ನಾನ್ ಕರೆದ ಸಭೆಗೆ ಬಾರದೆ ಅವಮಾನ ಮಾಡ್ತೀರಾ…..ತಡೀರಿ..ಮುಖ್ಯಮಂತ್ರಿಗೆ ದೂರ್ ಕೊಡ್ತೀನಿ ಅನ್ತಾ ಕಾರನ್ನೇರಿದ ಸಚಿವ

0
ಮಂಡ್ಯದ ಜಿಲ್ಲಾ ಪಂಚಾಯತ್ ಕಚೇರಿಯಲ್ಲಿ ಕರೆಯಲಾಗಿದ್ದ ವೀಡಿಯೋ ಕಾನ್ಫರೆನ್ಸ್ ಗೆ ಮುಂಚೆಯೇ ಬಂದು ನಿಂತಿರುವ ಸಚಿವ ನಾರಾಯಣಗೌಡರ ಕಾರು
ಮಂಡ್ಯದ ಜಿಲ್ಲಾ ಪಂಚಾಯತ್ ಕಚೇರಿಯಲ್ಲಿ ಕರೆಯಲಾಗಿದ್ದ ವೀಡಿಯೋ ಕಾನ್ಫರೆನ್ಸ್ ಗೆ ಮುಂಚೆಯೇ ಬಂದು ನಿಂತಿರುವ ಸಚಿವ ನಾರಾಯಣಗೌಡರ ಕಾರು
ಮಂಡ್ಯ ಜಿಲ್ಲಾ ಉಸ್ತುವಾರಿ ಸಚಿವ ನಾರಾಯಣ ಗೌಡ
ಮಂಡ್ಯ  ಉಸ್ತುವಾರಿ ಸಚಿವ ನಾರಾಯಣ ಗೌಡ

ಮಂಡ್ಯ:ಮಂಡ್ಯದಲ್ಲಿ  ರಾಜಕಾರಣ ಮಾಡಿದವನಿಗೆ ದೆಹಲಿ ರಾಜಕಾರಣ ಮಾಡೋದ್ ಕಷ್ಟವೇನಲ್ಲ..ರಾಜಕೀಯದಲ್ಲಿ ಹೀಗೊಂದು ಮಾತಿದೆ..ಇದಕ್ಕೆ ತಕ್ಕನಾದ ಚಿತ್ರಣ ಮಂಡ್ಯದಲ್ಲಿಯೂ ಇದೇ ಬಿಡಿ..ಇಲ್ಲಿನ ಜನ ಒಂದ್ ನಿರ್ದಾರಕ್ಕೆ ಬಂದ್ ಬಿಟ್ರೆ..ಆ ನಿರ್ದಾರವನ್ನು ಜಪ್ಪಯ್ಯ ಎಂದ್ರೂ ಬದ್ಲಾಯಿಸೊಲ್ಲ..ಇದಕ್ಕೆ ದಂಡಿ ನಿದರ್ಶನ ಕೊಡ್ಬೋದು..ಅದಕ್ಕೆ ಮತ್ತೊಂದು ಉದಾಹರಣೆ ಸೇರ್ಪಡೆಯಾಗಿದೆ.ಅದೇ ಸಚಿವ ನಾರಾಯಣಗೌಡರಿಗೆ ಆದ ಅವಮಾನ.

ಅಧಿಕಾರಕ್ಕಾಗಿ ರಾಜಕೀಯ ನೆಲೆ ಕೊಟ್ಟ ಪಕ್ಷವನ್ನು ತೊರೆದ್ರು ಎನ್ನುವ ಆಪಾದನೆ ಶಾಸಕ ಕಮ್ ಸಚಿವ ನಾರಾಯಣಗೌಡ ಮೇಲಿದೆ.ಈ ಕಾರಣಕ್ಕಾಗೇ ಅವರನ್ನು ಗೆಲ್ಲಿಸಿದ ಹೊರತಾಗ್ಯೂ ದ್ವೇಷಿಸುವ ದೊಡ್ಡ ಪಡೆಯೇ ಕೆ.ಆರ್ ಪೇಟೆ ಹಾಗೂ ಮಂಡ್ಯದಲ್ಲಿದೆ.ಅದರಲ್ಲೂ ಅವರೊಂದಿಗಿದ್ದ ತೆನೆ ಪಕ್ಷದ ಶಾಸಕರಿಗಂತೂ ಗೌಡರ ಮೇಲೆ ಕೆಂಡದಂಥ ಕೋಪ ಹಾಗು ಆಕ್ರೋಶ.ಪಕ್ಷಕ್ಕೆ ಮಾಡಿದ ದ್ರೋಹಕ್ಕೆ ಇಂದು ಪ್ರತೀಕಾರ ತೀರಿಸಿಕೊಂಡ್ರು.ಅದು ಕೂಡ ನಾರಾಯಣಗೌಡ ಕರೆದಿದ್ದ ವೀಡಿಯೋ ಕಾನ್ಫರೆನ್ಸ್ ಗೆ ಗೈರಾಗುವುದರ ಮೂಲಕ.

ಕೊರೊನಾಗೆ ಸಂಬಂಧಿಸಿದಂತೆ ಜಿಲ್ಲೆಯಲ್ಲಿರುವ ಚಿತ್ರಣದ ಬಗ್ಗೆ ಮಾಹಿತಿ ಪಡೆಯಲು ಇಂದು ಜಿಲ್ಲಾ ಪಂಚಾಯತ್ ಕಚೇರಿಯಲ್ಲಿ ವೀಡಿಯೋ ಕಾನ್ಫರೆನ್ಸ್ ಹಮ್ಮಿಕೊಳ್ಳಲಾಗಿತ್ತು.ಜಿಲ್ಲಾ ಉಸ್ತುವಾರಿ ಸಚಿವರಾಗಿ ನಾರಾಯಣಗೌಡ ಇಂದು ನಡೆಸಿದ ವೀಡಿಯೋ ಕಾನ್ಫರೆನ್ಸ್ ನಲ್ಲಿ ಯಾವೊಬ್ಬ ಶಾಸಕನೂ ಹಾಜರಾಗದೆ ಶಾಕ್ ಮೂಡಿಸಿದ್ರು.ಈ ಮುನಿಸಿಗೆ ಕಾರಣ,ಅಧಿಕಾರಕ್ಕಾಗಿ ಜೆಡಿಎಸ್ ತೊರೆದು ಬಿಜೆಪಿ ಸೇರಿದ್ದು.ಇದಕ್ಕೆ ಗೈರಿನ ಮೂಲಕ  ಪ್ರತೀಕಾರ ತೀರಿಸಿಕೊಂಡ್ರು.ಜಿಲ್ಲಾ ಪಂಚಾಯತ್ ಕಚೇರಿಯಲ್ಲಿ ಆಯೋಜನೆಗೊಂಡಿದ್ದ ವೀಡಿಯೋ  ಕಾನ್ಫರೆನ್ಸ್ ನಲ್ಲಿ ಭಾಗವಹಿಸಲು  ಸಚಿವರು ಗಂಟೆಗಟ್ಟಲೇ ಮುಂಚೆ ಬಂದ್ರೂ ಜಿಲ್ಲೆಯ 7  ಶಾಸಕರಿಗಾಗಿ ಕಾಯಬೇಕಾಯ್ತು.ಆದ್ರೆ ನಾರಾಯಣಗೌಡ ಅವರ ಬಗ್ಗೆ ಇದ್ದ ಕೋಪತಾಪಕ್ಕೆ ಯಾವುದೇ ಶಾಸಕರು ಅವರಿಗೆ ಸಾಥ್ ಕೊಡದೆ   ಅವಮಾನಿಸಿದ್ದು ವಿಪರ್ಯಾಸ.

ಅತೃಪ್ತರಾಗಿ ಗೆದ್ದು ಬಿಜೆಪಿಯಿಂದ ಸದ್ಯ ಮಂಡ್ಯದ ಉಸ್ತುವಾರಿ ಸಚಿವರಾಗಿರುವ ನಾರಾಯಣಗೌಡ  ಜಿಲ್ಲಾಪಂಚಾಯತ್ ಕಚೇರಿಯಲ್ಲಿ ಎಲ್ಲಾ ಶಾಸಕರ ನೇತೃತ್ವದಲ್ಲಿ ವೀಡಿಯೋ ಕಾನ್ಫರೆನ್ಸ್ ಕರೆದಿದ್ರು.ಆದ್ರೆ ಕೆಲವು ಅಧಿಕಾರಿಗಳು ಹಾಗೂ ಚುನಾಯಿತ ಪ್ರತಿನಿಧಿಗಳನ್ನು ಬಿಟ್ಟರೆ ಶಾಸಕರ್ಯಾರು ವಿಡಿಯೋ ಕಾನ್ಫರೆನ್ಸ್ ಗೆ ಬರಲೇ ಇಲ್ಲ.ಕರ್ನಾಟಕ ರಾಜ್ಯ ಕೊರೊನಾ ಬಾಧೆಯಿಂದ ನಲುಗುತ್ತಿರುವ ಪರಿಣಾಮ  ಸರಕಾರ ಪ್ರತಿ ಜಿಲ್ಲಾ ಪಂಚಾಯತ್ ಗಳಲ್ಲಿ ಸಚಿವರು ಉಸ್ತುವಾರಿಗಳ ನೇತೃತ್ವದಲ್ಲಿ  ವಿಡಿಯೋ ಕಾನ್ಫರೆನ್ಸ್ ಆಯೋಜಿಸಿದೆ.ಈ ವೀಡಿಯೋ ಕಾನ್ಫರೆನ್ಸ್   ಮುಖಾಂತರ ಆಯಾ ಜಿಲ್ಲೆಗಳ  ಜ್ವಲಂತ ಸಮಸ್ಯೆಗಳಿಗೆ ಹಾಗೂ ಜಿಲ್ಲೆಯ ಸಾಮಾನ್ಯ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಬಹುದಾಗಿದೆ.ಎಲ್ಲಾ ಜಿಲ್ಲೆಗಳಲ್ಲಿ ಇದು ಯಶಸ್ವಿಯಾದ್ರೆ ಮಂಡ್ಯದಲ್ಲಿ ಮಾತ್ರ  ಸಂಪೂರ್ಣ ಫೇಲ್ ಆಯ್ತು.

ನಾರಾಯಣ ಗೌಡ ಹೇಳ್ಕೊಳ್ಳಕ್ಕೆ ರಾಜ್ಯದ ಪ್ರಭಾವಿ ಸಚಿವ. ಅದ್ರೆ ಮಂಡ್ಯ ಜಿಲ್ಲೆಯಲ್ಲಿ ಶಾಸಕರೊಂದಿಗೆ ಅವರಿಗೆ  ಯಾವುದೇ ತಾಳಮೇಳವಿಲ್ಲ.ಇದಕ್ಕೆ ನಾರಾಯಣ ಗೌಡ ಅಧಿಕಾರಕ್ಕಾಗಿ ಜೆಡಿಎಸ್ ತೊರೆದು ಬಿಜೆಪಿ ಸಖ್ಯ ಮಾಡಿ ಮಾತೃಪಕ್ಷಕ್ಕೆ ದ್ರೋಹ ಮಾಡಿದರೆನ್ನುವ ಬೇಸರ.ಹಾಗಾಗಿಯೇ ಬಹುತೇಕ ಜೆಡಿಎಸ್ ಶಾಸಕರೇ ಇರುವ ಜಿಲ್ಲೆಯಲ್ಲಿ ಸಚಿವರ ಯಾವುದೇ ಅಣತಿ-ಆದೇಶಕ್ಕೂ ಬೆಲೆ ಕೊಡ್ತಿಲ್ಲ.ಅವರ ಜತೆ ಯಾವುದೇ ಕೆಲಸಕ್ಕೂ ಕೈ ಜೋಡಿಸುತ್ತಿಲ್ಲ.ಇದಕ್ಕೆ ಇವತ್ತಿನ ಘಟನೆಯೇ ಸಾಕ್ಷಿಯಾಯ್ತು.ವೀಡಿಯೋ ಕಾನ್ಫರೆನ್ಸ್ ನಡೆಸೊಕ್ಕೆ  ಖುದ್ದು ಸಚಿವರೇ ಬಂದ್ ಕೂತ್ರು, ಜಿಲ್ಲಾಧಿಕಾರಿ,ಸಿಇಓ ಮಾತ್ರ ಹಾಜರಿದ್ದರು.ನಾರಾಯಣ ಗೌಡ ಅವರ ಬೆರಳೆಣಿಕೆಯಷ್ಟು ಬೆಂಬಲಿಗರು ಬಿಟ್ಟರೆ ಎಲ್ಲಾ ಏಳು ಶಾಸಕರು ಬೇಕಂತಲೇ ಗೈರಾಗಿದ್ರು.ಅದೇನೇ ಆಗಲಿ ಅಧಿಕಾರಕ್ಕಾಗಿ ಜೆಡಿಎಸ್ ತೊರೆದು ಬಿಜೆಪಿಗೆ ಹಾರಿ ಅಲ್ಲಿ ಸಚಿವರಾಗಿ ಮಂಡ್ಯ ಜಿಲ್ಲೆಯೇ ಬೇಕಂತ ಅದರ ಉಸ್ತುವಾರಿ ತೆಗೆದುಕೊಂಡ ನಾರಾಯಣಗೌಡ ಅವರಿಗೆ   ಅವರ ಜನ್ಮಕ್ಕಾಗುವಷ್ಟಾಗುವ ಅವಮಾನ ಮಾಡಿದ್ದಾರೆ ಸ್ಥಳೀಯ ಶಾಸಕರು.

ರಾಜಕೀಯ ಕಾರಣಗಳು ಏನೇ ಇರಬಹುದು..ಇವತ್ತು ನಡೆದದ್ದು ಕೊರೊನಾ ಸಂಬಂಧಿ ಮುಖ್ಯವಾದ ವೀಡಿಯೋ ಕಾನ್ಫರೆನ್ಸ್..ಇದರಲ್ಲಿ ಪಾಲ್ಗೊಂಡು ಆಯಾ ಕ್ಷೇತ್ರಗಳಲ್ಲಿ ಏನಾಗುತ್ತಿದೆ ಎನ್ನುವುದರ ಬಗ್ಗೆ ಮಾಹಿತಿ ಕೊಡಬೇಕಾಗಿದ್ದುದು ಆಯಾ ಕ್ಷೇತ್ರಗಳ ಶಾಸಕರ ಡ್ಯೂಟಿ.ಆದ್ರೆ ಅದನ್ನು ಮಾಡದೆ ನಿರ್ಲಕ್ಷ್ಯ ವಹಿಸಿದ್ದಷ್ಟೇ ಅಲ್ಲ,ಕ್ಷೇತ್ರದ ಮತದಾರರ ಹಿತಾಸಕ್ತಿಯನ್ನು ಕಡೆಗಣಿಸಿದ್ದರ ಬಗ್ಗೆ ಮುಖ್ಯಮಂತ್ರಿಗಳಿಗೆ ದೂರು ಕೊಡುವುದಾಗಿಯೂ ನಾರಾಯಣಗೌಡ ಹೇಳಿ ಹೊರಟ್ರು.ನಾರಾಯಣಗೌಡ  ಏನ್ ಬೇಕಾದ್ರೂ ಮಾಡಿಕೊಳ್ಳಲಿ ಆದ್ರೆ ಮಾತೃಪಕ್ಷವನ್ನು ಅವಮಾನಿಸಿದ್ದು ಎಷ್ಟು ಸರಿ..ಅವರಿಗೆ ಸರಿಯಾದ ಶಾಸ್ತಿಯನ್ನು ನಮ್ಮ ಶಾಸಕರು ಮಾಡಿದ್ದಾರೆ ಬಿಡಿ ಎಂದು ಜಿಲ್ಲೆಯ ಮತದಾರರು ಮಾತನಾಡಿಕೊಳ್ಳುತ್ತಿದ್ದರು.

Spread the love
Leave A Reply

Your email address will not be published.

Flash News