ವರ್ಷದ ಹಿಂದೆ ಆತ್ಮಹತ್ಯೆ ಮಾಡಿಕೊಂಡ ಮಗಳ ಸಾವಿನ ಪ್ರತೀಕಾರಕ್ಕೆ ಪ್ರಿಯಕರನ ಕಗ್ಗೊಲೆ-ಕಗ್ಗೊಲೆಗೆ ಪ್ರತಿಯಾಗಿ ಹುಡುಗಿ ಮನೆಗೆ ಬೆಂಕಿ ಇಟ್ಟ ಪ್ರಿಯಕರನ ಕುಟುಂಬ..

0

ಚಿಕ್ಕಬಳ್ಳಾಪುರ :ಪ್ರೀತಿಯ ಕುಲುಮೆಯಲ್ಲಿ ಬೆಂದು ಸಾವಿನ ಮನೆ ಸೇರಿದ ಪ್ರೇಮಿಗಳಿಬ್ಬರ ಕುಟುಂಬದ ನಡುವೆ ಹೊತ್ತಿಕೊಂಡ ಪ್ರತೀಕಾರದ ಜ್ವಾಲೆ ಮನೆ ಸುಟ್ಟ ದಾರುಣ ಘಟನೆ ಇದು.ಅಂದ್ಹಾಗೆ ಇದು ಘಟನೆ ನಡೆದದ್ದು ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ.

ಜಿಲ್ಲೆಯ ಮದ್ದಲಕಾನದಲ್ಲಿ ವಾಸವಾಗಿದ್ದ ಆ ಎರಡು ಕುಟುಂಬಗಳ ಕುಡಿಗಳಿಬ್ಬರ ನಡುವೆ ಪ್ರೇಮಾಂಕುರವಾಗಿತ್ತು.ಹರೀಶ್ ಹಾಗೂ ಶಾರವಿ ಪರಸ್ಪರ ಪ್ರೀತಿಸುತ್ತಿದ್ದರೂ ಆ ವಿಷಯವನ್ನು ಮನೆಯವರಿಗೆ ತಿಳಿಯದಂತೆ ಗೌಪ್ಯಗೊಳಿಸಿದ್ದರು.ಆದ್ರೆ ಅದನ್ನು ಬಹಳ ದಿನ ಬಚ್ಚಿಡೊಕ್ಕೆ ಸಾಧ್ಯವಿಲ್ಲ ಎನ್ನುವ ಮಾತಿನಂತೆ ಕೆಲವೇ ದಿನಗಳಲ್ಲಿ ಅದು ಸಾರ್ವಜನಿಕವಾಗಿ ಎಲ್ಲರಿಗೂ ಗೊತ್ತಾಗುತ್ತೆ.ಈ ವಿಷಯ ಕೇಳುತ್ತಿದ್ದಂತೆ ಕೆಂಡಾಮಂಡಲಗೊಂಡ ಕುಟುಂಬಗಳು ಪರಸ್ಪರ ಕುದಿಯಲಾರಂಭಿಸುತ್ವೆ.

ಮನೆಯವ್ರ ವಿರೋಧದ ನಡುವೆಯೂ ಪ್ರೀತಿಸಲು ಶುರುವಿಟ್ಟುಕೊಂಡ ಪ್ರೇಮಿಗಳು ಕದ್ದುಮುಚ್ಚಿ ಭೇಟಿಯಾಗಲಾರಂಭಿಸಿದ್ರು.ಅದು ಗೊತ್ತಾಗಿ ವಿರೋಧ ವ್ಯಕ್ತವಾಗಲಾರಂಭಿಸಿದ್ರಿಂದ ಬೇಸತ್ತ ಶಾರವಿ ತನ್ನ ಪ್ರಿಯಕರನಿಗು ಮಾಹಿತಿ ಕೊಡದೆ ಮನೆಯಲ್ಲೇ ಸೂಸೈಡ್ ಗೆ ಶರಣಾಗುತ್ತಾಳೆ..

ಮಗಳನ್ನು ಕಳಕೊಂಡ ಹುಡುಗಿ ಮನೆಯವ್ರು ಹರೀಶ್ ವಿರುದ್ದ ಕತ್ತಿ ಮಸೆಯಲು ಶುರುಮಾಡ್ತಾರೆ.ಆತನನ್ನು ಮುಗಿಸೊಕ್ಕೆ ಪ್ಲ್ಯಾನ್ ಮಾಡಿ ಮುಹೂರ್ತಕ್ಕಾಗಿ ಕಾಯುತ್ತಿರುತ್ತಾರೆ.ಆದ್ರೆ ಮದ್ದಲಕಾನವನ್ನು ಬಿಟ್ಟು ಬೆಂಗಳೂರು ಸೆಟ್ಲ್ ಆದ ಹರೀಶ್ ಹಳ್ಳಿಗೆ ಬರೋದನ್ನೇ ನಿಲ್ಲಿಸಿಬಿಡ್ತಾನೆ.ಆತನನ್ನು ಕೊಲ್ಲೊಕ್ಕೆ ಕಾಯುತ್ತಿದ್ದ ಹುಡುಗಿ ಮನೆಯವರಿಗೆ ಇದರಿಂದ ತೀವ್ರ ಹಿನ್ನಡೆ ಉಂಟಾಗುತ್ತದೆ.ಆದರೂ ದ್ವೇಷದ ಕುಲುಮೆಯಲ್ಲಿ ಬೇಯುತ್ತಲೇ ಇದ್ದ ಹುಡುಗಿ ಮನೆವರಿಗೆ ನಿನ್ನೆ ಹರೀಶ್ ಊರಿಗೆ ಬರುತ್ತಿರುವ ಸುದ್ದಿ ಗೊತ್ತಾಗುತ್ತೆ.

ಗೂಳೂರಿನ ಮುಖ್ಯರಸ್ತೆಯಲ್ಲಿ ಬರುತ್ತಿದ್ದಾನೆನ್ನುವ ಮಾಹಿತಿಯನ್ನು ಪಕ್ಕಾ ಮಾಡಿಕೊಂಡ ಶಾರವಿ ಕುಟುಂಬಸ್ಥರು ಪಾನಮತ್ತರಾಗಿ ಕಾಯುತ್ತಿದ್ದರು.ಆತ ಬರುತ್ತಿದ್ದಂತೆ ಆತನ ಮೇಲೆರಗಿ ಚಾಕುವಿನಿಂದ ಇರಿದು ಕೊಲೆ ಮಾಡುತ್ತಾರೆ.ಈ ವಿಷಯ ಕೆಲವೇ ಕ್ಷಣಗಳಲ್ಲಿ ಕಾಡ್ಗಿಚ್ಚಿನಂತೆ ಹಬ್ಬುತ್ತೆ.ಪ್ರತೀಕಾರ ತೀರಿಸಿಕೊಳ್ಳಲು ಕಾಯುತ್ತಿದ್ದ ಹುಡುಗನ ಮನೆಯವ್ರು ಇಂದು ಶಾರವಿ ಮನೆಗೆ ಹಾಡುಹಗಲೇ   ನುಗ್ಗಿ ಪೆಟ್ರೋಲ್ ಸುರಿದು ಬೆಂಕಿ ಹಚ್ಚುತ್ತಾರೆ. ತಕ್ಷಣಕ್ಕೆ ಸ್ಥಳಕ್ಕೆ ಬಂದ ಪೊಲೀಸರು ಹಾಗೂ ಅಗ್ನಿಶಾಮಕ ಸಿಬ್ಬಂದಿ ಬೆಂಕಿ ನಂದಿಸಲು ತೊಡಗಿದ್ದಾರೆ.

ಪ್ರಿಯತಮೆಯ  ಆತ್ಮಹತ್ಯೆ ಹಾಗೂ ಪ್ರಿಯಕರನ ಕೊಲೆ ಚಿಕ್ಕಾಬಳ್ಳಾಪುರದಲ್ಲಿ ದ್ವೇಷ-ಪ್ರತೀಕಾರ-ಹಿಂಸೆಗೆ ಎಡೆ ಮಾಡಿಕೊಟ್ಟಿದ್ದು ವಿಪರ್ಯಾಸ.ಹೆಚ್ಚಿನ ದುರಂತ ಸಂಭವಿಸದಂತೆ ಪ್ರಿಯಕರ ಹಾಗೂ ಪ್ರಿಯತಮೆ ಮನೆಗಳಿಗೆ ಪೊಲೀಸ್ ಸರ್ಪಗಾವಲು ಹಾಕಲಾಗಿದೆ.ಅದೇನೇ ಆಗಲಿ ಎರಡು ಕುಟುಂಬಗಳ ದ್ವೇಷಕ್ಕೆ ಬಲಿಯಾದ ಪ್ರೇಮಿಗಳಿಬ್ಬರ ಧಾರುಣ ಅಂತ್ಯದ ಹಿನ್ನಲೆಯಲ್ಲಿ ಸಂಭವಿಸಿದ ಈ ಘಟನೆಯಿಂದ ಮದ್ದಲಕಾನನದ ಸ್ತಿತಿ ಬೂದಿ ಮುಚ್ಚಿದ ಕೆಂಡದಂತಿದೆ. 

Spread the love
Leave A Reply

Your email address will not be published.

Flash News