ಪ್ಲಾಸ್ಮಾದಾನಕ್ಕೆ ರಾಜಧಾನಿ ಬೆಂಗಳೂರಲ್ಲಿ ಬೊಂಬಾಟ್ ರೆಸ್ಪಾನ್ಸ್-ಪ್ಲಾಸ್ಮಾದಾನಕ್ಕೆ ಅಡ್ವಾನ್ಸ್ ಬುಕ್ಕಿಂಗ್ ಸ್ಟಾರ್ಟ್..

0
ಪ್ಲಾಸ್ಮಾ ಥೆರಪಿಗೆ ಅತ್ಯುತ್ತಮ ರೆಸ್ಪಾನ್ಸ್ ದೊರೆಯುತ್ತಿದೆ-ಈಗಾಗಲೇ 150 ಕೊರೊನಾ ಸೋಂಕಿನಿಂದ ಚೇತರಿಸಿಕೊಂಡವರು ನೊಂದಣಿ ಮಾಡಿಸಿದ್ದಾರೆ.
ಪ್ಲಾಸ್ಮಾ ಥೆರಪಿಗೆ ಅತ್ಯುತ್ತಮ ರೆಸ್ಪಾನ್ಸ್ ದೊರೆಯುತ್ತಿದೆ-ಈಗಾಗಲೇ 150 ಕೊರೊನಾ ಸೋಂಕಿನಿಂದ ಚೇತರಿಸಿಕೊಂಡವರು ನೊಂದಣಿ ಮಾಡಿಸಿದ್ದಾರೆ.

ಬೆಂಗಳೂರು:ಕೊರೊನಾ ಸೋಂಕಿಗೆ ರಾಮಬಾಣ ಎಂದು ಪ್ಲಾಸ್ಮಾಥೆರಪಿ ಈಗಾಗಲೇ ಪ್ರೂವ್ ಮಾಡಿದೆ.ನೆರೆಯ ಕೇರಳ..ಮಹಾರಾಷ್ಟ್ರದಲ್ಲಿ ಈಗಾಗ್ಲೇ ಅತ್ಯದ್ಭುತ ರಿಸಲ್ಟ್ ಕೂಡ ಇದು ನೀಡಿದೆ.ಇದನ್ನು ನಮ್ಮಲ್ಲೇಕೆ ಇಂಪ್ಲಿಮೆಂಟ್ ಮಾಡಬಾರದೆಂದು ಆಲೋಚಿಸಿ ರಾಜ್ಯ ಸರ್ಕಾರ ಜುಲೈ ಆರಂಭದಲ್ಲಿ ಇದರ ಬ್ಯಾಂಕ್ ಸ್ಥಾಪಿಸಿತ್ತು.ಆರಂಭದಲ್ಲಿ ನೀರಸ ಪ್ರತಿಕ್ರಿಯೆ ವ್ಯಕ್ತವಾಗಿತ್ತಾದ್ರೂ ದಿಢೀರ್ ನೇ ಪ್ಲಾಸ್ಮಾ ದಾನಕ್ಕೆ ಎಲ್ಲಿಲ್ಲದ ಬುಕ್ಕಿಂಗ್ ಸ್ಟಾರ್ಟ್ ಆಗಿದೆ.

ರಾಜಧಾನಿ ಬೆಂಗಳೂರಲ್ಲಿ ಕೊರೊನಾ ಸೋಂಕಿನ ಪ್ರಮಾಣ ದಿನೇ ದಿನೇ ಹೆಚ್ಚುತ್ತಿರುವ ಕಳವಳಕಾರಿ ಸಂಗತಿ ನಡುವೆ ಪ್ಲಾಸ್ಲಾದಾನ ಎನ್ನುವ ಆಶಾಕಿರಣ ಮೂಡಿ ಬರಲಾರಂಭಿಸಿದೆ ಪ್ಲಾಸ್ಮಾ ದಾನಕ್ಕೆ ಸಾಕಷ್ಟು ರೀತಿಯ ಉತ್ತಮ ಪ್ರತಿಕ್ರಿಯೆ ಲಭ್ಯವಾಗುತ್ತಿದ್ದು ಕೊರೋನಾ ಸೋಂಕಿನಿಂದ ಗುಣಮುಖರಾದಂತ ಸಾಕಷ್ಟು ಜನ ತಮ್ಮ ರಕ್ತ ಕಣದಲ್ಲಿರುವ ಪ್ಲಾಸ್ಮಾವನ್ನು ದಾನ ಮಾಡಲು ಮುಂದೆ ಬಂದಿದ್ದಾರೆ ಎಂದು ಬಿಬಿಎಂಪಿ ತಿಳಿಸಿದೆ.

ಈಗಾಗಲೇ ರಾಜಧಾನಿಯ ಕೊರೊನಾ ಸೋಂಕಿನಿಂದ ಚೇತರಿಸಿಕೊಂಡವರು  ಪ್ಲಾಸ್ಮಾದಾನ ಮಾಡಲು   ಉತ್ಸುಕತೆ ಪ್ರದರ್ಶಿಸಿದ್ದಾರೆ.ಅದಕ್ಕೂ ಒಂದು ಹೆಜ್ಜೆ ಮುಂದ್ಹೋಗಿ ಪ್ಲಾಸ್ಮಾ ದಾನವನ್ನು ಮಾಡಿದ್ದಾರಂತೆ.ಕಳೆದ ಆರು ದಿನದಲ್ಲಿ ಐವತ್ತು ಕ್ಕೂ ಹೆಚ್ಚು ಮಂದಿ ತಮ್ಮ ಜೀವ ದ್ರವ್ಯವಾದ ರಕ್ತದಲ್ಲಿರುವ ಪ್ಲಾಸ್ಮಾವನ್ನು ದಾನ ಮಾಡಿದ್ದರೆ,150 ಕ್ಕೂ ಹೆಚ್ಚು ಜನರು ಪ್ಲಾಸ್ಮಾ ದಾನ ಮಾಡಲು ತಮ್ಮ ಹೆಸರುಗಳನ್ನು ನೋಂದಣಿ ಮಾಡಿಸಿದ್ದಾರಂತೆ.

ಈಗಾಗಲೇ 50  ಮಂದಿ ಪ್ಲಾಸ್ಮಾ ದಾನವನ್ನು ಮಾಡಿರುವ ಜೊತೆಗೆ ಇನ್ನೂ  ಸೋಂಕಿನಿಂದ ಗುಣಮುಖರಾಗಿರುವ 150  ಮಂದಿ  ಪ್ಲಾಸ್ಮಾ ತಾಣಕ್ಕೆ ತಮ್ಮ ಹೆಸರನ್ನು ನೋಂದಣಿ ಮಾಡಿಸಿಕೊಂಡಿದ್ದಾರೆ. ಇದಕ್ಕೆ ಸಂಬಂಧಿಸಿದಂತೆ ಎಲ್ಲರಿಗೂ ಪ್ಲಾಸ್ಮಾ ದಾನವನ್ನು ಮಾಡಲು ನಿರ್ದಿಷ್ಟ ಸಮಯವನ್ನು ನಿಗದಿಪಡಿಸಲಾಗಿದ್ದು ಆ ಸಮಯಕ್ಕೆ ಬಂದು ದಾನ ಮಾಡುವಂತೆ ಸೂಚಿಸಲಾಗಿದೆ ಎನ್ನುತ್ತಾರೆ ಇದರ ಉಸ್ತುವಾರಿ ವಹಿಸಿಕೊಂಡಿರುವ ಡಾ.ವಿಶಾಲ ರಾವ್.

ಪ್ಲಾಸ್ಮಾ ಬ್ಯಾಂಕ್ ನ ಉಸ್ತುವಾರಿ ವಹಿಸಿಕೊಂಡಿರುವ ಖ್ಯಾತ ಕ್ಯಾನ್ಸರ್ ಡಾ.ವಿಶಾಲರಾವ್
ಪ್ಲಾಸ್ಮಾ ಬ್ಯಾಂಕ್ ನ ಉಸ್ತುವಾರಿ ವಹಿಸಿಕೊಂಡಿರುವ ಖ್ಯಾತ ಕ್ಯಾನ್ಸರ್ ಡಾ.ವಿಶಾಲರಾವ್

ಎಲ್ಲರಿಗೂ ತಿಳಿದಿರುವಂತೆ  ಜುಲೈ ಇಪ್ಪತ್ತೊಂದರಂದು ಪ್ಲಾಸ್ಮಾ ಬ್ಯಾಂಕ್ ಗೆ ಅಧಿಕೃತವಾಗಿ ಚಾಲನೆ ನೀಡಲಾಗಿತ್ತು. ಈ ಪ್ಲಾಸ್ಮಾ ಬ್ಯಾಂಕ್ ಕಾರ್ಪೊರೇಶನ್ ಸರ್ಕಲ್ ಬಳಿಯಿರುವ ಎಚ್ ಸಿಜಿ ಕ್ಯಾನ್ಸರ್ ಆಸ್ಪತ್ರೆಯಲ್ಲಿ ಕಾರ್ಯ ನಿರ್ವಹಿಸುತ್ತಿದೆ. ಈ ಒಂದು ಬ್ಯಾಂಕ್ ನಲ್ಲಿ ಒಂದು ಸಾವಿರ ಯೂನಿಟ್ನಷ್ಟು ಪ್ಲಾಸ್ಮಾ ಶೇಖರಣೆ ಮಾಡುವ ಸಾಮರ್ಥ್ಯವಿದೆ ಎನ್ನುತ್ತಾರೆ ಖ್ಯಾತ ಕ್ಯಾನ್ಸರ್ ತಜ್ಞ ಡಾ.ವಿಶಾಲರಾವ್.

ಈ ಪ್ಲಾಸ್ಮ ಬ್ಯಾಂಕ್ ನ ಉಸ್ತುವಾರಿಗೆ ಸರ್ಕಾರ ಖ್ಯಾತ ಕ್ಯಾನ್ಸರ್ ತಜ್ಞ ಡಾ ವಿಶಾಲ್ ರಾವ್ ರವರನ್ನು ನೇಮಿಸಿದ್ದು ಅವರು ಒಂದು ಬ್ಯಾಂಕ್ ನ ಕಾರ್ಯನಿರ್ವಹಣೆಯನ್ನು ನೋಡಿಕೊಳ್ಳುತ್ತಿದ್ದಾರೆ. ಅವರ ಪ್ರಕಾರವೇ ಕೊರೊನಾ ಸೋಂಕಿನಿಂದ ಗುಣಮುಖ ಆದವರು ಈಗಾಗಲೇ ಪ್ಲಾಸ್ಮಾ ದಾನಕ್ಕೆ ಮುಂದೆ ಬರುತ್ತಿದ್ದಾರೆ. ಈ ಹಿಂದೆ ಆ ರೀತಿಯಾದಂತಹ ಜಾಗೃತಿ ಸಾಕಷ್ಟು ಸೋಂಕಿತರಲ್ಲಿ ಇರಲಿಲ್ಲ. ಆದರೆ ಸರ್ಕಾರ ಬಿಬಿಎಂಪಿ ಮತ್ತು ಆರೋಗ್ಯ ಇಲಾಖೆ ಸಂಯುಕ್ತವಾಗಿ ಮೂಡಿಸಿದ ಜಾಗ್ರತಿಯ ಹಿನ್ನೆಲೆಯಲ್ಲಿ ಈಗ ಪ್ಲಾಸ್ಮ ದಾನಕ್ಕೆ ಸಾಕಷ್ಟು ದಾನಿಗಳು ಮುಂದೆ ಬರುತ್ತಿದ್ದಾರೆ. ಇನ್ನಷ್ಟು ಜನರು ಮುಂದೆ ಬಂದರೆ ಕೊರೊನಾ ಸೋಂಕನ್ನು ಮೂಲೋತ್ಪಾಟನೆ ಮಾಡಲು ಸಹಕಾರಿಯಾಗುತ್ತದೆ ಎನ್ನುತ್ತಾರೆ ಡಾ ವಿಶಾಲ್ ರಾವ್.

ಒಂದು ಸಾವಿರ ಯೂನಿಟ್ ನಷ್ಟು ಪ್ಲಾಸ್ಮಾ ಶೇಖರಣೆ ಮಾಡುವ ಸಾಮರ್ಥ್ಯವನ್ನು ಹೊಂದಿರುವ ಎಚ್  ಸಿಜಿ ಆಸ್ಪತ್ರೆಯ ಘಟಕಕ್ಕೆ ಬರುತ್ತಿರುವ ಅತ್ಯದ್ಭುತ ರೆಸ್ಪಾನ್ಸ್ ನಿಂದ ಉತ್ತೇಜಿತರಾಗಿರುವ ಡಾಕ್ಟರ್ ವಿಶಾಲ್ ರಾವ್ ಅಗತ್ಯಬಿದ್ದರೆ ಪ್ಲಾಸ್ಮಾ ಶೇಖರಣೆ  ಸಾಮರ್ಥ್ಯವನ್ನು ಮತ್ತಷ್ಟು ಹೆಚ್ಚಿಸುವ ಸಾಧ್ಯತೆಗಳಿದೆ ಎನ್ನುತ್ತಾರೆ.ಈ ಬಗ್ಗೆ ಸರ್ಕಾರದ ಗಮನವನ್ನೂ ಸೆಳೆಯಲಾಗುವುದು ಎಂದು “ಜಯಕಿರಣ”ಕ್ಕೆ ತಿಳಿಸಿದ್ದಾರೆ

ಪ್ಲಾಸ್ಮಾ ದಾನದ ವಿಷಯದಲ್ಲಿ ಕೇಳಿಬರುತ್ತಿರುವ ಉತ್ತಮವಾದ ಪ್ರತಿಕ್ರಿಯೆಗಳು ಹಾಗೂ ವ್ಯಕ್ತವಾಗುತ್ತಿರುವ ಅತ್ಯದ್ಭುತ ಅಭಿಪ್ರಾಯಗಳನ್ನು ಕ್ರೋಡೀಕರಿಸಿ ಡಾ.ವಿಶಾಲರಾವ್ ಸಾಕಷ್ಟು ಕೊರೋನಾ ದಿಂದ ಬಿಡುಗಡೆಯಾದವರು ಇದರ ಬಗ್ಗೆ ಉತ್ಸುಕತೆ ತೋರುತ್ತಿದ್ದಾರೆ ಇದು ಉತ್ತಮ ಬೆಳವಣಿಗೆ ಎನ್ನುತ್ತಾರೆ.ಕೊರೊನಾ ಸೋಂಕಿಗೆ ಔಷಧಿ ಸಿಗದಿರುವ ಸಂದರ್ಭದಲ್ಲಿ ಆಶಾಕಿರಣವಾಗಿ ಮೂಡಿಬಂದಿರುವ ಪ್ಲಾಸ್ಮಾ ಥೆರಪಿಗೆ ಬೊಂಬಾಟ್ ರೆಸ್ಪಾನ್ಸ್ ಕೇಳಿಬಂದಿರುವುದು ಉತ್ತಮ ಬೆಳವಣಿಗೆ.

Spread the love
Leave A Reply

Your email address will not be published.

Flash News