದಾಳುವ ಕೆಟ್ಟ ವ್ಯವಸ್ಥೆ ತಾಂಡವವಾಡಲು ಶುರುವಾಗುತ್ತೆ.ಇದಕ್ಕೆ ಅವಕಾಶವನ್ನೇ ನೀಡಬಾರದು ಎನ್ನುತ್ತಾರೆ ಸಾಮಾಜಿಕ ಕಾರ್ಯಕರ್ತ ಜೋಸೆಫ್ ಸೆರಾವೋ.

ಉಪಕಾರ್ಯದರ್ಶಿ-1 ಎನ್ನುವುದು ಎಷ್ಟು ದೊಡ್ಡ ಮಟ್ಟದ ಜವಾಬ್ದಾರಿ ಎನ್ನುವುದರ ಅರಿವಿಲ್ಲದೆ ಚಿದಾನಂದ್ ತನಗೆ ಬೇಕಾದವ್ರ ಫೈಲ್ ಗಳನ್ನು ಕ್ಲಿಯರ್ ಮಾಡ್ತಾ ಕಮಿಷನರ್ ಮಹಾದೇವ್ ಅವರ ಕಾರ್ಯವ್ಯಾಪ್ತಿ ಯಲ್ಲಿ ತಲೆ ಹಾಕುತ್ತಾ ಅವರ ಗಮನವನ್ನು ಒಲ್ಲದ ವಿಷಯಗಳತ್ತ ಡೈವರ್ಟ್ ಮಾಡುವುದರಲ್ಲೇ ನಿರತವಾಗಿದ್ದಾರೆ.ಕಮಿಷನರ್ ಮಹಾದೇವ್ ಅವರ ತಲೆ ಹಾಗೂ ಮನಸಲ್ಲಿ ಜಾತಿಯ ವಿಷಬೀಜವನ್ನು ಬಿತ್ತಿ ತನ್ನ ತಾಳಕ್ಕೆ ತಕ್ಕಂತೆ ಅವರನ್ನು ಕುಣಿಯುವಂತೆ ಮಾಡಿದ್ದಾರೆನ್ನುವುದು ಇಡೀ ಬಿಡಿಎ ಕ್ಯಾಂಪಸ್ ನಲ್ಲಿ ಕೇಳಿಬರುತ್ತಿರುವ ವಿಷಯ.ಇದು ಸತ್ಯವೇ ಆಗಿದ್ದರೆ ಇದಕ್ಕಿಂತ ದೊಡ್ಡ ದುರಂತ ಮತ್ತೊಂದಿಲ್ಲ.ಕಮಿಷನರ್ ಮಹಾದೇವ್ ಅವರು ಚಿದಾನಂದ್ ಅವರ ತಾಳಕ್ಕೆ ತಕ್ಕಂತೆ-ಕಣ್ಸನ್ನೆ-ಬೆರಳುಸನ್ನೆಯಲ್ಲಿ ಕೆಲಸ ಮಾಡುತ್ತಿದ್ದಾರೆನ್ನುವುದೇ ನಿಜವಾಗಿದ್ದರೆ ಇದು ಅತ್ಯಂತ ದುರಾದೃಷ್ಟಕರ ಸಂಗತಿ.

ಬಿಡಿಎ ನಲ್ಲಿ ಜಾತಿ ಕಾಲಂನ್ನು ಕಡ್ಡಾಯವಾಗಿ ತುಂಬುವಂತೆ ಎಲ್ಲಾ ವಿಭಾಗಗಳಿಗೂ ಅರ್ಜಿಯನ್ನು ರವಾನಿಸಿರುವ ಚಿದಾನಂದ್ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಜರುಗಿಸಬೇಕೆನ್ನುವ ಮನವಿ-ಒತ್ತಡ ಎಲ್ಲೆಡೆಯಿಂದಲೂ ಕೇಳಿಬರುತ್ತಿದೆ.ಕಮಿಷನರ್ ಮಹಾದೇವ್ ಜಾತಿಗೆ ಜೋತುಬೀಳದೆ ಚಿದಾನಂದ್ ವಿರುದ್ಧ ತುರ್ತಾಗಿ ಹಾಗೂ ನಿರ್ದಾಕ್ಷಿಣ್ಯವಾಗಿ ಕ್ರಮ ಕೈಗೊಳ್ಳಬೇಕಿದೆ.ಅದನ್ನು ಬಿಟ್ಟು ಚಿದಾನಂದ್ ತನ್ನ ಜಾತಿಯವನು ಎನ್ನುವ ಸಲುಗೆಯಿಂದ ರಕ್ಷಿಸುವ ಕೆಲಸಕ್ಕೆ ಕೈ ಹಾಕಿದ್ರೆ ಕೇವಲ ಬಿಡಿಎ ವ್ಯವಸ್ಥೆ ಮಾತ್ರ ಹಾಳಾಗೊಲ್ಲ,ಕಮಿಷನರ್ ಕೂಡ ಒಬ್ಬ ಮಹಾನ್ ಜಾತಿವಾದಿ ಎನ್ನುವ ಕಳಂಕ ಮೆತ್ತಿಕೊಳ್ಳುತ್ತೆ.ಕಮಿಷನರ್ ಜಾಣ ನಡೆ ಅನುಸರಿಸುತ್ತಾರೋ..ಅಥವಾ ಚಿದಾನಂದ್ ಅವ್ರ ರಕ್ಷಣೆಗೆ ನಿಲ್ಲುತ್ತಾರೋ ಅವರ ವಿವೇಚನೆಗೆ ಬಿಟ್ಟಿದ್ದಷ್ಟೇ.. 

Spread the love
Leave A Reply

Your email address will not be published.

Flash News