ಕೊರೊನಾಸುಲಿಗೆಗಿಳಿದಿರುವ ಒಂದೇ ಒಂದು ಧನದಾಹಿ ಖಾಸಗಿ ಆಸ್ಪತ್ರೆ ಮುಚ್ಚಿಸಿದ್ಯಾ ಈ  “ನಿರ್ವೀರ್ಯ” ಸರ್ಕಾರ  

0

ಬೆಂಗಳೂರು:ಕೊರೊನಾ ಸೋಂಕಿಗೆ ತುತ್ತಾದವರನ್ನು ಸುಲಿಗೆ ಮಾಡಿದ್ರೆ ಹುಷಾರ್..ಅಂಥಾ ಆಸ್ಪತ್ರೆಗಳ ಲೈಸೆನ್ಸನ್ನು ರದ್ದು ಮಾಡಬೇಕಾಗ್ತದೆ..ಸೋಂಕಿತರಿಗೆ ಚಿಕಿತ್ಸೆ ನೀಡಲು ನಿರಾಕರಿಸಿದ್ರೆ ಪರಿಣಾಮ ನೆಟ್ಟಗಿರೊಲ್ಲ ಎಂದು ನಮ್ಮ ಸರ್ಕಾರದ ಮಂತ್ರಿ ಮಹೋದಯರು ಬಾಯಿ ಹರಿದುಕೊಂಡಿದ್ದೇ ಹರಿದುಕೊಂಡಿದ್ದು..ಆದ್ರೆ ಇವರ ಯೋಗ್ಯತೆಗೆ ಒಂದೇ ಆಸ್ಪತ್ರೆಯ ಲೈಸೆನ್ಸ್ ರದ್ದು ಮಾಡಿದ್ದಾರಾ…

ಖಂಡಿತಾ ಇಲ್ಲ..ಸರ್ಕಾರದಿಂದ ಅಂಥ ಬೋಲ್ಡ್ ಸ್ಟೆಪ್ ಆಗಿದ್ದೇ ಆಗಿದ್ರೆ ಇವತ್ತಿಗೂ ಖಾಸಗಿ ಆಸ್ಪತ್ರೆಗಳ ಆಟಾಟೋಪ ಮುಂದುವರೆಯುತ್ತಿತ್ತೇ…ಅವರು ಆಡಿದ್ದೇ ಆಟ..ಹೂಡಿದ್ದೇ ಲಗ್ಗೆ ಎನ್ನುವಂಥ ಸ್ಥಿತಿ ನಿರ್ಮಾಣವಾಗ್ತಿತ್ತೇ..ಖಂಡಿತಾ ಇಲ್ಲ..ಖಾಸಗಿ ಆಸ್ಪತ್ರೆಗಳೊಂದಿಗೆ ಪರ್ಸಂಟೇಜ್ ವ್ಯವಹಾರಕ್ಕೆ ಇಳಿದಿರುವ ರಾಜ್ಯ ಸರ್ಕಾರದಿಂದ ಜನ ಆಸ್ಪತ್ರೆಗಳ ಅಂದಾದರ್ಬಾರ್ ನಿಲ್ಲುತ್ತೆಂದುಕೊಂಡ್ರೆ ಅದಕ್ಕಿಂತ ಮೂರ್ಖತನ ಮತ್ತೊಂದಿಲ್ಲ.

ಸರ್ಕಾರ ಏನೇ ತಿಪ್ಪರಲಾಗ ಹಾಕಿದ್ರೂ  ಬೆಂಗಳೂರಿನಲ್ಲಿ ಮಹಾಮಾರಿ ಕರೊನಾಗೆ ಕಂಟ್ರೋಲ್ ಬೀಳ್ತಿಲ್ಲ..ದಿನಕ್ಕೆ ಕವಡೆ ಹಾಕಿ ಕೊರೊನಾ ಸೋಂಕಿತರ ನಂಬರನ್ನು ಘೋಷಣೆ ಮಾಡುವ ಸರ್ಕಾರಕ್ಕೆ ಕರೊನಾ ಕಂಟ್ರೋಲ್ ಬೇಡಕ್ಕೂ ಬೇಡವಾದ ವಿಚಾರವಾಗಿದೆ.ಏಕೆಂದ್ರೆ ಕೊರೊನಾವನ್ನು ಜೀವಂತವಾಗಿಟ್ಟುಕೊಂಡ್ರೆ ತಾನೇ ಸರ್ಕಾರದಲ್ಲಿರುವ ಅದೆಷ್ಟೋ ಲಜ್ಜೆಗೇಡಿ ಸಚಿವರುಗಳ ಜೇಬು ತುಂಬೋದು..ಅವರು ಮಾಲಾಮಾಲ್ ಆಗಿರೊಕ್ಕ ಸಾಧ್ಯ…ನೀನ್ ಅತ್ತಂಗೆ ಮಾಡು,ನಾನು ಸಮಾಧಾನ ಮಾಡಿದಂಗೆ ಮಾಡ್ತೇನೆನ್ನುವ ನಾಟಕದಲ್ಲೇ ದಿನಗಳನ್ನು ದೂಡುತ್ತಿದೆ ಸರ್ಕಾರ.

ರಾಜ್ಯದ ಆಡಳಿತದ ಚುಕ್ಕಾಣಿ ಹಿಡಿದಿರುವ ಮುಖ್ಯಮಂತ್ರಿ ಯಡಿಯೂರಪ್ಪ ಅವರಾದಿಯಾಗಿ ಸಚಿವರುಗಳಾಗಿರುವವರಿಗೆ ಕನ್ನಡ ಫ್ಲಾಶ್ ನ್ಯೂಸ್ ರಾಜ್ಯದ ಜನತೆ ಪರವಾಗಿ ಹಾಕುವ ಸವಾಲ್ ಒಂದೇ..ನಿಮಗೆ ನೀವು ಹೇಳಿದಂತೆಯೇ ಕೊರೊನಾ ವಿಷಯದಲ್ಲಿ ಸೋಂಕಿತರನ್ನು ಸುಲಿಗೆ ಮಾಡುತ್ತಿರುವ ಖಾಸಗಿ ಆಸ್ಪತ್ರೆಗಳಿ ವಿರುದ್ದ ನಿಜಕ್ಕೂ ಕ್ರಮ ಕೈಗೊಳ್ಳುವ ತಾಕತ್ತು-ವೀರ್ಯತ್ವ ಎರಡೂ ಇದೆಯೇ…ಖಂಡಿತಾ ಇದ್ದಂತಿಲ್ಲ.. ಇವರಿಗೆಲ್ಲಾ ಇದ್ದಿದ್ದೇ ಆಗಿದ್ದರೆ ಖಾಸಗಿ ಆಸ್ಪತ್ರೆಗಳು ಈ ಕ್ಷಣಕ್ಕೂ ಸರ್ಕಾರಕ್ಕೇನೆ ಸವಾಲಾಕಿ ಸೋಂಕಿತರನ್ನು ಸುಲಿಗೆ ಮಾಡುತ್ತಿರಲಿಲ್ಲ..ಬೆಡ್ ಗಳಿಲ್ಲ ಎನ್ನುವ ಅಹಂಕಾರದ ಉತ್ತರ ನೀಡುತ್ತಿರಲಿಲ್ಲ..ಖಾಸಗಿ ಆಸ್ಪತ್ರೆಗಳು ಸೋಂಕಿತರ ಜೀವನದೊಂದಿಗೆ ಚೆಲ್ಲಾಟವಾಡುತ್ತಿರುವ,ಅವರನ್ನು ಹಗಲು ದರೋಡೆ ಮಾಡುತ್ತಿರುವ ಸನ್ನಿವೇಶ ಕಣ್ಣೆದುರಿಗೆ ಇದ್ದರೂ ಸರ್ಕಾರದಿಂದ ಅವರ ಕೂದಲಿನ ಮೊನೆಯನ್ನೂ ಅಲುಗಾಡಿಸಿ ಕೊಳ್ಳೊಕ್ಕೆ ಆಗುತ್ತಲೇ ಇಲ್ಲ..ಇದೊಂದೇ ಸಂಗತಿ ಸಾಕು..ಸರ್ಕಾರ ಬದುಕಿದೆಯೋ ಸತ್ತಿದೆಯೋ..ಅದು ಸೋಂಕಿತರ ಪರವಾಗಿದೆಯೋ..ಅಥ್ವಾ ಖಾಸಗಿ ಆಸ್ಪತ್ರೆಗಳ ಲಾಭಿಗೆ ಮಣಿದಿದೆಯೋ ಎನ್ನೋದನ್ನು ಅರ್ಥ ಮಾಡಿಕೊಳ್ಳೊಕ್ಕೆ..

ಖಾಸಗಿ ಆಸ್ಪತ್ರೆಗಳ ಆಟಾಟೋಪಕ್ಕೆ ಬ್ರೇಕ್ ಬಿದ್ದರೆ ಸಾಕು,ಸಮಸ್ಯೆ ಶೇಕಡಾ 75ರಷ್ಟು ಮುಗಿದೋಗುತ್ತೆ..ಇದು ಸರ್ಕಾರಕ್ಕೂ ಗೊತ್ತು..ಆಗಿದ್ದೂ ಏಕೆ ಕ್ರಮ ಕೈಗೊಳ್ಳುತ್ತಿಲ್ಲ.ಮಾದ್ಯಮಗಳಲ್ಲಿ ಬಾಯ್ ಬಡಿದುಕೊಂಡು ಹುಲಿಗಳಂತೆ ಅಬ್ಬರಿಸುವ ಇವರೆಲ್ಲಾ ಅದನ್ನು ಕಾರ್ಯಗತಗೊಳಿಸುವ ವಿಚಾರ ಬಂದಾಗ ಏಕೆ ಹಿಂದಕ್ಕೆ ಸರಿಯುತ್ತಾರೆ..ಸರ್ಕಾರ ಮನಸು ಮಾಡಿದ್ದರೆ ಕೊರೊನಾ ಎನ್ನೋದು ಒಂದು ಸಮಸ್ಯೆಯಾಗುಳಿಯುತ್ತಿತ್ತೇ?ಖಂಡಿತಾ ಇಲ್ಲ..ಸರ್ಕಾರಕ್ಕೆ ಕೊರೊನಾ ಜೀವಂತವಾಗಿದ್ದಷ್ಟು ಕೊರೊನಾ ಹೆಸರಲ್ಲಿ ಲೂಟಿ ಮಾಡೊಕ್ಕೆ ಹೆಚ್ಚೆಚ್ಚು ಅವಕಾಶ ಸಿಕ್ಕುತ್ತೆ.ಕೊರೊನಾವೇ ಇಲ್ಲದಿದ್ದರೆ ಹಣ ಮಾಡುವ ದಾರಿಯೂ ಮುಚ್ಚೋಗುತ್ತಲ್ವೇ.. ಹಾಗಾಗಿ ಸರ್ಕಾರವೇ ಜೀವಂತವಾಗಿಟ್ಟ ಸಮಸ್ಯೆ ಈ ಕೊರೊನಾ ಎನ್ನುವುದು ಪರಿಸ್ತಿತಿಯನ್ನು ತೀರಾ ಹತ್ತಿರದಿಂದ ನೋಡುತ್ತಾ ಬಂದಿರುವ ಬೆಂಗಳೂರಿನ  ಖ್ಯಾತ ವೈದ್ಯರೊಬ್ಬರ ಆರೋಪ.

ಕೊರೊನಾ ಮೊದಲು ಸೋಂಕಿತರ ಕಾರಣಕ್ಕೆ ಸುದ್ದಿ ಮಾಡ್ತಿತ್ತು..ನಂತರ ಸಾವಿನ ಸಂಖ್ಯೆಯ ವಿಷಯಕ್ಕೆ ಹೆಚ್ಚೆಚ್ಚು ಚರ್ಚಿತವಾಗುತ್ತಿತ್ತು..ಆದರೆ ಈಗ ದಿನಬೆಳಗಾದ್ರೆ ಕೊರೊನಾ ನಿರ್ವಹಣೆ-ನಿಗ್ರಹದ ನೆವದಲ್ಲಿ ನಡೆದಿರುವ,ಈ ಕ್ಷಣಕ್ಕೂ ನಡೆಸಲಾಗ್ತಿದೆ ಎನ್ನುವ ವ್ಯಾಪಕ ಭ್ರಷ್ಟಾಚಾರವೇ ನಿತ್ಯದ ಸುದ್ದಿಯಾಗ್ತಿದೆ.ವಿಪಕ್ಷವಾಗಿ ಕಾಂಗ್ರೆಸ್ ಕೊರೊನಾ ವಿಚಾರದಲ್ಲಿ ನಡೆದಿರುವ 2 ಸಾವಿರ ಕೋಟಿಯಷ್ಟು ಬೃಹತ್ ಭ್ರಷ್ಟಾಚಾರವನ್ನು ಸಾಕ್ಷ್ಯ ಸಮೇತ ಬಯಲಿಗೆಳೆದು ತನಿಖೆಗೆ ಒತ್ತಾಯಿಸಿದ್ರೆ ಬಿಜೆಪಿಯ ಮಹಾನುಭಾವರು,ಒತ್ತಾಯಿಸುವುದು,ಪ್ರತಿಭಟಿಸುವುದಷ್ಟೇ ಅವರ ಕೆಲಸ,ತನಿಖೆಗೆ ಆದೇಶಿಸುವುದು ಬಿಡುವುದು ನಮ್ಮ ವಿವೇಚನೆಗೆ ಬಿಟ್ಟ ವಿಚಾರ ಎಂದ್ಹೇಳುವ ಮೂಲಕ ಇಡೀ ಹಗರಣವನ್ನು ಡೈವರ್ಟ್ ಮಾಡುವ ದುಸ್ಸಾಹಸ ಮಾಡ್ತಿದೆ.ಹಗರಣ ನಡೆದಿಲ್ಲ ಎನ್ನೋದೇ ಸತ್ಯವಾದ್ರೆ ತನಿಖೆಗೊಳಪಡಿಸುವುದರಲ್ಲಿ ತಪ್ಪೇನಿದೆ ಎನ್ನುವುದು ಸಾಮಾಜಿಕ ಕಾರ್ಯ ಕರ್ತ  ನರಸಿಂಹಮೂರ್ತಿ ವಾದ. 

ಖಾಸಗಿ ಆಸ್ಪತ್ರೆಗಳು ನಡೆಸುತ್ತಿರುವ ಹಗಲುದರೋಡೆ ಸರ್ಕಾರಕ್ಕೆ ಗೊತ್ತಿಲ್ಲದ ವಿಷಯವೇನಲ್ಲ..ಎಷ್ಟೇ ಎಚ್ಚರಿಕೆ ಕೊಟ್ಟ ಹೊರತಾಗ್ಯೂ ಸ್ವಲ್ಪವೂ ಸುಧಾರಿಸುವಕೊಳ್ಳುವ ಕೆಲಸವನ್ನು ಆಸ್ಪತ್ರೆಗಳು ಮಾಡಿಲ್ಲ.ಸರ್ಕಾರ ಒಂದಲ್ಲ.ಎರಡಲ್ಲ..ನೂರ್  ಬಾರಿ ಎಚ್ಚರಿಕೆ ಕೊಟ್ಟರೂ ತಮ್ಮ ಹಣಸುಲಿಗೆ ಚಟವನ್ನು ಬಿಡೊಲ್ಲ.  ಏಕೆಂದ್ರೆ ಖಾಸಗಿ ಆಸ್ಪತ್ರೆಗಳಿಗೂ ಗೊತ್ತಿದೆ.

ತಾವಿಲ್ಲದೆ ಸರ್ಕಾರದ ಪುಂಗಿಯೇನೂ ಆಡೊಲ್ಲ ಎನ್ನೋದು..ತಮ್ಮನ್ನು ರಿಕ್ವೆಸ್ಟ್ ಮಾಡಿಕೊಳ್ಳಬೇಕೇ ಹೊರತು,ಜನರ್ ದಸ್ತ್ ಮಾಡೋದಲ್ಲ..ಇದೇ ಸಂದೇಶವನ್ನು ಸೊಸೈಟಿಯಲ್ಲಿ ಅತ್ಯಂತ ದೊಡ್ಡ ಹಾಗೂ ಪ್ರತಿಷ್ಟಿತ ಎನಿಸಿಕೊಂಡಿರುವ ಆಸ್ಪತ್ರೆಗಳು ಸರ್ಕಾರಕ್ಕೆ ರವಾನಿಸಿವೆ.ಹಾಗಾಗಿ ನೊಟೀಸ್ ಕೊಡ್ತೇವೆ..ಆಸ್ಪತ್ರೆ ಓಪಿಡಿಯನ್ನು ಮುಚ್ಚಿಸ್ತೇವೆ ಎನ್ನುವುದೆಲ್ಲಾ ಕೇವಲ ನಾಮಾಕವಸ್ಥೆಯ ಹೇಳಿಕೆಗಳಷ್ಟೇ..

ಇಂಥಾ ಸ್ಥಿತಿಯಲ್ಲಿ ಸರ್ಕಾರವನ್ನು ನಂಬಿಕೊಂಡು ಖಾಸಗಿ ಆಸ್ಪತ್ರೆಗಳ ವಿರುದ್ಧ ಧ್ವನಿ ಎತ್ತುವುದು ಕೂಡ ಅರ್ಥಹೀನ.ಅನೇಕ ಖಾಸಗಿ ಆಸ್ಪತ್ರೆಗಳಲ್ಲಿ ರಾಜಕಾರಣಿಗಳ ಶೇರಿಂಗ್ ಕೂಡ ಇರುವುದರಿಂದ ತಮ್ಮ ಕಾಲಿನ ಮೇಲೆ ತಾವೇ ಚಪ್ಪಡಿಕಲ್ಲು ಹಾಕಿಕೊಳ್ಳೊಕ್ಕೆ ರಾಜಕಾರಣಿಗಳು ಕೂಡ ರೆಡಿಯಿಲ್ಲ..

ಸರ್ಕಾರವನ್ನು ನೆಚ್ಚಿಕೊಂಡು ಕೂತರೆ ಜನರಿಗೆ ಅನ್ಯಾಯವಾಗೋದು ಗ್ಯಾರಂಟಿ.ಹಾಗಾಗಿ ಸಾರ್ವಜನಿಕರಿಗೆ ಕನ್ನಡ ಫ್ಲಾಶ್ ನ್ಯೂಸ್ ತಿಳಿಯಪಡಿಸುವ ಸಂಗತಿ ಎಂದ್ರೆ, ನಿಮ್ಮ ಆರೋಗ್ಯಕ್ಕೆ ನೀವೆ ಜವಾಬ್ದಾರಿ..ಕೊರೊನಾ ಬರೋದ್ರಿಂದ ನಿಮ್ಮನ್ನು ನೀವೇ ರಕ್ಷಿಸಿಕೊಳ್ಳಿ..ಇದನ್ನು ಬಿಟ್ಟು ಸರ್ಕಾರ ನಂಬಿಕೊಂಡು ಕೊರೊನಾ ಬರಿಸಿಕೊಂಡು ಆಸ್ಪತ್ರೆಗಳಿಗೆ ಹೋದ್ರೆ ಲಕ್ಷ ಲಕ್ಷ ಕಟ್ಟೊಕ್ಕೆ ಶಕ್ತಿ ಇರ್ಬೇಕು..ಜೀವ ಉಳಿಸಿಕೊಳ್ಳೊಕ್ಕೆ ಗಟ್ಟಿನೂ ಇರ್ಬೇಕು…  

Spread the love
Leave A Reply

Your email address will not be published.

Flash News